For Quick Alerts
ALLOW NOTIFICATIONS  
For Daily Alerts

ಒದ್ದೆ ಕೂದಲಿಗೆ ಹೀಗೆ ಕಾಳಜಿ ಮಾಡಿ

By Super
|

ಕೂದಲು ಹೆಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.ಬೇರೆಬೇರೆ ರೀತಿಯ ಸ್ಟೈಲ್ ಗೆ ಮೊರೆ ಹೋದರೂ ಕೂಡ ಕೂದಲಿನ ಅಂದ ಹೆಚ್ಚಿಸುವುದು ರೇಷ್ಮೆಯಂತಹ ನುಣುಪಾದ ಕೂದಲು ನಿಮ್ಮದಾದಾಗ ಮಾತ್ರ.ಕೂದಲ ಅಂದವನ್ನು ಹೆಚ್ಚಿಸಲು ಪಾರ್ಲರ್ ಗಳ ಮೊರೆ ಹೋಗುವುದಂತೂ ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ.ಆದರೆ ಒದ್ದೆಯಾದ ಕೂದಲನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದು ಕೂಡ ಅಷ್ಟೇ ಮುಖ್ಯ.

ರೇಷ್ಮೆಯಂತಹ ನುಣುಪಾದ ಕೂದಲನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ.ನಮ್ಮ ಕೂದಲು ನುಣುಪಾಗಿರಲಿ ಎಂದು ಬಯಸುತ್ತೇವೆ.ಆದರೆ ರೇಷ್ಮೆಯಂತಹ ಕೂದಲನ್ನು ಕಾಪಾಡಿಕೊಳ್ಳಲು ಸಾಕಷ್ಟು ನಿಗಾ ವಹಿಸಬೇಕು. ನಿಮ್ಮ ಕೂದಲು ನೀವು ಹೇಳಿದಂತೆ ಕೇಳುತ್ತಿಲ್ಲ ನೀವು ಬಯಸಿದಂತೆ ಇರುವುದಿಲ್ಲ ಎಂದು ಚಿಂತಿಸುತ್ತಿದ್ದರೆ ಅದಕ್ಕೆ ಕಾರಣ ನೀವು ನಿಮ್ಮ ಕೂದಲಿಗೆ ಒಗ್ಗದ ಕೆಲಸಗಳನ್ನು ಹೆಚ್ಚು ಮಾಡುತ್ತಿದ್ದೀರಿ ಎಂದರ್ಥ.

ಕೂದಲು ಉದುರುವುದು,ಕವಲೊಡೆಯುವುದು,ತುಂಡಾಗುವುದು ಇವುಗಳಿಗೆಲ್ಲ ನೀವು ಕಾಳಜಿ ವಹಿಸದಿರುವುದೇ ಕಾರಣ.ಸರಿಯಾದ ಕಾಳಜಿ ವಹಿಸದಿದ್ದರೆ ಕೂದಲು ಎಣ್ಣೆಯಿಂದ ಜಿಡ್ಡುಗಟ್ಟುತ್ತದೆ. ಜಿಡ್ಡುಗಟ್ಟಿದ ಕೂದಲನ್ನು ತಡೆಗಟ್ಟಲು ಕೆಲವು ಸುಲಭ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

1.ಕಠಿಣವಾಗಿ ಬಾಚುವುದನ್ನು ತಪ್ಪಿಸಿ

1.ಕಠಿಣವಾಗಿ ಬಾಚುವುದನ್ನು ತಪ್ಪಿಸಿ

ಜೋರಾಗಿ ಒತ್ತಿ ತಲೆ ಬಾಚುವುದರಿಂದ ಕೂದಲು ಉದುರಲು ಮತ್ತು ಕವಲೊಡೆಯಲು ಪ್ರಾರಂಭವಾಗುತ್ತದೆ. ಕೂದಲು ಒದ್ದೆ ಇರುವಾಗ ಜೋರಾಗಿ ಬಾಚುವುದನ್ನು ನಿಲ್ಲಿಸಿ ಮತ್ತು ನಿಮ್ಮ ಕೂದಲು ಹಾನಿಗೊಳಗಾಗುವುದನ್ನು ನಿಗ್ರಹಿಸಿ.

2.ಕೂದಲನ್ನು ಬಿಸಿ ಗಾಳಿಯಲ್ಲಿ ಒಣಗಿಸಬೇಡಿ

2.ಕೂದಲನ್ನು ಬಿಸಿ ಗಾಳಿಯಲ್ಲಿ ಒಣಗಿಸಬೇಡಿ

ಬಿಸಿ ಗಾಳಿ(ಹೇರ್ ಡ್ರೈಯರ್)ಮೂಲಕ ಕೂದಲನ್ನು ಒಣಗಿಸಿಕೊಂಡರೆ ಅದರಿಂದ ಕೂದಲಿಗೆ ಹಾನಿಯಾಗುತ್ತದೆ.ನೇರ ಬಿಸಿ ಗಾಳಿಯಿಂದಾಗಿ ಕೂದಲು ಇನ್ನಷ್ಟು ಶುಷ್ಕವಾಗಿ ತಲೆಹೊಟ್ಟು ಪ್ರಾರಂಭವಾಗುತ್ತದೆ.

3.ಸರಿಯಾದ ಬಾಚಣಿಕೆ ಉಪಯೋಗಿಸಿ

3.ಸರಿಯಾದ ಬಾಚಣಿಕೆ ಉಪಯೋಗಿಸಿ

ಸರಿಯಾದ ಬಾಚಣಿಕೆ ಉಪಯೋಗಿಸುವುದು ಕೂಡ ಮುಖ್ಯ.ಕೂದಲಿಗೆ ಹೊಂದಿಕೆಯಾಗುವ ಬಾಚಣಿಕೆ ಉಪಯೋಗಿಸಬೇಕು.ಬಾಚಣಿಕೆ ಪ್ಲಾಸ್ಟಿಕ್ ಅಥವಾ ನೈಲಾನ್ ಆಗಿರಲಿ.

4.ಯಾವಾಗಲು ತಕ್ಷಣ ಹೊರಗೆ ಹೋಗಬೇಡಿ

4.ಯಾವಾಗಲು ತಕ್ಷಣ ಹೊರಗೆ ಹೋಗಬೇಡಿ

ಗುಂಗುರು ಕೂದಲು ಹೊಂದಿದವರು ತಲೆಸ್ನಾನ ಮಾಡಿದ ತಕ್ಷಣ ಹೊರಗೆ ಸೂರ್ಯನ ಬಿಸಿಲಿಗೆ ಹೋಗಬೇಡಿ.

5.ಕೂದಲನ್ನು ಬೆರಳುಗಳಿಂದ ನೇರಗೊಳಿಸಿ

5.ಕೂದಲನ್ನು ಬೆರಳುಗಳಿಂದ ನೇರಗೊಳಿಸಿ

ಒಣಗಿದ ಕೂದಲಿಗಿಂತ ಒದ್ದೆ ಕೂದಲು 3 ಪಟ್ಟು ಹೆಚ್ಚು ಬಲಹೀನವಾಗಿರುತ್ತದೆ.ಕೈಗಳಿಂದ ಕೂದಲ ಸಿಕ್ಕನ್ನು ಬಿಡಿಸುವುದರಿಂದ ಕೂದಲಿಗೆ ಮಸಾಜ್ ಆಗುತ್ತದೆ ಮತ್ತು ಕೂದಲು ಉದುರುವುದು ತಪ್ಪುತ್ತದೆ.

6.ಹೊರಗೆ ಹೋಗುವ ಮುನ್ನ ಕೂದಲಿಗೆ ಎಣ್ಣೆ ಹಚ್ಚಬೇಡಿ

6.ಹೊರಗೆ ಹೋಗುವ ಮುನ್ನ ಕೂದಲಿಗೆ ಎಣ್ಣೆ ಹಚ್ಚಬೇಡಿ

ಕೂದಲಿಗೆ ಎಣ್ಣೆ ಬಳಸುವುದು ಹಾನಿಕಾರಕ.ಹೊರಗೆ ಹೋಗುವ ಮುನ್ನ ಕೂದಲಿಗೆ ಎಣ್ಣೆ ಹಚ್ಚಬೇಡಿ.ಅದರಿಂದ ಕೂದಲಿಗೆ ಧೂಳು ಬಂದು ಸೇರುತ್ತದೆ.ಕೂದಲಿಗೆ ಎಣ್ಣೆ ಹಚ್ಚಲೇಬೇಕು ಎಂದೆನಿಸಿದಲ್ಲಿ ರಾತ್ರಿ ಹಚ್ಚಿ ಬೆಳಗ್ಗೆ ತಲೆಯನ್ನು ಶಾಂಪು ಬಳಸಿ ತೊಳೆಯಿರಿ.

7.ಬ್ಯಾಂಡ್ ಅನ್ನು ಗಟ್ಟಿಯಾಗಿ ಕಟ್ಟಬೇಡಿ

7.ಬ್ಯಾಂಡ್ ಅನ್ನು ಗಟ್ಟಿಯಾಗಿ ಕಟ್ಟಬೇಡಿ

ಒದ್ದೆ ಕೂದಲು ತುಂಬಾ ಸೂಕ್ಷ್ಮವಾಗಿರುತ್ತದೆ.ಅದಕ್ಕೆ ಗಟ್ಟಿಯಾಗಿ ರಬ್ಬರ್ ಬ್ಯಾಂಡ್ ಬಳಸಿದರೆ ಇನ್ನಷ್ಟು ಹಾನಿಯಾಗಿ ಕೂದಲು ಉದುರುವುದು ಹೆಚ್ಚುತ್ತದೆ.

8.ಒದ್ದೆ ಕೂದಲಿಗೆ ಟವಲ್ ಕಟ್ಟಬೇಡಿ

8.ಒದ್ದೆ ಕೂದಲಿಗೆ ಟವಲ್ ಕಟ್ಟಬೇಡಿ

ಒದ್ದೆ ಕೂದಲನ್ನು ಟವೆಲ್ ನಿಂದ ತುಂಬಾ ಹೊತ್ತು ಕಟ್ಟಬೇಡಿ.ಇದು ನಿಮ್ಮ ಕೂದಲು ಸ್ವಾಭಾವಿಕವಾಗಿ ಬೇಗ ಒಣಗುವುದನ್ನು ತಪ್ಪಿಸುತ್ತದೆ.

9.ಬಾಚಣಿಕೆಯನ್ನು ಉಪಯೋಗಿಸಬೇಡಿ

9.ಬಾಚಣಿಕೆಯನ್ನು ಉಪಯೋಗಿಸಬೇಡಿ

ಒದ್ದೆ ಕೂದಲಿಗೆ ಬಾಚಣಿಕೆ ಉಪಯೋಗಿಸಬೇಕೆಂದರೆ 2 ಬಾರಿ ಯೋಚಿಸಲೇಬೇಕು.ಉದ್ದ ಹಲ್ಲಿನ ಬಾಚಣಿಕೆ ಒದ್ದೆ ಕೂದಲನ್ನು ಹಾಳು ಮಾಡಬಹುದು.ಅವಶ್ಯಕತೆ ಇದ್ದಲ್ಲಿ ಅಗಲವಾದ ಬಾಚಣಿಕೆಯಿಂದ ಮಾತ್ರ ಒದ್ದೆ ಕೂದಲಿಗೆ ಬಳಸಿ.

10.ಮಸಾಜ್ ಮಾಡುವುದನ್ನು ನಿಗ್ರಹಿಸಿ

10.ಮಸಾಜ್ ಮಾಡುವುದನ್ನು ನಿಗ್ರಹಿಸಿ

ತಲೆಗೆ ಸ್ನಾನ ಮಾಡಿದ ತಕ್ಷಣ ಮಸಾಜ್ ಮಾಡುವುದು ತುಂಬಾ ಹಾನಿಕರ.ನಿಮ್ಮ ಕೂದಲು ಒದ್ದೆ ಇರುವಾಗ ಹೆಚ್ಚು ಶಕ್ತಿಹೀನವಾಗಿರುತ್ತದೆ.ಸ್ವಚ್ಚ ಮತ್ತು ಆರೋಗ್ಯಯುತ ಕೂದಲಿಗಾಗಿ ನೀವು ಕೂದಲು ಒಣಗುವವರೆಗೆ ಕಾಯಬೇಕು.

English summary

Things To Avoid After Hair Wash

Hair fall, flakes, breakages, splits – are common if there is lack of care, post hair wash. Prevent your hair from damage and bid farewell to problematic and greasy hair.
Story first published: Thursday, August 29, 2013, 12:00 [IST]
X
Desktop Bottom Promotion