For Quick Alerts
ALLOW NOTIFICATIONS  
For Daily Alerts

ಕೂದಲಿನ ಮೇಲೆ ಬೀರ್ ನ ಪ್ರಭಾವ

|

ಬೀರ್ ಅನ್ನು ಎಂದಾದರೂ ಕೂದಲಿನ ಆರೈಕೆಗೆ ಬಳಸಿದ್ದೀರಾ? ಇಲ್ಲ ಎಂದಾದರೆ ಇಂದೇ ಬಳಸಿ. ಏಕೆಂದರೆ ಬೀರ್ ನಲ್ಲಿ ಕೂದಲಿನ ಆರೋಗ್ಯ ವೃದ್ಧಿಸುವ ಅನೇಕ ಗುಣಗಳಿವೆ. ನಿಮ್ಮ ಅನೇಕ ಕೂದಲಿನ ಸಮಸ್ಯೆಗೆ ಪರಿಹಾರ ಬೀರ್ ನಲ್ಲಿದೆ.

ಕೂದಲಿನ ಸಮಸ್ಯೆಗಳೆಂದರೆ ಕೂದಲು ಕವಲೊಡೆಯುವುದು, ಒರಟಾಗುವುದು, ಉದುರುವುದು, ತಲೆ ತುರಿಕೆ, ತೆಳುವಾದ ಕೂದಲು ಹೀಗೆ ಒಬ್ಬೊಬ್ಬರಿಗೂ ಒಂದೊಂದು ಸಮಸ್ಯೆ ಇರುತ್ತದೆ. ಇವೆಲ್ಲದಕ್ಕೂ ಪರಿಹಾರ ಬೀರ್ ನಲ್ಲಿದೆ ಎಂದ ಮೇಲೆ ಬೀರ್ ನಿಂದ ಕೂದಲಿನ ಆರೈಕೆ ಮಾಡಲು ತಡವೇಕೆ?

ಇಲ್ಲಿ ನಾವು ಕೂದಲಿನ ಆರೋಗ್ಯವನ್ನು ವೃದ್ಧಿಸಲು ಪರಿಣಾಮಕಾರಿಯಾಗಿ ಬೀರ್ ಬಳಸುವ ವಿಧಾನವನ್ನು ಹೇಳಿದ್ದೇವೆ ನೋಡಿ:

ಹೇರ್ ಕಂಡೀಷನರ್

ಹೇರ್ ಕಂಡೀಷನರ್

ಬೀರ್ ಉತ್ತಮವಾದ ಹೇರ್ ಕಂಡೀಷನರ್, ಶ್ಯಾಂಪೂ ಹಾಕಿ ತಲೆ ತೊಳೆದ ಬಳಿಕ, 1 ಮಗ್ ನೀರಿಗೆ ಅರ್ಧ ಗ್ಲಾಸ್ ನಷ್ಟು ಬೀರ್ ಹಾಕಿ ಬಳಸಿದರೆ ಕೂದಲಿಗೆ ಸೂಪರ್ ಕಂಡೀಷನರ್.

 ಮೃದುವಾದ ಕೂದಲಿಗೆ

ಮೃದುವಾದ ಕೂದಲಿಗೆ

ಕೂದಲಿನ ತೊಳೆದ ಬಳಿಕ ನಿಂಬೆ ರಸ ಮತ್ತು ಬೀರ್ ಮಿಕ್ಸ್ ಮಾಡಿ ತಲೆಗೆ ಹಚ್ಚಿ ತೊಳೆದರೆ ಕೂದಲು ಮೃದುವಾಗುವುದು.

ಕೂದಲು ಕವಲೊಡೆಯದಿರಲು ಈ ರೀತಿ ಮಾಡಿ

ಕೂದಲು ಕವಲೊಡೆಯದಿರಲು ಈ ರೀತಿ ಮಾಡಿ

ಬೀರ್ ಬಾಟಲ್ ನ ಮುಚ್ಚಳ ತೆಗೆದು ಓಪನ್ ಮಾಡಿ ಒಂದು ರಾತ್ರಿ ಇಟ್ಟು, ಮಾರನೆಯ ದಿನ ಬೆಳಗ್ಗೆ ಅದನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ 1 ಚಮಚ ನಿಂಬೆ ರಸ ಮತ್ತು 1 ಚಮಚ ಜೇನು ಸೇರಿಸಿ ಮಿಕ್ಸ್ ಮಾಡಿ, ತಣ್ಣಗಾಗಲು ಇಡಿ. ನಂತರ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ಮಾಡುವುದರಿಂದ ಕೂದಲು ಕವಲೊಡೆಯುವುದಿಲ್ಲ.

ಜೊಜೊಬೊ ಎಣ್ಣೆ ಜೊತೆ ಮಿಕ್ಸ್ ಮಾಡಿದರೆ ಒಳ್ಳೆಯದು

ಜೊಜೊಬೊ ಎಣ್ಣೆ ಜೊತೆ ಮಿಕ್ಸ್ ಮಾಡಿದರೆ ಒಳ್ಳೆಯದು

ಕೂದಲಿನ ಆರೈಕೆಗೆ ಮತ್ತೊಂದು ವಿಧಾನವೆಂದರೆ ಬೀರ್ ಅನ್ನು ಜೊಜೊಬೊ ಎಣ್ಣೆ ಜೊತೆ ಮಿಕ್ಸ್ ಮಾಡಿ, ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತಲೆ ತೊಳೆಯುವುದು.

ಕೂದಲು ಉದುರುವುದನ್ನು ತಡೆಯಬೇಕೆ?

ಕೂದಲು ಉದುರುವುದನ್ನು ತಡೆಯಬೇಕೆ?

ಬೀರ್ ನಲ್ಲಿ ಬಯೋಟಿನ್ ಅಂಶವಿರುವುದರಿಂದ ಇದು ಕೂದಲಿನ ಬುಡವನ್ನು ಬಲವಾಗಿಸಿ, ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

 ಕೂದಲು ಮಂದವಾಗಿ ಕಾಣುವಂತೆ ಮಾಡುತ್ತದೆ

ಕೂದಲು ಮಂದವಾಗಿ ಕಾಣುವಂತೆ ಮಾಡುತ್ತದೆ

ನಿಮ್ಮ ಕೂದಲು ತುಂಬಾ ತೆಳುವಾಗಿದ್ದು, ಮಂದವಾಗಿ ಕಾಣಬೇಕೆಂದು ನೀವು ಬಯಸುವುದಾದರೆ ತಲೆ ಸ್ನಾನದ ನಂತರ ಮಗ್ ಗೆ ಮುಕ್ಕಾಲು ಭಾಗ ನೀರು ಹಾಕಿ, ಅರ್ಧ ಗ್ಲಾಸ್ ಬೀರ್ ಹಾಕಿ ತಲೆಗೆ ಸುರಿದು, ನಂತರ ತಲೆ ಒರೆಸಿ ಒಣಗಿಸಿದರೆ ಕೂದಲು ಮಂದವಾಗಿ ಕಾಣುವುದು.

 ಕೂದಲಿನ ಹೊಳಪು ಹೆಚ್ಚುವುದು

ಕೂದಲಿನ ಹೊಳಪು ಹೆಚ್ಚುವುದು

ಬೀರ್ ಬಳಸಿದರೆ ಕೂದಲು ಬಲವಾಗುವುದು ಮಾತ್ರವಲ್ಲ, ಕೂದಲಿನ ಹೊಳಪು ಕೂಡ ಹೆಚ್ಚುವುದು.

 ಕೂದಲು ಸಿಕ್ಕಾಗುವುದಿಲ್ಲ

ಕೂದಲು ಸಿಕ್ಕಾಗುವುದಿಲ್ಲ

ಕೂದಲು ತುಂಬಾ ಸಿಕ್ಕಾಗುತ್ತಿದ್ದರೆ ಬೀರ್ ಬಳಸಿ ನೋಡಿ, ಕೂದಲು ಸಿಕ್ಕಾಗುವುದು ಕಡಿಮೆಯಾಗುವುದು.

ಒಣ ಕೂದಲಿಗೆ ಗುಡ್ ಬೈ ಹೇಳುತ್ತೆ

ಒಣ ಕೂದಲಿಗೆ ಗುಡ್ ಬೈ ಹೇಳುತ್ತೆ

ಒಣ ಕೂದಲಿಗೆ ಗುಡ್ ಬೈ ಹೇಳ ಬಯಸುವವರು ಬಿರ್ ಬಳಸಿ, ತಲೆ ತೊಳೆದರೆ ಒಳ್ಳೆಯದು.

English summary

Hair Benefits Of Beer

There are many benefits of beer for the hair too! Beer hair wash is very nourishing for the hair. Apart from acting as a natural conditioner for the hair, beer can also be used to get thick and voluminous hair naturally. So if you have thin hair and desire to get thick and strong hair, wash with beer.
X
Desktop Bottom Promotion