For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಮೆಹಂದಿ ಬಳಕೆಯ ಉಪಯೋಗಗಳು

|

ಮೆಹಂದಿಯನ್ನು ಅಲಂಕಾರಕ್ಕೆ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಕೂದಲಿಗೆ ಬಣ್ಣ ಹಚ್ಚಲು ಮೆಹಂದಿಯನ್ನು ಬಳಸಲಾಗುತ್ತದೆ. ಮೆಹಂದಿ ಅಲಂಕಾರಕ್ಕೆ ಲಭ್ಯವಿರುವ ಒಂದು ನೈಸರ್ಗಿಕ ವಸ್ತು. ಪ್ರಾಚೀನ ಕಾಲದಿಂದಲೂ ಮೆಹಂದಿಯನ್ನು ಕೂದಲಿಗೆ ಬಣ್ಣ ಹಚ್ಚಲು ಬಳಸಲಾಗುತ್ತಿದೆ. ಇದು ಕೂದಲಿಗೆ ಸಹಜವಾದ ಕಂದು ಬಣ್ಣವನ್ನು ತಂದುಕೊಡುತ್ತದೆ.
ಅದೇನೆ ಇರಲಿ ಮೆಹಂದಿಯಲ್ಲಿ ಕೂದಲ ಆರೋಗ್ಯವನ್ನು ಕಾಪಾಡುವಂತಹ ಇನ್ನೂ ಹಲವು ರೀತಿಯ ಆರೋಗ್ಯಕಾರಿ ಗುಣಗಳಿವೆ. ಇದು ಕೂದಲಿನ ಹಲವು ಸಮಸ್ಯೆಗಳನ್ನು ಕೂಡ ಪರಿಹರಿಸುತ್ತದೆ. ಇದನ್ನು ಹಚ್ಚುವುದರಿಂದ ಕೂದಲು ಶಕ್ತಿಯುತವಾಗುತ್ತದೆ. ಇದು ಕೂದಲ ಬುಡವನ್ನು ಪೋಷಿಸುವುದಲ್ಲದೆ ಕೂದಲನ್ನು ನಯಗೊಳಿಸುತ್ತದೆ.
ಮೆಹಂದಿಯನ್ನು ಸಿಕ್ಕು ಮತ್ತುಒಣ ಕೂದಲ ಸಮಸ್ಯೆಯನ್ನು ಪರಿಹರಿಸಲು ಬಳಸಲಾಗುತ್ತದೆ. ಇದು ತಲೆಹೊಟ್ಟನ್ನು ಕೂಡ ಪರಿಹರಿಸುತ್ತದೆ. ಆದ್ದರಿಂದಲೇ ಮೆಹಂದಿಯು ಕೂದಲ ಆರೈಕೆಗೆ ಬಳಸುವ ಮುಖ್ಯ ವಸ್ತುವಾಗಿದೆ.
ಮೆಹಂದಿ ಮುಖ್ಯವಾಗಿ ಕೂದಲುದುರುವಿಕೆಯನ್ನು ತಡೆಯುತ್ತದೆ. ಕೂದಲುದುರುವಿಕೆ ಸುಲಭಕ್ಕೆ ಪರಿಹಾರವಾಗುವ ಸಮಸ್ಯೆಯಲ್ಲ. ಆದರೆ ಮೆಹಂದಿ ಬಳಕೆಯಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.
ಮೆಹಂದಿಯನ್ನು ಬಳಸಲು ಕೆಲವು ವಿಧಾನಗಳನ್ನು ಅನುಸರಿಸಬೇಕು. ಮೆಹಂದಿ ಪುಡಿಯನ್ನು ಟೀ ಡಿಕಾಕ್ಷನ್ ನಲ್ಲಿ ಕಲಸಿಡಿ. ಇದನ್ನು ಯೋಗರ್ಟ್ ನೊಂದಿಗೆ ಬೆರೆಸುವುದರಿಂದ ಕಂಡೀಷನರ್ ಆಗಿ ಬಳಸಬಹುದು ಮತ್ತು ಕಾಫಿ ಪುಡಿ ಬೆರೆಸುವುದರಿಂದ ಬಣ್ಣವನ್ನು ಪಡೆಯಬಹುದು. ಇದೆಲ್ಲವೂ ನಿಮ್ಮ ಕೂದಲ ಸಮಸ್ಯೆಗೆ ಅನುಸರಿಸಬೇಕಾದ ಪರಿಹಾರವನ್ನು ಅವಲಂಬಿಸಿರುತ್ತದೆ. ನಿಮಗೆ ತಲೆಹೊಟ್ಟಿನ ಸಮಸ್ಯೆಯಿದ್ದರೆ ನೀವು ಸ್ವಲ್ಪ ನಿಂಬೆ ರಸವನ್ನು ಮೆಹಂದಿಯೊಂದಿಗೆ ಬೆರೆಸಿ ಬಳಸಬೇಕಾಗುತ್ತದೆ. ಎಣ್ಣೆ ಹಚ್ಚಿದ ಕೂದಲಿಗೆ ಮೆಹಂದಿಯನ್ನು ಹಚ್ಚುವುದರಿಂದ ಒಣ ಕೂದಲ ಸಮಸ್ಯೆ ಮತ್ತು ಕೂದಲು ಸಿಕ್ಕಾಗುವುದು ತಪ್ಪುತ್ತದೆ. ಮೆಹಂದಿಯನ್ನು ಕೂದಲಿಗೆ ಹಚ್ಚಿ 30-45 ನಿಮಿಷಗಳವರೆಗೆ ಬಿಡಿ. ಇದಕ್ಕೆ ಕೆಲವು ಹನಿ ಆಲೀವ್ ಆಯಿಲ್ ಹಾಕುವುದರಿಂದ ಇದು ನ್ಯಾಚುರಲ್ ಹೇರ್ ಕಂಡೀಷನರ್ ನಂತೆ ವರ್ತಿಸುತ್ತದೆ.
ಇಲ್ಲಿ ನಾವು ಕೆಲವು ಮೆಹಂದಿಯ ಉಪಯೋಗಗಳನ್ನು ನೀಡಿದ್ದೇವೆ ಗಮನಿಸಿ:

ಕೂದಲಿಗೆ ಬಣ್ಣ

ಕೂದಲಿಗೆ ಬಣ್ಣ

ಮೆಹಂದಿಯನ್ನು ಕೂದಲಿಗೆ ನೈಸರ್ಗಿಕವಾಗಿ ಬಣ್ಣ ಹಚ್ಚಲು ಬಳಸಲಾಗುತ್ತದೆ. ಇದು ಬಿಳಿಕೂದಲ ಬಣ್ಣವನ್ನು ಬದಲಿಸಿ ಕೂದಲಿಗೆ ನೈಸರ್ಗಿಕ ಬಣ್ಣ ತಂದುಕೊಡುತ್ತದೆ.

ಕಂಡೀಷನರ್

ಕಂಡೀಷನರ್

ಮೆಹಂದಿ ಕೂದಲಿಗೆ ಕಂಡೀಷನರ್ ರೀತಿ ವರ್ತಿಸುತ್ತದೆ. ಮೆಹಂದಿಯೊಂದಿಗೆ ಯೊಗರ್ಟ್ ಮತ್ತು ಆಲೀವ್ ಆಯಿಲ್ ಬೆರೆಸುವುದರಿಂದ ನೈಸರ್ಗಿಕ ಕಂಡೀಷನರ್ ನಂತೆ ಇದು ಕೆಲಸ ಮಾಡುತ್ತದೆ.

ತಲೆಹೊಟ್ಟು ನಿವಾರಣೆ

ತಲೆಹೊಟ್ಟು ನಿವಾರಣೆ

ತಲೆಹೊಟ್ಟಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಇದು ತಲೆಹೊಟ್ಟನ್ನು ಕಡಿಮೆಗೊಳಿಸಿ ನಿಗ್ರಹಿಸುತ್ತದೆ.

ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ

ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ

ಮೆಹಂದಿಯ ಬಹಳ ಮುಖ್ಯವಾದ ಉಪಯೋಗವೆಂದರೆ ಇದು ಕೂದಲುದುರುವಿಕೆಯನ್ನು ತಡೆಯುತ್ತದೆ.

ಕೂದಲನ್ನು ಬಲಗೊಳಿಸುತ್ತದೆ

ಕೂದಲನ್ನು ಬಲಗೊಳಿಸುತ್ತದೆ

ನಿಂಬೆರಸ ಮತ್ತು ಯೊಗರ್ಟ್ ನೊಂದಿಗೆ ಬೆರೆಸಿ ಮೆಹಂದಿಯನ್ನು ಬಳಸುವುದರಿಂದ ಕೂದಲಿಗೆ ಉತ್ತಮ ಪೋಷಣೆ

ದೊರಕಿ ಕೂದಲು ಬಲಗೊಳ್ಳುತ್ತದೆ.

ದೊರಕಿ ಕೂದಲು ಬಲಗೊಳ್ಳುತ್ತದೆ.

ಒಣ ಮತ್ತು ಸುಕ್ಕುಗಟ್ಟುವ ಕೂದಲನ್ನು ಸುಧಾರಿಸುತ್ತದೆ

ಮೆಹಂದಿಯನ್ನು ಬಳಸುವುದರಿಂದ ಕೂದಲು ನುಣುಪಾಗುತ್ತದೆ. ಇದರಿಂದ ಕೂದಲು ಒಣಗಿದಂತೆ ಕಾಣುವುದು ಮತ್ತು ಸುಕ್ಕುಗಟ್ಟುವುದು ತಪ್ಪುತ್ತದೆ.

ಕೂದಲನ್ನು ಬಲಗೊಳಿಸುತ್ತದೆ

ಕೂದಲನ್ನು ಬಲಗೊಳಿಸುತ್ತದೆ

ಮೆಹಂದಿ ಕೂದಲಿಗೆ ಉತ್ತಮ ಪೋಷಣೆಯನ್ನು ಒದಗಿಸಿ ಕೂದಲನ್ನು ಬಲಗೊಳಿಸುವಲ್ಲಿ ಸಹಕಾರಿ.

ತಲೆಬುಡವನ್ನು ಸ್ವಚ್ಛಗೊಳಿಸುತ್ತದೆ

ತಲೆಬುಡವನ್ನು ಸ್ವಚ್ಛಗೊಳಿಸುತ್ತದೆ

ತಲೆಬುರುಡೆಗೆ ಆಗಬಹುದಾದ ಸೋಂಕು ಮತ್ತು ತಲೆಹೊಟ್ಟನ್ನು ನಿಯಂತ್ರಿಸುತ್ತದೆ. ಇದರಿಂದ ಕೂದಲುದುರುವಿಕೆ ತಪ್ಪುತ್ತದೆ. ಮೆಹಂದಿ ಕೂದಲ ಬುಡವನ್ನು ಸ್ವಚ್ಛವಾಗಿಸಿ ಜಿಡ್ಡಿರದ ಹಾಗೆ ಕಾಪಾಡುತ್ತದೆ.

English summary

Hair Benefits Of Applying Henna

Henna is one of the ingredients that is used for a lot of beauty reasons. From colouring your hair to using it for mehendi, henna has been one of the best hair care ingredients available to us. Since ancient times, henna has been used as a hair dye.
Story first published: Wednesday, November 27, 2013, 16:52 [IST]
X
Desktop Bottom Promotion