For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಶಾಂಪೂ ಹಾಗೂ ಕಂಡೀಷನರ್ ಹೇಗೆ ಹಾಕಬೇಕು?

By Super
|

ಕೂದಲನ್ನು ಸರಿಯಾಗಿ ಸ್ವಚ್ಚವಾಗಿ ಇಟ್ಟುಕೊಳ್ಳುವುದು ಅತ್ಯಂತ ಸುಲಭವಾದ ಕೆಲಸ. ಆದರೆ ತುಂಬಾ ಜನ ಅದರ ಬಗ್ಗೆ ಗಮನ ಹರಿಸದೇ ಕೂದಲನ್ನು ಸರಿಯಾಗಿ ತೊಳೆಯುವುದೇ ಇಲ್ಲ. ಈ ಲೇಖನದ ಮೂಲಕ ನಿಮ್ಮ ಕೂದಲು ಹೊಳಪನ್ನು ಪಡೆಯಲು ಹಾಗೂ ಸ್ವಚ್ಚವಾಗಿರಲು ಕೆಲವು ಸಲಹೆಗಳನ್ನು ನೀಡಲಾಗಿದೆ.

ನಾವು ಹಾಗೂ ನಮ್ಮ ವ್ಯಕ್ತಿತ್ವ ಸುಂದರವಾಗಿ ಕಾಣಲು ನಮ್ಮ ಹಾವ ಭಾವ ಉಡುಪುಗಳು ಎಷ್ಟು ಮುಖ್ಯವೋ ಅಷ್ಟೇ ಪ್ರಮುಖವಾದುದು ಕೂದಲು ಕೂಡಾ. ಆದ್ದರಿಂದ ಅದರ ಆರೈಕೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕಾದುದು ಅನಿವಾರ್ಯ.

How to Shampoo and Condition Your Hair

ಹಂತಗಳು :

1. ಶಾಂಪೂ, ಕಂಡೀಷನರ್ ಹಾಗೂ ಬಾಚಣಿಗೆಯನ್ನು ಸಂಗ್ರಹಿಸಿ.

2. ಕೂದಲು ಗಂಟಿಕ್ಕಿಕೊಳ್ಳದೇ ಇರಲು ಸ್ನಾನಕ್ಕೆ ಹೋಗುವ ಮೂದಲು ಕೂದಲನ್ನು ಬಾಚಿ / ಬ್ರಷ್ ಮಾಡಿ.

3. ಬಿಸಿ ನೀರಿನಲ್ಲಿ ಕೂದಲನ್ನು ಸಂಪೂರ್ಣವಾಗಿ ಒದ್ದೆ ಮಾಡಿ. ಕೂದಲನ್ನು ಎಷೃ ಸಾಧ್ಯವೋ ಅಷ್ಟು ಅಂದರೆ ಕನಿಷ್ಠ 30 ಸೆಂಕೆಂಡ್ ಗಳಷ್ಟು ಒದ್ದೆಯಾಗಿರುವಂತೆ ನೋಡಿಕೊಳ್ಳಿ.

4. ನಿಮ್ಮ ಕೈಗೆ ಸ್ವಲ್ಪ ಪ್ರಮಾಣದಲ್ಲಿ ಶಾಂಪೂವನ್ನು ಹಾಕಿಕೊಳ್ಳಿ. ನಿಮ್ಮ ಕೂದಲಿನ ಉದ್ದ ಹಾಗೂ ಗಾತ್ರಕ್ಕೆ ತಕ್ಕಂತೆ ಶಾಂಪೂವನ್ನು ಬಳಸಿ.

5. ಕೈಗಳಲ್ಲಿ ಸರಿಯಾಗಿ ಶಾಂಪೂವನ್ನು ಉಜ್ಜಿ ನಂತರ ನೇರವಾಗಿ ನಿಮ್ಮ ಕೂದಲಿನ ಅಂದರೆ ನೆತ್ತಿಯ ಭಾಗಕ್ಕೆ ಹಾಕಿ. ನಂತರ ಚೆನ್ನಾಗಿ ಉಜ್ಜಿ.

6. ಬೆಚ್ಚಗಿನ ನೀರನ್ನು ಬಳಸಿ ಶಾಂಪೂ ಮಾಡಿದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಸ್ನಾನ ಮುಗಿಸುವುದಕ್ಕೆ ಮೊದಲು ಕೂದಲಿನಲ್ಲಿ ಶಾಂಪೂ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

7. ಕೈಯಲಿ ಸ್ವಲ್ಪ ಪ್ರಮಾಣದಲ್ಲಿ ಕಂಡೀಷನರ್ ನ್ನು ಹಾಕಿಕೊಳ್ಳಿ. ಕೈಗಳಲ್ಲಿ ಸರಿಯಾಗಿ ಉಜ್ಜಿ, ನಿಮ್ಮ ಕೂದಲಿನ ಉದ್ದದ ವರೆಗೂ ಕಂಡೀಷನರ್ ನ್ನು ಹಾಕಿ ಉಜ್ಜಿ.

8. ಕಂಡೀಷನರ್ ನ್ನು ಹಾಕಿದ ತಕ್ಷಣಕ್ಕೆ ಕೂದಲನ್ನು ತೊಳೆಯುವುದಕ್ಕಿಂತ 2 - 3 ನಿಮಿಷಗಳ ವರೆಗೆ ಕಂಡೀಷನರ್ ನಿಮ್ಮ ಕೂದಲಿನ ನಡುವೆ ಹಾಗೆಯೇ ಉಳಿಯುವಂತೆ ನೋಡಿಕೊಳ್ಳಿ. ನಂತರ ಕಂಡೀಷನರ್ ಕೂದಲಿನ ಎಲ್ಲಾ ಭಾಗದಲ್ಲಿಯೂ ಹರಡಿಕೊಳ್ಳುವಂತೆ ಕೂದಲನ್ನು ಬಾಚಬಹುದು.

9. ಕಂಡೀಷನರ್ ಕೂದಲಿನಲ್ಲಿ ಉಳಿಯದಂತೆ ಚೆನ್ನಾಗಿ ಬೆಚ್ಚಗಿನ ನೀರಿನಿಂದ ತೊಳೆಯಿರಿ.

10. ಕೂದಲಿಗೆ ಇನ್ನಷ್ಟು ಹೊಳಪನ್ನು ಕೊಡಲು ತಣ್ಣೀರಿನಿಂದ ಬ್ಲಾಸ್ಟ್ ಮಾಡಬಹುದು.

11. ಕೂದಲನ್ನು ತೊಳೆದ ನಂತರ ಒಣ ಟವೆಲ್ ನಿಂದ ಉಜ್ಜಿ ಕೂದಲಿನಲ್ಲಿನ ನೀರನ್ನು ತೆಗೆಯಿರಿ. ಆದರೆ ಕೂದಲನ್ನು ಹೆಚ್ಚು ಹಿಸುಕಬೇಡಿ. ಇದರಿಂದ ಕೂದಲಿನ ಮೃದುತ್ವ ಹೋಗಬಹುದು.

12. ನಂತರ ಕೂದಲನ್ನು ಒಣಗಲು ಬಿಡಿ.

ಸಲಹೆಗಳು :

ಕೂದಲಿನ ಸ್ನಾನ ಮಾಡುವಾಗ ಹೆಚ್ಚು ಪ್ರಶಾಂತ ಹಾಗೂ ಉಲ್ಲಾಸಿತರಾಗಿರಲು ರೇಡಿಯೋವನ್ನು ಕೇಳಬಹುದು. ಆದರೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ನಾನ ಮಾಡುವಾಗ ನೀರು ಬೀಳದ ಜಾಗದಲ್ಲಿ ಇರಿಸಿ.

ಸೂಚನೆ :

ಕೂದಲನ್ನು ಚೆನ್ನಾಗಿ ತೊಳೆಯಿರಿ. ಇಲ್ಲವಾದರೆ ಕೂದಲು ಜಿಡ್ಡು ಜಿಡ್ಡಾಗಿ ಕಾಣಿಸುತ್ತದೆ.

ಕೂದಲು ಒದ್ದೆಯಿದ್ದಾಗ ಅದನ್ನು ಬಾಚ ಬೇಡಿ. ಇದರಿಂದ ಕೂದಲು ಹೆಚ್ಚು ಉದುರುತ್ತದೆ.

ಕೂದಲಿಗೆ ಶಾಂಪೂ ಮಾಡುವಾಗ ಎಲ್ಲಾ ಕೂದಲನ್ನು ನೆತ್ತಿಯ ಮೇಲೆ ಬರುವಂತೆ ಮಾಡಿ, ಇದರಿಂದ ಎಲ್ಲಾ ಕೂದಲಿಗೂ ಸರಿಯಾಗಿ ಶಾಂಪೂ ಸರಿಯಾಗಿ ತಾಗುತ್ತದೆ.

ಹೀಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಂತಹ ಮುಖಕ್ಕೆ ಶೋಭೆ ಎನಿಸಿರುವ ಕೂದಲಿನ ಆರೈಕೆಯನ್ನು ಮಾಡದಿದ್ದಲ್ಲಿ ಕೂದಲು ಹಾನಿಗೊಳಗಾಗುತ್ತದೆ. ಆದ್ದರಿಂದ ಪ್ರತಿ ಬಾರಿ ಕೂದಲನ್ನು ತೊಳೆಯುವಾಗ, ಶಾಂಪೂ ಕಂಡೀಷನರ್ ನ್ನು ಬಳಸುವಾಗ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟು ನಿಮ್ಮ ಕೂದಲು ಇನ್ನಷ್ಟು ಹೊಳಪನ್ನು ಪಡೆಯುವಂತೆ ನೋಡಿಕೊಳ್ಳಿ.

English summary

How to Shampoo and Condition Your Hair | ಕೂದಲಿಗೆ ಶಾಂಪೂ ಹಾಗೂ ಕಂಡೀಷನರ್ ಹಾಕುವುದು ಹೇಗೆ ?

As easy as this task may seem, many people wash their hair incorrectly. This article will hopefully explain the right way to get a shining, clean hair.
X
Desktop Bottom Promotion