For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಸೆರಮ್ ಬಳಸಿದರೆ ಒಳ್ಳೆಯದಾ?

|

ಕೂದಲು ತುಂಬಾ ಡ್ರೈಯಾಗುತ್ತಿದೆ, ಏನು ಮಾಡಲಿ ಎಂದು ನಿಮ್ಮ ಬ್ಯೂಟಿಷಿಯನ್ ಕೇಳಿದರೆ ಅವರು ನಿಮಗೆ ಸೆರಮ್ ಹಚ್ಚಿ ಎಂದು ಸಲಹೆ ಕೊಡಬಹುದು. ಹೇರ್ ಕಟ್ ಮಾಡಿದಾಗ ನಿಮ್ಮ ಕೂದಲು ಮಾಮೂಲಿಗಿಂತ ತುಂಬಾ ಶೈನಿಯಾಗಿ ಕಾಣುತ್ತದೆ. ಗಮನಿಸಿದ್ಧೀರಾ? ಅದಕ್ಕೆ ಬರೀ ಹೇರ್ ಸೆಟ್ಟಿಂಗ್ ಮಾತ್ರವಲ್ಲ, ಸೆರಮ್ ಹಚ್ಚಿರುವುದು ಕೂಡ ಒಂದು ಕಾರಣ.

ಸೆರಮ್ ಹಚ್ಚಿದ ಕೂದಲು ತುಂಬಾ ಆಕರ್ಷಕವಾಗಿ ಕಾಣುವುದರಿಂದ ಅದನ್ನು ಕೊಂಡು ಬಳಸಬೇಕೆಂದು ಬಯಸುತ್ತೇವೆ. ಆದರೆ ಕೂದಲಿಗೆ ಪ್ರತೀದಿನ ಬಳಸುವುದರಿಂದ ಹಾನಿಯುಂಟಾಗಬಹುದೇ ಎಂಬ ಸಣ್ಣ ಸಂಶಯ ಮೂಡುವುದು ಸಹಜ.

ಸೆರಮ್ ಹಚ್ಚುವ ಮೊದಲು ಅದರಲ್ಲಿ ಇರುವ ಅಂಶವೇನು? ಕೂದಲಿಗೆ ಎಷ್ಟಿರ ಮಟ್ಟಿಗೆ ಒಳ್ಳೆಯದು ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಆದ್ದರಿಂದ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ನೋಡಿ:

ಹೇರ್ ಸೆರಮ್ ಒಳ್ಳೆಯದಾ?

ಹೇರ್ ಸೆರಮ್ ಒಳ್ಳೆಯದಾ?

ಹೇರ್ ಸೆರಮ್ ನಲ್ಲಿ ಸಿಲಿಕಾನ್ ಇರುತ್ತದೆ, ಇದು ಕೂದಲನ್ನು ಬೆಲಕಿನಲ್ಲಿ ಹೊಳೆಯುವಂತೆ ಮಾಡುತ್ತದೆ, ಅಲ್ಲದೆ ಕೂದಲಿಗೆ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ, ನೋಡುಗರಿಗೆ ನಿಮ್ಮ ಕೂದಲು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಸಿಲಿಕಾನ್ ಕೆಮಿಕಲ್ ಕೂದಲಿಗೆ ಒಳ್ಳೆಯದಾ ಎಂಬ ಹೆಚ್ಚಿನ ಮಾಹಿತಿಗೆ ಮುಂದಿನ ಸ್ಲೈಡ್ ನೋಡಿ:

ಹೇರ್ ಸೆರಮ್ ಒಳ್ಳೆಯದಾ?

ಹೇರ್ ಸೆರಮ್ ಒಳ್ಳೆಯದಾ?

ಸಿಲಿಕಾನ್ ಕೆಲವರಿಗೆ ಮಾತ್ರ ಹೇರ್ ಡ್ಯಾಮೇಜ್ ಉಂಟು ಮಾಡುತ್ತದೆ, ಸೆರಮ್ ಅನ್ನು ಶ್ಯಾಂಪೂ ಹಾಕಿ ತಲೆ ತೊಳದರೆ ಸುಲಭದಲ್ಲಿ ಹೋಗಲಾಡಿಸಬಹುದು. ಇದರ ಗುಣ ಮತ್ತು ಅವಗುಣಗಳ ಬಗ್ಗೆ ನೋಡೋಣ ಬನ್ನಿ.

ಹೇರ್ ಸೆರಮ್ ಒಳ್ಳೆಯದಾ?

ಹೇರ್ ಸೆರಮ್ ಒಳ್ಳೆಯದಾ?

ಕೂದಲು ಒರಟಾಗಿದ್ದು, ನೋಡಲು ಆಕರ್ಷಕವಾಗಿ ಕಾಣದಿದ್ದರೆ ಸ್ವಲ್ಪ ಸೆರಮ್ ಹಚ್ಚಿದರೆ ಕೂದಲು ಮಂದವಾಗಿ, ಆಕರ್ಷಕವಾಗಿ ಕಾಣುವುದು ಹಾಗೂ ಕೂದಲು ಸಿಕ್ಕಾಗುವುದನ್ನು ತಡೆಯುತ್ತದೆ.

ಹೇರ್ ಸೆರಮ್ ಒಳ್ಳೆಯದಾ?

ಹೇರ್ ಸೆರಮ್ ಒಳ್ಳೆಯದಾ?

ಸೆರಮ್ ಕೂದಲನ್ನು ದೂಳು, ವಾಯು ಮಾಲಿನ್ಯ ಇವುಗಳಿಂದ ಕೂದಲನ್ನು ರಕ್ಷಣೆ ಮಾಡುತ್ತದೆ.

ಹೇರ್ ಸೆರಮ್ ಒಳ್ಳೆಯದಾ?

ಹೇರ್ ಸೆರಮ್ ಒಳ್ಳೆಯದಾ?

ತುಂಬಾ ಹೊತ್ತು ಬಿಸಿಲಿನಲ್ಲಿ ತಿರುಗಾಡಿದರೆ ತ್ವಚೆ ಮಾತ್ರವಲ್ಲ, ಕೂದಲು ಡ್ರೈಯಾಗುವುದು. ಸೆರಮ್ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.

ಹೇರ್ ಸೆರಮ್ ಒಳ್ಳೆಯದಾ?

ಹೇರ್ ಸೆರಮ್ ಒಳ್ಳೆಯದಾ?

ಸ್ಟೈಲಿಂಗ್ ಟೂಲ್ ಬಳಸುವಾಗ ಇದನ್ನು ಬಳಸುವುದು ಒಳ್ಳೆಯದು. ಕೂದಲಿಗೆ ಐರನ್ ಹಾಕುವುದು, ಸ್ಟ್ರೈಟ್ನನರ್ ಬಳಸುವುದು ಮಾಡಿದರೆ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಇವುಗಳನ್ನು ಬಳಸುವ ಮುನ್ನ ಸೆರಮ್ ಹಚ್ಚಿ ನಂತರ ಅವುಗಳನ್ನು ಬಳಸಿದರೆ ಕೂದಲಿಗೆ ಹಾನಿಯಾಗುವುದನ್ನು ತಡೆಯಬಹುದು.

ಹೇರ್ ಸೆರಮ್

ಹೇರ್ ಸೆರಮ್

ಸಲಹೆ: ಸ್ಟೈಲಿಂಗ್ ಟೂಲ್ ಅನ್ನು ಪ್ರತೀದಿನ ಬಳಸಬೇಡಿ, ಅಪರೂಪಕ್ಕಷ್ಟೇ ಬಳಸಿ, ಇಲ್ಲದಿದ್ದರೆ ನಿಮ್ಮ ಕೂದಲಿನ ಆರೋಗ್ಯ ಹಾಳಾಗುವುದು.

English summary

Benefits Of Using Hair Serum

Silicone present in hair serums are considered to cause damage to hair by causing build up. But this is harmful only for certain hair types. And silicone can easily be removed from hair by using cleansers containing certain chemicals. Let us examine whether hair serums are good for you or not.
X
Desktop Bottom Promotion