For Quick Alerts
ALLOW NOTIFICATIONS  
For Daily Alerts

ಅಕಾಲಿಕ ನೆರೆಗೂದಲು ಬರದಿರಲು ಈ ರೀತಿ ಮಾಡಿ

|

ಭಾರತೀಯರಲ್ಲಿ ಶೇ. 70ರಷ್ಟು ಜನರು ಸ್ವಾಭಾವಿಕವಾಗಿ ಕಪ್ಪು ಕೂದಲನ್ನು ಹೊಂದಿದ್ದಾರೆ. ನಮ್ಮ ಮುಖಕ್ಕೆ ಹೊಂದುವ ತಲೆಗೂದಲು ನಮಗೆ ಸ್ವಾಭಾವಿಕವಾಗಿ ದೊರೆತ್ತಿರುತ್ತದೆ, ಗೋಧಿ ಮೈ ಬಣ್ಣದವರಿಗೆ ಇತರ ಬಣ್ಣದ ಕೂದಲಿಗಿಂತ ಕಪ್ಪು ಕೂದಲು ತುಂಬಾ ಆಕರ್ಷಕವಾಗಿ ಕಾಣುವುದು.

ಆದರೆ ಕಪ್ಪು ಕೂದಲಿನ ಸೌಂದರ್ಯವನ್ನು 40ರ ಪ್ರಾಯದವರೆಗಾದರೂ ಉಳಿಸಿಕೊಳ್ಳೋಣ ಅಂದರೆ ಅದು ಸಾಹಸದ ವಿಷಯವಾಗಿದೆ. ಪರಿಸರ ಮಾಲಿನ್ಯ, ನಮ್ಮ ಆಹಾರಕ್ರಮ, ರಾಸಾಯನಿಕ ವಸ್ತುಗಳಿಂದ ಕೂದಲನ್ನು ಆರೈಕೆ ಮಾಡುವ ವಿಧಾನದಿಂದ ಕಪ್ಪು ಕೂದಲನ್ನು ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟದ ವಿಷಯವಾಗಿದೆ.

ಕೂದಲು ಬೆಳ್ಳಗಾದ ಮೇಲೆ ಚಿಂತೆ ಮಾಡುವ ಬದಲು ಕಪ್ಪು ಇರುವಾಗಲೇ ಈ ರೀತಿ ಕೂದಲನ್ನು ಆರೈಕೆ ಮಾಡಿ. ಇದರಿಂದ ನೆರೆಕೂದಲು ಉಂಟಾಗುವುದನ್ನು ತಡೆಯಬಹುದು:

ಬಿಸಿ ಎಣ್ಣೆಯಿಂದ ಮಸಾಜ್

ಬಿಸಿ ಎಣ್ಣೆಯಿಂದ ಮಸಾಜ್

ಕೂದಲಿಗೆ ಸರಿಯಾಗಿ ಎಣ್ಣೆ ಹಾಕದಿದ್ದರೆ ನಿಮ್ಮ ಕೂದಲು ಆಕರ್ಷಣೆಯನ್ನು ಕಳೆದುಕೊಳ್ಳುದುಕೊಂಡು, ಕವಲೊಡೆಯಲಾರಂಭಿಸುತ್ತದೆ. ಕೂದಲನ್ನು ಗಮನಿಸದೆ ಹೋದರೆ ಕೂದಲು ಬೆಳ್ಳಗಾಗಲಾರಂಭಿಸುತ್ತದೆ. ಆದ್ದರಿಂದ ವಾರದಲ್ಲಿ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ, ಅದರಿಂದ ಮಸಾಜ್ ಮಾಡಿಕೊಳ್ಳಿ.

ಕರಿಬೇವಿನ ಎಲೆ

ಕರಿಬೇವಿನ ಎಲೆ

ಕೂದಲನ್ನು ಕಪ್ಪಾಗಿಸುವಲ್ಲಿ ಕರಿಬೇವು ಮಹತ್ವದ ಪಾತ್ರವಹಿಸುತ್ತದೆ. ಕರಿ ಬೇವು ಹಾಕಿ ಬಿಸಿ ಮಾಡಿದ ಎಣ್ಣೆಯನ್ನು ಒಂದು ಬಾಟಲಿನಲ್ಲಿ ಹಾಕಿ ಕತ್ತಲಿರುವ ತಂಪಾದ ಪ್ರದೇಶದಲ್ಲಿ ಒಂದುವಾರ ಇಡಿ. ನಂತರ ಈ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಿ.

 ದಾಸವಾಳ

ದಾಸವಾಳ

ದಾಸವಾಳದ ಎಲೆ ಮತ್ತು ಹೂ ಕೂಡ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಾಸವಾಳದ ಎಲೆಯನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯುವುದು ಒಳ್ಳೆಯದು. ದಾಸವಾಳದ ಹೂವನ್ನು ಎಣ್ಣೆಯಲ್ಲಿ ಹಾಕಿ ಕಾಯಿಸಿ 2 ವಾರದ ಬಳಿಕ ಬಳಸಿ.

 ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿ ಎಣ್ಣೆಯನ್ನು ಬಳಸುವುದರಿಂದ ಕಪ್ಪು ಕೂದಲನ್ನು ಪಡೆಯಬಹುದು. ಇದನ್ನು ತಿನ್ನುವುದು ಕೂಡ ಒಳ್ಳೆಯದು.

ಬಿಸಿಲಿಗೆ ಹೋಗುವಾಗ ಕೂದಲಿನ ಬಗ್ಗೆ ಎಚ್ಚರ

ಬಿಸಿಲಿಗೆ ಹೋಗುವಾಗ ಕೂದಲಿನ ಬಗ್ಗೆ ಎಚ್ಚರ

ಉರಿ ಬಿಸಿಲು ಕೂದಲಿನ ಮೇಲೆ ಬಿದ್ದರೆ ಕೂದಲು ಹಾಳಾಗುತ್ತದೆ. ಆದ್ದರಿಂದ ಬಿಸಿಲಿಗೆ ಹೋಗುವಾಗ ಕೂದಲಿನ ರಕ್ಷಣೆ ಬಗ್ಗೆಯೂ ಗಮನ ನೀಡಿ.

ಅಶ್ವಗಂಧ

ಅಶ್ವಗಂಧ

ಅಶ್ವಗಂಧವನ್ನು ಕೂದಲಿನ ಆರೈಕೆಗೆ ಆರ್ಯುವೇದದಲ್ಲಿ ಬಳಸಲಾಗುವುದು. ಅಶ್ವಗಂಧವನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಚ್ಚಿದರೆ ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುವುದು.

ಎಳ್ಳೆಣ್ಣೆ

ಎಳ್ಳೆಣ್ಣೆ

ಎಳ್ಳೆಣ್ಣೆ ಕೂಡ ಒಳ್ಳೆಯದು. ಎಳ್ಳು ಬೀಜವನ್ನು ತಿನ್ನುವುದು ಕೂಡ ಒಳ್ಳೆಯದು.

ಹರಳೆಣ್ಣೆ

ಹರಳೆಣ್ಣೆ

ಹರಳಣ್ಣೆಯಿಂದ ಕೂದಲಿನ ಆರೈಕೆ ಮಾಡಿದರೆ ಕೂದಲು ಕಪ್ಪಾಗಿರುವುದು ಹಾಗೂ ಬೇಗನೆ ಉದ್ದ ಬೆಳೆಯುವುದು.

 ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಅನ್ನು ತಿನ್ನುವುದರ ಜೊತೆಗೆ ಅದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಇದರಲ್ಲಿರುವ ಕ್ಯಾರೋನೋಯ್ಡ್ಸ್ ಅನ್ನು ಹೀರಿಕೊಳ್ಳುವುದರಿಂದ ಕೂದಲು ಕಪ್ಪಾಗಿ ಇರುವುದು.

ನಿಂಬೆ ರಸ ಬಳಸಿ ಆರೈಕೆ

ನಿಂಬೆ ರಸ ಬಳಸಿ ಆರೈಕೆ

ನಿಂಬೆ ರಸ ಕೂದಲಿಗೆ ಅನೇಕ ರೀತಿಯಲ್ಲಿ ಒಳ್ಳೆಯದು. ಇದನ್ನು ಹಚ್ಚುವುದರಿಂದ ಕೂದಲು ಕಪ್ಪಾಗಿರುವುದು ಮಾತ್ರವಲ್ಲ, ತಲೆ ಹೊಟ್ಟಿನ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಕೂದಲು ದುರ್ವಾಸನೆ ಬೀರುವುದಿಲ್ಲ.

ಸೀಗೆಕಾಯಿ ಹಾಕಿ ತಲೆ ತೊಳೆಯಿರಿ

ಸೀಗೆಕಾಯಿ ಹಾಕಿ ತಲೆ ತೊಳೆಯಿರಿ

ಕಂಡ-ಕಂಡ ಶ್ಯಾಂಪೂ ಬಳಸುವ ಬದಲು ನೈಸರ್ಗಿಕವಾಗಿ ದೊರೆಯುವ ಸೀಗೆಕಾಯಿ ಹಾಕಿ ತಲೆ ತೊಳೆದರೆ ನಿಮ್ಮ ಕೂದಲು ಉದ್ದವಾಗಿ, ಆಕರ್ಷಕವಾಗಿ ಬೆಳೆಯುವುದು.

English summary

How To Get Black Hair Naturally? | Tips For Hair Care | ಕಪ್ಪಾದ ಕೂದಲನ್ನು ಪಡೆಯಲು ಟಿಪ್ಸ್ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

These home remedies for black hair typically include natural hair oils. Massaging with these oils darkens your hair naturally. There are also some herbs that help the hair turn black naturally. These home remedies will be useful to you, even if you are facing the problem of premature greying.
X
Desktop Bottom Promotion