For Quick Alerts
ALLOW NOTIFICATIONS  
For Daily Alerts

ಮಹಿಳೆಯರಲ್ಲಿ ದಪ್ಪ ಕೂದಲಿನ ಸಮಸ್ಯೆಗಳು

By Hemanth P
|

ಮಹಿಳೆಯರಿಗೆ ಕೂದಲೆಂದರೆ ತುಂಬಾ ಪ್ರೀತಿ. ಅದರಲ್ಲೂ ಅಗಾಧ ಪ್ರಮಾಣದ ಕೂದಲು ಬೇಕೆಂದು ಹೆಚ್ಚಿನ ಮಹಿಳೆಯರು ಬಯಸುತ್ತಾರೆ. ಆದರೆ ಸಮೃದ್ಧ ಉದ್ದ ಕೂದಲು ಇರುವ ಮಹಿಳೆಯರು ದೈನಂದಿನ ಕೆಲಸಗಳಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಕೂದಲಿಗೆ ಹಾಕುವ ರಬ್ಬರ್ ಬ್ಯಾಂಡ್ ತುಂಡಾಗುವುದರಿಂದ ಹಿಡಿದು ಕೂದಲು ಬಾಚಲು ಪಡುವಂತಹ ಪಾಡು ಹಲವಾರು. ಹಫ್ಪಿಂಗ್ಟನ್ ಪೋಸ್ಟ್ ಅಗಾಧ ಕೂದಲು ಹೊಂದಿರುವ ಮಹಿಳೆಯರು ಪಡುವ ಕಷ್ಟವನ್ನು ಪಟ್ಟಿ ಮಾಡಿದೆ. ಯಾವಾಗಲೂ ನಿಮ್ಮ ಕೂದಲಿಗೆ ಹಾಕುವ ಇಲಾಸ್ಟಿಕ್ ತುಂಡಾಗುವುದು, ನಿಮ್ಮ ಕೂದಲು ತುಂಬಾ ಭಾರವಿರುವ ಕಾರಣ ಅದು ತಲೆನೋವು ಉಂಟುಮಾಡಬಹುದು. ಯಾವುದೇ ಸಮಯದಲ್ಲೂ ಕೂದಲು ನಿಮ್ಮ ಬಾಯಿಗೆ ಹಾರಿ ಬರಬಹುದು, ಬೆಳಿಗ್ಗೆ ಸ್ನಾನ ಮಾಡಿ ಬಂದರೆ ರಾತ್ರಿ ತನಕ ಕೂದಲು ಒಣಗುವುದೇ ಇಲ್ಲ. ಕೂದಲನ್ನು ಬಾಚಲು ತುಂಬಾ ಸಮಯ ಬೇಕಾಗುತ್ತದೆ. ನೀವು ಕೂದಲು ಕತ್ತರಿಸುವಾಗ ನಿಮಗೆ ಎಷ್ಟು ಉದ್ದ ಕೂದಲು ಬೇಕಾಗುತ್ತದೆ ಎಂದು ಹೇರ್ ಡ್ರೆಸ್ಸರ್ಸ್ ಸಲಹೆ ಮಾಡುತ್ತಾರೆ. ಕೆಲವೊಮ್ಮೆ ನಿಮ್ಮ ಸ್ನೇಹಿತರೊಂದಿಗೆ ಫೋಟೊ ತೆಗೆಸಿಕೊಂಡರೆ ಆಗ ನಿಮ್ಮ ಕೂದಲು ಫೋಟೊ ಪ್ರೇಮ್ ನಂತೆ ಕಾಣಿಸಬಹುದು.

ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆ ನೀವಾಗಿರಬಹುದು? ಹಾಗಿದ್ದರೆ ನಿಮ್ಮ ದಪ್ಪ ಕೂದಲನ್ನು ನಿರ್ವಹಿಸಲು ಪರಿಹಾರ ಬೇಕಾಗಿದೆ. ದಪ್ಪ ಕೂದಲು ತುಂಬಾ ಸುಂದರವಾದರೂ ಇದನ್ನು ನಿರ್ವಹಿಸಲು ಕೆಲವೊಂದು ಸಮಸ್ಯೆಗಳಿವೆ. ನಿಮ್ಮ ಕೂದಲಿನ ಬಗ್ಗೆ ನಿಮ್ಮನ್ನು ನೋಡಿದವರು ಅಸೂಹೆ ಪಡಬಹುದು ಮತ್ತು ನಿಮಗಿದು ಉಡುಗೊರೆ ಎನ್ನಬಹುದು. ಆದರೆ ನಿಮಗೆ ಮಾತ್ರ ದಪ್ಪ ಕೂದಲನ್ನು ನಿರ್ವಹಿಸಲು ಪಡಬೇಕಾಗಿರುವ ಕಷ್ಟ ತಿಳಿದಿರುವುದು.

Thick hair problems in women

ಮಹಿಳೆಯರು ದಪ್ಪ ಕೂದಲನ್ನು ಇಷ್ಟಪಡುತ್ತಾರೆ. ಆದರೆ ಇಂತಹ ದಪ್ಪ ಕೂದಲು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ನೀವು ಹೇರ್ ಸ್ಟೈಲಿಶ್ ಬಳಿ ಹೋದರೆ ಆಗ ನಿಮ್ಮ ಕೂದಲು ಆಕೆಗೆ ಒಂದು ಸವಾಲಾಗಬಹುದು. ದಪ್ಪ ಕೂದಲಿನ ವಿನ್ಯಾಸ ಮಾಡುವುದು ಅಷ್ಟು ಸುಲಭವಲ್ಲ ಮತ್ತು ಇದಕ್ಕೆ ತುಂಬಾ ಶ್ರಮ ವಹಿಸಬೇಕು. ನಿಮ್ಮ ಕೂದಲನ್ನು ನಿಜವಾಗಿಯೂ ಇಳಿಸಲು ಬಯಸಿದರೆ, ಇದನ್ನು ಪ್ರಯತ್ನಿಸಿ. ಇದು ಖಂಡಿತವಾಗಿಯೂ ನಿಮಗೆ ನೆರವಾಗಬಹುದು.

1. ಅತ್ಯಾಕರ್ಷಕ ಪದರಗಳು
ನೀವು ಕೂದಲಿನ ವಿನ್ಯಾಸಗಾರರಲ್ಲಿಗೆ ಹೋದಾಗ ಲೇಯರ್ ಕಟ್ ಮಾಡಲು ಪ್ರಯತ್ನಿಸಿ. ಇದು ನಿಮ್ಮ ದಪ್ಪ ಕೂದಲಿನ ಸಮಸ್ಯೆ ನಿವಾರಿಸಬಹುದು. ನಿಮ್ಮ ಕೂದಲಿನ ಉದ್ದ ಭಿನ್ನವಾಗಿರುವ ಕಾರಣ ಕೂದಲಿನ ಭಾರ ಕಡಿಮೆ ಮಾಡಿಕೊಳ್ಳಬಹುದು ಮತ್ತು ನಿಮಗೆ ಸ್ವಲ್ಪ ಹಿತಕರ ಭಾವನೆಯಾಗಬಹುದು. ನಿಮ್ಮ ಕೂದಲು ದಪ್ಪಗಿದ್ದರೆ ಈ ಕಟ್ ಪ್ರಯತ್ನಿಸಿ. ಇದು ನಿಮ್ಮ ಪರವಾಗಿ ಕೆಲಸ ಮಾಡಬಹುದು.

2. ಯಾವ ಶಾಂಪೂ ಖರೀದಿಸಬೇಕು?
ನೀವು ಶಾಪಿಂಗ್ ಗೆ ತೆರಳುವಾಗ ನಿಮ್ಮ ಕೂದಲಿಗೆ ಹೊಂದಿಕೊಳ್ಳುವಂತಹ ಶಾಂಪೂ ಖರೀದಿಸಿ. ದಪ್ಪ ಕೂದಲು ಪಡೆಯುವ ಜನರಿಗಾಗಿ ಈ ಶಾಂಪೂಗಳು ಇರಬಹುದು. ದಪ್ಪ ಕೂದಲಿನ ಜನರಿಗಾಗಿ ಇರುವ ಶಾಂಪೂ ಆಯ್ಕೆ ಮಾಡಿ. ಇದು ದಪ್ಪ ಕೂದಲಿನ ಸಮಸ್ಯೆಗಳನ್ನು ನಿವಾರಿಸಬಹುದು. ಕೂದಲಿನ ಆರೈಕೆಯ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳುವಾಗ ದಪ್ಪ ಕೂದಲಿನವರು ತುಂಬಾ ಎಚ್ಚರಿಕೆ ವಹಿಸಬೇಕು. ಇದು ನಿಮ್ಮ ದಪ್ಪ ಕೂದಲಿನ ಸಮಸ್ಯೆ ನಿವಾರಿಸಬಹುದು.

3. ನಿಮ್ಮ ಕೂದಲು ಉದ್ದವಾಗಿರಲಿ.
ಉದ್ದ ಕೂದಲು ನಿಮ್ಮ ದಪ್ಪ ಕೂದಲಿನ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು. ಗಿಡ್ಡ ಮತ್ತು ದಪ್ಪ ಕೂದಲು ನಿಮಗೆ ಹಲವಾರು ಸಮಸ್ಯೆ ಉಂಟು ಮಾಡಬಹುದು. ದಪ್ಪದೊಂದಿಗೆ ಉದ್ದ ಕೂದಲು ಇದ್ದರೆ ಆಗ ಅದು ಸುಂದರವಾಗಿ ಕಾಣುತ್ತದೆ. ಉದ್ದ ಕೂದಲು ಇದ್ದರೆ ನಿಮ್ಮ ಮುಖದ ಮೇಲೆ ಕೂದಲು ಬೀಳುವುದು ತಪ್ಪುತ್ತದೆ. ಇದರಿಂದ ದೊಡ್ಡ ಸಮಸ್ಯೆ ಪರಿಹಾರವಾದಂತೆ.

4. ಧೈರ್ಯ ವಹಿಸಿ
ನೀವು ತುಂಬಾ ಧೈರ್ಯವಹಿಸಿ ಮಾಡಬೇಕಾದ ಒಂದು ಕೆಲಸವೆಂದರೆ ನಿಮ್ಮ ದಪ್ಪ ಕೂದಲನ್ನು ಸ್ಟ್ರೇಟನಿಂಗ್ ಮಾಡಿಕೊಳ್ಳುವುದು. ಇದರ ಬಗ್ಗೆ ನಿಮ್ಮ ತಲೆಯಲ್ಲಿ ಹಲವಾರು ವಿಷಯಗಳು ಸುತ್ತುತ್ತಿರಬಹುದು. ಸ್ಟ್ರೇಟನಿಂಗ್ ಮಾಡಿದ ಬಳಿಕ ನೀವು ಹೇಗೆ ಕಾಣಿಸುತ್ತೀರಿ ಎಂದು ನಿಮಗನಿಸಬಹುದು. ಸ್ಟ್ರೇಟನಿಂಗ್ ಮಾಡುವುದರಿಂದ ನಿಮ್ಮ ದಪ್ಪ ಕೂದಲಿಗೆ ಸ್ವಲ್ಪ ಪರಿಹಾರ ಸಿಗಬಹುದು.

5. ಜಡೆ ಹಾಕಿ
ನಿಮ್ಮ ಕೂದಲನ್ನು ಜಡೆ ಹಾಕಿ, ಇದು ನಿಮ್ಮ ದಪ್ಪ ಕೂದಲಿಗೆ ಸ್ವಲ್ಪ ಸಮಾಧಾನ ನೀಡಬಹುದು. ಜಡೆ ಹಾಕುವುದರಿಂದ ಕೂದಲು ಬಾಯಿ ಮತ್ತು ನಿಮ್ಮ ಮುಖದ ಮೇಲೆ ಬೀಳುವುದನ್ನು ತಡೆಯಬಹುದು. ಗಾಳಿಯಲ್ಲಿ ನಿಮ್ಮ ಕೂದಲು ಎಲ್ಲೆಲ್ಲೂ ಹರಡುವುದನ್ನು ಇದು ತಡೆಯುತ್ತದೆ. ಸ್ವಲ್ಪ ಜೆಲ್ ಅಥವಾ ಹೇರ್ ಸ್ಪ್ರೇ ಬಳಸಿ. ದಪ್ಪ ಕೂದಲಿನ ಸಮಸ್ಯೆ ನಿವಾರಿಸುವುದು ಸ್ವಲ್ಪ ಕಷ್ಟ. ಆದರೆ ಕೆಲವೊಂದು ಟಿಪ್ಸ್ ಪಾಲಿಸಿ ಇದನ್ನು ಸರಿಪಡಿಸಬಹುದು. ಇದನ್ನು ಪ್ರಯತ್ನಿಸಿ ಮತ್ತು ಮ್ಯಾಜಿಕ್ ನೋಡಿ!

English summary

Thick hair problems in women

Several women desire voluminous hair, but those with thick locks often struggle with a lot of hassles on a daily basis. From breaking elastic bands to taking hours to straighten hair, women with thick hair experience a lot of inconvenience.
Story first published: Friday, December 13, 2013, 9:55 [IST]
X
Desktop Bottom Promotion