For Quick Alerts
ALLOW NOTIFICATIONS  
For Daily Alerts

ಕೂದಲು ಕವಲೊಡೆಯುವುದನ್ನು ತಡೆಯುವ ಟಿಪ್ಸ್

|

ಕೂದಲಿನ ಬುಡ ಕವಲೊಡೆಯುವುದು ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಕವಲೊಡೆದ ಕೂದಲಿನ ಬುಡವನ್ನು ಸರಿಪಡಿಸಬಹುದೆಂಬ ಜಾಹೀರಾತುಗಳನ್ನು ನೋಡಿ ಅನೇಕ ಬಗೆಯ ಶ್ಯಾಂಪೂ, ಕಂಡೀಷನರ್ ಟ್ರೈ ಮಾಡುತ್ತಾರೆ. ಆದರೆ ಯಾವುದೂ ವರ್ಕ್ ಔಟ್ ಆಗುವುದಿಲ್ಲ.

ದುಬಾರಿ ಪಾರ್ಲರ್ ಗಳಿಗೆ, ಶ್ಯಾಂಪೂ ದುಡ್ಡು ಖರ್ಚು ಮಾಡುವ ಮೊದಲು ನೀವು ಮಾಡಬೇಕಾದದು ಕವಲೊಡೆದ ಕೂದಲನ್ನು ಕತ್ತರಿಸಿ, ನಂತರ ಈ ಕೆಳಗಿನ ನೈಸರ್ಗಿಕ ವಸ್ತುಗಳಿಂದ ಕೂದಲಿನ ಆರೈಕೆ ಮಾಡಿದರೆ ಸೊಂಪಾದ ಕೂದಲಿನ ಸೌಂದರ್ಯ ನಿಮ್ಮದಾಗುವುದು.

ಮೊಟ್ಟೆ ಮಾಸ್ಕ್

ಮೊಟ್ಟೆ ಮಾಸ್ಕ್

ಮೊಟ್ಟೆಯ ಬಿಳಿಯನ್ನು ಎಣ್ಣೆ ತ್ವಚೆ ಮಿಶ್ರಣ ಮಾಡಿ ಹಾಗೂ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದು ಶ್ಯಾಂಪೂ ಹಾಕಿ ತಲೆ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಸಾಕು ಕೂದಲು ಸೊಂಪಾಗಿ ಬೆಳೆಯುವುದು.

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿಯನ್ನು ಪೇಸ್ಟ್ ಮಾಡಿ ಕೂದಲಿನ ಭುಜಕ್ಕೆ ಹಚ್ಚಿ 10 ನಿಮಿಷದ ಬಳಿಕ ತಲೆ ತೊಳೆಯಿರಿ. ಈ ರೀತಿ ಪ್ರತೀಬಾರಿ ತಲೆ ತೊಳೆಯುವಾಗ ಮಾಡುತ್ತಾ ಬಂದರೆ ಬೇಗನೆ ಆರೋಗ್ಯಕರ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.

ಬಿಸಿ ಎಣ್ಣೆ

ಬಿಸಿ ಎಣ್ಣೆ

ಎಣ್ಣೆಯನ್ನು ಬಿಸಿ ಮಾಡಿ ಅದರಿಂದ ತಲೆಗೆ ಮಸಾಜ್ ಮಾಡಿ, ಇದರಿಂದ ಕೂದಲಿನ ಬುಡ ಸ್ಟ್ರಾಂಗ್ ಆಗುವುದಲ್ಲದೆ ಕೂದಲೂ ಕವಲೊಡೆಯುವುದಿಲ್ಲ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣನ್ನು ಪೇಸ್ಟ್ ರೀತಿ ಮಾಡಿ ಇದನ್ನು ತಲೆಗೆ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ, ಇದರಿಂದ ಕೂದಲು ಮತ್ತು ಮುಖದ ಹೊಳಪು ಹೆಚ್ಚುವುದು.

ಬೀರ್

ಬೀರ್

ಕೂದಲನ್ನು ಬಲಪಡಿಸಿ ಅದರ ಸೌಂದರ್ಯ ಹೆಚ್ಚಿಸುವಲ್ಲಿ ಬೀರ್ ಸಹಾಯ ಮಾಡುವುದರಿಂದ ಬೀರ್ ಉತ್ತಮವಾದ ಹೇರ್ ಮಾಸ್ಕ್ ಆಗಿದೆ.

 ಮಯೋನೈಸ್

ಮಯೋನೈಸ್

1/4 ಕಪ್ ಮಯೋನೈಸ್ ಗೆ 1 ಚಮಚ ತೆಂಗಿನೆಣ್ಣೆ, 1 ಚಮಚ ಆಲೀವ್ ಎಣ್ಣೆ, ಸ್ವಲ್ಪ ಬೆಣ್ಣೆ ಹಣ್ಣು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆ ತೊಳೆಯಬೇಕು. ಈ ರೀತಿ ತಿಂಗಳಿಗೆ ಎರಡು ಬಾರಿ ಮಾಡಿದರೂ ಸಾಕು. ಕೂದಲಿನ ಆರೋಗ್ಯ ಹೆಚ್ಚುವುದು.

English summary

Hair Masks To Treat Split Ends

Do you also have split ends and you feel really bad about it? Now you don't need to worry about it. There are many home remedies which you can apply on your hair and get rid of split-ends. There are different varieties of hair masks which you can apply on your hair and keep the problem of split-ends at bay.
 
X
Desktop Bottom Promotion