For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟನ್ನು ನಿವಾರಿಸಲು 20 ಮನೆ ಮದ್ದುಗಳು

By Super
|

ತಲೆಹೊಟ್ಟು ಹೆಚ್ಚಿನವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಬಂದರೆ ತಲೆಯಲ್ಲಿ ಕೆರೆತ ಉಂಟಾಗಿ ತುಂಬಾ ಕಿರಿಕಿರಿ ಅನಿಸುವುದು, ಅಲ್ಲದೆ ಮೊಡವೆ, ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ.

ತಲೆಹೊಟ್ಟು ನಾನಾ ಕಾರಣಗಳಿಂದ ಉಂಟಾಗುತ್ತದೆ, ತಲೆ ಬುಡ ಡ್ರೈಯಾದರೆ, ದೇಹದಲ್ಲಿ ಸತುವಿನಂಶ ಕಮ್ಮಿಯಾದರೆ, ತಲೆ ಶುಚಿತ್ವದ ಕಡೆಗೆ ಗಮನ ಕೊಡದಿದ್ದರೆ ತಲೆ ಹೊಟ್ಟು ಕಂಡು ಬರುವುದು.

ತಲೆಹೊಟ್ಟಿನ ನಿವಾರಣೆಗೆ ಕೆಮಿಕಲ್ ಇರುವ ಶ್ಯಾಂಪೂ ಬಳಸುವ ಬದಲು, ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಹೋಗಲಾಡಿಸಬಹುದು.

ಅದಲ್ಲದೆ ತಲೆ ಹೊಟ್ಟು- ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ವಿಚಾರ ತಲೆಹೊಟ್ಟಿನಿಂದ ಬಳಲುತ್ತಿದ್ದೀರಾ? ಅಂಗಡಿಗೆ ಹೋಗಿ ಕಂಡ ಕಂಡ ಶ್ಯಾಂಪೂವನ್ನು ಪ್ರಯೋಗಿಸುವ ಬದಲು ಇಲ್ಲಿ ನೀಡಿರುವ 20 ಮನೆ ಚಿಕಿತ್ಸೆಗಳನ್ನು ನಿಮಗೆ ಇಷ್ಟವಾದ ಒಂದನ್ನು ಒಮ್ಮೆ ಪ್ರಯತ್ನಿಸಿ.

1. ನಿಂಬೆ ಹಣ್ಣಿನ ಸ್ನಾನ

1. ನಿಂಬೆ ಹಣ್ಣಿನ ಸ್ನಾನ

ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅವುಗಳನ್ನು 4-5 ಕಪ್ ಬಿಸಿ ನೀರಿನಲ್ಲಿ 15-20 ನಿಮಿಷಗಳ ಕಾಲ ಬೇಯಿಸಿ.

ಇದು ಆರಿದ ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಇದನ್ನು ಒಂದು ವಾರ ಪುನರಾವರ್ತಿಸಿ.

2. ಮೆಂತ್ಯೆ ಚಿಕಿತ್ಸೆ

2. ಮೆಂತ್ಯೆ ಚಿಕಿತ್ಸೆ

- ಎರಡು ಚಮಚಗಳಷ್ಟು ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿ ರಾತ್ರಿ ಪೂರ್ತಿ ಬಿಡಿ. ಮಾರನೆ ದಿನ ಬೆಳಗ್ಗೆ ಇದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಿ.

-ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ 30 ನಿಮಿಷ ಬಿಡಿ.

- ನಂತರ ತಲೆಗೆ ಸ್ನಾನ ಮಾಡಿ. ಈ ಚಿಕಿತ್ಸೆಯನ್ನು ನಾಲ್ಕು ವಾರಗಳ ತನಕ ಪುನಾರಾವರ್ತಿಸಿ.

3. ನಿಂಬೆ ಹಣ್ಣಿನ ರಸದ ಮಸಾಜ್

3. ನಿಂಬೆ ಹಣ್ಣಿನ ರಸದ ಮಸಾಜ್

- ಸ್ನಾನಕ್ಕೆ ಹೋಗುವ ಮೊದಲು ನಿಂಬೆಹಣ್ಣಿನ ರಸದಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ.

- 15 - 20 ನಿಮಿಷಗಳ ನಂತರ ಸ್ನಾನ ಮಾಡಿ.

- ಈ ಚಿಕಿತ್ಸೆಯಿಂದ ಸಿಕ್ಕು ಆಗುವುದಿಲ್ಲ, ತಲೆಹೊಟ್ಟು ಬರುವುದಿಲ್ಲ. ಅಲ್ಲದೆ ನಿಮ್ಮ ಕೂದಲು ಹೊಳಪಿನಿಂದ ಕಂಗೊಳಿಸುತ್ತದೆ.

4. ವಿನೇಗರ್ ಚಿಕಿತ್ಸೆ

4. ವಿನೇಗರ್ ಚಿಕಿತ್ಸೆ

- ವಿನೇಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ಒಂದು ಮಿಶ್ರಣವನ್ನು ಮಾಡಿಕೊಳ್ಳಿ.

- ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, ರಾತ್ರಿ ಪೂರ್ತಿ ಬಿಡಿ.

- ಮಾರನೆಯ ದಿನ ಇದನ್ನು ಒಂದು ಬೇಬಿ ಶ್ಯಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.

5. ಮೊಸರು

5. ಮೊಸರು

- ಮೊಸರನ್ನು ನಿಮ್ಮ ಕೂದಲಿಗೆ ಹಚ್ಚಿ, ಕನಿಷ್ಠ ಒಂದು ಗಂಟೆ ನೆನೆಯಲು ಬಿಡಿ.

- ನಂತರ ಇದನ್ನು ಒಂದು ಮೆದುವಾದ ಶ್ಯಾಂಪೂವನ್ನು ಬಳಸಿಕೊಂಡು ಚೆನ್ನಾಗಿ ತೊಳೆಯಿರಿ. ಹೀಗೆ ವಾರಕ್ಕೆ ಕನಿಷ್ಠ ಎರಡು ಬಾರಿಯಾದರು ಮಾಡಿ.

6. ಮೊಟ್ಟೆಗಳನ್ನು ಬಳಸಿ

6. ಮೊಟ್ಟೆಗಳನ್ನು ಬಳಸಿ

- ಎರಡು ಮೊಟ್ಟೆಗಳನ್ನು ತೆಗೆದುಕೊಂಡು, ಅದನ್ನು ಪೇಸ್ಟ್ ಆಗಿ ಪರಿವರ್ತಿಸಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, ಒಂದು ಗಂಟೆ ನೆನೆಯಲು ಬಿಡಿ.

- ಈ ಚಿಕಿತ್ಸೆಯಿಂದ ನಿಮಗೆ ಇರುವ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

7. ಬೆಚ್ಚಗಿನ ಎಣ್ಣೆಯ ಮಸಾಜ್

7. ಬೆಚ್ಚಗಿನ ಎಣ್ಣೆಯ ಮಸಾಜ್

- ಉಗುರು ಬೆಚ್ಚಗೆ ಇರುವ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯನ್ನು ಹಾಕಿಕೊಂಡು ಮಸಾಜ್ ಮಾಡುವುದರಿಂದ ನಿಮ್ಮ ಕೂದಲಿನಲ್ಲಿರುವ ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು.

- ಹೀಗೆ ಎಣ್ಣೆಯನ್ನು ಹಚ್ಚಿ ರಾತ್ರಿ ಪೂರ್ತಿ ಬಿಟ್ಟು, ಬೆಳಗ್ಗೆ ಅದನ್ನು ಚೆನ್ನಾಗಿ ತೊಳೆಯಿರಿ.

8. ಲೋಳೆಯ ಪವಾಡ

8. ಲೋಳೆಯ ಪವಾಡ

- ನೀವು ಸ್ನಾನ ಮಾಡುವುದಕ್ಕೆ 20 ನಿಮಿಷಗಳ ಮೊದಲು, ಲೋಳೆಯ ಜೆಲ್‍ ಅನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ.

- 20 ನಿಮಿಷ ಇದನ್ನು ನೆನೆಯಲು ಬಿಟ್ಟು, ಶ್ಯಾಂಪೂವನ್ನು ಹಾಕಿ ಚೆನ್ನಾಗಿ ತೊಳೆಯಿರಿ.

9. ತೆಂಗಿನ ಎಣ್ಣೆ

9. ತೆಂಗಿನ ಎಣ್ಣೆ

- ಒಂದು ಚಮಚ ನಿಂಬೆಹಣ್ಣಿನ ರಸಕ್ಕೆ 5 ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿಕೊಂಡು, ನಿಮ್ಮ ಕೂದಲಿಗೆ ಹಚ್ಚಿ.

- 20- 30 ನಿಮಿಷಗಳ ಕಾಲ ಬಿಡಿ. ನಂತರ ಒಂದು ಉತ್ತಮ ಶ್ಯಾಂಪೂವನ್ನು ಹಾಕಿಕೊಂಡು, ಚೆನ್ನಾಗಿ ತಿಕ್ಕಿ ತೊಳೆಯಿರಿ.

10. ಸೇಬು ಸೇವಿಸಿ. ನಿಮ್ಮ ಕೂದಲನ್ನು ಕಾಪಾಡಿ

10. ಸೇಬು ಸೇವಿಸಿ. ನಿಮ್ಮ ಕೂದಲನ್ನು ಕಾಪಾಡಿ

- ಸೇಬು ಮತ್ತು ಕಿತ್ತಳೆಗಳನ್ನು ಸಮಪ್ರಮಾಣಾಲ್ಲಿ ತೆಗೆದುಕೊಂಡು,ಅವುಗಳಿಂದ ಪೇಸ್ಟ್ ತಯಾರಿಸಿ, ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ.

- ನಂತರ ಇದನ್ನು 20-30 ನಿಮಿಷಗಳ ಕಾಲ ಬಿಟ್ಟು, ಚೆನ್ನಾಗಿ ತೊಳೆಯಿರಿ.

11. ನಿಂಬೆಹಣ್ಣಿನ ಎಲೆಗಳ ಪೇಸ್ಟ್

11. ನಿಂಬೆಹಣ್ಣಿನ ಎಲೆಗಳ ಪೇಸ್ಟ್

- ಸ್ವಲ್ಪ ನಿಂಬೆಹಣ್ಣಿನ ಎಲೆಗಳನ್ನು ತೆಗೆದುಕೊಂಡು, ಅವುಗಳನ್ನು ಜಜ್ಜಿ, ಒಂದು ರೀತಿಯ ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ನಂತರ ಅವುಗಳನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ.

- ಹೀಗೆ ಹಚ್ಚಿ ಒಂದು ಗಂಟೆಯ ನಂತರ ಇದನ್ನು ಬೆಚ್ಚಗಿನ ನೀರು ಅಥವಾ ತಣ್ಣೀರಿನಲ್ಲಿ ತೊಳೆಯಿರಿ.

12. ತುಳಸಿಯ ಮಹಿಮೆ

12. ತುಳಸಿಯ ಮಹಿಮೆ

- ತುಳಸಿ ಮತ್ತು ನೆಲ್ಲಿ ಕಾಯಿಯ ಪುಡಿಯನ್ನು ನೀರಿನಲ್ಲಿ ಪೇಸ್ಟ್ ಮಾಡಿಕೊಳ್ಳಿ.

- ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ನಿಮ್ಮ ಕೂದಲನ್ನು ನೀರು ಮತ್ತು ಶ್ಯಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.

13. ತಲೆ ಹೊಟ್ಟಿಗೆ ರಾಮಬಾಣ ಬೆಳ್ಳುಳ್ಳಿ

13. ತಲೆ ಹೊಟ್ಟಿಗೆ ರಾಮಬಾಣ ಬೆಳ್ಳುಳ್ಳಿ

- ಎರಡು ಚಮಚದಷ್ಟು ಬೆಳ್ಳುಳ್ಳಯ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸವನ್ನು ಬೆರೆಸಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ.

- ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, 30 ರಿಂದ 40 ನಿಮಿಷಗಳಷ್ಟು ಕಾಲ ಬಿಡಿ.

- ನಂತರ ಇದನ್ನು ಶಾಂಪೂ ಮತ್ತು ತಣ್ಣೀರನ್ನು ಬಳಸಿ, ಚೆನ್ನಾಗಿ ತೊಳೆಯಿರಿ.

14. ಅಂಟುವಾಳ - ಪ್ರಾಕೃತಿಕ ತಲೆಹೊಟ್ಟು ಚಿಕಿತ್ಸೆಯ ಸಾಧನ

14. ಅಂಟುವಾಳ - ಪ್ರಾಕೃತಿಕ ತಲೆಹೊಟ್ಟು ಚಿಕಿತ್ಸೆಯ ಸಾಧನ

ನೀವು ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಅಂಟುವಾಳದ ಸೋಪ್ ಅಥವಾ ಪೇಸ್ಟನ್ನು ಬಳಸಬಹುದು. ಇವುಗಳನ್ನು ನಿಮ್ಮ ಕೂದಲಿನ ಬುಡಕ್ಕೆ ಹಾಕಿ.

- ಎರಡು ಗಂಟೆ ಹಾಗೆಯೇ ಬಿಟ್ಟು, ನಂತರ ತಣ್ಣೀರು ಮತ್ತು ಶ್ಯಾಂಪೂವನ್ನು ಬಳಸಿ ತೊಳೆಯಿರಿ.

15. ಈರುಳ್ಳಿ ಪೇಸ್ಟ್

15. ಈರುಳ್ಳಿ ಪೇಸ್ಟ್

- ನಿಮ್ಮ ಕೂದಲಿಗೆ ಈರುಳ್ಳಿ ಪೇಸ್ಟ್ ಹಚ್ಚಿ . ಒಂದು ಗಂಟೆ ಕಾಲ ಹಾಗೆಯೇ ಬಿಡಿ.

- ನಂತರ ಅದನ್ನು ಪೂರ್ತಿಯಾಗಿ ತೊಳೆಯಿರಿ. ನಂತರ ಅದಕ್ಕೆ ತಾಜಾ ನಿಂಬೆಯ ರಸವನ್ನು ಹಚ್ಚಿ. ಇದರಿಂದ ನಿಮ್ಮ ಕೂದಲಿನಲ್ಲಿರುವ ಈರುಳ್ಳಿಯ ವಾಸನೆಯು ಹೊರಟು ಹೋಗುತ್ತದೆ.

16. ಶುಂಠಿ ಮತ್ತು ಬೀಟ್‍ರೂಟ್ ಪೇಸ್ಟ್

16. ಶುಂಠಿ ಮತ್ತು ಬೀಟ್‍ರೂಟ್ ಪೇಸ್ಟ್

- ಶುಂಠಿ ಮತ್ತು ಬೀಟ್‍ರೂಟನ್ನು ರುಬ್ಬಿ ಪೇಸ್ಟ್ ಆಗಿ ಪರಿವರ್ತಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ ರಾತ್ರಿಯೆಲ್ಲ ನೆನೆಯಲು ಬಿಡಿ.

- ಮಾರನೆಯ ದಿನ ಬೆಳಗ್ಗೆ ಇದನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ. ಈ ಅಭ್ಯಾಸವನ್ನು ನಿರಂತರವಾಗಿ 4- 5 ದಿನಗಳ ರಾತ್ರಿ ತಪ್ಪದೆ ಮಾಡಿ.

17. ಕಡಲೆ ಹಿಟ್ಟಿನ ಚಿಕಿತ್ಸೆ

17. ಕಡಲೆ ಹಿಟ್ಟಿನ ಚಿಕಿತ್ಸೆ

- ಕಡಲೆ ಹಿಟ್ಟನ್ನು ಮೊಸರಿನೊಂದಿಗೆ ಬೆರೆಸಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ.

- 20 ರಿಂದ 30 ನಿಮಿಷಗಳ ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ.

18. ಬೇಕಿಂಗ್ ಸೋಡ ಚಿಕಿತ್ಸೆ.

18. ಬೇಕಿಂಗ್ ಸೋಡ ಚಿಕಿತ್ಸೆ.

- ಸ್ನಾನ ಮಾಡುವಾಗ ಶಾಂಪೂವಿನ ಜೊತೆಗೆ ಸ್ವಲ್ಪ ಬೇಕಿಂಗ್ ಸೋಡವನ್ನು ನಿಮ್ಮ ಕೇಶಕ್ಕೆ ಹಚ್ಚಿ, ಕೂದಲಿನ ಬುಡವನ್ನು ಮಸಾಜ್ ಮಾಡಿ.

- 15 ರಿಂದ 20 ನಿಮಿಷಗಳ ನಂತರ ಇದನ್ನು ತೊಳೆಯಿರಿ.

19. ರೋಸ್ ಮೇರಿ ತಂತ್ರಙ್ಞಾನ

19. ರೋಸ್ ಮೇರಿ ತಂತ್ರಙ್ಞಾನ

- ವಿನೆಗರ್ ಅನ್ನು ರೋಸ್ ಮೇರಿ ಎಲೆಗಳನ್ನು ಹಿಂಡಿರುವ ರಸದಲ್ಲಿ ಮಿಶ್ರಣ ಮಾಡಿ. ಆನಂತರ ಅದನ್ನು ಕೂದಲಿನ ಬುಡಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಬಿಡಿ.

- ನಂತರ ಇದನ್ನು ಚೆನ್ನಾಗಿ ತೊಳೆಯಿರಿ.

- ಇದರ ಜೊತೆಗೆ ನೀವು ತೆಂಗಿನ ಎಣ್ಣೆಯ ಜೊತೆಗೆ ಸಹ ರೋಸ್ ಮೇರಿ ಎಣ್ಣೆಯನ್ನು ಬೆರೆಸಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚ ಬಹುದು.

20. ನಿಮ್ಮ ಕೂದಲನ್ನು ಪ್ರತಿದಿನ ತೊಳೆಯಿರಿ.

20. ನಿಮ್ಮ ಕೂದಲನ್ನು ಪ್ರತಿದಿನ ತೊಳೆಯಿರಿ.

ಪ್ರತಿದಿನ ಅಥವಾ ದಿನ ಬಿಟ್ಟು ದಿನ ತಲೆಗೆ ಸ್ನಾನ ಮಾಡುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಬಹುದು. ಅಲ್ಲದೆ ತಲೆಹೊಟ್ಟನ್ನು ಕೂದಲಿಗೆ ಬೇಕಾದ ಚಿಕಿತ್ಸೆಗಳನ್ನು ಪಡೆಯುವುದರಿಂದ ಮತ್ತು ಕೂದಲಿನ ಬುಡವನ್ನು ಸಂಪೂರ್ಣವಾಗಿ ಸ್ವಚ್ಛಮಾಡುವುದರಿಂದ ನಿವಾರಿಸಿಕೊಳ್ಳಬಹುದು.

English summary

20 Best Home Remedies To Get Rid Of Dandruff | Hair Care Tips

To make matters worse, persistent itching can lead to acne! Skip the dandruff shampoo-buying ritual and check out 20 home remedies that will wash out your dandruff worries.
X
Desktop Bottom Promotion