For Quick Alerts
ALLOW NOTIFICATIONS  
For Daily Alerts

ಕೂದಲು ಸಿಕ್ಕಾಗುವುದನ್ನು ತಡೆಯಬೇಕೆ?

|

ಕೆಲವರ ಕೂದಲು ಬೇಗನೆ ಸಿಕ್ಕಾಗುತ್ತದೆ. ಅದರಲ್ಲೂ ಗುಂಗುರು ಕೂದಲಿನವರಿಗೆ ಕೂದಲು ಹೆಚ್ಚು ಸಿಕ್ಕಾಗುತ್ತದೆ. ಸಿಕ್ಕಾದ ಕೂದಲನ್ನು ಬಿಡಿಸುವಾಗ ನೋವಾಗುವುದು ಮಾತ್ರವಲ್ಲದೆ, ಕೂದಲು ಕೂಡ ನಷ್ಟವಾಗುತ್ತದೆ. ಅದರಲ್ಲೂ ಕೂದಲಿನ ಬುಡ ಸಿಕ್ಕಾದರೆ, ಅದನ್ನು ಬಿಡಿಸುವುದು ಸುಲಭದ ಕೆಲಸವೇನಲ್ಲ.

ಕೂದಲು ಬೇಗನೆ ಸಿಕ್ಕಾಗುವುದನ್ನು ತಡೆಯಬಹುದು, ಅದಕ್ಕಾಗಿ ಕೆಲವೊಂದು ಟಿಪ್ಸ್ ಇವೆ, ಆ ಟಿಪ್ಸ್ ಬಗ್ಗೆ ತಿಳಿಯಲು ಮುಂದೆ ಓದಿ:

 Steps To Stop Hair From Knotting

ಸ್ನಾನದ ನಂತರ ಹೇರ್ ಜೆಲ್ ಬಳಸಿ
ಕೂದಲು ತುಂಬಾ ಸಿಕ್ಕಾಗುವುದನ್ನು ತಡೆಯಲು ಹೇರ್ ಜೆಲ್ ಅಥವಾ serum ಬಳಸಿ. ಇದರಿಂದ ಕೂದಲನ್ನು ಬಾಚುವುದು ಸುಲಭವಾಗುವುದು ಹಾಗೂ ಕೂದಲು ಕೂಡ ನೋಡಲು ಆಕರ್ಷಕವಾಗಿರುತ್ತದೆ.

ಸೆಮಿ ಡ್ರೈ ಆಗಿದ್ದಾಗ ತಲೆ ಬಾಚಿ
ಕೂದಲು ಒದ್ದೆ ಆಗಿರುವಾಗಲೂ ಬಾಚಬಾರದು, ತುಂಬಾ ಒಣಗಿದ ಮೇಲೂ ಬಾಚಬಾರದು, ಇವೆರಡರ ಮಧ್ಯ ಸ್ಥಿತಿಯಲ್ಲಿ ಬಾಚಬೇಕು, ಆಗ ಕೂದಲು ಅಷ್ಟಾಗಿ ಸಿಕ್ಕಾಗುವುದಿಲ್ಲ.

ಮಲಗುವ ಮುನ್ನ ಎಣ್ಣೆ ಹಚ್ಚಿ
ಮಲಗುವ ಮುನ್ನ ಎಣ್ಣೆ ಹಚ್ಚಿ ಮಸಾಜ್ ಮಾಡಿ ಮಲಗಿ. ಇದರಿಂದ ಕೂದಲು ಸಿಕ್ಕಾಗುವುದಿಲ್ಲ. ಕೂದಲಿಗೆ ವಾರದಲ್ಲಿ ಎರಡು ಬಾರಿಯಾದರೂ ಎಣ್ಣೆ ಮಸಾಜ್ ಮಾಡುವುದು ಒಳ್ಳೆಯದು.

ಜಡೆ ಹಾಕಿ
ಉದ್ದ ಕೂದಲಿನವರು ರಾತ್ರಿ ಮಲಗುವಾಗ ಸ್ವಲ್ಪ ಸಡಿಲವಾದ ಜಡೆ ಹಾಕಿ ಮಲಗಿದರೆ ಕೂದಲು ಸಿಕ್ಕಾಗುವುದಿಲ್ಲ ಹಾಗೂ ಕೂದಲಿನ ಬೆಳವಣಿಗೆಗೂ ಸಹಕಾರಿ.

ಪ್ರಯಾಣ ಮಾಡುವಾಗ ಕೂದಲನ್ನು ಹಾರಾಡಲು ಬಿಡಬೇಡಿ
ಆಟೋ, ಬೈಕಿನಲ್ಲಿ ಹೋಗುವಾಗ ಕೂದಲಿಗೆ ಕ್ಲಿಪ್ ಹಾಕಿ. ಇಲ್ಲದಿದ್ದರೆ ಕೂದಲು ಗಾಳಿಗೆ ಹಾರಾಡಿ ತುಂಬಾ ಸಿಕ್ಕಾಗುವುದು.

English summary

Steps To Stop Hair From Knotting | Tips For Hair Care | ಕೂದಲು ಸಿಕ್ಕಾಗುವುದನ್ನು ತಡೆಯಲು ಟಿಪ್ಸ್ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

It is possible to stop hair knotting, if you use the right techniques. Even if you are able to eradicate hair knotting altogether, you can definitely reduce the number of knots and also stem some hair loss.
X
Desktop Bottom Promotion