For Quick Alerts
ALLOW NOTIFICATIONS  
For Daily Alerts

ಚಿಂತೆ ಮಾಡಬೇಡಿ... ಕೂದಲು ಉದುರುತ್ತದೆ!

|

ನೀವು ಏನಾದರೂ ಯೋಚಿಸುತ್ತಾ ಕುಳಿತಾಗ "ಹೇ ತುಂಬಾ ಯೋಚಿಸಬೇಡ, ಕೂದಲು ಬೆಳ್ಳಗಾಗುತ್ತದೆ" ಎಂದು ಸ್ನೇಹಿತರು ತಮಾಷೆ ಮಾಡಿದರೆ ನಾವು ನಕ್ಕು ಸುಮ್ಮೆನಾಗುತ್ತೇವೆ. ಅವರೇನೋ ತಮಾಷೆಗೆ ಹೇಳಿರಬಹುದು, ಆದರೆ ನಿಜವಾಗಲೂ ನಿಮ್ಮ ಚಿಂತೆಗೂ, ನಿಮ್ಮ ಕೂದಲಿನ ಆರೋಗ್ಯಕ್ಕೆ ನಿಕಟ ಸಂಬಂಧವಿದೆ ಎಂಬ ವಿಷಯ ಗೊತ್ತೇ?

ಮಾನಸಿಕ ಒತ್ತಡ ಹೆಚ್ಚಾದರೆ ಖಿನ್ನತೆ ಉಂಟಾಗುವುದು, ಆರೋಗ್ಯ ತಪ್ಪುವುದು ಮಾತ್ರವಲ್ಲ, ಕೂದಲಿನ ಮೇಲೂ ಯಾವ ರೀತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಮುಂದೆ ಓದಿ:

Effects Of Stress On Your Hair

ಬಿಳಿ ಕೂದಲು
ಪೋಷಕಾಂಶಗಳ ಕೊರತೆಯಿಂದ ಮಾತ್ರವಲ್ಲ, ಮಾನಸಿಕ ಒತ್ತಡದಿಂದ ಕೂಡ ಉಂಟಾಗುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡದಿದ್ದರೆ ಕೂದಲಿಗೆ ಡೈ ಹೊಡೆಯಬೇಕಾಹುತ್ತದೆ.

ಬಕ್ಕ ತಲೆ
ಬಕ್ಕ ತಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪುರುಷರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಮಾನಸಿಕ ಒತ್ತಡ ಬೇಗನೆ ಮುಪ್ಪು ತರುತ್ತದೆ.

ಕೂದಲು ಉದುರುವುದು
ಮಾನಸಿಕ ಒತ್ತಡವಿದ್ದಾಗ ಗಮನಿಸಿ, ನಿಮ್ಮ ಕೂದಲು ಕೂಡ ಹಚ್ಚಾಗಿ ಉದುರುತ್ತದೆ. ಮಾನಸಿಕ ಸಮಸ್ಯೆಯಿಂದ ಕೂದಲು ಉದುರುತ್ತಿದ್ದರೆ ಅದಕ್ಕೆ ಮಾನಸಿಕ ಸಮಸ್ಯೆಯನ್ನು ಹೊರದಬ್ಬುವುದೊಂದೇ ಪರಿಹಾರ.

ತಲೆ ಬುಡ ಡ್ರೈಯಾಗುವುದು
ತಲೆ ಕೂದಲಿನ ಆರೈಕೆ ಮಾಡಿದರೂ ತಲೆಬುಡ ಡ್ರೈಯಾಗುತ್ತಿದ್ದರೆ ಅದಕ್ಕೆ ನಿಮ್ಮ ಚಿಂತೆ ಕಾರಣವಾಗಿರಬಹುದು. ಚಿಂತೆಯನ್ನು ಹೊರದಬ್ಬಿ ಎಲ್ಲವೂ ಸರಿ ಹೋದೀತು.

English summary

Effects Of Stress On Your Hair | Tips For Hair Care | ಮಾನಸಿಕ ಒತ್ತಡ ಕೂದಲಿನ ಮೇಲೂ ಪರಿಣಾಮ ಬೀರಬಹುದೇ? | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Hair loss is not the only effect of stress. There are several other effects of stress on your hair. Learn about these effects to save your hair in time.
X
Desktop Bottom Promotion