For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸಬೇಕೆ?

By Super
|

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಮಹತ್ವದ್ದಿರುತ್ತದೆ.ಕೂದಲು ಬಹಳ ಸೂಕ್ಷ್ಮವಾಗಿರುತ್ತದೆ.ಅದನ್ನು ಸುಂದರವಾಗಿ ಇಟ್ಟುಕೊಳ್ಳಲು ಸಾಕಷ್ಟು ಪ್ರಯೋಗಗಳನ್ನು ಮಾಡಲೇ ಬೇಕು.ವಿವಿಧ ರೀತಿಯ ಕೇಶ ಶೈಲಿಯಿಂದ ನೋಡುಗರ ಗಮನ ಸೆಳೆಯಬೇಕಾದಲ್ಲಿ ಕೂದಲು ಕೂಡ ಅಷ್ಟೇ ಸೊಗಸಾಗಿ ಇರಬೇಕಾಗುತ್ತದೆ.ರಾಸಾಯನಿಕ ವಸ್ತುಗಳನ್ನು ಬಳಸಿ ಕೂದಲನ್ನು ಹಾಳು ಮಾಡಿಕೊಳ್ಳುವುದಕ್ಕಿಂದ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳ ಬಳಕೆಯಿಂದ ಉದ್ದವಾದ,ರೇಷ್ಮೆಯಂತೆ ಹೊಳೆಯುವ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.

ವಯಸ್ಸು ಮತ್ತು ಒತ್ತಡದ ಕಾರಣದಿಂದಾಗಿ ನಾವು ಕೂದಲಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಹುಡುಗಿಯರು ಯಾವಾಗಲೂ ಕೂದಲಿನ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಲೇ ಇರುತ್ತಾರೆ.ಹಲವಾರು ವರ್ಷಗಳಿಂದ ಕೂದಲಿನ ಉದುರುವಿಕೆಗೆ ಪರಿಹಾರ ಮತ್ತು ಕೂದಲು ಬೆಳೆಯಲು ಸಾಕಷ್ಟು ವಿಧಾನಗಳನ್ನು ಹುಡುಕುತ್ತಲೇ ಬರುತ್ತಿದೆ.ಆದರೆ ನೀವೇಕೆ ನಿಮ್ಮ ಕೂದಲನ್ನು ರಾಸಾಯನಿಕ ವಸ್ತುವಿಗೆ ನೀಡಬೇಕು? ಅದರಲ್ಲೂ ನೀವು ಸದ್ಯದಲ್ಲೇ ವಧು ಆಗಲಿದ್ದೀರಿ ಎಂದರೆ?. ನಿಮ್ಮ ಕೂದಲಿಗೆ ರಾಸಾಯನಿಕ ಶಾಂಪೂ ಬಳಸಿದರೆ ಅದಕ್ಕೆ ಉತ್ತರವಾಗಿ ನಿಮಗೆ ದೊರೆಯುವುದು ಮಂದ,ನಿರ್ಜೀವ ಕೂದಲುಗಳು ಮಾತ್ರ.ಆದ್ದರಿಂದ ನಾವಿಲ್ಲಿ ನೈಸರ್ಗಿಕವಾಗಿ ಕೂದಲನ್ನು ಹೇಗೆ ಸುಂದರವಾಗಿ ಕಾಪಾಡಿಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದೇವೆ.

1.ಮೊಟ್ಟೆಯ ಮಾಸ್ಕ್

1.ಮೊಟ್ಟೆಯ ಮಾಸ್ಕ್

ಪ್ರೋಟೀನ್, ಸೆಲೆನಿಯಮ್, ಪಾಸ್ಪರಸ್, ಸತು, ಕಬ್ಬಿಣ, ಸಲ್ಫರ್ ಮತ್ತು ಅಯೋಡಿನ್ ಇವೆಲ್ಲ ಮೊಟ್ಟೆಯಲ್ಲಿ ಇರುವುದರಿಂದ,ಮೊಟ್ಟೆ ಕೂದಲು ಉದುರುವಿಕೆಯನ್ನು ತಡೆಯಲು ಉತ್ತಮವಾದುದು.ಜೊತೆಗೆ ಮೊಟ್ಟೆ ಕೂದಲನ್ನು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ.ಇದಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಮಿಶ್ರ ಪಡಿಸಿದರೆ ನಿಮಗೆ ಅತ್ಯುತ್ತಮ ಹೇರ್ ಪ್ಯಾಕ್ ದೊರೆಯುತ್ತದೆ.

ಅಪ್ಲೇ ಮಾಡುವ ವಿಧಾನ:ಮೊಟ್ಟೆಯ ಬಿಳಿ ಭಾಗ,ಒಂದು ಚಮಚ ಆಲಿವ್ ಎಣ್ಣೆ ಮತ್ತು ಜೇನನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ಇದನ್ನು ನೆತ್ತಿಯ ಬುಡದಿಂದ ಹಚ್ಚುತ್ತಾ ಬನ್ನಿ.ನಂತರ ಒಂದು ಗಂಟೆ ಹಾಗೆ ಬಿಡಿ.ನಂತರ ತಣ್ಣನೆಯ ನೀರಿನಲ್ಲಿ ಶಾಂಪೂ ಬಳಸಿ ತೊಳೆಯಿರಿ.ಆಲಿವ್ ಎಣ್ಣೆ ನಿಮ್ಮ ಒಣ ಕೂದಲಿಗೆ ಹೊಸ ಚೈತನ್ಯ ತುಂಬುತ್ತದೆ.

2.ಆಲೂ ಜ್ಯೂಸ್

2.ಆಲೂ ಜ್ಯೂಸ್

ಆಲೂ ಜ್ಯೂಸ್ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಕೂದಲನ್ನು ಹೆಚ್ಚು ಒತ್ತೊತ್ತಾಗಿ ಬೆಳೆಸುತ್ತದೆ.ನಿಮ್ಮ ಕೂದಲು ಸ್ವಾಭಾವಿಕವಾಗಿ ಬೆಳೆಯುವುದನ್ನು ನೋಡಬೇಕು ಎಂದರೆ ಸ್ವಲ್ಪ ಆಲೂ ಜ್ಯೂಸ್ ಬಳಸಬೇಕು.

ವಿಧಾನ:ಆಲೂಗಡ್ಡೆಯಿಂದ ಜ್ಯೂಸ್ ತಯಾರಿಸಿಕೊಳ್ಳಿ ಮತ್ತು ನಿಮ್ಮ ನೆತ್ತಿಯ ಮೇಲೆ ಇದನ್ನು ಹಚ್ಚಿ 15 ನಿಮಿಷ ಬಿಡಿ.ನಂತರ ತೊಳೆಯಿರಿ.ಅಲೂವಿನಲ್ಲಿರುವ ವಿಟಮಿನ್ ಬಿ ಕೂದಲನ್ನು ಉದ್ದ ಮತ್ತು ಬಲಯುವವಾಗಿ ಮಾಡುತ್ತದೆ.

3.ಮೆಹಂದಿ ಪ್ಯಾಕ್

3.ಮೆಹಂದಿ ಪ್ಯಾಕ್

ಪ್ರಸಿದ್ಧ ನೈಸರ್ಗಿಕ ಕಂಡಿಷನರ್ ಆದ ಮೆಹಂದಿಯನ್ನು 'ಹೇರ್ ಅಲ್ಕೆಮಿಸ್ಟ್' ಎಂದೇ ಕರೆಯುತ್ತಾರೆ. ಇದು ಬಿಳಿ ಮತ್ತು ನಿರ್ಜೀವ ಕೂದಲಿಗೆ ಹೊಳಪನ್ನು ನೀಡುತ್ತದೆ.ಇದು ಕೂದಲು ಬೆಳೆಯಲು ಬೇರುಗಳ ಮೇಲೆ ಕೆಲಸ ಮಾಡುತ್ತದೆ.

ಅಪ್ಲೇ ಮಾಡುವ ವಿಧಾನ:ಒಂದು ಕಪ್ ಹೆನ್ನಾ ಪುಡಿಗೆ ಅರ್ಧ ಕಪ್ ಮೊಸರನ್ನು ಹಾಕಿ ಬೆರೆಸಿ.ಒಂದೆರಡು ಗಂಟೆ ಹಾಗೇ ಬಿಡಿ.ನಂತರ ನಿಮ್ಮ ತಲೆಗೆ ಹಚ್ಚಿ ಸಂಪೂರ್ಣ ಒಣಗುವವರೆಗೆ ಬಿಡಿ ನಂತರ ತೊಳೆಯಿರಿ.

4.ತೆಂಗಿನ ಹಾಲು

4.ತೆಂಗಿನ ಹಾಲು

ತೆಂಗಿನ ಹಾಲು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಅಗತ್ಯ ಕೊಬ್ಬು ಜೊತೆಗೆ ಪ್ರೋಟೀನ್ ಅಂಶ ಹೇರಳವಾಗಿದೆ.ಇದು ಕೂದಲು ಉದುರುವಿಕೆ ಮತ್ತು ಸೀಳುವಿಕೆಯನ್ನು ತಡೆಯುತ್ತದೆ.

ಅಪ್ಲೇ ಮಾಡುವ ವಿಧಾನ:ತೆಂಗಿನ ಹಾಲನ್ನು ನಿಮ್ಮ ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಿ ಮತ್ತು ಒಂದು ರಾತ್ರಿ ಹಾಗೇ ಇಡಿ.ಮಾರನೆಯ ದಿನ ತಲೆ ಸ್ನಾನ ಮಾಡಿ.

5.ಗ್ರೀನ್ ಟೀ

5.ಗ್ರೀನ್ ಟೀ

ಹಸಿರು ಚಹಾದಲ್ಲಿ ನಿರೋಧಕ ಗುಣಗಳು ಹೆಚ್ಚಿರುವುದರಿಂದ ಕೂದಲ ಸಮಸ್ಯೆಯನ್ನು ಬಗೆಹರಿಸುತ್ತದೆ.ಇದರಲ್ಲಿ ಪಾಲಿಫಿನಾಲ್ ಗಳು ಸಮೃದ್ಧವಾಗಿ ಇರುವುದರಿಂದ ಕೂದಲು ಬೆಳೆಯಲು ಇದು ಸಹಕರಿಸುತ್ತದೆ.

ಅಪ್ಲೇ ಮಾಡುವ ವಿಧಾನ:2 ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ನೆನೆಸಿಡಿ ಮತ್ತು ಇದನ್ನು ಕೂದಲಿನ ಬುಡದಲ್ಲಿ ಹಚ್ಚಿ.ಜೊತೆಗೆ ಪ್ರತಿದಿನ ಗ್ರೀನ್ ಟೀ ಕುಡಿಯುವುದನ್ನು ಅಳವಡಿಸಿಕೊಳ್ಳಿ.ಇದು ಕೂದಲು ಉದುರುವುದನ್ನು ತಡೆಯುತ್ತದೆ.

6.ನೆಲ್ಲಿಕಾಯಿ

6.ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಸಿ ಅಂಶವಿದೆ.ಇದು ಕೂದಲು ಬೆಳೆಯಲು ಸಹಕರಿಸುತ್ತದೆ.

ಅಪ್ಲೇ ಮಾಡುವ ವಿಧಾನ:ನೆಲ್ಲಿಕಾಯಿ ಪುಡಿ ಮತ್ತು ನಿಂಬು ರಸವನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ.ಇದನ್ನು ಕೂದಲಿನ ಬುಡಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ.ನಂತರ ಬಿಸಿ ನೀರಿನಲ್ಲಿ ತೊಳೆಯಿರಿ.ಜೊತೆಗೆ ಪ್ರತಿದಿನ ನೆಲ್ಲಿ ಎಣ್ಣೆಯನ್ನು ಕೂದಲಿಗೆ ಹೆಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

7.ದ್ರಾಕ್ಷಿ ಬೀಜದ ಎಣ್ಣೆ

7.ದ್ರಾಕ್ಷಿ ಬೀಜದ ಎಣ್ಣೆ

ಈ ತೈಲ ಕೂದಲು ಬೆಳೆಯಲು ಪ್ರಚೋದಿಸುತ್ತದೆ ಮತ್ತು ಕೂದಲನ್ನು ನವೀಕರಿಸುತ್ತದೆ.ಗುಂಗುರು ಕೂದಲು ಹೊಂದಿದವರಿಗೆ ಇದು ಹೆಚ್ಚು ಸೂಕ್ತ.

8.ಅಲೊವೇರ ಮತ್ತು ಜೇನು

8.ಅಲೊವೇರ ಮತ್ತು ಜೇನು

ಅಲೋವೆರಾದಲ್ಲಿ ವಿಟಮಿನ್ ಎ, ಬಿ, ಇ, ಸೆಲೆನಿಯಂ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ.ಇದು ಕೂದಲಿನ ಕಂಡಿಷನರ್ ನಂತೆ ಕೆಲಸ ಮಾಡುತ್ತದೆ ಮತ್ತು ತಲೆ ಹೊಟ್ಟನ್ನು ಹೋಗಲಾಡಿಸುತ್ತದೆ.

ಅಪ್ಲೇ ಮಾಡುವ ವಿಧಾನ:ಕೂದಲಿನ ಬುಡಕ್ಕೆ ಆಲೋವೆರ ರಸವನ್ನು ಹಚ್ಚಿ ಒಂದು ರಾತ್ರಿ ಹಾಗೇ ಬಿಡಿ.ಮಾರನೆಯ ದಿನ ಕೂದಲನ್ನು ತೊಳೆಯಿರಿ.ಆಲೋವೆರ ವನ್ನು ಜೇನಿನೊಂದಿಗೆ ಸಮಪ್ರಮಾಣದಲ್ಲಿ ಬೆರೆಸಿ ಕೂಡ ಬಳಸಬಹುದು.ಕೂದಲ ಬುಡಕ್ಕೆ ಹಚ್ಚಿ,30 ನಿಮಿಷ ಹಾಗೇ ಬಿಡಿ.ನಂತರ ತಣ್ಣನೆಯ ನೀರಿನಲ್ಲಿ ಕೂದಲು ತೊಳೆಯಿರಿ.

9.ಓಟ್ ಮೀಲ್ ಹೇರ್ ಪ್ಯಾಕ್

9.ಓಟ್ ಮೀಲ್ ಹೇರ್ ಪ್ಯಾಕ್

ಓಟ್ಸ್ ಹಿಟ್ಟು ಒಂದು ನೈಸರ್ಗಿಕ ಮೊಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.ಇದು ಕೂದಲನ್ನು ಮೃದುವಾಗಿಸಿ,ಹೊಳೆಯುವಂತೆ ಮಾಡುವುದರ ಜೊತೆಗೆ ತಲೆಹೊಟ್ಟನ್ನು ಹೋಗಲಾಡಿಸುತ್ತದೆ.

ಅಪ್ಲೇ ಮಾಡುವ ವಿಧಾನ:ಓಟ್ಸ್ ಹೇರ್ ಪ್ಯಾಕ್ ಮಾಡಲು ಅರ್ಧ ಕಪ್ ಓಟ್ಸ್ ಗೆ 2 ಟೀ ಚಮಚ ಬಾದಾಮಿ ಎಣ್ಣೆ ಮತ್ತು ಕಾಲು ಲೋಟ ಹಾಲನ್ನು ಮಿಶ್ರ ಮಾಡಿ.ಇದನ್ನು ಕೂದಲಿನ ಬೇರಿಗೆ ಹೆಚ್ಚಿ.20 ನಿಮಿಷ ಬಿಟ್ಟು ಬಿಸಿ ನೀರಿನಲ್ಲಿ ತೊಳೆಯಿರಿ.ಇದನ್ನು ಹಚ್ಚುವ ಮೊದಲು ನಿಮ್ಮ ಕೂದಲು ಸಿಕ್ಕು ಮುಕ್ತವಾಗಿ,ಒಣಗಿರುವುದನ್ನು ಖಚಿತ ಪಡಿಸಿಕೊಳ್ಳಿ.

10.ಈರುಳ್ಳಿ ರಸ

10.ಈರುಳ್ಳಿ ರಸ

ಈರುಳ್ಳಿಯಲ್ಲಿರುವ ಸಲ್ಪರ್ ಅಂಶ ಇರುವುದರಿಂದ ಇದು ರಕ್ತ ಸಂಚಲನವನ್ನು ಸುಗಮವಾಗಿಸುತ್ತದೆ ಮತ್ತು ನೆತ್ತಿ ಶುಭ್ರವಾಗಿರಲು ಸಹಾಯಕವಾಗುತ್ತದೆ.

ಅಪ್ಲೇ ಮಾಡುವ ವಿಧಾನ:ಈರುಳ್ಳಿಯನ್ನು ಸಣ್ಣ ಭಾಗವಾಗಿ ಕತ್ತರಿಸಿ ಅದರಿಂದ ರಸವನ್ನು ತೆಗೆಯಿರಿ.ಇದನ್ನು ನೆತ್ತಿಗೆ ಹಚ್ಚಿ.35 ರಿಂದ 45 ನಿಮಿಷದವರೆಗೆ ಬಿಡಿ.ನಂತರ ಶಾಂಪೂ ಹಾಕಿ ತೊಳೆಯಿರಿ.ಈರುಳ್ಳಿ ಸ್ವಲ್ಪ ಘಾಟು ವಾಸನೆ ಇರುವುದರಿಂದ ಜೇನು ಅಥವಾ ರೋಸ್ ವಾಟರ್ ಅನ್ನು ಮಿಶ್ರ ಮಾಡಿ ಬಳಸಬಹುದು.

11.ಆಪಲ್ ಸೈಡರ್ ವಿನೆಗರ್

11.ಆಪಲ್ ಸೈಡರ್ ವಿನೆಗರ್

ವಿನಗರ್ ಕೂದಲಿನಲ್ಲಿ ಸಮತೋಲನ ಕಾಪಾಡಲು ಸಹಕರಿಸುತ್ತದೆ.ಇದರಲ್ಲಿರುವ ಆಮ್ಲ ಗುಣ ಕೂದಲ ನವೀಕರಣ ಮತ್ತು ನಿರ್ವಹಣೆಯನ್ನು ಮಾಡಿ ಕೂದಲು ಬೇಗ ಬೆಳೆಯುವಂತೆ ಮಾಡುತ್ತದೆ.ಇದು ಕೂದಲ ಎಳೆಗಳನ್ನು ಹೊಳೆಯುವಂತೆ ಮಾಡಿ ಬಲಯುತವಾಗಿಸುತ್ತದೆ.ಕೂದಲಿನಿಂದ ರಾಸಾಯನಿಕ ವಸ್ತುಗಳನ್ನು ತೆಗೆಯುತ್ತದೆ.

ಅಪ್ಲೇ ಮಾಡುವ ವಿಧಾನ:ಆಪಲ್ ಸೈಡರ್ ವಿನೆಗರ್ ಅನ್ನು ನೀರಿನೊಂದಿಗೆ ಸಮಪ್ರಮಾಣದಲ್ಲಿ ಮಿಶ್ರ ಮಾಡಿ.ಇದನ್ನು ತಲೆಗೆ ಶಾಂಪೂ ಬಳಸಿದ ನಂತರ ಬಳಸಿ.ಇದು ಆರೋಗ್ಯಕರ ಕೂದಲನ್ನು ನೀಡುತ್ತದೆ.

12.ನಿಂಬು ರಸ

12.ನಿಂಬು ರಸ

ವಿನೆಗರ್ ನಂತೆಯೇ ನಿಂಬು ಕೂಡ ಕೂದಲಿನಲ್ಲಿ ಪಿ ಎಚ್ ಮಟ್ಟವನ್ನು ಕಾಪಾಡಿ ಕೂದಲು ಬೆಳೆಯಲು ಸಹಕರಿಸುತ್ತದೆ.

ಅಪ್ಲೇ ಮಾಡುವ ವಿಧಾನ:ಬಾದಾಮಿಯನ್ನು ರಾತ್ರಿ ನೆನೆಸಿಡಿ. ಬೆಳಗ್ಗೆ ಸಿಪ್ಪೆ ತೆಗೆದು ನುಣ್ಣಗೆ ಅರೆಯಿರಿ.ಅದಕ್ಕೆ 2 ಹನಿ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚಿ.20 ನಿಮಿಷದ ನಂತರ ತೊಳೆಯಿರಿ.

13.ಸರಿಯಾಗಿ ತಿನ್ನಿ ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳಿ

13.ಸರಿಯಾಗಿ ತಿನ್ನಿ ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳಿ

ಸಾಕಷ್ಟು ಹಣ್ಣು,ತರಕಾರಿ,ಮಾಂಸ ಮತ್ತು ಮೀನನ್ನು ತಿನ್ನಿ.ಸರಿಯಾದ ಪ್ರಮಾಣದ ಕೊಬ್ಬನ್ನು ಪಡೆಯಿರಿ ಮತ್ತು ಎಣ್ಣೆ ಪದಾರ್ಥಗಳ ಬಳಕೆ ಕಡಿಮೆ ಮಾಡಿ.ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಸಿ,ಕಬ್ಬಿಣದ ಅಂಶ ಇವುಗಳನ್ನು ಪದೆದುಕೊಂಡಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಿ.ಒತ್ತಡ ಕೂದಲ ಸಮಸ್ಯೆಗೆ ಮುಖ್ಯ ಕಾರಣವಾಗುತ್ತದೆ.ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.ತಾಜಾ ಗಾಳಿ ಪಡೆಯಿರಿ ಮತ್ತು ಪ್ರತಿದಿನ ವ್ಯಾಯಾಮ ಮಾಡಿ.ಜೊತೆಗೆ ಸಾಕಷ್ಟು ನಿದ್ದೆ ಮಾಡಿ ಮತ್ತು ಆರೋಗ್ಯಯುತ ಜೀವನ ನಡೆಸಿ.

14.ಸ್ಟೈಲ್ ನಿಂದ ಕೂದಲಿಗೆ ಹಾನಿಯಾಗುವುದನ್ನು ತಡೆಯಿರಿ

14.ಸ್ಟೈಲ್ ನಿಂದ ಕೂದಲಿಗೆ ಹಾನಿಯಾಗುವುದನ್ನು ತಡೆಯಿರಿ

ಕೂದಲಿಗೆ ವಿವಿಧ ಸ್ಟೈಲ್ ಮಾಡುವುದರಿಂದ ಹಾನಿಗೊಳಗಾಗುತ್ತದೆ.ಯಾಂತ್ರಿಕ ಕರ್ಲಿಂಗ್, ನೇರವಾಗಿಸುವಿಕೆ,ರಾಸಾಯನಿಕ ಬ್ಲೀಚ್ ಮತ್ತು ಬಣ್ಣ ಬಳಸುವಿಕೆ ಅಥವಾ ಅನುಚಿತವಾದ ಪ್ರಮಾಣದಲ್ಲಿ ಜೆಲ್ ಬಳಸುವುದರಿಂದ ಕೂದಲು ಹಾನಿಗೊಳಗಾಗುತ್ತದೆ.ಯಾವಾಗಲೂ ಸೂಕ್ಷ್ಮವಾಗಿ ನಿಮ್ಮ ಕೂದಲನ್ನು ಬಾಚಣಿಕೆಯಿಂದ ಬಾಚಿ.ಕೂದಲನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ.

ಶೈನಿ ಕೂದಲು ನಿಮ್ಮದಾಗಿಸಿ

ಶೈನಿ ಕೂದಲು ನಿಮ್ಮದಾಗಿಸಿ

ಈಗ ನಿಮಗೆ ನಿಮ್ಮ ಕೂದಲನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ತಿಳಿದಿದೆ.ಇಂದಿನಿಂದಲೇ ಇದನ್ನು ಪ್ರಾರಂಭಿಸಿ ಮತ್ತು ಉದ್ದವಾದ ಹೊಳೆಯುವ ಕೂದಲಿನಿಂದ ಇತರರು ಅಸೂಯೆ ಪಡುವಂತೆ ಮಾಡಿ.

English summary

15 Natural Ways to Get Long and Shiny Hair

Why should you sacrifice your hair quality with chemical options, especially if you are a soon-to-be bride. Experimenting with harmful chemicals will only leave your hair dull, frizzy and lifeless. That is why, we have combined 15 powerful natural remedies to speed up your hair growth and combat hair problems.
Story first published: Wednesday, September 11, 2013, 18:15 [IST]
X
Desktop Bottom Promotion