For Quick Alerts
ALLOW NOTIFICATIONS  
For Daily Alerts

ಒರಟು ಕೂದಲಿನ ಸಮಸ್ಯೆಯೇ? ಇಲ್ಲಿದೆ ಪರಿಹಾರ

|

ನಿಮ್ಮ ಕೂದಲು ಒರಟಾಗಿದೆಯೇ? ಯಾವ ಶ್ಯಾಂಪೂ ಹಚ್ಚಿದರೂ ಕೂದಲಿನ ಒರಟುತನ ಕಮ್ಮಿಯಾಗಿಲ್ಲವೇ? ಚಿಂತೆ ಬಿಡ, ನಿಮ್ಮ ಸಮಸ್ಯೆಗೆ ಈ ವಿಧಾನಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಈ ವಿಧಾನಗಳನ್ನು ಬಳಸಿದರೆ ಕೂದಲಿಗೆ ಯಾವ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ಕೂಲಿನ ಬುಡ ಬಲವಾಗಿ, ಮೃದುವಾದ ಕೂದಲು ನಿಮ್ಮದಾಗುವುದು.

ಮೃದುವಾದ, ಆಕರ್ಷಕವಾದ ಕೂದಲು ಬೇಕೆನ್ನುವವರು ಈ ವಿಧಾನವನ್ನು ಬಳಸಿ:

Homemade Hair Smoothening Packs

ಮಯೋನೈಸ್ ಮತ್ತು ಬೆಣ್ಣೆಯ ಮಾಸ್ಕ್
1 ಕಪ್ ಮಯೋನೈಸ್ ಗೆ 2 ಚಮಚ ಬೆಣ್ಣೆ ಹಣ್ಣಿನ ಪೇಸ್ಟ್ ಹಾಕಿ, ಚೆನ್ನಾಗಿ ಕದಡಿ, ನಂತರ ತಲೆಗೆ ಬುಡದಿಂದಲೇ ಹಚ್ಚಿ, ಶವರ್ ಕ್ಯಾಪ್ ಹಾಕಿ ಒಂದು ಗಂಟೆವರೆಗೆ ಇಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ, ನಂತರ ಮೈಲ್ಡ್ ಶ್ಯಾಂಪೂವಿನಿಂದ ಕೂದಲನ್ನು ತೊಳೆದು ಗಾಳಿಯಲ್ಲಿ ಒಣಗಿಸಿ, ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಮೃದುವಾಗುವುದು.

ಲೋಳೆಸರ
ತಲೆಕೂದಲಿನ ಅನೇಕ ಸಮಸ್ಯೆಗಳಿಗೆ ಲೋಳೆಸರದಿಂದ ಪರಿಹಾರ ಕಂಡುಕೊಳ್ಳಬಹುದು. ಲೋಳೆಸರವನ್ನು ತಲೆಗೆ ಹಚ್ಚಿ 1-2 ಗಂಟೆಗಳ ಕಾಲ ಇಟ್ಟು ನಂತರ ಮೈಲ್ಡ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ಈ ರೀತಿ ಪ್ರತೀಬಾರಿ ತಲೆ ಸ್ನಾನ ಮಾಡುವಾಗಲೂ ಮಾಡಿ. ಈ ವಿಧಾನ ಅನುಸರಿಸಿದರೆ ಆರೋಗ್ಯವಾದ, ಮೃದುವಾದ ಕೂದಲು ನಿಮ್ಮದಾಗುವುದು.

ನೆಲ್ಲಿಕಾಯಿಯ ಪುಡಿ
ಎಣ್ಣೆಯ ಜೊತೆ ನೆಲ್ಲಿಕಾಯಿಯ ಪುಡಿ ಮಿಕ್ಸ್ ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ತಲೆ ತೊಳೆಯಿರಿ. ಈ ವಿಧಾನದಿಂದಲೂ ಮೃದುವಾದ ಕೂದಲನ್ನು ಪಡೆಯಬಹುದು.

English summary

Homemade Hair Smoothening Packs

Natural ingredients for hair care is vital, since we are unware of the hair product contents. Natural ingredients for hair care is safer to use compared to hair products which is sold in the market. Homemade Hair Smoothening Packs So if you wish to have smooth and luscious hair, here are some of the hair smoothening packs to try at home.
 
X
Desktop Bottom Promotion