For Quick Alerts
ALLOW NOTIFICATIONS  
For Daily Alerts

ಸ್ಟ್ರೈಟ್ನಿಂಗ್ ಮಾಡಿಸಿದರೆ ಕೂದಲು ಹಾಳಾಗುವುದು!

|

ನಮ್ಮ ಫ್ರೆಂಡ್ಸ್ ಯಾರಾದರೂ ಕೂದಲನ್ನು ಸ್ಟ್ರೈಟ್ನಿಂಗ್ ಮಾಡಿಸಿದರೆ ಅವರ ಕೂದಲನ್ನು ನೋಡುವಾಗ ನಮಗೂ ಮಾಡಬೇಕೆನಿಸುವುದು. ಆದರೆ ಹಾಗೇ ಮಾಡಿಸಲು ಹೊರಡುವ ಮುನ್ನ ನಿಮಗೆ ಸ್ಟ್ರೈಟ್ನಿಂಗ್ ಕೂದಲಿನ ಅವಶ್ಯಕತೆ ಇದೆಯೇ, ಮಾಡಿಸಿದ ಮೇಲೆ ಅದರ ನಿರ್ವಹಣೆ ನಿಮ್ಮಿಂದ ಸಾಧ್ಯವೇ ಎಂದು ಯೋಚಿಸಿ, ನಂತರ ಸ್ಟ್ರೈಟ್ನಿಂಗ್ ಕೂದಲ ಬಗ್ಗೆ ಯೋಚಿಸಿ.

ಏಕೆಂದರೆ ಸ್ಟ್ರೈಟ್ನಿಂಗ್ ಮಾಡಿಸಿ, ಅವರು ಹೇಳಿದ ಶ್ಯಾಂಪೂ, ಕಂಡೀಷನರ್ ನಿಂದ ಆರೈಕೆ ಮಾಡದಿದ್ದರೆ ಕೂದಲು ಸಂಪೂರ್ಣ ಹಾಳಾಗುವುದು. ಆರೈಕೆ ಮಾಡಿದರೂ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚು.

ಹೇರ್ ಸ್ಟ್ರೈಟ್ನಿಂಗ್ ಮಾಡಿದರೆ ಇರುವ ಕೂದಲು ಹೇಗೆ ಲುಕ್ ಕಳೆದುಕೊಳ್ಳುತ್ತದೆ ಎಂದು ತಿಳಿಯಲು ಮುಂದೆ ಓದಿ:

ಕೂದಲು ಉದುರುವುದು

ಕೂದಲು ಉದುರುವುದು

ಕೂದಲು ಸ್ಟ್ರೈಟ್ನಿಂಗ್ ಮಾಡಿದರೆ ಹೆಚ್ಚಿನವರು ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಸ್ಟ್ರೈಟ್ನಿಂಗ್ ಮಾಡಿಸುವ ಮುನ್ನ ಯೋಚಿಸಿ.

ಕೂದಲಿನ ಬುಡ ಹಾಳಾಗುತ್ತದೆ

ಕೂದಲಿನ ಬುಡ ಹಾಳಾಗುತ್ತದೆ

ಸ್ಟ್ರೈಟ್ನಿಂಗ್ ಮಾಡಿದಾಗ ಕೂದಲಿನ ಬುಡ ಹಾಳಾಗುತ್ತದೆ, ಕೂದಲಿನಲ್ಲಿರುವ ಕೆಮಿಕಲ್ ಕೂದಲಿನ ಬುಡದ ಆರೋಗ್ಯವನ್ನು ಕಮ್ಮಿ ಮಾಡುತ್ತದೆ. ಹೊಸ ಕೂದಲಿನ ಉತ್ಪತ್ತಿಗೆ ಅಡಚಣೆ ಉಂಟಾಗುತ್ತದೆ.

 ಕೂದಲು ಒರಟಾಗುತ್ತದೆ

ಕೂದಲು ಒರಟಾಗುತ್ತದೆ

ಕೂದಲನ್ನು ಸ್ಟ್ರೈಟ್ನಿಂಗ್ ಮಾಡಿಸಿದಾಗ ಅದನ್ನು ಮುಟ್ಟಿದರೆ ತುಂಬಾ ಮೃದುವಾಗಿರುತ್ತದೆ, ಅಲ್ಲದೆ ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ಸ್ವಲ್ಪ ದಿನಗಳ ನಂತರ ಕೂದಲು ಒರಟಾಗುವುದು, ವರ್ಷ ಕಳೆದಂತೆ ಕೂದಲು ತನ್ನ ಅಂದವನ್ನು ಸಂಪೂರ್ಣ ಕಳೆದುಕೊಳ್ಳುತ್ತದೆ.

ಕೂದಲಿನ ಶೈನಿಂಗ್ ಮಾಯವಾಗುವುದು

ಕೂದಲಿನ ಶೈನಿಂಗ್ ಮಾಯವಾಗುವುದು

ಕೂದಲಿನ ಶೈನಿಂಗ್ ಕಮ್ಮಿಯಾದಂತೆ ಕೂದಲು ಡಲ್ಲಾಗಿ ಕಾಣುವುದು, ಪುನಃ ಸಾವಿರಾರು ರುಪಾಯಿ ಖರ್ಚು ಮಾಡಿ ಸ್ಟ್ರೈಟ್ನಿಂಗ್ ಮಾಡಬೇಕಾಗುತ್ತದೆ.

ಕೂದಲಿನ ಬುಡ ಕವಲೊಡೆಯಲಾರಂಭಿಸುತ್ತದೆ

ಕೂದಲಿನ ಬುಡ ಕವಲೊಡೆಯಲಾರಂಭಿಸುತ್ತದೆ

ಕೂದಲು ಒರಟಾಗುವುದರಿಂದ ಸ್ವಾಭಾವಿಕ ಕೂದಲಿನ ಬುಡ ಕವಲೊಡೆಯಲಾರಂಭಿಸುತ್ತದೆ. ಕೂದಲಿನ ಬುಡ ಕವಲೊಡೆದರೆ ಕೂದಲು ಉದ್ದ ಬೆಳೆಯುವುದಿಲ್ಲ.

ತಲೆ ಬುಡ ಡ್ರೈಯಾಗುವುದು

ತಲೆ ಬುಡ ಡ್ರೈಯಾಗುವುದು

ಕೂದಲನ್ನು ಸ್ಟ್ರೈಟ್ನಿಂಗ್ ಮಾಡಿದರೆ ಕೂದಲಿನ ಬುಡ ಡ್ರೈಯಾಗಿ ತಲೆ ಹೊಟ್ಟಿನ ಸಮಸ್ಯೆ ಕಂಡು ಬರುವುದು.

ಕೂದಲಿನ ನಿರ್ವಹಣೆ ಕಷ್ಟವಾಗುವುದು

ಕೂದಲಿನ ನಿರ್ವಹಣೆ ಕಷ್ಟವಾಗುವುದು

ಕೂದಲು ಹಾಳಾದರೆ ಅದನ್ನು ಮೊದಲಿನ ಸ್ಥಿತಿಗೆ ತರುವುದು ಕಷ್ಟವಾಗುವುದು. ಆದ್ದರಿಂದ ಸ್ವಲ್ಪ ದಿನ ಚೆಂದವಾಗಿ ಕಾಣಲು ಹೋಗಿ ಪರ್ಮನೆಂಟ್ ಚೆಮದ ಕಳೆದುಕೊಳ್ಳಬೇಡಿ.

English summary

Straightening Your Hair Will Effect You

These beautiful and costly hair treatments which promise to give your hair the ultimate texture will only spoil the root in the future. Here at Boldsky, we tell you why it is important to leave your hair just the way it is, and not go in for artificial ways to make it look beautiful.
X
Desktop Bottom Promotion