For Quick Alerts
ALLOW NOTIFICATIONS  
For Daily Alerts

ಈ ಹೇರ್ ಸ್ಟೈಲ್ ತಪ್ಪುಗಳನ್ನು ಮಾಡಲೇಬೇಡಿ!

|

ಸರಿಯಾದ ಹೇರ್ ಸ್ಟೈಲ್ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿದರೆ, ನಿಮಗೆ ಸೂಕ್ತವಲ್ಲದ ಹೇರ್ ಸ್ಟೈಲ್ ನಿಮ್ಮನ್ನು ವಿಚಿತ್ರವಾಗಿ ಕಾಣುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಯಾವುದೇ ಫ್ಯಾಷನ್ ಸ್ಟೇಟ್ ಮೆಂಟ್ ನಿಂದ ಮಿಂಚಬೇಕೆಂದು ಬಯಸುವ ಮುನ್ನ ಅದು ನಮಗೆ ಸೂಕ್ತವಾಗುತ್ತದೆಯೇ, ಇಲ್ಲವೇ ಎಂದು ಯೋಚಿಸಿ ಮತ್ತೆ ಮಾಡುವುದು ಒಳ್ಳೆಯದು.

ಹೆಚ್ಚಿನವರು ತನ್ನ ಫ್ರೆಂಡ್ ಮಾಡಿದ ಹೇರ್ ಸ್ಟೈಲ್ ಅಥವಾ ಯಾವುದೋ ಸೆಲೆಬ್ರಿಟಿ ಮಾಡಿದ ಹೇರ್ ಸ್ಟೈಲ್ ಅನ್ನು ಅನುಕರಣೆ ಮಾಡಲು ಹೋಗಿ ತಮ್ಮ ಇದ್ದ ಲುಕ್ ಕಳೆದುಕೊಳ್ಳುತ್ತಾರೆ. ನೀವೂ ಮಾತ್ರ ಆ ತಪ್ಪು ಮಾಡಬೇಡಿ. ಸಾಮಾನ್ಯವಾಗಿ ಹೆಚ್ಚಿನ ಸ್ತ್ರೀಯರು ಮಾಡುತ್ತಿರುವ ಹೇರ್ ಸ್ಟೈಲ್ ತಪ್ಪುಗಳೇನು ಎಂದು ನೋಡೋಣ ಬನ್ನಿ:

ತಪ್ಪಾದ ಹೇರ್ ಕಟ್

ತಪ್ಪಾದ ಹೇರ್ ಕಟ್

ಹೇರ್ ಕಟ್ ಮಾಡುವಾಗ ನಿಮ್ಮ ಮುಖದ ಆಕಾರಕ್ಕೆ ಹೊಂದುವ ಹೇರ್ ಸ್ಟೈಲ್ ಮಾತ್ರ ಮಾಡಿ. ತೆಳುವಾದ ಕೂದಲಿರುವವರು ಕೂದಲು ದಪ್ಪವಾಗಿ ಕಾಣುವಂತಹ ಹೇರ್ ಸ್ಟೈಲ್ ಮಾಡಿಸಬೇಕು. ಇನ್ನು ಗುಂಗುರು ಕೂದಲು ನಿಮ್ಮದಾಗಿದ್ದರೆ ಆ ಕೂದಲಿನ ಅಂದ ಹೆಚ್ಚಿಸುವ ಹೇರ್ ಕಟ್ ಮಾಡಿಸಬೇಕು. ಸ್ಟ್ರೈಟ್ ಕೂದಲಿನವರು ಅಷ್ಟೇ ತಮಗೆ ಹೊಂದುವ ರೀತಿಯ ಹೇರ್ ಸ್ಟೈ ಅನ್ನು ಮಾಡುವುದು ಒಳ್ಳೆಯದು.

 ಕೂದಲಿನ ಬಣ್ಣ

ಕೂದಲಿನ ಬಣ್ಣ

ಕೂದಲಿಗೆ ಬಣ್ಣ ಹಚ್ಚಬೇಕೆಂಬ ಆಸೆ ನಿಮಗಿದ್ದರೆ ನಿಮ್ಮ ತ್ವಚೆಯ ಬಣ್ಣಕ್ಕೆ ಹೊಂದುವ ಹೇರ್ ಸ್ಟೈಲ್ ಮಾಡಿ. ಭಾರತೀಯರ ತ್ವಚೆಗೆ ಎದ್ದು ಕಾಣುವ ಕೆಂಪು, ಮೆರೂನ್ ಈ ರೀತಿಯ ಬಣ್ಣಗಳು ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ.

ಹೇರ್ ಕಟ್ ಮಾಡುವ ಸಮಯ

ಹೇರ್ ಕಟ್ ಮಾಡುವ ಸಮಯ

ಕೆಲವರಿಗೆ ಕೂದಲಿನ ಶೇಪ್ ಔಟ್ ಆಗುವ ಮುನ್ನ ಹೇರ್ ಕಟ್ ಮಾಡಿಸುವ ಅಭ್ಯಾಸವಿರುತ್ತದೆ, ಮತ್ತೆ ಕೆಲವರಿಗೆ ಕೂದಲಿನ ಶೇಪ್ ಫುಲ್ ಹಾಳಾದರೂ ಅದಕ್ಕೆ ಶೇಪ್ ಕೊಡಲು ಮನಸ್ಸು ಮಾಡುವುದಿಲ್ಲ. ಈ ಎರಡು ಅಭ್ಯಾಸಗಳು ಕೂದಲಿನ ಅಂದವನ್ನು ಹಾಳು ಮಾಡುತ್ತದೆ.

ತೆಳುವಾದ ಕೂದಲು

ತೆಳುವಾದ ಕೂದಲು

ತುಂಬಾ ತೆಳುವಾದ ಕೂದಲಿನವರು ಯಾವತ್ತಿಗೂ ರೇಝರ್ ಹೇರ್ ಕಟ್ ಮಾಡಿಸಬೇಡಿ. ಅದರ ಬದಲು ಲೇಯರ್ ಅಥವಾ ಬ್ಲಂಟ್ ಹೇರ್ ಸ್ಟೈಲ್ ಕೂದಲನ್ನು ದಪ್ಪವಾಗಿ ಕಾಣುವಂತೆ ಮಾಡುತ್ತದೆ.

 ಕೂದಲು ಕವಲೊಡೆದಿದೆಯೇ?

ಕೂದಲು ಕವಲೊಡೆದಿದೆಯೇ?

ಕೂದಲು ಕವಲೊಡೆದಿದ್ದರೆ ಅದನ್ನು ಹಾಗೇ ಬಿಡಬೇಡಿ, ತಕ್ಷಣ ತುದಿ ಕಟ್ ಮಾಡಿಸಿಕೊಳ್ಳಿ, ಇಲ್ಲದಿದ್ದರೆ ಕೂದಲಿನ ಸೌಂದರ್ಯ ಹಾಳಾಗುವುದು.

ಮಾಡರ್ನ್ ಹೇರ್ ಸ್ಟೈಲ್ ಮಾಡಿಸಿ

ಮಾಡರ್ನ್ ಹೇರ್ ಸ್ಟೈಲ್ ಮಾಡಿಸಿ

ಮಾಡರ್ನ್ ಹೇರ್ ಸ್ಟೈಲ್ ಮಾಡಿಸಿ, ಇದು ನಿಮ್ಮಲ್ಲಿ ಯೂತ್ ಕಳೆ ತುಂಬುವುದು, ಹೇರ್ ಕಟ್ ತಪ್ಪಾಗಿದ್ದರೆ ಇರುವ ವಯಸ್ಸಿಗಿಂತ ಹೆಚ್ಚಾಗಿ ಕಾಣುವಿರಿ.

 ಆಗಾಗ ಹೇರ್ ಡ್ರೈಯರ್, ಹೇರ್ ಸೆಟ್ ಮಾಡಿಸಿಕೊಳ್ಳುವುದು

ಆಗಾಗ ಹೇರ್ ಡ್ರೈಯರ್, ಹೇರ್ ಸೆಟ್ ಮಾಡಿಸಿಕೊಳ್ಳುವುದು

ಈ ಅಭ್ಯಾಸ ಕೆಲವರಲ್ಲಿ ಇರುತ್ತದೆ, ಹೇರ್ ಸೆಟ್ ಮಾಡಿಸಿದರೆ ಒಂದು ಸ್ನಾನದ ಬಳಿಕ ಹಾಳಾಗುವುದು, ಹಾಗಂತ ಪ್ರತೀಬಾರಿ ಹೇರ್ ಸೆಟ್ ಮಾಡಬೇಡಿ, ಯಾವುದಾದರೂ ಫಂಕ್ಷನ್ ಇದ್ದರೆ ಮಾತ್ರ ಮಾಡಿಸಿಕೊಳ್ಳಿ, ಇಲ್ಲದಿದ್ದರೆ ಕೂದಲು ಹಾಳಾಗುವುದು.

ತಪ್ಪಾದ ಬ್ರೆಷ್ ಬಳಕೆ ಮಾಡುವುದು

ತಪ್ಪಾದ ಬ್ರೆಷ್ ಬಳಕೆ ಮಾಡುವುದು

ಕೂದಲು ಬಾಚುವಾಗ ತಪ್ಪಾದ ಬ್ರೆಷ್ ಅನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಕೂದಲಿನ ದಪ್ಪ ಮತ್ತು ಕೂದಲಿನ ಗುಣಕ್ಕೆ ತಕ್ಕಂತೆ ಬ್ರೆಷ್ ಬಳಸಬೇಕು.

 ಕೂದಲಿಗೆ ಹಚ್ಚುವ ಉತ್ಪನ್ನಗಳು

ಕೂದಲಿಗೆ ಹಚ್ಚುವ ಉತ್ಪನ್ನಗಳು

ಕೂದಲಿಗೆ ಹಚ್ಚುವ ಉತ್ಪನ್ನಗಳ ಬಗ್ಗೆ ಎಚ್ಚರಿಕೆ, ಅಧಿಕ ರಾಸಾಯನಿವಿರುವ ಉತ್ಪನ್ನಗಳನ್ನು ಬಳಸಬೇಡಿ, ಕಳಪೆ ಗುಣ ಮಟ್ಟದ ಉತ್ಪನ್ನಗಳನ್ನೂ ಬಳಸಬೇಡಿ.

ಅಧಿಕ ಜೆಲ್ ಅಥವಾ ಮಾಯಿಶ್ಚರೈಸರ್ ಬಳಸುವುದು

ಅಧಿಕ ಜೆಲ್ ಅಥವಾ ಮಾಯಿಶ್ಚರೈಸರ್ ಬಳಸುವುದು

ಮಿತಿ ಮೀರಿ ಜೆಲ್ ಅಥವಾ ಮಾಯಿಶ್ಚರೈಸರ್ ಹಚ್ಚಿದರೆ ಕೂದಲಿನ ಲುಕ್ ಹಾಳಾಗುವುದು. ಆದ್ದರಿಂದ ಸ್ಟೈಲ್ ಮಾಡಲು ಹೋಗಿ ಇರುವ ಕೂದಲನ್ನು ಕಳೆದುಕೊಳ್ಳಬೇಡಿ ಅನ್ನುವುದೇ ನಮ್ಮ ಸಲಹೆ.

English summary

Mend These Hairstyle Mistakes Now

A beautician is the right one to suggest what kind of hairstyle or what hair colour will suit the tone of your skin. The next time you want to get a make over done, do not hesitate to read these following hair care tips and fashionable hair trends we suggest.
X
Desktop Bottom Promotion