For Quick Alerts
ALLOW NOTIFICATIONS  
For Daily Alerts

ಈರುಳ್ಳಿಯಲ್ಲಿದೆ ಕೂದಲಿನ ಸಮಸ್ಯೆಗೆ ಪರಿಹಾರ

|

ಬೆಳಗ್ಗೆ ತಲೆ ಬಾಚಿದಾಗ ಕೂದಲು ಗಂಟು ಗಂಟಾಗಿ ಬಾಚಣಿಗೆಯಲ್ಲಿ ಬರುವಾಗ ಹೊಟ್ಟೆ ಉರಿದು ಹೋಗುತ್ತದೆ ಅಲ್ಲವೇ? ದಿನಾ ತುಂಬಾ ಕೂದಲು ಉದುರಿದರೆ ಸ್ವಲ್ಪ ದಿನದಲ್ಲಿಯೇ ಕೂದಲು ತೆಳ್ಳಗಾಗಿ, ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಕೂದಲು ಉದುರುತ್ತಿದೆಯೆಂದು ಮಂಡೆ ಬಿಸಿ ಮಾಡಿಕೊಂಡು, ಮತ್ತಷ್ಟು ಕೂದಲು ಉದುರಿಸಿಕೊಳ್ಳುವ ಬದಲು ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕು.

ಕೂದಲು ಉದುರುವುದನ್ನು ತಡೆಗಟ್ಟಲು ಅನೇಕ ನೈಸರ್ಗಿಕವಾದ ವಿಧಾನಗಳಿವೆ. ಅದರಲ್ಲೊಂದು ಈರುಳ್ಳಿ ಬಳಸುವುದು. ಈರುಳ್ಳಿಯನ್ನು ಈ ಕೆಳಗಿನಂತೆ ಕೂದಲಿನ ಆರೈಕೆಯಲ್ಲಿ ಬಳಸಬಹುದು:

Benefits Of Onions On Hair

ಕೂದಲು ಉದುರುವುದನ್ನು ತಡೆಗಟ್ಟಲು: ಕೂದಲು ತುಂಬಾ ಉದುರುತ್ತಿದ್ದರೆ ಇದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ 30 ನಿಮಿಷ ಇಟ್ಟು ತಲೆ ತೊಳೆದರೆ ಸಾಕು. ಈ ಪೇಸ್ಟ್ ಹಚ್ಚಿ ಬಿಸಿ ನೀರಿನಲ್ಲಿ ಅದ್ದಿ ಹಿಂಡಿದ ಟವಲ್ ಅನ್ನು ತಲೆಗೆ ಸುತ್ತಿದರೆ ಮತ್ತಷ್ಟು ಒಳ್ಳೆಯದು. ಇದರಲ್ಲಿ ರಂಜಕದ ಅಂಶ ಅಧಿಕವಿರುವುದರಿಂದ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಸೊಂಪಾದ ಕೂದಲಿಗೆ: ಈರುಳ್ಳಿ ರಸವನ್ನು ತೆಂಗಿನೆಣ್ಣೆ ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿ 30 ನಿಮಿಷದ ಬಳಿಕ ತಲೆ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಸಾಕು, ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.

ತಲೆಯಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ: ತಲೆ ಬುಡದಲ್ಲಿ ಬ್ಯಾಕ್ಟೀರಿಯಾಗಳಿದ್ದರೆ ತುರಿಕೆ, ಕಜ್ಜಿ ಉಂಟಾಗುತ್ತದೆ. ಈರುಳ್ಳಿ ಪೇಸ್ಟ್ ಹಚ್ಚಿದರೆ ಈ ಸಮಸ್ಯೆಯಿಂದ ಹೊರಬರಬಹುದು.

ತಲೆಹೊಟ್ಟನ್ನು ನಿವಾರಿಸುತ್ತದೆ: ತಲೆ ಹೊಟ್ಟಿದ್ದರೆ ಯಾವ ಶ್ಯಾಂಪೂವಿನ ಅಗ್ಯತವಿಲ್ಲ. ಈರುಳ್ಳಿ ಪೇಸ್ಟ್ ಹಚ್ಚಿದರೆ ಸಾಕು ತಲೆಹೊಟ್ಟಿಗೆ ಗುಡ್ ಬೈ ಹೇಳಬಹುದು.

English summary

Benefits Of Onions On Hair | Tips For Hair Care | ಕೂದಲಿನ ಎಲ್ಲಾ ಸಮಸ್ಯೆಗೆ ಗುಡ್ ಬೈ ಹೇಳುವ ಈರುಳ್ಳಿ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

From hair fall to dandruff, there are many hair problems that are really difficult to solve. There are many treatments that are targeted to solve such hair problems but nothing provides consoling results.Here is a beat remedies for such problem.
X
Desktop Bottom Promotion