For Quick Alerts
ALLOW NOTIFICATIONS  
For Daily Alerts

ಹೇರ್ ಕಟ್ ನಂತರ ಕೂದಲಿನ ಆರೈಕೆ ಹೀಗಿರಲಿ

|

ಹೊಸ ಹೇರ್ ಸ್ಟೈಲ್ ಮಾಡಿದರೆ ಅದಕ್ಕೆ ಸರಿಯಾಗಿ ಆರೈಕೆ ಮಾಡದಿದ್ದರೆ ಆ ಹೇರ್ ಸ್ಟೈಲ್ ಹಾಳಾಗುತ್ತದೆ. ಹೆಚ್ಚಿನವರು ಹೇರ್ ಕಟ್ ಮಾಡಿದ ನಂತರ ಒಂದು ವಾರಗಳ ಕಾಲ ಮಾತ್ರ ಸ್ವಲ್ಪ ಗಮನ ಹರಿಸುತ್ತಾರೆ. ನಂತರ ತಮಗೆ ಇಷ್ಟ ಬಂದಂತೆ ತಲೆಯನ್ನು ಬಾಚುತ್ತಾರೆ. ಇದರಿಂದ ತಲೆಕೂದಲು ಹಾಳಾಗುವುದು.

ನಿಮ್ಮ ಹೇರ್ ಸ್ಟೈಲ್ ಹಾಳಾಗದಿರಲು ಈ ಕೆಳಗಿನ ಟಿಪ್ಸ್ ಪಾಲಿಸುವುದು ಒಳ್ಳೆಯದು:

Hair Care After Getting A Haircut

ಬೆರಳುಗಳಿಂದ ಕೂದಲನ್ನು ಸೆಟ್ ಮಾಡಬೇಡಿ
ಕೂದಲಿಗೆ ಬೆರಳಾಡಿಸುವ ಅಭ್ಯಾಸ ಸಾಮಾನ್ಯವಾಗಿ ಇರುತ್ತದೆ. ಅದರಲ್ಲೂ ಫ್ರೀ ಹೇರ್ ಬಿಟ್ಟರೆ ಅಂತೂ ನಮ್ಮ ಕೈ ತಲೆಯ ಮೇಲೆ ಆಗಾಗ ಹೋಗುತ್ತದೆ. ಈ ರೀತಿ ಮಾಡಿದರೆ ಹೇರ್ ಸ್ಟೈಲ್ ಹಾಳಾಗುತ್ತದೆ. ಕೂದಲನ್ನು ಬಾಚಣಿಕೆ ಬಳಸಿ ಮಾತ್ರ ಸೆಟ್ ಮಾಡಿ.

ಕಂಡೀಷನರ್
ಕೂದಲನ್ನು ಬಾಚಿದ ಮೇಲೆ ಕಂಡೀಷನರ್ ಬಳಸುವುದು ಒಳ್ಳೆಯದು. ಇದರಿಂದ ಕೂದಲು ಮೃದುವಾಗಿ, ಹೊಳಪಿನಿಂದ ಕೂಡಿರುವುದು.

ಸೆರಮ್ (serum)
ಕೂದಲು ಕತ್ತರಿಸಿದ ನಂತರ ಸೆರಮ್ ಹಾಕುತ್ತಾರೆ. ನೀವೂ ಕೂಡ ಸೆರಮ್ ಬಳಸುವುದು ಒಳ್ಳೆಯದು. ಇದರಿಂದ ಕೂದಲು ಸಾಫ್ಟ್ ಆಗಿ ಇರುತ್ತದೆ ಹಾಗೂ ಕೂದಲನ್ನು ಸೆಟ್ ಮಾಡುವುದು ಕೂಡ ಸುಲಭವಾಗುತ್ತದೆ.

ಬ್ರಷ್
ದೊಡ್ಡ ಹಲ್ಲುಗಳಿರುವ ಬ್ರಷ್ ಬಳಸಬೇಕು. ತಲೆ ಸ್ನಾನ ಮಾಡಿದ ಮೇಲೆ ಕೂದಲನ್ನು ಒಣಗಿಸಿದ ನಂತರವಷ್ಟೇ ಬಾಚಿ.

ಕೂದಲನ್ನು ಬಿಗಿಯಾಗಿ ಕಟ್ಟಬೇಡಿ
ಕೂದಲು ಕತ್ತರಿಸಿದ ನಂತರ ಯಾವ ಹೇರ್ ಮಾಡಿಸಿದರೂ ಅದರಂತೆ ಕೂದಲನ್ನು ಸೆಟ್ ಮಾಡಬೇಕು. ಕೂದಲನ್ನು ತುರುಬು ಕಟ್ಟುವುದು, ಬಿಗಿಯಾಗಿ ಕಟ್ಟುವುದು ಮಾಡಿದರೆ ಹೇರ್ ಸ್ಟೈಲ್ ಹಾಳಾಗುತ್ತದೆ.

English summary

Hair Care After Getting A Haircut | Tips For Hair Care | ಹೇರ್ ಕಟ್ ನಂತರ ಕೂದಲಿನ ಆರೈಕೆ ಹೀಗಿರಲಿ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

After getting a hair cut, you should care for your hair to maintain the new hairstyle and also to continue looking glamourous. Here are few hair care tips that you must follow after getting a haircut.
X
Desktop Bottom Promotion