ಕೂದಲು ಉದುರುವುದನ್ನು ತಡೆಯುವ 13 ಟಾನಿಕ್

Subscribe to Boldsky

ಏನು ನಿಮ್ಮ ಕೂದಲು ಉದುರುವುದಕ್ಕೆ ಶುರುವಾಗಿದೆಯೇ? ಆದರ ಚಿಂತನೆಯಲ್ಲೇ ಇದ್ದೀರಾ? ಆದರ ಪರಿಹಾರಕ್ಕೆ ಭಯಬಿದ್ದು ಕೂದಲಿನ ಚಿಕಿತ್ಸೆಗೆ ಸಂಭಂದಿಸಿದಂತೆ ದುಬಾರಿ ಸೆಲೂನ್ ಗಳಿಗೆ ಹೋಗುವ ಯೋಚನೆಯಲ್ಲಿದ್ದೀರಾ? ಹಾಗೆ ಹೋದರೆ ಕೂದಲುದುರುವುದನ್ನು ತಡೆಯಬಹುದೆಂಬ ಕಲ್ಪನೆಯಲ್ಲಿದ್ದೀರ?  ಕೂದಲು ಉದುರುವುದಕ್ಕೆ ಸಲೂನ್ ಗಳಲ್ಲಿ  ಮದ್ದಿಲ್ಲ.  ಅದಕ್ಕೆ ಮದ್ದು ನಿಮ್ಮ ಮನೆಯಲ್ಲಿಯೇ ಇದ್ದು ಅವುಗಳಿಂದ  ಕೂದಲು ಉದುರುವುದನ್ನು ತಡೆಹಿಡಿಯಬಹುದು.

ಮೊದಲನೆಯದಾಗಿ ಕೂದಲಿನ ನಷ್ಟಕ್ಕೆ ಕಾರಣಗಳೇನು  ಎಂದು ಪತ್ತೆ ಮಾಡಬೇಕು. ಬಹಳಷ್ಟು ಅಧ್ಯಯನಗಳ ಪ್ರಕಾರ  ಕೂದಲು ಕಳೆದು ಉದುರುವುದಕ್ಕೆ ಸಾಮಾನ್ಯ ಕಾರಣಗಳು ಈ ರೀತಿ ಕಂಡುಬಂದಿವೆ.

*ಅಸಮರ್ಪಕ ಆಹಾರ,
*ಯೋಗ್ಯ ಜೀವಸತ್ವಗಳ ಕೊರತೆ,
*ಅನುವಂಶಿಕ (Genetic) ಅಂಶಗಳು,
*ವಿಪರೀತ ಒತ್ತಡ, ಆತಂಕ ಮತ್ತು ಚಿಂತೆಗಳು,
*ಟೈಫಾಯಿಡ್ ಮುಂತಾದ ದೀರ್ಘಕಾಲದ ಅನಾರೋಗ್ಯ, ರಕ್ತಹೀನತೆ, ಭೇದಿ, ಕಾಮಾಲೆ, ಇತ್ಯಾದಿ,ಕಡಿಮ ರಕ್ತಪರಿಚಲನೆ, ಮತ್ತು ಅಶುಚಿಯಾದ ತಲೆಬುರುಡೆಗಳು (ನೆತ್ತಿ).

ನಿಮ್ಮ ಸಮಸ್ಯೆಗಳ ಮೂಲ ಏನೆಂದು ಒಮ್ಮೆ ಗೊತ್ತಾದರೆ ಸಮಸ್ಯೆಯನ್ನು ಎದುರಿಸಲು ಸುಲಭವಾಗುತ್ತದೆ. ಇಂತಹ ನಿರಾಶೆಯ ಸ್ಥಿತಿಯಲ್ಲಿಯೂ ಕೂಡ ನೀವು ನೈಸರ್ಗಿಕ ಪದ್ದತಿಗಳನ್ನು ಅವಲಂಬಿಸಿದರೆ ಸಂಪೂರ್ಣವಾಗಿ ಸಮಸ್ಯೆಯನ್ನು ಎದುರಿಸಬಹುದು. ರಾಸಾಯನಿಕ ಉತ್ಪನ್ನಗಳನ್ನು ದಯವಿಟ್ಟು ನಂಬಬೇಡಿ. ಯಾಕೆಂದರೆ ಅದರ ಉಪಯೋಗಕ್ಕಿಂತಾ ಹಾನಿಯೇ ಹೆಚ್ಚು. ನಿಮ್ಮ ಆತಂಕಕ್ಕೆ ಕೊನೆ ಹಾಕಲು ನಿಮ್ಮ ಕೂದಲು ಉದುರುವುದನ್ನು ಕಡಿಮೆಮಾಡಲು ಇದೋ ಇಲ್ಲಿದೆ 13 ವಿವಿಧ ಟಾನಿಕ್ ಗಳು:

1.ಅಗಸೆದ ಬೀಜ

 ಒಂದು ಲೋಟ ನೀರಿನಲ್ಲಿ ಒಂದು ಅಥವ ಎರಡು ಚಮಚ ಅಗಸೆದ ಬೀಜ (Flaxseed) ಬೀಜವನ್ನು ಹಾಕಿ, ಚೆನ್ನಾಗಿ ಕಲಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ನಿಮ್ಮ ಕೂದಲ ಬೆಳವಣಿಗೆಗೆ ಅಗತ್ಯವಾದ ಒಮೆಗಾ 3 ಆಸಿಡ್ ದೊರೆಯುತ್ತದೆ.

2. ಆಮ್ಲ ರಸ

ಪ್ರತಿದಿನವೂ ಬೆಳಗ್ಗೆ ಮೊದಲು ಆಮ್ಲ ರಸವನ್ನು ಕುಡಿಯಿರಿ.  ಇದು  ತೂಕವನ್ನು ಕಮ್ಮಿ ಮಾಡಲು   ಕೂಡ ಸಹಕಾರಿ.

 

 

ಬಾದಾಮಿ

3. ಪ್ರತಿ ರಾತ್ರಿ ನೀರಿನಲ್ಲಿ 5 ಬಾದಾಮಿ ನೆನೆಸಿಟ್ಟು ಮಾರನೆ ದಿನ ಬೆಳಗ್ಗೆ ಸಿಪ್ಪೆಬಿಡಿಸದೇ ತಿನ್ನಿರಿ.

4. ಕೂದಲಿನ ಪೋಷಣೆ

ನಿಮ್ಮ ನೆತ್ತಿಗೆ ಸರಿಯಾದ ಪೋಷಣೆಯ ಅಗತ್ಯವಿದೆ. ಅದಕ್ಕಾಗಿ ಮಜ್ಜಿಗೆ, ನಿಂಬೆ ರಸ, ತೆಂಗಿನ ನೀರು ಈ ದ್ರವಗಳನ್ನು ಸಾಕಷ್ಟು ಕುಡಿಯಿರಿ. ಕನಿಷ್ಠ 8 - 10 ಲೋಟ ನೀರನ್ನು ಪ್ರತಿದಿನವೂ ಕುಡಿಯಿರಿ.

5.ದ್ವಿದಳಧಾನ್ಯ

ದಿನಾ  5 ಮೊಳಕೆಯೊಡೆದಿರುವ ದ್ವಿದಳಧಾನ್ಯವನ್ನು ತಿಂದರಂತೂ ಬಹಳ ಒಳ್ಳೆಯದು.

6. ಪ್ರೊಟೀನ್

 ಕೋಳಿ ಮತ್ತು ಕೋಳಿಮೊಟ್ಟೆಯಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಪ್ರತಿದಿನವೂ ತಿನ್ನಿರಿ.

7. ಕೆಫೀನ್ ಕಮ್ಮಿಮಾಡಿ

 ಪ್ರತಿದಿನ ತೆಗೆದುಕೊಳ್ಳುವ ಕಾಪಿ ಮತ್ತು ಟೀ ಪ್ರಮಾಣವನ್ನು ಕಡಿಮೆಮಾಡಿ.

8. ನಿಂಬೆರಸ

ನೀವು ಕೂದಲನ್ನು ತೊಳೆದುಕೊಳ್ಳುವ ಕೊನೇ ಸಮಯದಲ್ಲಿ ಒಂದು ಟೀ ಚಮಚ ನಿಂಬೆರಸದಿಂದ ನೆನೆಸಿ ತೊಳೆದುಕೊಳ್ಳಿ. ಇದರಿಂದ ನಿಮ್ಮ ಕೂದಲು ಹೊಳೆಯುವುದಲ್ಲದೆ ತಲೆಹೊಟ್ಟು ಉತ್ಪತ್ತಿಯಾಗುವುದನ್ನು ತಡೆಯುತ್ತದೆ.

9.ಹಾಲು

  ಗರಿಷ್ಟ ಪ್ರಯೋಜನ ಪಡೆಯಲು ಎರಡು ಲೋಟ ಕೆನೆತೆಗೆದ ಹಾಲನ್ನು ಕುಡಿಯಿರಿ.

10. ನೆನೆಸಿದ ಮೆಂತ್ಯವನ್ನು ಪೇಸ್ಟ್

ನೆನೆಸಿದ ಮೆಂತ್ಯವನ್ನು ಪೇಸ್ಟ್ ಮಾಡಿಕೊಂಡು ಪ್ರತಿ ವಾರಕ್ಕೊಮ್ಮೆ ನೆತ್ತಿಯಮೇಲೆ ಹಚ್ಚಿ ಅರ್ಧಗಂಟೆಯ ನಂತರ ಸ್ನಾನಮಾಡಿ. ಹಾಗೆಯೇ ಖಾಲಿಹೊಟ್ಟೆಯಲ್ಲಿ ಮೆಂತ್ಯವನ್ನು ಹಿಂದಿನ ದಿನ ರಾತ್ರಿ ನೆನೆಸಿದ ನೀರನ್ನು ಕುಡಿಯಿರಿ.

 

 

11. ಹಣ್ಣುಗಳು

 ಹಿಂದಿನ ಕಾಲದಲ್ಲಿ ಸಾಧುಗಳು ಕೇವಲ ಹಣ್ಣುಗಳನ್ನು ಅವಲಂಬಿಸಿ ಜೀವನವನ್ನು ಸಾಗಿಸುತ್ತಿದರೆಂದು ನಿಮಗೆ ಗೊತ್ತಿರಬಹುದು. ಅವರೆಲ್ಲರೂ ಅಷ್ಟು ಉದ್ದನೆಯ ಕೂದಲನ್ನು ಹೊಂದಿದ್ದರು ಎಂಬುದು ಆಶ್ಚರ್ಯವೇನಿಲ್ಲ! ಕನಿಷ್ಟಪಕ್ಷ ದಿನವೂ ಸ್ಟ್ರಾಬೆರ್ರಿ, ಬಾಳೆಹಣ್ಣು, ಸೇಬು, ಮಾವಿನ ಹಣ್ಣು, ಸಪೋಟ ಮಾತ್ತು ದ್ರಾಕ್ಷಿಗಳು ಸೇರಿದಂತೆ 2 ಅಥವಾ 3 ಹಣ್ಣುಗಳನ್ನು ಸೇವಿಸಿರಿ.

12. ಹಸಿರು ತರಕಾರಿ

ಹೆಚ್ಚು ಹೆಚ್ಚು ತರಕಾರಿಗಳನ್ನು ತಿನ್ನಿರಿ ಮತ್ತು ಕಬ್ಬಿಣಾಂಶವಿರುವ ಹಸಿರು ತರಕಾರಿ, ವಿಶೇಷವಾಗಿ ಪಾಲಕ್ ಸೊಪ್ಪನ್ನು ಸೇವಿಸಿರಿ.

 

 

13. ಮಾಂಸಾಹಾರ

ಕೆಂಪು ಹಸಿಮಾಂಸದಿಂದ ದೂರವಿದ್ದು, ಬಿಳಿ ಮಾಂಸ ತಿನ್ನಿರಿ. ಮೀನು, ಕೋಳಿ, ಮತ್ತು ಕೋಳಿಮೊಟ್ಟೆಗಳ ಸೇವನೆಯಿಂದ ನಿಮ್ಮ ಕೂದಲಿನ ಮೇಲೆ ಅದ್ಭುತ ಪರಿಣಾಮಕಾರಿಯಾಗುವುದು.

 

 

 

 

Story first published: Monday, August 5, 2013, 17:00 [IST]
English summary

13 Food Types For Healthy Hair

Well, panicking and running around to expensive salons for hair treatment might seem a brilliant idea, but the truth is that you can manage to get a hold of the situation back at your home alone. In such a way to help you here are few tips.
Please Wait while comments are loading...
Subscribe Newsletter