For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗಾಗಿ 'ಹೇರ್ ಡಯಟ್'

|

ಕೂದಲಿನ ಆರೋಗ್ಯಕ್ಕೆ ನಿಮ್ಮ ಆಹಾರಕ್ರಮ ಕೂಡ ಮುಖ್ಯ ಅನ್ನುವ ಅಂಶ ನಿಮಗೆ ಗೊತ್ತಿರಬಹುದು. ಕೂದಲಿಗೆ ಪೋಷಕಾಂಶದ ಕೊರತೆ ಉಂಟಾದರೆ ಯಾವ ಬಾಹ್ಯ ಆರೈಕೆಯೂ ಪ್ರಯೋಜನ ಬೀಳುವುದಿಲ್ಲ. ಕೂದಲು ಸೊಂಪಾಗಿ ಬೆಳೆಯಲು ಸತುವಿನಂತಹ ಕೆಲವೊಂದು ಪೋಷಕಾಂಶಗಳು ಅವಶ್ಯಕ.

ಇಲ್ಲಿ ನಾವು 'ಹೇರ್ ಡಯಟ್' ಬಗ್ಗೆ ಹೇಳಿದ್ದೇವೆ, ಈ ಆಹಾರಗಳನ್ನು ತಿಂದರೆ ನಿಮ್ಮ ಕೂದಲಿಗೆ ಅವಶ್ಯಕವಾದ ಪೋಷಕಾಂಶ ದೊರೆಯುವುದರಿಂದ ಸೊಂಪಾದ ಕೂದಲು ನಿಮ್ಮದಾಗುವುದು.

ಒಮೆಗಾ 3 ಕೊಬ್ಬಿನಂಶವಿರುವ ಆಹಾರ

ಒಮೆಗಾ 3 ಕೊಬ್ಬಿನಂಶವಿರುವ ಆಹಾರ

ನಮ್ಮ ದೇಹವು ಒಮೆಗಾ 3 ಕೊಬ್ಬಿನಂಶವನ್ನು ಉತ್ಪತ್ತಿ ಮಾಡುವುದಿಲ್ಲ, ಆದರೆ ಈ ಕೊಬ್ಬಿನಂಶ ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಮತ್ತು ಕೂದಲಿನ ಆರೋಗ್ಯಕ್ಕೆ ಅವಶ್ಯ. ಇವುಗಳನ್ನು ಆಹಾರಕ್ರಮದ ಮುಖಾಂತರ ತೆಗೆದುಕೊಳ್ಳಬೇಕು. ನಾವ್ ವೆಜ್ ಆದರೆ ಮೀನು, ಕುರಿ ಮಾಂಸ ಇವುಗಳಲ್ಲಿ ಇರುತ್ತದೆ. ವೆಜ್ ಆದರೆ ಅಗಸೆದ ಬೀಜದಲ್ಲಿ ಈ ಕೊಬ್ಬಿನಂಶ ಕಂಡು ಬರುವುದು.

ಪ್ರೊಟೀನ್

ಪ್ರೊಟೀನ್

ಪ್ರೊಟೀನ್ ಕೊರತೆ ಉಂಟಾದರೂ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಮೊಟ್ಟೆ, ಮಾಂಸ, ಹಾಲು ಇವುಗಳಲ್ಲಿ ಪ್ರೊಟೀನ್ ಅಂಶವಿದೆ.

ಕಬ್ಬಿಣದಂಶ

ಕಬ್ಬಿಣದಂಶ

ಕಬ್ಬಿಣದಂಶದ ಕೊರತೆ ಉಂಟಾದರೂ ಕೂದಲು ಉದುರುವುದು. ಸೊಪ್ಪು, ಹಸಿರು ತರಕಾರಿಗಳಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ.

ವಿಟಮಿನ್ ಗಳು

ವಿಟಮಿನ್ ಗಳು

ತಲೆಬುಡದಲ್ಲಿ ತಲೆಹೊಟ್ಟಿನಂತಹ ಸಮಸ್ಯೆ ವಿಟಮಿನ್ಸ್ ಕೊರತೆಯಿಂದ ಉಂಟಾಗುವುದು. ವಿಟಮಿನ್ ಎ ಮತ್ತು ಸಿ , ಬಿ ಕೂದಲಿನ ಬೆಳವಣಿಗೆಗೆ ಅವಶ್ಯಕ. ಕಿತ್ತಳೆ, ನಿಂಬೆ ಹಣ್ಣು, ಕ್ಯಾರೆಟ್ ಇವುಗಳಲ್ಲಿ , ಸಿಹಿ ಗೆಣಸು, ದವಸ ಧಾನ್ಯಗಳು, ಬೀನ್ಸ್, ಬಾಳೆ ಹಣ್ಣು ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಕೂದಲಿನ ಆರೋಗ್ಯ ಹೆಚ್ಚುವುದು.

 ಆರೋಗ್ಯಕರ ಕೊಬ್ಬಿನಂಶ

ಆರೋಗ್ಯಕರ ಕೊಬ್ಬಿನಂಶ

ಆರೋಗ್ಯಕರ ಕೊಬ್ಬಿನಂಶ ವಾಲ್ ನಟ್ಸ್, ಬಾದಾಮಿ ಇವುಗಳಲ್ಲಿ ಇರುತ್ತದೆ. ಇವುಗಳನ್ನು ತಿಂದರೆ ಕೂದಲಿನ ಬುಡ ಸ್ಟ್ರಾಂಗ್ ಆಗುವುದು.

ಸತುವಿನಂಶ

ಸತುವಿನಂಶ

ಸತುವಿನಂಶ ಕೊರತೆ ಉಂಟಾದರೆ ತಲೆ ಹೊಟ್ಟು, ಕೂದಲು ಕವಲೊಡೆಯುವುದು, ಡ್ರೈಯಾಗುವುದು, ಕೂದಲು ಉದುರುವುದು ಮುಂತಾದ ಸಮಸ್ಯೆ ಕಂಡು ಬರುವುದು. ಸೊಪ್ಪು ಮತ್ತು ಸಮುದ್ರಾಹಾರ, ಮೊಟ್ಟೆ, ಚಿಕನ್ ಇವುಗಳಲ್ಲಿ ಸತುವಿನಂಶ ಅಧಿಕವಿರುತ್ತದೆ.

English summary

Healthy Hair Diet Revealed

If you regularly eat a diet consisting of only unhealthy foods, your hair and scalp will be damaged. Since we all crave a thick, luxurious mane of hair, we have to closely pay attention to our diet. The nutrients we consume daily are vital for fortifying each hair follicle.
X
Desktop Bottom Promotion