For Quick Alerts
ALLOW NOTIFICATIONS  
For Daily Alerts

20 ಹರೆಯದಲ್ಲಿಯೇ ಕೂದಲು ಉದುರಲು ಕಾರಣಗಳು

By Super
|

ಇತ್ತೀಚಿನ ದಿನಗಳಲ್ಲಿ ನಗರದ ಧೂಳು, ವಾತಾವರಣದಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಕೂದಲುದುರುವಿಕೆಯಂತೂ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ! ವಯಸ್ಸು ಇಪ್ಪತ್ತಾಯಿದೆಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತದೆ! ದಿನದಲ್ಲಿ 75 -100 ಕೂದಲುಗಳವರೆಗೆ ಉದುರಿದರೆ ಅದು ಸಾಮಾನ್ಯ ಲಕ್ಷಣ. ಆದರೆ ಅದಕ್ಕಿಂದತೂ ಜಾಸ್ತಿ ಕೂದಲು ಉದುರುವುದು ಕಂಡುಬಂದರೆ ಮುಂಜಾಗ್ರತೆಯನ್ನು ವಹಿಸಲೇಬೇಕು.

ಇಂತಹ ಕೂದಲು ಉದುರುವ ಸಮಸ್ಯೆಗೆ ಯಾವುದೇ ಔಷಧಗಳೂ ಶಾಶ್ವತವಾದ ಪರಿಹಾರವನ್ನು ನೀಡದು. ಯಾಕೆಂದರೆ ಕೂದಲು ಉದುರಿವಿಕೆಗೆ ಇಂತಹದ್ದೇ ಕಾರಣ ಎಂದು ಹೇಳುವುದು ಕಷ್ಟ. ಹಲವಾರು ಕಾರಣಗಳಿಗೆ ಕೂದಲು ಉದುರುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಲ್ಲಿ ಇಂತಹ ಕೆಲವು ಪ್ರಮುಖ ಕಾರಣಗಳನ್ನು ನೀಡಲಾಗಿದೆ.

ಜೀವನಶೈಲಿ

ಜೀವನಶೈಲಿ

1. ಇಂದು, ಯುವಜನರು ಅಳವಡಿಸಿಕೊಂಡಿರುವ ಜೀವನಶೈಲಿ ಕೂದಲು ನಷ್ಟಕ್ಕೆ ಪ್ರಮುಖ ಕಾರಣ. ತಡರಾತ್ರಿಯವರೆಗೂ ಎಲ್ಲರೊಂದಿಗೆ ಪಾರ್ಟಿ( ಸಮಾರಂಭ) ಮಾಡುತ್ತ, ಮದ್ಯ ಸೇವನೆ, ಧೂಮಪಾನ ಮತ್ತು ಸ್ಥಬ್ದ ಗಾಳಿಯಲ್ಲಿ ತಿರುಗಾಡುವುದು ನಿಮ್ಮ ಕೂದಲನ್ನು ಉದುರುವಂತೆ ಮಾಡುತ್ತದೆ. ನಿಯಮಿತವಾಗಿ ಕುಡಿಯುವ ಮದ್ಯ, ಆಹಾರಕ್ರಮದಿಂದ ಜೀವಸತ್ವಗಳ ಹೀರುವಿಕೆಗೆ ಅಡ್ಡಿಪಡಿಸುತ್ತದೆ, ಕಡಿಮೆ ಜೀವಸತ್ವಗಳು ನಿಮ್ಮ ಕೂದಲಿನ ಆರೋಗ್ಯವನ್ನು ಸಂಪೂರ್ಣವಾಗಿ ಕುಂದುವಂತೆ ಮಾಡುತ್ತವೆ.

 ಅತೀಯಾದ ಒತ್ತಡ

ಅತೀಯಾದ ಒತ್ತಡ

2. ಅತೀಯಾದ ಒತ್ತಡವೂ ಕೂಡ ಕೂದಲಿನ ನಷ್ಟವನ್ನು ವೇಗವಾಗಿ ಹೆಚ್ಚಿಸುವ ಇನ್ನೊಂದು ಅಂಶವಾಗಿದೆ. ಸಮೀಪಿಸುತ್ತಿರುವ ಪರೀಕ್ಷೆಯ ಬಗ್ಗೆ ಭಯ, ಸಮಾನ ವಯಸ್ಕರಿಂದ ನಿರಾಕರಣೆ ಕಾಲೇಜು ಪ್ರವೇಶಕ್ಕೆ ಭಯ ಇನ್ನೂ ಹಲವು ಅಂಶಗಳು ಯುವಪೀಳಿಗೆಯಲ್ಲಿ ಅನಗತ್ಯ ಒತ್ತಡಕ್ಕೆ ಕಾರಣವಾಗುತ್ತದೆ.

 ಮಾಲಿನ್ಯ

ಮಾಲಿನ್ಯ

3. ಕಾರ್ಖಾನೆ ಪ್ರದೇಶಗಳ ಮಾಲಿನ್ಯ ಮತ್ತು ಪರಿಸರದ ಮಲಿನಯುಕ್ತ ಗಾಳಿ, ಕಠಿಣ ರಾಸಾಯನಿಕಗಳು ನಿಮ್ಮ ಕೂದಲನ್ನು ಹಾಳುಮಾಡುತ್ತವೆ. ಕೂದಲ ಹೊಳಪನ್ನು ಹೋಗಲಾಡಿಸಿ ಕೂದಲಿನ ಅಂದಗೆಡಿಸುತ್ತವೆ.

 ಶಿಲೀಂಧ್ರದ ಸೋಂಕುಗಳು

ಶಿಲೀಂಧ್ರದ ಸೋಂಕುಗಳು

4. ಅತಿ ಮೇದಸ್ರಾವದ ಚರ್ಮದ ರೀತಿಯ ಶಿಲೀಂಧ್ರದ ಸೋಂಕುಗಳು ನೆತ್ತಿಯ ತುರಿಕೆಗೆ ಕಾರಣವಾಗಿ ಸರಿಯಾದ ಚಿಕಿತ್ಸೆ ನೀಡದಿದ್ದರೆ ಕೂದಲಿನ ಸಮಸ್ಯೆಯನ್ನು ಉಂಟುಮಾಡುತ್ತವೆ. ಈ ಸೋಂಕುಗಳು ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಕೇಶವಿನ್ಯಾಸ

ಕೇಶವಿನ್ಯಾಸ

5. ಬಿಗಿಯಾಗಿ ಕೂದಲನ್ನು ಕಟ್ಟಿ ಅಥವಾ ಬಿಗಿಯಾದ ಪ್ಲೇಟ್ಸ್, ಪೋನಿ ರೀತಿಯ ಹೊಸ ಕೇಶವಿನ್ಯಾಸ ಪ್ರವೃತ್ತಿಗಳು ಕೂದಲಿನ ಬೇರುಗಳು ಎಳೆಯುವಂತೆ ಮಾಡುತ್ತವೆ. ಇದರಿಂದ ಕೂದಲು ಉದುರುವ ಸಾಧ್ಯತೆಗಳೂ ಕೂಡ ಅಧಿಕ.

 ಜೆಲ್

ಜೆಲ್

6. ಹೇರ್ ಸ್ಪ್ರೇ, ಮೌಸ್ಸ್ ಮತ್ತು ಜೆಲ್ ಗಳಂತಹ ಉತ್ಪನ್ನಗಳ ಅತಿಯಾದ ಬಳಕೆ ಕೂದಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಮತ್ತು ದೀರ್ಘಾವಧಿಯಲ್ಲಿ ಕೂದಲಿನ ಪತನಕ್ಕೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ಕೂದಲಿಗೆ ಹೊಂದುವಂತಹ ಶ್ಯಾಂಪೂ ಮತ್ತು ಕಂಡಿಷನರ್ ಅನ್ನು ಆಯ್ಕೆ ಮಾಡಿ ಮತ್ತು ಅದೇ ಉತ್ಪನ್ನಗಳನ್ನು ಸದಾ ಬಳಸಿ.

 ಅನುವಂಶೀಯತೆ

ಅನುವಂಶೀಯತೆ

7. ಅನುವಂಶೀಯತೆ ನಿಮ್ಮ ಕೂದಲಿನ ಗುಣಮಟ್ಟ ಮತ್ತು ಪ್ರಮಾಣವನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪುರುಷರಲ್ಲಿ ಕಂಡುಬರುವ ಬೋಳು ತಲೆ ಆನುವಂಶೀಕವಾಗಿದ್ದರೆ ಅದನ್ನು ತಡೆಯಲು ಕಷ್ಟ. ಆದ್ದರಿಂದ ಈ ಸಮಸ್ಯೆ ನಿಮ್ಮಲ್ಲಿ ಇದೆಯೇ ಎಂದು ಮೊದಲೇ ಗುರುತಿಸಿ ಪೂರ್ವ ಔಷಧದ ಬಳಕೆ ಮಾದುವುದು ಒಳಿತು.

ಖಿನ್ನತೆ

ಖಿನ್ನತೆ

8. ಉನ್ಮಾದ, ಸ್ಕಿಜೋಫ್ರೇನಿಯಾ ಮತ್ತು ಖಿನ್ನತೆ ರೀತಿಯ ಮಾನಸಿಕತೆಗಳು ಕೂಡ ಕೂದಲು ಉದುರಲು ಕಾರಣವಾಗಬಹುದು. ಟ್ರಕಟಿಲೊಮೇನಿಯಾ ಎಂಬ ವೈದ್ಯಕೀಯ ಪದವನ್ನು ಈ ಸಮಸ್ಯೆಗೆ ಬಳಸಲಾಗುತ್ತದೆ. ಮಾನಸಿಕ ಅಸ್ವಸ್ಥತೆ ಕೂದಲಿನ ಸಮಸ್ಯೆಗೆ ಕಾರಣವಾಗುತ್ತದೆ ಹಾಗೂ ನೀವು ಇದರಿಂದ ಹೊರಬರದಿದ್ದರೆ ಯಾವುದೇ ಔಷಧವೂ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಲಾರದು.

ನಿದ್ರೆಯ ಕೊರತೆ

ನಿದ್ರೆಯ ಕೊರತೆ

9. ಸಾಕಷ್ಟು ನಿದ್ರೆ, ಕೂದಲಿನ ಜೀವಕೋಶಗಳನ್ನು ಪುನರ್ಯೌವನಗೊಳಿಸು ಅತ್ಯಗತ್ಯ. ಕೂದಲಿನ ಜೀವಕೋಶಗಳಿಗೂ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಸರಿಯಾದ ಪ್ರಮಾಣದ ನಿದ್ರೆ ಮಾಡುವುದು ಒಳ್ಳೆಯದು.

ಆಹಾರಗಳು

ಆಹಾರಗಳು

10. ಸಾಕಷ್ಟು ಪ್ರವಾಣದ ವಿವಿಧ ಹಣ್ಣುಗಳು ಮತ್ತು ತರಕಾರಿಗಳ ಒಂದು ಉತ್ತಮ ಸಮತೋಲನ ಆಹಾರ ಕೂಡ ನಿಮ್ಮ ಕೂದಲಿನ ಆರೋಗ್ಯಕ್ಕೆ ಮುಖ್ಯವಾಗಿದೆ. ಜೀವಸತ್ವಗಳು ಜೊತೆಗೆ, ಕಬ್ಬಿಣ ಮತ್ತು ಪ್ರೋಟೀನ್ ಗಳು ಕೂದಲಿನ ಗುಣಮಟ್ಟ ನಿರ್ವಹಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಅಗತ್ಯ.

English summary

Top Ten Causes Of Hair Loss In Twenties

It is normal to shed about 75 -100 hairs daily, anything above that is a cause for concern.Here is top ten causes of hair loss in twenties.
X
Desktop Bottom Promotion