For Quick Alerts
ALLOW NOTIFICATIONS  
For Daily Alerts

ಕೂದಲಿನ ರಕ್ಷಣೆಗೆ 15 ಆತ್ಮೀಯ ಸಲಹೆಗಳು

By Super
|

ನಿಮ್ಮ ಸೌಂದರ್ಯವನ್ನು ನಿಮ್ಮ ಕೂದಲಿನಿಂದಲೇ ನಿರ್ಧರಿಸಬಹುದು ಎಂದರೆ ನಂಬುತ್ತೀರಾ? ಹೌದು, ಮುಖ ಎಷ್ಟೇ ಚೆನ್ನಾಗಿದ್ದರೂ ತಲೆಯ ತುಂಬಾ ಕೂದಲಿಲ್ಲದಿದ್ದರೆ ಪರಿಪೂರ್ಣ ಸೌಂದರ್ಯವನ್ನು ಪಡೆಯಲು ಸಾಧ್ಯವೇ ಇಲ್ಲ. ಆದರೆ ಇಂದು ನಮ್ಮ ಕೂದಲುಗಳ ಸ್ಥಿತಿ ಹಿಂದಿನಂತೆ ಇಲ್ಲ!

ಹಿಂದೆಲ್ಲ ಕೇವಲ ಹರಳೆಣ್ಣೆ ಹಾಕಿ ಅಥವಾ ಏನನ್ನು ಬಳಸದೆ ಇದ್ದರೂ ಸದೃಢವಾದ ಕೂದಲನ್ನು ಸಾಮಾನ್ಯವಾಗಿ ಎಲ್ಲರೂ ಹೊಂದಿರುತ್ತಿದ್ದರು. ಆದರೆ ಇಂದಿನ ಮಾತೇ ಬೇರೆ ಬಿಡಿ. ನಮ್ಮ ದೇಶದ ವಾತಾವರಣ, ಮಾಲಿನ್ಯ, ಮತ್ತು ಹವಾನಿಯಂತ್ರಿತ ಕೊಠಡಿಯಲ್ಲೇ ದಿನದ ಬಹುಪಾಲು ಕೆಲಸ ಮಾಡುವುದರಿಂದ ನಿಮ್ಮ ಕೂದಲು ಹಾಳಾಗುತ್ತಿದೆ. ಆದರೆ ನಿಮ್ಮ ಕೂದಲಿಗೀಗ ವಿಶ್ರಾಂತಿ ನೀಡಿ! ನಿಮ್ಮ ಕೂದಲನ್ನು ಮರಳಿ ಸದೃಢವಾಗಲೂ ಹಾಗೂ ಹೊಳಪನ್ನು ಪಡೆಯಲು ಈ ಲೇಖನದ ಮೂಲಕ ನಾವೊಂದಿಷ್ಟು ಸಲಹೆಯನ್ನು ನೀಡುತ್ತಿದ್ದೇವೆ.

 ಕೂದಲು ಕವಲೊಡೆಯದಂತೆ ತಡೆಯಬೇಕೆ?

ಕೂದಲು ಕವಲೊಡೆಯದಂತೆ ತಡೆಯಬೇಕೆ?

ಕೂದಲನ್ನು ಪೋನಿ ಕಟ್ಟುವುದು ಅಥವಾ ಬಿಗಿಯಾಗಿ ಕಟ್ಟುವುದರಿಂದ ಕೂದಲು ತುಂಡಾಗುವ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಕೂದಲನ್ನು ಬಿಗಿಯಾಗಿ ಕಟ್ಟದೇ ಸಡಿಲವಾಗಿ ಕಟ್ಟಿದರೆ ಕೂದಲು ಒಡೆಯುವಿಕೆಯಿಂದ ರಕ್ಷಿಸಲು ಸಾಧ್ಯ.

 ಒದ್ದೆ ಕೂದಲಿನ ಬಗ್ಗೆ ಜಾಗ್ರತೆ

ಒದ್ದೆ ಕೂದಲಿನ ಬಗ್ಗೆ ಜಾಗ್ರತೆ

ಕೂದಲು ಒದ್ದೆಯಾಗಿದ್ದಾಗ ಕೂದಲು ದುರ್ಬಲವಾಗಿರುವುದರಿಂದ ಕೂದಲುದುರುವಿಕೆ ಉಂಟಾಗುವುದು ಸಹಜ. ಆದ್ದರಿಂದ ತಲೆ ಸ್ನಾನದ ನಂತರ ಕೂದಲನ್ನು ಬಾಚುವಲ್ಲಿ ಮುಂಜಾಗ್ರತೆವಹಿಸಿ.

ಫ್ಲಾಟ್ ಐರನ್ ಮತ್ತು ಬ್ಲೋ- ಡ್ರೈಯಿಂಗ್

ಫ್ಲಾಟ್ ಐರನ್ ಮತ್ತು ಬ್ಲೋ- ಡ್ರೈಯಿಂಗ್

ಫ್ಲಾಟ್ ಐರನ್ ಮತ್ತು ಬ್ಲೋ- ಡ್ರೈಯಿಂಗ್ ಗಳು, ನಿಮ್ಮ ಕೂದಲನ್ನು ಹಾನಿ ಗೊಳಿಸಬಲ್ಲ ಇತರ ರೂಪಗಳು! ಈ ವಸ್ತುಗಳು ಒಟ್ಟಿಗೆ ಕೂದಲಿನಲ್ಲಿ ಜಲಜನಕ ಬಂಧಗಳಿಂದ ತಾತ್ಕಾಲಿಕ ಬದಲಾವಣೆಗಳನ್ನು ಉಂಟು ಮಾಡಲು ರಚಿಸಲ್ಪಟ್ಟ ಅತಿಯಾದ ಶಾಖವಾಗಿದೆ. ಆದ್ದರಿಂದ ವಿದ್ಯುನ್ಮಾನ ಶೈಲಿಯ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಿ ಮತ್ತು ಅತ್ಯಂತ ಅಗತ್ಯವಾಗಿದ್ದಾಗ ಮಾತ್ರ ಬಳಸಿ ಆದರೆ ಇದನ್ನು ದೈನಂದಿನ ಬಳಕೆಗೆ ಖಂಡಿತವಾಗಿಯೂ ಬಳಸಬೇಡಿ.

 ಹೇರ್ ಪ್ರಾಡಕ್ಟ್

ಹೇರ್ ಪ್ರಾಡಕ್ಟ್

ಕೂದಲು ಹಾನಿಗೊಳಗಾಗುವುದನ್ನು ತಪ್ಪಿಸಲು, ನಿಮ್ಮ ಕೂದಲಿಗೆ ಬಳಸುವ ಉತ್ವನ್ನಗಳನ್ನು ಶೀರ್ಘವಾಗಿ ತೊಳೆಯಿರಿ. ಜೆಲ್ ಮತ್ತು ಮೌಸ್ಸ್ ನ್ನು ಮೇಕಪ್ ತೊಳೆಯುವ ಹಾಗೆ ಮನೆಗೆ ಒಂದ ತಕ್ಷಣವೇ ಸಂಪೂರ್ಣವಾಗಿ ತೊಳೆಯಿರಿ.

ಬಿಗಿಯಾದ ಕೂದಲು

ಬಿಗಿಯಾದ ಕೂದಲು

ಕೂದಲಿಗೆ ಹಾಕಿದ ಬ್ಯಾಂಡ್ ಅಥವಾ ಪಿನ್ ಗಳನ್ನು ಆದಷ್ಟು ಬೇಗ ತೆಗೆದು ಕೂದಲನ್ನು ಸಡಿಲವಾಗಿ ಬಿಡಿ. ದೀರ್ಘ ಸಮಯದ ವರೆಗೆ ಕೂದಲನ್ನು ಬಿಗಿಯಾಗಿ ಕಟ್ಟಿದರೆ ಕೂದಲಿನ ಬೇರುಗಳಿಗೆ ಹಾನಿಯಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಬಿಗಿಯಾದ ಜಡೆ ಹಾಕಿ ಮಲಗಬೇಡಿ

ಬಿಗಿಯಾದ ಜಡೆ ಹಾಕಿ ಮಲಗಬೇಡಿ

ಸಾಮಾನ್ಯವಾಗಿ ಸಾಕಷ್ಟು ಮಹಿಳೆಯರು ಮಲಗುವ ಮೊದಲು ಜಡೆ ಹೆಣೆದು ಮಲಗುತ್ತಾರೆ. ಇದು ಕೂದಲು ಉದುರಲು ಪ್ರಮುಖ ಕಾರಣ. ಮಲಗುವ ಮುನ್ನ ಕೂದಲನ್ನು ಹಾಗೆಯೇ ಸಡಿಲವಾಗಿ ಬಿಡಿಸಿ ಮಲಗಿ. ಇದು ಕೂದಲು ಬೆಳೆಯಲು ಸಹಾಯವಾಗುತ್ತದೆ.

ಕೂದಲಿಗೆ ಬ್ಲೀಚ್ ಮಾಡಿಸಬೇಡಿ

ಕೂದಲಿಗೆ ಬ್ಲೀಚ್ ಮಾಡಿಸಬೇಡಿ

ಬೇಸಿಗೆಯಲ್ಲಿ ಕೂದಲಿಗೆ ನೇರವಾಗಿ ರಾಸಾಯನಿಕ ಚಿಕಿತ್ಸೆ, ಬ್ಲೀಚ್ ಮಾಡಿಸುವುದನ್ನು ತಪ್ಪಿಸಿ. ಇದು ಕೂದಲನ್ನು ಶುಷ್ಕವನ್ನಾಗಿಸುತ್ತದೆ. ನಿಮ್ಮ ಕೂದಲನ್ನು ಪುನರ್ಯೌವನಗೊಳಿಸು ಮತ್ತು ಕೂದಲು ಹಾನಿಯನ್ನು ಸರಿಪಡಿಸಲು ಕೆಲವು ಸಮಯದ ವರೆಗೆ ಸಹಜವಾಗಿ ಕೂದಲು ಬೆಳೆಯಲು ಅವಕಾಶ ನೀಡಿ.

ನೈಸರ್ಗಿಕವಾದ ಶ್ಯಾಂಪೂ, ಸೋಪ್ ಗಳನ್ನೇ ಬಳಸಿ

ನೈಸರ್ಗಿಕವಾದ ಶ್ಯಾಂಪೂ, ಸೋಪ್ ಗಳನ್ನೇ ಬಳಸಿ

ಶ್ಯಾಂಪೂವನ್ನು ಆಯ್ಕೆಮಾಡುವ ಮುನ್ನ ಚೆನ್ನಾಗಿ ಯೋಚಿಸಿ. ಅತ್ಯಂತ ಪ್ರಭಲವಾದ ಶ್ಯಾಂಪೂ ನಿಮ್ಮ ಕೂದಲನ್ನು ಒರಟು, ಶುಷ್ಕ ಹಾಗೂ ತುಂಡಾಗಿಸಬಹುದು. ಇಂದು ನೈಸರ್ಗಿಕವಾದ ಹಲವಾರು ಶಾಂಪೂ ಉತ್ಪನ್ನಗಳು ಲಭ್ಯ. ಆದ್ದರಿಂದ ನೈಸರ್ಗಿಕವಾದ ಶ್ಯಾಂಪೂ, ಸೋಪ್ ಗಳನ್ನೇ ಬಳಸಿ.

ಕಂಡೀಷನರ್ ಬಳಸಿ

ಕಂಡೀಷನರ್ ಬಳಸಿ

ಶ್ಯಾಂಪೂವಿನಿಂದ ಕೂದಲನ್ನು ತೊಳೆದ ನಂತರ ಕೂದಲಿನ ತೇವಾಂಶವನ್ನು ಕಾಯ್ದುಕೊಳ್ಳಲು ತಣ್ಣೀರಿನಲ್ಲಿಯೇ ಕೂದಲನ್ನು ತೊಳೆಯಿರಿ. ಕಂಡೀಷನರ್ ನ್ನು ಬಳಸಲು ಮರೆಯಬೇಡಿ. ಇದು ಕೂದಲಿಗೆ ಅಗತ್ಯ ಖನಿಜಗಳನ್ನು ಜೀವಸತ್ವಗಳನ್ನು ಒದಗಿಸುತ್ತದೆ.

ಈ ರಾಸಾಯನಿಕಗಳಿರುವ ಶಾಂಪೂವನ್ನು ಬಳಸದಿರಿ

ಈ ರಾಸಾಯನಿಕಗಳಿರುವ ಶಾಂಪೂವನ್ನು ಬಳಸದಿರಿ

ಐಸೋಪ್ರೊಪೈಲ್ ಮದ್ಯಸಾರ, ಪ್ರೊಪಿಲೀನ್ ಗ್ಲೈಕಾಲ್, ಪಾಲಿಥೇಲಿನ್ ಗ್ಲೈಕೋಲ್

ಕೂದಲಿನ ಸೌಂದರ್ಯ ಸದೃಢತೆಯನ್ನು ಕಾಯ್ದುಕೊಳ್ಳಿ

ಕೂದಲಿನ ಸೌಂದರ್ಯ ಸದೃಢತೆಯನ್ನು ಕಾಯ್ದುಕೊಳ್ಳಿ

ಸೋಡಿಯಮ್ ಲಾರ್ಯಲ್ ಸಲ್ಫೇಟ್ (SLS) ಮತ್ತು ಸೋಡಿಯಂ ಸಲ್ಫೇಟ್, ಡೈಯೇಥನೋಲಮೈನ್(diethanolamine), ಮೋನೋಎಥನೋಲಮೈನ್ (momoethanolamine), ಟ್ರೈಯೇಥನೋಲಮೈನ್ (triethanolamine), ಫಾರ್ಮಾಲ್ಡಿಹೈಡ್ (Formaldehyde) ಇತ್ಯಾದಿ ರಾಸಾಯನಿಕಗಳು ನಿಮ್ಮ ಕೂದಲನ್ನು ಹಾನಿಗೊಳಿಸುತ್ತವೆ.ಕೂದಲು ನೈಸರ್ಗಿಕವಾಗಿ ಅಥವಾ ಸಹಜವಾಗಿ ಒಣಗಲು ಬಿಡಿ. ಇಲ್ಲವಾದರೆ ಕೂದಲು ಶುಷ್ಕವಾಗಿ ಕೂದಲುದುರುವಿಕೆ ಪ್ರಾರಂಭವಾಗುತ್ತದೆ. ನಿಮ್ಮ ಕೂದಲಿನ ಸೌಂದರ್ಯ ಸದೃಢತೆಯನ್ನು ಕಾಯ್ದುಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಆದ್ದರಿಂದ ಮುಂಜಾಗ್ರತೆಯನ್ನು ವಹಿಸಿ ಕೂದಲಿನ ರಕ್ಷಣೆಯನ್ನು ಮಾಡಿ.

 ಮಾನಸಿಕ ಒತ್ತಡ ಒಳ್ಳೆಯದಲ್ಲ

ಮಾನಸಿಕ ಒತ್ತಡ ಒಳ್ಳೆಯದಲ್ಲ

ವಾತಾವರಣದ ಅತೀವ ಒತ್ತಡದಿಂದ ಕೂದಲು ಹಾನಿಗೊಳಗಾಗುತ್ತದೆ ಮತ್ತು ಕೂದಲಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.

 ವಾತಾವರಣದ ಏರುಪೇರಿನಲ್ಲಿ ಕೂದಲಿನ ರಕ್ಷಣೆ

ವಾತಾವರಣದ ಏರುಪೇರಿನಲ್ಲಿ ಕೂದಲಿನ ರಕ್ಷಣೆ

ಅತೀಯಾದ ಉಷ್ಣ ಅಥವಾ ಅತೀವ ತಂಪಾದ ವಾತಾವರಣ ಕೂಡ ಕೂದಲಿಗೆ ಅತ್ಯಂತ ಹಾನಿಕರ.

ದೂಳು ಮತ್ತು ಬೆವರಿನಿಂದ ಕೂದಲಿನ ರಕ್ಷಣೆ ಮಾಡಿ

ದೂಳು ಮತ್ತು ಬೆವರಿನಿಂದ ಕೂದಲಿನ ರಕ್ಷಣೆ ಮಾಡಿ

ಇಂದಿನ ಮಾಲಿನ್ಯದಿಂದಾಗಿ ನಿಮ್ಮ ಕೂದಲಿನ ವಿನ್ಯಾಸ, ಸೌಂದರ್ಯ ಹಾಳಾಗುತ್ತದೆ. ರಾಸಾಯನಿಕ ಪದಾರ್ಥಗಳು ಮತ್ತು ಧೂಳಿನಿಂದಾಗಿ ಕೂದಲು ಹಾನಿಗೊಳಗಾಗುತ್ತದೆ. ಇವುಗಳನ್ನು ತಡೆಯಲು ಮಹಿಳೆಯರು ಸ್ಕಾರ್ಫ್ ಗಳನ್ನು ಬಳಸುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ತಲೆಗೆ ಸ್ಕಾರ್ಫ್ ಕಟ್ಟಿದರೆ ಅತಿಯಾದ ಬೆವರುವಿಕೆಯಿಂದಾಗಿ ಕೂದಲು ಎಣ್ಣೆಯುಕ್ತವಾಗುತ್ತದೆ.

 ಇದ್ದೆ ಕೂದಲನ್ನು ಬಾಚಬೇಡಿ

ಇದ್ದೆ ಕೂದಲನ್ನು ಬಾಚಬೇಡಿ

ಕೂದಲು ಒದ್ದೆಯಾಗಿದ್ದಾಗ ಕೂದಲು ದುರ್ಭಲವಾಗಿರುವುದರಿಂದ ಕೂದಲುದುರುವಿಕೆ ಉಂಟಾಗುವುದು ಸಹಜ. ಆದ್ದರಿಂದ ತಲೆ ಸ್ನಾನದ ನಂತರ ಕೂದಲನ್ನು ಬಾಚುವಲ್ಲಿ ಮುಂಜಾಗ್ರತೆವಹಿಸಿ.

English summary

15 ways to relax your hair

Indian climate, pollution and spending most of your time in air conditioned offices can damage your hair. Give your hair a break! We list out 15 hair care tips that will help de-stress your hair and make it stronger.
X
Desktop Bottom Promotion