For Quick Alerts
ALLOW NOTIFICATIONS  
For Daily Alerts

ಹೇರ್ ಕಂಡೀಷನರ್ ಬಳಸುವ ವಿಧಾನ

|

ಸೊಂಪಾದ ಹೊಳಪಿನ ಕೂದಲು ಬೇಕೆಂದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಸುಂದರ ಕೂದಲನ್ನು ಕೂದಲಿನ ಆರೈಕೆ ಮಾಡದಿದ್ದರೆ ಪಡೆಯಲು ಸಾಧ್ಯವಿಲ್ಲ. ಕೂದಲಿನ ಆರೈಕೆಗೆ ಬ್ಯೂಟಿ ಪಾರ್ಲರ್ ಗೆ ಹೋಗಿ ಮಾಡಬಹುದು, ಮನೆಯಲ್ಲಿಯೂ ಮಾಡಬಹುದು. ನೈಸರ್ಗಿಕವಾಗಿ ಕೂದಲಿನ ಆರೈಕೆ ಮಾಡಿದರೆ ಕೂದಲಿನ ಅಂದ ಹೆಚ್ಚುವುದು, ದುಡ್ಡೂ ಉಳಿಯುತ್ತದೆ.

ಇಲ್ಲಿ ನಾವು ನೈಸರ್ಗಿಕವಾದ ಕಂಡೀಷನರ್ ಬಗ್ಗೆ ಹೇಳಿದ್ದೇವೆ. ಸ್ನಾನದ ನಂತರ ಈ ಕಂಡಿಷನರ್ ಬಳಸಿದರೆ ನಿಮ್ಮ ಕೂದಲು ಆಕರ್ಷಕವಾಗಿ ಕಾಣುವುದು.

ಕಂಡೀಷನರ್ ಬಳಸುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ ನೋಡಿ:

Homemade Hair Conditioners

ಕಂಡೀಷನರ್ ಹಾಕುವ ವಿಧಾನ:

* ಮಾರ್ಕೆಟ್ ನಲ್ಲಿ ದೊರೆಯುವ ಕಂಡೀಷನರ್ ಅನ್ನು ತಲೆ ಬುಡಕ್ಕೆ ತಾಗಿಸಬೇಡಿ. ಕೂದಲಿನ ಬುಡಕ್ಕೆ ತಾಗಿದರೆ ಕೂದಲು ಉದುರುವ ಉದುರುವುದು, ತಲೆ ಹೊಟ್ಟು ಈ ರೀತಿಯ ಸಮಸ್ಯೆಗಳು ಕಂಡು ಬರಬಹುದು.

* ತಲೆಗೆ ಸ್ನಾನ ಮಾಡಿ ಕೈ ಬೆರಳನ್ನು ಕೂದಲಿನಲ್ಲಿ ಆಡಿಸಿ ನಂತರ ಕಂಡೀಷನರ್ ಹಾಕಿ 5 ನಿಮಿಷ ಇಟ್ಟು ತಲೆ ತೊಳೆಯಬೇಕು.

ನೈಸರ್ಗಿಕವಾದ ಕಂಡೀಷನರ್ ಬಳಸಲು ಇಚ್ಛೆಪಡುವವರು ಈ ರೀತಿ ಮಾಡಬಹುದು:

ಮೆಹಂದಿ ಹಾಗೂ ಮೊಟ್ಟೆಯನ್ನು ಕಂಡೀಷನರ್ ಆಗಿ ಬಳಸಬಹುದು. 1 ಕಪ್ ಮೆಹಂದಿಗೆ ಅರ್ಧ ಕಪ್ ನೀರು ಹಾಕಿ ಮಿಶ್ರಣ ಮಾಡಿ ಒಂದು ರಾತ್ರಿ ಇಡಿ. ಮಾರನೆಯ ದಿನ ಮೆಹಂದಿಗೆ ಮೊಟ್ಟೆಯ ಬಿಳಿ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ 2 ಗಂಟೆ ಕಾಲ ಇಟ್ಟು ತೊಳೆಯಿರಿ. ಈ ರೀತಿ ಎರಡು ವಾರಕ್ಕೊಮ್ಮೆ ಮಾಡಿದರೂ ಸಾಕು, ಕೂದಲು ಶೈನಿಯಾಗಿರುತ್ತದೆ.

* ಒಂದು ಕಪ್ ಮೆಂತೆ ಬೀಜವನ್ನು ನೀರಿನಲ್ಲಿ ನೆನೆಯಿಟ್ಟು ನಂತರ ಅದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ 30 ನಿಮಿಷ ಇಟ್ಟು ತಲೆ ತೊಳೆದರೆ ಕೂದಲು ಕಂಡೀಷನರ್ ಹಾಕಿದಂತೆ ಆಕರ್ಷಕವಾಗಿ ಕಾಣುತ್ತದೆ.

* ಆರೋಗ್ಯಕರ ಕೂದಲು ಬೇಕೆಂದರೆ ಎಣ್ಣೆ ಹಚ್ಚಬೇಕು. ಬಿಸಿ ಎಣ್ಣೆಯ ಮಸಾಜ್ ಕೂದಲಿಗೆ ತುಂಬಾ ಒಳ್ಳೆಯದು.

* ಲೋಳೆಸರವನ್ನು ಸ್ವಲ್ಪ ಜೇನಿನೊಂದಿಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿದರೂ ಕೂದಲು ಕಂಡೀಷನರ್ ಹಚ್ಚಿದಷ್ಟೂ ಆಕರ್ಷಕವಾಗಿ ಕಾಣುತ್ತದೆ.

English summary

Homemade Hair Conditioners | Tips For Hair Care | ಕೂದಲಿನ ಪೋಷಣೆಗೆ ಬೇಕು ಹೇರ್ ಕಂಡೀಷನರ್ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Every woman dreams for silky, bouncy and voluminous healthy hair. But none of us can rush to a spa or hair care center every time to fix bad hair. There are limitless options available at your very own house that can work wonders to make your hair soft, supple and silky.
X
Desktop Bottom Promotion