For Quick Alerts
ALLOW NOTIFICATIONS  
For Daily Alerts

ಪುರುಷರೇ, ಬೇಸಿಗೆಯಲ್ಲಿ ನಿಮ್ಮ ಕೂದಲಿನ ಬಗ್ಗೆ ಎಚ್ಚರ

By Super
|

ಬೇಸಿಗೆ ಕಾಲದಲ್ಲಿ ಪುರುಷರು ತಮ್ಮ ಕೂದಲಿನ ಹಾಗೂ ತ್ವಚೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಸನ್ ಸ್ಕ್ರೀನ್ ಲೋಷನ್ ಅನ್ನು ಮಹಿಳೆಯರು ಮಾತ್ರವಲ್ಲ, ಪುರುಷರೂ ಹಚ್ಚುವುದು ಒಳ್ಳೆಯದು. ಬೈಕ್ ನಲ್ಲಿ ಓಡಾಡುವವರಂತೂ ಕೂದಲಿನ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಹೆಲ್ಮೆಟ್ ಹಾಕುವುದರಿಂದ ಕೂದಲು ಉದುರಲಾರಂಭಿಸುತ್ತದೆ. ಆದ್ದರಿಂದ ಹೆಲ್ಮೆಟ್ ಹಾಕುವ ಮುನ್ನ ಕರ್ಚೀಪ್ ತಲೆಗೆ ಕಟ್ಟಿ, ನಂತರ ಹೆಲ್ಮೆಟ್ ಧರಿಸಿ, ಇದರಿಂದ ಕೂದಲಿಗೆ ಹಾನಿಯುಂಟಾಗುವುದಿಲ್ಲ.

ಬಕ್ಕ ತಲೆ ಸಮಸ್ಯೆ ಪುರುಷರಲ್ಲಿ ಕಂಡುಬರುವುದು ಹೆಚ್ಚು, ಆದ್ದರಿಂದ ಪುರುಷರು ಕೂದಲಿನ ಆರೈಕೆ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಕೂದಲಿನ ಹಾಗೂ ತ್ವಚೆಯ ರಕ್ಷಣೆ ಮಾಡಬಹುದು.

Summer Hair Care Tips For Men

ಪ್ರತೀದಿನ ಶ್ಯಾಂಪೂ ಹಚ್ಚಿ

ಹದ ಬಿಸಿ ನೀರಿನಲ್ಲಿ ಮ ಮೃದು ಶ್ಯಾಂಪೂ ಬಳಸಿ ಪ್ರತೀದಿನ ತಲೆ ತೊಳೆದು, ಗಾಳಿಯಲ್ಲಿ ಒಣಗಿಸಿ. ತಲೆಯನ್ನು ಟವಲ್ ನಿಂದ ಒರೆಸಬೇಡಿ, ಗಾಳಿಯಲ್ಲಿ ಒಣಗಲು ಬಿಡಿ. ಸ್ನಾನ ಮಾಡಿಸಿದ ನಂತರ ಸ್ಟೈಲ್ ಗಾಗಿ ಜೆಲ್ ಹಚ್ಚುವ ಅಭ್ಯಾಸ ಬಕ್ಕ ತಲೆ ಉಂಟು ಮಾಡಬಹುದು ಜೋಕೆ.

ಕ್ಲೋರಿನ್ ನೀರು ಬಳಸಬೇಡಿ

ಈಜು ಕೊಳದಲ್ಲಿ ಸ್ನಾನ ಮಾಡಲು ಹೋದರೆ ಕ್ಲೋರಿನ್ ನೀರು ತಲೆಗೆ ತಾಗದಂತೆ ಸ್ವಿಮ್ಮಿಂಗ್ ಕ್ಯಾಪ್ ಹಾಕಿ. ಇದರಿಂದ ಕೂದಲು ಡ್ರೈಯಾಗುವುದನ್ನು ತಡೆಯಬಹುದು.

ಎಣ್ಣೆ ಹಚ್ಚುವುದು
ಸ್ನಾನ ಮಾಡುವ ಮೊದಲು ಕೂದಲಿಗೆ ಎಣ್ನೆ ಸ್ನಾನ ಮಾಡುವುದು ಒಳ್ಳೆಯದು. ಇದು ಕೂದಲನ್ನು ಮಾಯಿಶ್ಚರೈಸರ್ ಆಗಿಡುತ್ತದೆ. ಇದರಿಂದ ಶೈನಿ ಕೂದಲು ನಿಮ್ಮದಾಗುವುದು.

ಕೂದಲನ್ನು ಚಿಕ್ಕದಾಗಿ ಕತ್ತರಿಸಿ
ಕೆಲವರಿಗೆ ಬೇಸಿಗೆಯಲ್ಲಿ ತಲೆ ತುಂಬಾ ಬೆವರುತ್ತದೆ. ತಲೆಯಲ್ಲಿ ಬೆವರು ನಿಂತರೆ ಕೂದಲು ಉದುರಲಾರಂಭಿಸುತ್ತದೆ. ಕೂದಲನ್ನು ಚಿಕ್ಕದಾಗಿ ಕತ್ತರಿಸಿ, ಮಲಗುವ ಮುನ್ನ ಬರೀ ನೀರಿನಲ್ಲಿ ತಲೆ ತೊಳೆಯಿರಿ. ಇದರಿಂದ ಕೂದಲಿನಲ್ಲಿ ಬೆವರಿನಂಶ ಉಳಿಯುವುದಿಲ್ಲ, ಕೂದಲು ಉದುರುವುದಿಲ್ಲ.

ಕೂದಲಿನ ಆರೋಗ್ಯಕ್ಕಾಗಿ ಸತುವಿನಂಶವಿರುವ ಆಹಾರಗಳನ್ನು ತಿನ್ನಿ.

English summary

Summer Hair Care Tips For Men | Tips For Hair Care | ಬೇಸಿಗೆಯಲ್ಲಿ ಕೂದಲಿನ ಆರೈಕೆಗೆ ಪುರುಷರಿಗೆ ಟಿಪ್ಸ್ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

With the onset of summer, we gear up with umbrellas and sunscreen lotions to protect our skin from the dry and harsh sun rays. However, many of us ignore the fact that our hair too needs protection from scorching heat during summer.
X
Desktop Bottom Promotion