For Quick Alerts
ALLOW NOTIFICATIONS  
For Daily Alerts

17 ಬಗೆಯ ಕೂದಲಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

|

ಕೂದಲಿನ ಆರೈಕೆಗೆ ದುಬಾರಿ ಬೆಲೆಯ ಎಣ್ಣೆಗಳಿಗೆ ಮತ್ತು ಶ್ಯಾಂಪೂಗಳಿಗೆ ದುಡ್ಡು ಸುರಿಯುತ್ತಿದ್ದೀರಾ? ಮಿತ ಖರ್ಚಿನಲ್ಲಿ ನಿಮ್ಮ ದುಬಾರಿ ಬೆಲೆಯ ಎಣ್ಣೆ ನೀಡುವುದಕ್ಕಿಂತ ಎರಡು ಪಟ್ಟಿನ ಫಲಿತಾಂಶವನ್ನು ಪಡೆಯುವ ಇಚ್ಛೆ ನಿಮಗಿದ್ದರೆ ಮುಂದೆ ಓದಿ:

ಹೌದು ದುಬಾರಿ ಬೆಲೆಯ ವಸ್ತುಗಳಿಗಿಂತ ಕೂದಲಿನ ಆರೈಕೆಗೆ ನೈಸರ್ಗಿಕ ಸಾಧನಗಳನ್ನು ಬಳಸುವುದು ಒಳ್ಳೆಯದು. ನೈಸರ್ಗಿಕ ಸಾಧನಗಳೆಂದರೆ ನೆಲ್ಲಿ ಕಾಯಿ, ದಾಸವಾಳ, ಸೀಗೆ ಕಾಯಿ, ಮೊಸರು, ನಿಂಬೆ ರಸ ಇವಷ್ಟೇ ಎಂದು ತಿಳಿದುಕೊಳ್ಳಬೇಡಿ. ನಿಮ್ಮ ಕೂದಲಿನ ರಕ್ಷಣೆಗೆ ಪ್ರಕೃತ್ತಿಯಲ್ಲಿ ಅನೇಕ ವಸ್ತುಗಳಿದ್ದರೂ ಇಲ್ಲಿ ನಾವು ನಿಮಗೆ ಸುಲಭದಲ್ಲಿ ದೊರೆಯುವಂತಹ 20 ಅಧಿಕ ವಸ್ತುಗಳನ್ನು ಪರಿಚಯಿಸುತ್ತಿದ್ದೇವೆ, ಅಲ್ಲದೆ ಈ ಲೇಖನದಲ್ಲಿ ಅವುಗಳನ್ನು ಹೇಗೆ ಬಳಸಿದರೆ ಹೆಚ್ಚು ಪರಿಣಾಮಕಾರಿ ಅನ್ನುವುದನ್ನೂ ಹೇಳಿದ್ದೇವೆ ನೋಡಿ:

ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟಿನ ಸಮಸ್ಯೆಯೇ?

ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟಿನ ಸಮಸ್ಯೆಯೇ?

ಕೂದಲು ಉದುರುವುದು, ತಲೆ ತುರಿಕೆ, ತಲೆ ಹೊಟ್ಟು ಈ ರೀತಿಯ ಸಮಸ್ಯೆಯಿದ್ದರೆ ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಎಣ್ಣೆ ಜೊತೆ ಹಾಕಿ ಕುದಿಸಿ ತಲೆಗೆ ಹಚ್ಚಬಹುದು. ಇಲ್ಲದಿದ್ದರೆ ನೆಲ್ಲಿಕಾಯಿ ಪೇಸ್ಟ್ ಅನ್ನು ಮೊಸರಿನ ಜೊತೆ ಮಿಕ್ಸ್ ಮಾಡಿಯೂ ತಲೆಗೆ ಹಚ್ಚಬಹುದು.

ಕಂಡೀಷನರ್

ಕಂಡೀಷನರ್

ಮೊಸರನ್ನು ಜೇನು ಅಥವಾ ನಿಂಬೆ ರಸ ಹಚ್ಚಿ ತಲೆಗೆ ಹಚ್ಚಿದರೆ ಇದರಷ್ಟು ಉತ್ತಮವಾದ ಕಂಡೀಷನರ್ ಮತ್ತೊಂದಿಲ್ಲ.

ಕೂದಲು ಎಣ್ಣೆಯಾಗುವುದನ್ನು ತಡೆಯಲು

ಕೂದಲು ಎಣ್ಣೆಯಾಗುವುದನ್ನು ತಡೆಯಲು

ಕೂದಲು ಎಣ್ಣೆ-ಎಣ್ಣೆಯಾಗುತ್ತಿದ್ದರೆ ಅದನ್ನು ಹೋಗಲಾಡಿಸಲು ನಿಂಬೆ ರಸ ಬಳಸಬಹುದು.

ಕೂದಲು ಸೊಂಪಾಗಿ ಬೆಳೆಯಲು

ಕೂದಲು ಸೊಂಪಾಗಿ ಬೆಳೆಯಲು

ಶುದ್ಧವಾದ ತೆಂಗಿನೆಣ್ಣೆ ಇರುವಾಗ ದುಬಾರಿ ಎಣ್ಣೆಗಳ ಗೊಡವೇಕೆ? ಇದನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಕೂದಲಿನ ಸೌಂದರ್ಯ ಹೆಚ್ಚುವುದು.

ಶೈನಿ ಕೂದಲಿಗಾಗಿ

ಶೈನಿ ಕೂದಲಿಗಾಗಿ

ತಿಂಗಳಿಗೊಮ್ಮೆ ಕೂದಲಿಗೆ ಮೆಹಂದಿ ಹಚ್ಚುವುದು ಒಳ್ಳೆಯದು. ಇದು ಕೂದಲನ್ನು ಮೃದುವಾಗಿಸುವುದರ ಜೊತೆಗೆ ಅಕಾಲಿಕ ನೆರಿಗೆಯನ್ನು ತಡೆಯುತ್ತದೆ.

ಮೃದುವಾದ ಕೂದಲಿಗಾಗಿ

ಮೃದುವಾದ ಕೂದಲಿಗಾಗಿ

ತಲೆ ಸ್ನಾನವಾದ ಬಳಿಕ ಅರ್ಧ ಬಕೆಟ್ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಆ ನೀರನ್ನು ತಲೆಗೆ ಸುರಿದುಕೊಂಡರೆ ಕುದಲು ಮೃದುವಾಗುವುದು.

ತಲೆಯಲ್ಲಿ ತುರಿಕೆ ಉಂಟಾದರೆ

ತಲೆಯಲ್ಲಿ ತುರಿಕೆ ಉಂಟಾದರೆ

ಕೆಲವೊಮ್ಮೆ infection ಆಗಿ ತಲೆಯಲ್ಲಿ ತುರಿಕೆ ಕಂಡು ಬರುತ್ತದೆ. ಈ ರೀತಿಯಾದಾಗ ಬೇವಿನ ಎಲೆ ಹಚ್ಚಿದರೆ ಒಳ್ಳೆಯದು.

ಮಂದವಾದ ಕೂದಲಿಗಾಗಿ

ಮಂದವಾದ ಕೂದಲಿಗಾಗಿ

ಯಾವುದೇ ಕೂದಲಿನ ಸಮಸ್ಯೆಯಿಲ್ಲದೆ ಮಂದವಾದ ಕೂದಲು ಬೇಕೆಂದರೆ ವಾರಕ್ಕೊಮ್ಮೆ ಮೆಂತೆ ಪೇಸ್ಟ್ ಅನ್ನು ತಲೆಗೆ ಹಚ್ಚಲು ಮರೆಯದಿರಿ.

ನಯವಾದ ಕೂದಲಿಗಾಗಿ

ನಯವಾದ ಕೂದಲಿಗಾಗಿ

ಮೊಟ್ಟೆಯ ಬಿಳಿಯನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರು ನಿಮ್ಮ ಕೂದಲಿನ ಗುಣ ಮಟ್ಟ ಹೆಚ್ಚುವುದು.

 ಕಪ್ಪಾದ ಕೂದಲಿಗಾಗಿ

ಕಪ್ಪಾದ ಕೂದಲಿಗಾಗಿ

ಹಿಂದಿನ ಕಾಲದಲ್ಲಿ ಈ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಹರಳೆಣ್ಣೆ ಹಚ್ಚಿದರೆ ಕೂದಲು ಕಪ್ಪಾಗಿ, ಮಂದವಾಗಿ ಬೆಳೆಯುವುದು, ಆದರೆ ಇದನ್ನು ಹಚ್ಚಿದರೆ ತಲೆ ಜಿಡ್ಡು-ಜಿಡ್ಡಾಗಿರುವುದರಿಂದ ಹೆಚ್ಚಿನವರು ಬಳಸಲು ಇಷ್ಟಪಡುವುದಿಲ್ಲ. ಮಂದವಾದ, ಆರೋಗ್ಯಕರವಾದ ಕೂದಲಿಗಾಗಿ ಈ ಎಣ್ಣೆ ಬಳಸಬಹುದು.

ಕೂದಲು ಕವಲೊಡೆಯುತ್ತಿದ್ದರೆ

ಕೂದಲು ಕವಲೊಡೆಯುತ್ತಿದ್ದರೆ

ಕೂದಲಿಗೆ ವಿಟಮಿನ್ ಬಿ ಕೊರತೆ ಉಂಟಾದರೆ ಕೂದಲು ಕವಲೊಡೆಯುತ್ತದೆ. ಲೋಳೆಸರ ಹಚ್ಚಿದರೆ ಕೂದಲಿಗೆ ಬೇಕಾದ ವಿಟಮಿನ್ ದೊರೆಯುವುದು ಹಾಗೂ ಕೂದಲು ಕವಲೊಡೆಯುವ ಸಮಸ್ಯೆಯೂ ಕಡಿಮೆಯಾಗುವುದು.

ಹೇರ್ ಪ್ಯಾಕ್

ಹೇರ್ ಪ್ಯಾಕ್

ಹೇರ್ ಪ್ಯಾಕ್ ಅನ್ನು ಅಂಗಡಿಯಿಂದ ಕೊಂಡು ತರುವ ಬದಲು ಮನೆಯಲ್ಲಿಯೇ ಮಾಡಬಹುದು. ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು.

ಕೂದಲು ಡ್ರೈಯಾಗುವುದನ್ನು ತಡೆಯಲು

ಕೂದಲು ಡ್ರೈಯಾಗುವುದನ್ನು ತಡೆಯಲು

ಕೂದಲು ತುಂಬಾ ಡ್ರೈಯಾಗುತ್ತಿದ್ದರೆ ಶೀಯಾ ಬಟರ್ ಹಚ್ಚಿದರೆ ಸಾಕು, ಕೂದಲಿನಲ್ಲಿ ಮಾಯಿಶ್ಚರೈಸರ್ ಕಾಪಾಡಬಹುದು.

ದಾಸವಾಳ

ದಾಸವಾಳ

ದಾಸವಾಳ ಹೂ ಮತ್ತು ಎಲೆ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಾಸವಾಳದ ಎಲೆಯನ್ನು ಮೊಸರಿನ ಜೊತೆ ಮಿಕ್ಸ್ ಮಾಡಿ ಹಚ್ಚಿದರೆ ಒಳ್ಳೆಯದು.

ಕೂದಲು ಡ್ರೈಯಾಗುವುದನ್ನು ತಡೆಯಲು ಮತ್ತೊಂದು ವಿಧಾನ

ಕೂದಲು ಡ್ರೈಯಾಗುವುದನ್ನು ತಡೆಯಲು ಮತ್ತೊಂದು ವಿಧಾನ

ತೆಂಗಿನ ಹಾಲನ್ನು ತಲೆಗೆ ಹಚ್ಚಿದರೆ ಕೂದಲು ಡ್ರೈಯಾಗುವುದನ್ನು ತಡೆಯಬಹುದು.

ನೈಸರ್ಗಿಕವಾದ ಶ್ಯಾಂಪೂ

ನೈಸರ್ಗಿಕವಾದ ಶ್ಯಾಂಪೂ

ಕೆಮಿಕಲ್ ಇರುವ ಶ್ಯಾಂಪೂ ಬಳಸುವ ಬದಲು ತಲೆ ತೊಳೆಯಲು ಅಂಟ್ವಾಳ ಬಳಸಿದರೆ ಕೂದಲು ಶುಚಿಯಾಗುವುದು ಮತ್ತು ಮೃದುವಾಗಿಯೂ ಇರುವುದು.

ನೈಸರ್ಗಿಕವಾದ ಶ್ಯಾಂಪೂ

ನೈಸರ್ಗಿಕವಾದ ಶ್ಯಾಂಪೂ

ಸೀಗೆಕಾಯಿ ನಿಮ್ಮ ಕೂದಲನ್ನು ಸ್ವಚ್ಛ ಮಾಡುವುದು ಮಾತ್ರವಲ್ಲ, ಆರೋಗ್ಯಕರವಾಗಿ ಬೆಳೆಯುವಂತೆಯೂ ಮಾಡುತ್ತದೆ, ಕೂದಲು ಉದುರುವುದನ್ನೂ ತಡಗಟ್ಟುತ್ತದೆ.

English summary

Hair Care Ingredients From Home

Hair care ingredients like amla (gooseberries), castor oil, eggs, curd, vinegar, lemon, mehendi, neem leaves, olive oil etc serve different purposes. These ingredients are used as home remedies to treat various hair problems.
 
X
Desktop Bottom Promotion