For Quick Alerts
ALLOW NOTIFICATIONS  
For Daily Alerts

ಹೊಂಬಣ್ಣದ ಕೂದಲಿನ ಆರೈಕೆಗೆ ಟಿಪ್ಸ್

By Poornima Heggade
|

ಸುಂದರವಾದ ಕೂದಲು ಮುಖಕೆ ಶೋಭೆಯನ್ನು ತರುತ್ತದೆ. ಅದು ಹುಡುಗರಿರಲಿ, ಹುಡುಗಿಯರಿರಲಿ ಸುಂದರವಾದ ಹೊಳಪಿನ ಕೂದಲಿಲ್ಲದಿದ್ದರೆ ಅವರ ಸೌಂದರ್ಯದ ಅರ್ಧ ಭಾಗ ಕಡಿಮೆಯಾಯಿತೆಂದೇ ಅರ್ಥ! ಆದರೆ ಎಲ್ಲರ ಕೂದಲು ಒಂದೇ ಬಣ್ಣದಲ್ಲಿರುವುದಿಲ್ಲ. ಅದರಲ್ಲಿ ಸಾಕಷ್ಟು ವಿಭಿನ್ನತೆಗಳಿರುತ್ತವೆ. ಒಬ್ಬೊಬ್ಬರು ಒಂದೊಂದು ಬಗೆಯ ಕೂದಲಿನ ಬಣ್ನವನ್ನು ಇಷ್ಟಪಡುತ್ತಾರೆ. ಅವುಗಳಲ್ಲಿ ಹೊಂಬಣ್ಣದ ಕೂದಲನ್ನು ಇಷ್ಟಪಡುವವರೂ ಇದ್ದಾರೆ! ನೀವು ಹೊಂಬಣ್ಣದ ಕೂದಲನ್ನು ಇಷ್ಟಪಡುತ್ತೀರೆ? ಹೊಂಬಣ್ಣದ ಕೂದಲನ್ನು ಹೊಂದುವುದು ಹಾಸ್ಯಾಸ್ವದ ಅನ್ನಿಸಿದರೂ ಇದು ಆಕರ್ಷಕವಾಗಿರುವುದಂತೂ ನಿಜ. ಆದರೆ ಹೊಂಬಣ್ಣದ ಕೂದಲಿನ ಬಗ್ಗೆ ಕಾಳಜಿವಹಿಸದಿದ್ದರೆ ಇದು ಅಷ್ಟೇನು ಆಕರ್ಷಕವೆನಿಸುವುದಿಲ್ಲ. ಹೊಂಬಣ್ಣದ ಕೂದಲು ನೋಡಲು ಸುಂದರವಾಗಿದ್ದರೂ ನೀವು ಅದರ ಸರಿಯಾದ ಪೋಷಣೆ ಮಾಡದಿದ್ದರೆ ಬಣ್ಣವನ್ನು ಬಹಳ ಬೇಗ ಕಳೆದುಕೊಳ್ಳಬಹುದು.

ನಿಮ್ಮ ಕೂದಲು ನೈಸರ್ಗಿಕವಾಗಿ ಹೊಂಬಣ್ಣದ ಅಥವಾ ಬಣ್ಣದ ಕೂದಲನ್ನು ಬಯಸಿದ್ದರೆ ನೀವು ಗಾಢ ಛಾಯೆಯ / ಕಪ್ಪು ಬಣ್ಣದ ಕೂದಲಿಗಿಂತ ಹೆಚ್ಚು ಸೂಕ್ತ ರಕ್ಷಣೆ ಮತ್ತು ಗಮನ ಹರಿಸಬೇಕಾಗುತ್ತದೆ. ನಿಮ್ಮ ಕೂದಲಿನ ಬಣ್ಣವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ಹಳದಿ, ಕಿತ್ತಳೆ ಅಥವಾ ಹಸಿರು ಬಣ್ಣಕ್ಕೆ ತಿರುಗುವ ಸಾಧ್ಯತೆಗಳಿರುತ್ತವೆ. ಹೊಂಬಣ್ಣದ ಕೂದಲು ಹೊಂದಿದ್ದರೆ ನಿಮ್ಮ ಕೂದಲಿನ ರಚನೆ , ಆರೋಗ್ಯ ಮತ್ತು ಸಾಂದ್ರತೆಯ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನೀವು ಕೂದಲಿಗೆ ಬಳಸುವ ಬಣ್ಣ ಬಾಟಲಿಯದ್ದಾಗಿದ್ದರೆ ಮತ್ತು ನೈಸರ್ಗಿಕ ವಾಗಿರದಿದ್ದರೆ ವಿಶೇಷವಾಗಿ ಇದನ್ನು ನಿರ್ವಹಿಸಲು ಉಪಾಯದಿಂದ ಕಾಳಜಿ ಏಕೆ ಹೊಂಬಣ್ಣದ ಕೂದಲಿನ ನಿರ್ವಹಣೆ ಮುಖ್ಯ? ಹೊಂಬಣ್ಣದ ಕೂದಲನ್ನು ಸರಿಯಾಗಿ ಆರೈಕೆ ಮಾಡದಿದ್ದಲ್ಲಿ ಕೂದಲಿನ ಹೊಳಪು ಕಳೆದುಕಂಡು ಕೂದಲು ಒರಟಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸಾಕಷ್ಟು ಮುತುವರ್ಜಿಯಿಂದ ಹೊಂಬಣ್ಣದ ಕೂದಲನ್ನು ಆರೈಕೆ ಮಾಡಬೇಕು. ಇಲ್ಲಿ ಹೊಂಬಣ್ಣದ ಕೂದಲಿನ ಆರೈಕೆ ಮಾಡಲು ಕೆಲವು ಸೂಕ್ತ ಸಲಹೆಗಳನ್ನು ನೀಡಲಾಗಿದೆ.

Blonde Hair Care Tips: Best Ingredients

ಶುಷ್ಕ ಶಾಂಪೂ
ಹೊಂಬಣ್ಣದ ಕೂದಲ ನಿರ್ವಹಣೆ ಕನಿಷ್ಠ ಒಂದು ವಾರ ಶುಷ್ಕ ಕೂದಲು ಶಾಂಪೂವನ್ನು ಬಳಸಿ. ಪರಿಪೂರ್ಣ ಹೊಂಬಣ್ಣದ ಕೂದಲಿನ ಆರೈಕೆ ಮಾಡಲು ಈ ಶಾಂಪೂವನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಬಹುದು ಮತ್ತು ಆಕರ್ಷಕವಾಗಿ ಹೊಳೆಯುವ ಹೊಳಪನ್ನು ನೀಡಬಹುದು. ಈ ಉತ್ಪನ್ನಗಳು ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಮತ್ತು ಹೊಂಬಣ್ಣ ಮರೆಯಾಗದಂತೆ ಮಾಡಲು ಈ ಶಾಂಪೂವನ್ನು ಬಳಸಿ ನಂತರ ಕಂಡಿಷನರ್ ಬಳಸಿ ಕೂದಲನ್ನು ಉದ್ದಕ್ಕೂ ಬಾಚಣಿಗೆಯಿಂದ ಬಾಚಿ.

ನಿಮ್ಮ ಕೂದಲನ್ನು ಸ್ವಲ್ಪ ತೊಳೆಯಿರಿ
ಇತರ ಹೊಂಬಣ್ಣದ ಕೂದಲಿನ ಆರೈಕೆಗೆ ಒನ್ನೊಂದು ಉತ್ತಮ ಸಲಹೆಯೆಂದರೆ ನಿಮ್ಮ ಕೂದಲುನ್ನು ಬಲವಾಗಿ ತಿಕ್ಕಿ ತೊಳೆಯದಿರಿ. ನಿಯತವಾಗಿ ಕೂದಲನ್ನು ತೊಳೆಯುವುದರಿಂದ ನಿಮ್ಮ ಕೂದಲು, ಒಣ ಮತ್ತು ಸಂಪೂರ್ಣವಾಗಿ ಹಾನಿಗೊಳಗಾಗಬಹುದು. ಹೊಳಪನ್ನು ಕಳೆದುಕೊಳ್ಳುವಂತೆಯೂ ಮಾಡಬಹುದು. ನಿಮ್ಮ ಹೊಂಬಣ್ಣದ ಕೂದಲಿನ ನಿರ್ವಹಣೆಗೆ ಸಾಧ್ಯವಾದಷ್ಟು ನಿಮ್ಮ ಕೂದಲು ಕಡಿಮೆ ತೊಳೆಯಿರಿ .

ಒಂದು ಸ್ಕಾರ್ಫ್ ಅಥವಾ ಟೋಪಿ ಧರಿಸಿ
ನೀವು ಎಂದಾದರೂ ಸೂರ್ಯನ ಕಿರಣದ ಕೆಳಗೆ ದೀರ್ಘ ಗಂಟೆಗಳ ಕಾಲ ಇರಬೇಕಾದರೆ ನಿಮ್ಮ ಹೊಂಬಣ್ಣದ ಕೂದಲಿನ ನಿರ್ವಹಣೆಗ ಸ್ಕಾರ್ಫ್ ಅಥವಾ ಟೋಪಿ ಧರಿಸಿ. ಸೂರ್ಯನ ಅತಿಯಾದ ಕಿರಣ ವೇಗವಾಗಿ ನಿಮ್ಮ ಹೊಂಬಣ್ಣದ ಕೂದಲು ಮಸುಕಾಗುವ ಹಾಗೆ ಮಾಡಬಹುದು. ಹೊಂಬಣ್ಣದ ಕೂದಲಿನ ಆರೈಕೆಗೆ ಅತ್ಯಮೂಲ್ಯ ಸಲಹೆ ಎಂದರೆ ಉಷ್ಣತೆಯ ಅಡಿಯಲ್ಲ ಹೊಂಬಣ್ಣ ಬಣ್ಣ ಕಳೆದುಕ್ಳ್ಳುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ.

ನಿಯಮಿತವಾಗಿ ನಿಮ್ಮ ಕೂದಲನ್ನು ಟ್ರಿಮ್ ಮಾಡಿಸಿ
ಹೊಂಬಣ್ಣದ ಟೋನ್ ರಚಿಸಲು ಕೂದಲಿಗೆ ಬಳಸಲಾಗುವ ಬ್ಲೀಚ್, ಕೆಲವೊಮ್ಮೆ ನಿಮ್ಮ ಕೂದಲಿನ ಎಳೆಗಳನ್ನು ದುರ್ಬಲಗೊಳಿಸಬಹ್ದ. ಪ್ರಮುಖ ಹೊಂಬಣ್ಣದ ಕೂದಲಿನ ಆರೈಕೆಗೆ ಸಲಹೆಯೆದರೆ ಆರೋಗ್ಯಕರ ಕೂದಲು ನಿರ್ವಹಿಸಲು ಪ್ರತಿ ತಿಂಗಳು ಸ್ವಲ್ಪ ಕೂದಲನ್ನು ಟ್ರೀಮ್ ಮಾಡಿಸುವುದು ಒಳ್ಳೆಯದು. .

ಶಾಖದಿಂದ ರಕ್ಷಣೆ (ಹೀಟ್ ಪ್ರೊಟೆಕ್ಷನ್) ಮತ್ತು ಹೊಳಪಿಗಾಗಿ ಸ್ಪ್ರೇ

ನಿಮ್ಮ ಹೊಂಬಣ್ಣದ ಕೂದಲು ನಿರ್ವಹಣೆಗೆ ಶಾಖ ರಕ್ಷಣೆ ಮತ್ತು ಹೊಳಪನ್ನು ಹೆಚ್ಚಿಸುವ ಸ್ಪ್ರೇ ಖರೀದಿಸಿ. ಸಾಮಾನ್ಯ ಹೊಂಬಣ್ಣದ ಕೂದಲು ಆರೈಕೆ ಮಾಡಲು ನೀವು ಒಂದು ಬ್ಲೋ ಡ್ರೈಯರ್ ಬಳಸಿದಾಗ ಶಾಖ ರಕ್ಷಣೆ ಮತ್ತು ಸ್ಪ್ರೇ ಬಳಸುವುದು ಉತ್ತಮ.

ಸ್ಪಷ್ಟ ಶ್ಯಾಂಪೂಗಳ ಬಳಕೆ
ನೀವು ಕ್ಲೋರೀನ್ ನೀರಿರುವ ಈಜುಕೊಳದಲ್ಲಿ ಈಜಾಡಲು ಹೋಗುವುದಾದರೆ ಮೊದಲು ಕೂದಲನ್ನು ತೊಳೆದುಕೊಂಡು ಹೋಗಿ. ಇದರಿಂದ ಕ್ಲೋರಿನ್ ನಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಬಹುದು. ನಂತರ ಉತ್ತಮ ಹೊಂಬಣ್ಣದ ಕೂದಲಿನ ಆರೈಕೆ ಗಾಗಿ ವಾರಕ್ಕೊಮ್ಮೆ ಉತ್ತಮ ಶಾಂಪೂವನ್ನೇ ಬಳಸಿ ಬಳಸುವುದು.

ರಿಚ್ ಗ್ಲಾಸ್ ಚಿಕಿತ್ಸೆ
ನಿಮ್ಮ ಕೂದಲು ಅಹಿತಕರ ಬಣ್ಣಕ್ಕೆ ತಿರುಗುತ್ತಿದ್ದರೆ ರಿಚ್ ಗ್ಲಾಸ್ ಟ್ರೀಟ್ ಮೆಂಟ್ ಮಾಡಿಸಿ.

ಬಣ್ಣ ಕಳೆದುಕೊಳ್ಳುತ್ತಿರುವ ಮತ್ತು ಹೊಳಪಿಲ್ಲದ ಹೊಂಬಣ್ಣದ ಕೂದಲನ್ನು ಆರೈಕೆ ಮಾಡಿ ಹೊಂಬಣ್ಣವನ್ನು ಉಳಿಸಿಕೊಳ್ಳಲು ಕೆಲವು ಸಲಹೆಗಳು.

English summary

Blonde Hair Care Tips: Best Ingredients

You like looking blonde. Looking blonde can be fun and stunningly attractive, however it can sometimes look dull and lifeless when it is not taken care of. Having blonde hair may look cool but it does have a tendency to fade immediately if you don’t keep it healthy and shiny.
Story first published: Friday, December 20, 2013, 15:33 [IST]
X
Desktop Bottom Promotion