For Quick Alerts
ALLOW NOTIFICATIONS  
For Daily Alerts

ಕೂದಲು ಕವಲೊಡೆಯುವುದನ್ನು ತಡೆಯಲು ಟಿಪ್ಸ್

|

ಕೂದಲು ಕವಲೊಡೆದರೆ ಕೂದಲು ಉದ್ದ ಬೆಳೆಯುವುದಿರಲಿ, ನೋಡಲೂ ಅಸಹ್ಯವಾಗಿ ಕಾಣುತ್ತದೆ. ಹೇರ್ ಸ್ಟೈಲ್ ಹಾಳಾಗುತ್ತದೆ, ಕೂದಲು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕೂದಲು ಕವಲೊಡೆದರೆ ಅದನ್ನು ಕತ್ತರಿಸಬೇಕು. ಯಾವ ಶ್ಯಾಂಪೂ, ಕಂಡೀಷನರ್ ನಿಂದಲೂ ಕವಲೊಡೆದ ಕೂದಲನ್ನು ಸರಿ ಪಡಿಸಲು ಸಾಧ್ಯವಿಲ್ಲ.

ಆದ್ದರಿಂದ ಕೂದಲು ಕವಲೊಡೆಯುವುದನ್ನು ತಡೆಗಟ್ಟಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು:

Have Long Hair Without Split Ends

ಪ್ರಯಾಣ ಮಾಡುವಾಗ ಕೂದಲನ್ನು ಕಟ್ಟಿ
ಪ್ರಯಾಣ ಮಾಡುವಾಗ ಕೂದಲನ್ನು ಹಾಳಿಗೆ ಹಾರಾಡಲು ಬಿಡುವ ಬದಲು , ಅದನ್ನು ಬ್ಯಾಂಡ್ ಹಾಕಿ ಕಟ್ಟಿ ತಲೆಗೆ ಸ್ಕಾರ್ಫ್ ಕಟ್ಟುವುದು ಒಳ್ಳೆಯದು. ಇಲ್ಲದಿದ್ದರೆ ಕೂದಲಿನಲ್ಲಿ ದೂಳು ಬಂದು ಕುಳಿತು ಕೂದಲು ಕವಲೊಡೆಯುತ್ತದೆ.

ಮಲಗುವ ಮುನ್ನ ಕೂದಲನ್ನು ಕಟ್ಟುವುದು ಒಳ್ಳೆಯದು
ಮಲಗುವ ಮುನ್ನ ಕೂದಲಿಗೆ ಜಡೆ ಹಾಕಿ ಮಲಗುವುದು ಒಳ್ಳೆಯದು. ಆದರೆ ತುಂಬಾ ಬಿಗಿಯಾಗಿ ಜಡೆ ಹಾಕಬೇಡಿ.

ಕೂದಲಿಗೆ ಐರನ್ ಮಾಡಬೇಡಿ
ಹೆಚ್ಚಿನವರು ಕೂದಲು ಸ್ಟ್ರೈಟ್ ಕಾಣಲು ಐರನ್ ಮಾಡುತ್ತಾರೆ. ಆದರೆ ಈ ರೀತಿ ಮಾಡಿದರೆ ಕೂದಲಿನ ಬುಡ ಕವಲೊಡೆಯುವುದು.

ಹೇರ್ ಡ್ರೈಯರ್
ಸ್ನಾನದ ಕೂದಲನ್ನು ನೈಸರ್ಗಿಕವಾದ ಗಾಳಿಯಲ್ಲಿ ಒಣಗಿಸಿ. ಹೇರ್ ಡ್ರೈಯರ್ ಬಳಸಿದರೆ ಕೂದಲು ಹಾಳಾಗುವುದು.

ಸ್ಟ್ರೈಟ್ನಿಂಗ್ ಮೆಷಿನ್
ಮೆನಯಲ್ಲಿ ಸ್ಟ್ರೈಟ್ನಿಂಗ್ ಮೆಷಿನ್ ಇದ್ದರೆ ಆಗಾಗ ಅದರಿಂದ ಕೂದಲನ್ನು ಸ್ಟ್ರೈಟ್ ಮಾಡಿದರೆ ಕೂದಲು ಹಾಳಾಗುವುದು.

English summary

Have Long Hair Without Split Ends | Tips For Hair Care | ಕೂದಲು ಕವಲೊಡೆಯುವುದನ್ನು ತಡೆಯಲು ಟಿಪ್ಸ್ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

But you can have long hair without split ends if you follow a few simple steps. To remove split ends and keep your hair healthy, do the following.
X
Desktop Bottom Promotion