For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವುದನ್ನು ತಡೆಯುವ 7 ಹಣ್ಣುಗಳು

|

ಕೂದಲು ನಾನಾ ಕಾರಣಗಳಿಂದ ಉದುರುತ್ತದೆ. ಕಾಯಿಲೆಯಿಂದ ಇರಬಹುದು, ಕೆಮಿಕಲ್ ಇರುವ ಶ್ಯಾಂಪೂ, ಕಂಡೀಷನರ್ ಬಳಕೆ , ದೂಳು, ಪೌಷ್ಠಿಕಾಂಶಗಳ ಕೊರತೆಯಿಂದ ಕೂಡ ಕೂದಲು ಉದುರಲಾರಂಭಿಸುತ್ತದೆ.

ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಕೆಲವೊಂದು ಆಹಾರಗಳು ಪ್ರಮುಖ ಪಾತ್ರವಹಿಸುತ್ತದೆ. ನಟ್ಸ್, ಮೀನು, ಹಸಿ ಸೊಪ್ಪು ತರಕಾರಿ, ಬೀನ್ಸ್, ನಟ್ಸ್, ಕ್ಯಾರೆಟ್ ಹಾಲಿನ ಉತ್ಪನ್ನಗಳು, ಮೃದ್ವಂಗಿಗಳು ಈ ರೀತಿಯ ಆಹಾರಗಳು ತುಂಬಾ ಪರಿಣಾಮಕಾರಿಯಾಗಿವೆ.

ಕೆಲವೊಂದು ಹಣ್ಣುಗಳು ಕೂಡ ಕೂದಲು ಉದುರುವುದನ್ನು ತಡೆಗಟ್ಟಿ ಕೂದಲಿನ ಪೋಷಣೆಯನ್ನು ಮಾಡುತ್ತದೆ. ಆ ಹಣ್ಣುಗಳ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ.

 1. ಕಿತ್ತಳೆ

1. ಕಿತ್ತಳೆ

ಕಿತ್ತಳೆ ರಸವನ್ನು ತಲೆಗೆ ಹಚ್ಚಬಹುದು. ಇದನ್ನು ಪ್ರತೀದಿನ ತಿಂದರೆ ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಕಿತ್ತಳೆ ರಸ ತಲೆಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಕೂಡ ಸಹಕಾರಿಯಾಗಿದೆ.

2. ನಿಂಬೆರಸ

2. ನಿಂಬೆರಸ

ಕೂದಲಿನ ಸಮಸ್ಯೆಗೆ ನಿಂಬೆರಸ ಚಮತ್ಕಾರಿಯಾದ ಮದ್ದಾಗಿದೆ. ತಲೆಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸಿ, ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

3. ಬೆರ್ರಿ ಹಣ್ಣುಗಳು

3. ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳಲ್ಲಿ ಬಯೋಪ್ಲೇವೋನೈಡ್ಸ್ ಅಂಶವಿದ್ದು ಇದು ಕೂದಲು ಆರೋಗ್ಯಕರವಾಗಿ ಬೆಳೆಯುವಲ್ಲಿ ಸಹಕಾರಿಯಾಗಿದೆ.

4. ಚೆರ್ರಿ

4. ಚೆರ್ರಿ

ಚೆರ್ರಿ ಹಣ್ಣಿನಲ್ಲಿ ಕೂಡ ಬಯೋಪ್ಲೇವೋನೈಡ್ಸ್ (bioflavanoids) ಅಂಶವಿದ್ದು ಪ್ರತೀದಿನ ಇದನ್ನು ತಿಂದರೆ ಕೂದಲು ಉದುರುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ.

5. ಬಾಳೆ ಹಣ್ಣು

5. ಬಾಳೆ ಹಣ್ಣು

ಬಾಳೆ ಹಣ್ಣು ಹಿಸುಕಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಕೂದಲು ಆಕರ್ಷಕವಾಗಿ ಮಂದವಾಗಿ ಕಾಣುವುದು.

6. ಸೀಬೆಕಾಯಿ

6. ಸೀಬೆಕಾಯಿ

ಸೀಬೆಕಾಯಿಯನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ತಲೆಗೆ ಹಚ್ಚಿದರೆ ತಲೆಹೊಟ್ಟು ಕಡಿಮೆಯಾಗುವುದು, ಅಲ್ಲದೆ ಇದರಲ್ಲಿ ವಿಟಮಿನ್ ಎ ಇರುವುದರಿಂದ ಕೂದಲು ಬೇಗನೆ ಉದ್ದ ಬೆಳೆಯಲು ಸಹಕಾರಿಯಾಗಿದೆ.

7. ಪಪ್ಪಾಯಿ

7. ಪಪ್ಪಾಯಿ

ತಲೆಬುಡ ಸ್ವಚ್ಛವಾಗಿರದಿದ್ದರೆ ಕೂದಲು ಉದುರುವುದು. ಪಪ್ಪಾಯಿಯನ್ನು ಪೇಸ್ಡ್ ಮಾಡಿ ತಲೆಗೆ ಹಚ್ಚಿದರೆ ತಲೆ ಬುಡವನ್ನು ಸ್ವಚ್ಛ ಮಾಡುತ್ತದೆ, ಕೂದಲೂ ಉದುರುವುದಿಲ್ಲ.

English summary

7 Fruits To Treat Hair Loss Naturally | Tips For Hair Care | ಕೂದಲು ಉದುರುವುದನ್ನು ತಡೆಗಟ್ಟುವ 7 ಹಣ್ಣುಗಳು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

There are many foods that can help treat skin as well as hair problems. Here is a list of fruits that you can use for preparing hair packs and treat hair fall naturally. Check out...
X
Desktop Bottom Promotion