For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವುದು ಈ ಕಾಯಿಲೆಗಳ ಪ್ರಮುಖ ಲಕ್ಷಣ

|

ಒಬ್ಬ ಆರೋಗ್ಯವಂತ ಮನುಷ್ಯನಿಗೆ ದಿನದಲ್ಲಿ 50 ರಿಂದ 100 ಕೂದಲು ಉದುರುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಕೂದಲು ಉದುರಲಾರಂಭಿಸಿದರೆ ಮಾತ್ರ ಯೋಚಿಸಬೇಕಾದ ಗಂಭೀರ ವಿಷಯವೇ. ಕೂದಲು ನಾನಾ ಕಾರಣಗಳಿಂದ ಉದುರುತ್ತದೆ. ಅಧಿಕ ಕೆಮಿಕಲ್ ಬಳಕೆ, ಹೇರ್ ಬ್ಲೋ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು, ಗಡಸು ನೀರು ಇವೆಲ್ಲಾ ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ.

ಈ ಸಮಸ್ಯೆಗಳಿಂದ ಕೂದಲು ತುಂಬಾ ಉದುರುವುದಾದರೂ ಒಮ್ಮೆ ಬಾಚಿದಾಗ 1000ದಷ್ಟು ಕೂದಲು ಹೋಗುವ ಸಾಧ್ಯತೆ ಕಡಿಮೆ. ಇಷ್ಟೊಂದು ಕೂದಲು ಯಾವಾಗ ಹೋಗುತ್ತದೆ ಎಂದರೆ ದೇಹದಲ್ಲಿ ಏನಾದರೂ ಕಾಯಿಲೆ ಇದ್ದಾಗ. ಆದ್ದರಿಂದ ಕೂದಲು ತುಂಬಾ ಉದುರುತ್ತಿದ್ದರೆ ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿ.

ಅದಲ್ಲೂ ಈ ಕೆಳಗಿನ ಕಾಯಿಲೆಗಳು ಇರುವವರಲ್ಲಿ ಕೂದಲು ಅಸಾಮಾನ್ಯವಾಗಿ ಉದುರಿ, ಕೆಲವೇ ದಿನಗಳಲ್ಲಿ ತಲೆ ಬೋಳಾಗುವುದು:

ಥೈರಾಯ್ಡ್

ಥೈರಾಯ್ಡ್

ಥೈರಾಯ್ಡ್ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಉಂಟಾಗುತ್ತದೆ. ಈ ಕಾಯಿಲೆ ಬಂದರೆ ಕೂದಲು ಉದುರುವುದು ಮಾತ್ರವಲ್ಲ, ಮೈ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುವುದು ಅಥವಾ ತುಂಬಾ ಕಮ್ಮಿಯಾಗುವುದು. ಇದರ ಜೊತೆಗೆ ಸುಸ್ತು ಕಂಡು ಬರುವುದು.

Alopecia Areata

Alopecia Areata

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ಕೂದಲಿನ ಬುಡಕ್ಕೆ ಫಾಲಿಕ್ ಆಸಿಡ್ ನ ಕೊರತೆ ಉಂಟಾಗಿ ಕೂದಲು ಉದುರುವುದು. ಈ ಸಮಸ್ಯೆಯನ್ನು ತಲೆ ಬುಡದಲ್ಲಿ ಬಿಳಿ ಕಲೆಗಳಿಂದ ಗುರುತಿಸಬಹುದು. ಈ ಕಾಯಿಲೆ ಬಂದರೆ ಕೂದಲು ಬುಡದಿಂದಲೇ ಕಿತ್ತು ಬಂದು ಪ್ಯಾಚ್-ಪ್ಯಾಚ್ ಆಗುವುದು, ಕೂದಲೇ ಚಿಕಿತ್ಸೆ ತೆಗೆದುಕೊಂಡರೆ ಕೂದಲು ಹುಟ್ಟುವುದು.

ಸರ್ಜರಿ, ಒತ್ತಡ

ಸರ್ಜರಿ, ಒತ್ತಡ

ಕೆಲವೊಂದು ದೊಡ್ಡ ಶಸ್ತ್ರ ಚಿಕಿತ್ಸೆಯಾದಾಗ ಅಥವಾ ವಿಪರೀತ ಮಾನಸಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದರೆ ಕೂದಲು ಉದುರುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ Telogen Effluvium ಎಂದು ಕರೆಯುತ್ತಾರೆ. ಇದನ್ನು ಚಿಕಿತ್ಸೆಯಿಂದ ಗುಣ ಪಡಿಸಬಹುದು.

ತಲೆ ಬುಡದಲ್ಲಿ ಸೋಂಕು ತಾಗಿದರೆ

ತಲೆ ಬುಡದಲ್ಲಿ ಸೋಂಕು ತಾಗಿದರೆ

ಈ ರೀತಿ ಉಂಟಾದರೆ ತಲೆಯಲ್ಲಿ ತುರಿಕೆ ಕಂಡು ಬರುವುದು ಹಾಗೂ ಕೂದಲು ತುಂಬಾ ಉದುದರಲಾರಂಭಿಸುವುದು. ಈ ಸಮಸ್ಯೆ ಕಂಡು ಬಂದರೆ ಒಮ್ಮೆ ತಲೆಯನ್ನು ಸಂಪೂರ್ಣವಾಗಿ ಬೋಳಿಸಿ ಚಿಕಿತ್ಸೆ ಮಾಡಿದರೆ ನಂತರ ಬರುವ ಕೂದಲು ಮಂದವಾಗಿ ಬೆಳೆಯುವುದು.

ತ್ವಚೆ ಕಾಯಿಲೆಯಿದ್ದರೆ

ತ್ವಚೆ ಕಾಯಿಲೆಯಿದ್ದರೆ

ಕುಷ್ಠರೋಗದಂತಹ ಕಾಯಿಲೆಗಳು, ಮತ್ತಿತರ ಭಯಂಕರವಾದ ತ್ವಚೆ ಸಮಸ್ಯೆಗಳು ಕಂಡು ಬಂದರೆ ಕೂದಲು ಉದುರಿ ತಲೆ ಬೋಳಾಗುವುದು.

Cicatricial Alopecia

Cicatricial Alopecia

ಇದೊಂದು ಅಪರೂಪದ ಖಾಯಿಲೆಯಾಗಿದ್ದು, ಇದು ಬಂದರೆ ಬದುಕಿಳಿಯುವ ಸಾಧ್ಯತೆ ಕಡಿಮೆ. ಈ ಕಾಯಿಲೆ ಬಂದಾಗ ಕೂದಲು ಸಂಪೂರ್ಣವಾಗಿ ಉದುರಿ ತಲೆ ಬೋಳಾಗುವುದು.

 ಕ್ಯಾನ್ಸರ್

ಕ್ಯಾನ್ಸರ್

ಕ್ಯಾನ್ಸರ್ ರೋಗಿಗಳಲ್ಲಿಯೂ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಈಗ ಕ್ಯಾನ್ಸರ್ ಅನ್ನು ಚಿಕಿತ್ಸೆಯಿಂದ ಗುಣ ಪಡಸಬಹುದಾಗಿದ್ದು, ಚಿಕಿತ್ಸೆಯ ನಂತರ ಕೂದಲು ಬೆಳೆಯುವುದು.

Trichotillomania

Trichotillomania

ಇದೊಂದು ವಿಚಿತ್ರವಾದ ಕಾಯಿಲೆಯಾಗಿದೆ. ಈ ಕಾಯಿಲೆ ಇರುವವರಿಗೆ ಕೂದಲು ಉದುರುವುದಿಲ್ಲ, ಆದರೆ ತಮ್ಮ ಕೂದಲನ್ನು ತಾವೇ ಕಿತ್ತು ಕೂದಲಿನ ಆರೋಗ್ಯ ಹಾಳು ಮಾಡುತ್ತಾರೆ. ಇಂತವರು ರೆಪ್ಪೆ ಕೂದಲು, ಹುಬ್ಬು ಇವುಗಳೆನ್ನೆಲ್ಲಾ ಕೀಳುತ್ತಾರೆ. ಚಿಕಿತ್ಸೆ ಕೊಡಿಸಿದರೆ ಈ ಕಾಯಿಲೆಯನ್ನು ಗುಣ ಪಡಿಸಬಹುದು.

English summary

Medical Causes Of Hairfall

Hair loss can be due to a number of reasons like improper nutrition, pollution, overexposure to cosmetic products or an improper hair care regime. But sometimes hair loss can be the sign of a more serious medical condition.
X
Desktop Bottom Promotion