For Quick Alerts
ALLOW NOTIFICATIONS  
For Daily Alerts

ಕೂದಲು ತುಂಡಾಗುವಿಕೆಯನ್ನು ತಡೆಗಟ್ಟಲು 10 ವಿಧಾನಗಳು

By Super
|

ಸುಂದರವಾದ ಕೂದಲು ಪ್ರತಿಯೊಬ್ಬರ ಗಮನ ಸೆಳೆಯುತ್ತದೆ.ಆದರೆ ಕೂದಲನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ಕೂಡ ಮುಖ್ಯ.ಕೂದಲ ಸೌದರ್ಯ ಹೆಚ್ಚಿಸಲು ಸಮತೋಲಿತ ಆಹಾರದ ಜೊತೆಗೆ ಸಾಕಷ್ಟು ಕಾಳಜಿಯ ಅವಶ್ಯಕತೆ ಕೂಡ ಇದೆ.ಇತ್ತೀಚಿಗೆ ನಾವು ಬಳಸುವ ಶಾಂಪೂ,ಜೊತೆಗೆ ಬ್ಯೂಟಿ ಪಾರ್ಲರ್ ಗಳಲ್ಲಿ ಬಳಸುವ ಸಾಧನಗಳಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಅಧಿಕವಾಗಿರುತ್ತದೆ.ಇದರಿಂದ ಕೂದಲು ಉದುರುವುದು,ಸೀಳು ಒಡೆಯುವುದು,ತುಂಡಾಗುವುದು ಮುಂತಾದವು ಪ್ರಾರಂಭವಾಗುತ್ತದೆ.ಇದು ಕೂದಲಿನ ಸೌಂದರ್ಯವನ್ನು ಸಂಪೂರ್ಣವಾಗಿ ಕೆಡಿಸಿಬಿಡುತ್ತವೆ.

ಕೂದಲು ತುಂಡಾಗುವುದು ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲೂ ಕಾಡುವ ಸಮಸ್ಯೆಗಳು.ಆದರೆ ನಮಗೆ ಅದನ್ನು ಹೇಗೆ ನಿರ್ವಹಿಸುವುದು ಎಂಬುದು ತಿಳಿದಿರುವುದಿಲ್ಲ.ಕೂದಲು ತುಂಡಾಗುವುದು ನೈಸರ್ಗಿಕ ಸೌಂದರ್ಯ ಮತ್ತು ಕೂದಲ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.ಈ ರೀತಿ ಆಗುವುದಕ್ಕೆ ಮುಖ್ಯ ಕಾರಣವೆಂದರೆ ಕೂದಲನ್ನು ಹೇಗೆ ಆರೈಕೆ ಮಾಡಬೇಕು ಎಂಬುದು ನಮಗೆ ತಿಳಿದಿಲ್ಲದಿರುವುದು.ಒಮ್ಮೆ ಕೂದಲು ತುಂಡಾಗಲು ಪ್ರಾರಂಭಿಸಿದರೆ ಅದು ಹಲವಾರು ವರ್ಷಗಳವರೆಗೆ ಮುಂದುವರೆಯುತ್ತದೆ.

ರಾಸಾಯನಿಕ ಬಳಕೆ ಇಲ್ಲದೆ ಕೂದಲು ತುಂಡಾಗುವುದನ್ನು ತಡೆಯಲು ತಜ್ಞರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.

1.ವಾರದಲ್ಲಿ 2-3 ಬಾರಿ ಮಾತ್ರ ತಲೆ ಸ್ನಾನ ಮಾಡಿ

1.ವಾರದಲ್ಲಿ 2-3 ಬಾರಿ ಮಾತ್ರ ತಲೆ ಸ್ನಾನ ಮಾಡಿ

ಪ್ರತಿದಿನ ಕೂದಲನ್ನು ತೊಳೆಯುವುದರಿಂದ ಕೂದಲಿನ ಅರೋಗ್ಯ ಹಾಳಾಗುತ್ತದೆ,ಕೂದಲು ಸೀಳು ಒಡೆಯುತ್ತದೆ ಮತ್ತು ಒಣಗುತ್ತದೆ.ನೀವು ಹೆಚ್ಚು ತೊಳೆದಂತೆ ನೆತ್ತಿಯು ಮೆದೋಗ್ರಂಥಿಗಳ ಸ್ರಾವದ ಉತ್ಪತ್ತಿ ಹೆಚ್ಚಿಸುತ್ತದೆ.ಇದು ಕೂದಲು ಹೆಚ್ಚು ಎಣ್ಣೆಯುಕ್ತವಾಗಿ ಕಾಣುವಂತೆ ಮಾಡುತ್ತದೆ.ಇದರಿಂದ ನೀವು ಕೂದಲನ್ನು ಪ್ರತಿದಿನ ತೊಳೆಯಬೇಕಾಗುತ್ತದೆ.ಈ ರೀತಿ ಆಗುವುದನ್ನು ತಡೆಯಲು ವಾರದಲ್ಲಿ 2 ಅಥವಾ 3 ಬಾರಿ ಮಾತ್ರ ತಲೆ ಸ್ನಾನ ಮಾಡಿ.

2.ಸಲ್ಫೇಟ್ ರಹಿತ ಶಾಂಪೂ ಬಳಸಿ!

2.ಸಲ್ಫೇಟ್ ರಹಿತ ಶಾಂಪೂ ಬಳಸಿ!

ದೇಹಕ್ಕೆ ಅಥವಾ ಕೂದಲಿಗೆ ಬಳಸುವ ಡಿಟರ್ಜೆಂಟ್ ಗಳಲ್ಲಿ ನೊರೆ ಬರಲು ಸಾಮಾನ್ಯ ಕಾರಣ ಸಲ್ಫೇಟ್.ಇದು ನಿಮ್ಮ ಕೂದಲಿನ ತೇವಾಂಶ ಕಡಿಮೆ ಮಾಡಿ ಒಣಗಿಸುವಂತೆ ಮಾಡುತ್ತದೆ. ಕೂದಲು ಅತಿ ಹೆಚ್ಚು ಒಣಗುವುದರಿಂದ ತುಂಡಾಗಲು ಪ್ರಾರಂಭವಾಗುತ್ತದೆ.ಆದ್ದರಿಂದ ಸಲ್ಫೇಟ್ ರಹಿತ ಶಾಂಪೂವನ್ನು ಕೂದಲಿಗೆ ಬಳಸಿ.

3.ಯಾವಾಗಲೂ ಕಂಡಿಷನರ್ ಉಪಯೋಗಿಸಿ

3.ಯಾವಾಗಲೂ ಕಂಡಿಷನರ್ ಉಪಯೋಗಿಸಿ

ಕಂಡಿಷನರ್ ಕೂದಲನ್ನು ನುಣುಪಾಗಿ,ಮೃದುವಾಗಿ ಇಡಲು ಸಹಕರಿಸುತ್ತದೆ.ಇದು ಕೂದಲ ತೇವಾಂಶವನ್ನು ಕಾಪಾಡಿ ಕೂದಲಿಗೆ ಬಲ ನೀಡುತ್ತದೆ.ನೀವು ಪ್ರತಿ ಬಾರಿ ಶಾಂಪೂ ಹಾಕಿ ಕೂದಲನ್ನು ಸ್ವಚ್ಚಗೊಳಿಸಿದಾಗ ಕೊನೆಯಲ್ಲಿ ಕೂದಲಿಗೆ ಕಂಡಿಷನರ್ ಹಾಕುವುದನ್ನು ಮರೆಯಬೇಡಿ ( ನೆತ್ತಿಯ ಬುಡದಲ್ಲಿ ಕಂಡಿಷನರ್ ಹಾಕಬಾರದು,ಕೂದಲಿನ ತುದಿಗೆ ಮಾತ್ರ ಇದನ್ನು ಬಳಸಬೇಕು)ಇದರಿಂದ ಕೂದಲು ಬಲವಾಗುತ್ತದೆ.

4.ಕೂದಲನ್ನು ಗಾಳಿಯಲ್ಲಿ ಒಣಗಿಸಿ

4.ಕೂದಲನ್ನು ಗಾಳಿಯಲ್ಲಿ ಒಣಗಿಸಿ

ಕೂದಲನ್ನು ಗಾಳಿಗೆ ಒಣಗಲು ಬಿಡಿ. ಇದು ಆರೋಗ್ಯಕರ ವಿಧಾನ ಕೂಡ.ಡ್ರೈಯರ್ ನಿಂದ ಕೂದಲನ್ನು ಒಣಗಿಸಿಕೊಂಡರೆ ಅದರ ಬಿಸಿ ಗಾಳಿ ಕೂದಲನ್ನು ಇನ್ನಷ್ಟು ಹಾನಿ ಮಾಡುತ್ತದೆ,ಕೂದಲು ಸೀಳುವಿಕೆ ಪ್ರಾರಂಭವಾಗುತ್ತದೆ.ಆದ್ದರಿಂದ ಸಾಧ್ಯವಾದಾಗ ಗಾಳಿಗೆ ಕೂದಲು ಒಣಗಿಕೊಳ್ಳಲು ಬಿಟ್ಟುಬಿಡಿ.

5.ಕೂದಲಿಗೆ ಹೀಟಿಂಗ್ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ

5.ಕೂದಲಿಗೆ ಹೀಟಿಂಗ್ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ

ಕೂದಲಿಗೆ ಹೇರ್ ಡ್ರೈಯರ್,ಸ್ಟ್ರೈಟನರ್,ಕರ್ಲಿಂಗ್ ಐರನ್ಸ್,ಇತರ ಸಾಧನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ.ಇವುಗಳನ್ನು ಬಳಸಲೇಬೇಕಾದ ಅಗತ್ಯ ಇದ್ದಲ್ಲಿ ಕೂದಲಿನ ಹಾನಿಯನ್ನು ಕಡಿಮೆ ಮಾಡಲು ಶಾಖ ರಹಿತ ಸ್ಪ್ರೇ ಯನ್ನು ಮೊದಲು ಉಪಯೋಗಿಸಿ.

6.ಕೂದಲನ್ನು ಪೆರ್ಮ್ ಮಾಡಬೇಡಿ

6.ಕೂದಲನ್ನು ಪೆರ್ಮ್ ಮಾಡಬೇಡಿ

ಗುಂಗುರು ಕೂದಲು ಬಯಸುವವರು ಪೆರ್ಮಿಂಗ್ ಬಳಸುತ್ತಾರೆ.ಆದರೆ ಈ ರಾಸಾಯನಿಕ ವಸ್ತು ಕೂದಲಿನ ಪೌಷ್ಟಿಕತೆಯನ್ನು ಕಡಿಮೆ ಮಾಡುತ್ತದೆ.ಕೂದಲಿಗೆ ಹಾನಿ ಉಂಟುಮಾಡಿ ಇನ್ನಷ್ಟು ತುಂಡಾಗುವಂತೆ ಮಾಡುತ್ತದೆ.ಆದ್ದರಿಂದ ಕೂದಲನ್ನು ಪೆರ್ಮ್ ಮಾಡುವುದನ್ನು ತಡೆಯಿರಿ ಮತ್ತು ಕೂದಲ ಆರೋಗ್ಯ ಕಾಪಾಡಿಕೊಳ್ಳಿ.

7.ಆಗಾಗ ಟ್ರಿಮ್ ಮಾಡಿಸಿಕೊಳ್ಳಿ

7.ಆಗಾಗ ಟ್ರಿಮ್ ಮಾಡಿಸಿಕೊಳ್ಳಿ

ಕೂದಲು ತುಂಡಾಗುವುದನ್ನು ತಡೆಯಲು ಆಗಾಗ ಕೂದಲನ್ನು ಟ್ರಿಮ್ ಮಾಡಿಸಿಕೊಳ್ಳುವುದು ಉತ್ತಮ.ಕೂದಲು ಬೆಳೆದಂತೆ ಸೀಳು ಒಡೆಯಲು ಪ್ರಾರಂಭವಾಗುತ್ತದೆ,ಕೂದಲಿಗೆ ಹಾನಿಯಾಗುತ್ತದೆ.ಸೀಳು ಒಡೆಯುವುದನ್ನು ತಡೆಯಲು ಆಗಾಗ ಟ್ರಿಮ್ ಮಾಡಿಸಿಕೊಳ್ಳಿ.

8.ಕೂದಲು ಒದ್ದೆ ಇರುವಾಗ ಬಾಚಬೇಡಿ

8.ಕೂದಲು ಒದ್ದೆ ಇರುವಾಗ ಬಾಚಬೇಡಿ

ಕೂದಲು ಒದ್ದೆ ಇರುವಾಗ ಕೂದಲನ್ನು ಬಾಚುವುದು ಅತಿದೊಡ್ಡ ತಪ್ಪು.ಕೂದಲು ಒದ್ದೆ ಇರುವಾಗ ಹೈಡ್ರೋಜನ್ ಬಾಂಡ್ ಇರುವುದಿಲ್ಲ ಇದು ಕೂದಲು ಇನ್ನಷ್ಟು ಹಾನಿಯಾಗಲು,ಕೂದಲು ಉದುರಲು ಕಾರಣವಾಗುತ್ತದೆ.ಆದ್ದರಿಂದ ಕೂದಲು ಒದ್ದೆ ಇರುವಾಗ ಬಾಚಿ ಕೂದಲು ಉದುರುವಂತೆ ಮಾಡಿಕೊಳ್ಳಬೇಡಿ.

9.ಕೂದಲಿಗೆ ಬಣ್ಣ ಹಚ್ಚಬೇಡಿ

9.ಕೂದಲಿಗೆ ಬಣ್ಣ ಹಚ್ಚಬೇಡಿ

ಕೂದಲ ಬಣ್ಣವನ್ನು ಬದಲಿಸಲು ಪೆರಾಕ್ಸೈಡ್ ಅಥವಾ ಅಮೋನಿಯಾ ದ ಅಗತ್ಯವಿರುತ್ತದೆ.ಇದು ಕೂದಲು ಸೀಳುವಿಕೆಗೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.ಆದ್ದರಿಂದ ಈ ರೀತಿಯ ರಾಸಾಯನಿಕ ವಸ್ತುಗಳ ಬಳಕೆ ಮಾಡುವ ಬದಲು ನೈಸರ್ಗಿಕ ವಸ್ತುಗಳನ್ನು ಹುಡುಕಿಕೊಳ್ಳಿ.

10.ತೆಂಗಿನ ಎಣ್ಣೆಯ ಮಸಾಜ್ ಮರೆಯಬೇಡಿ

10.ತೆಂಗಿನ ಎಣ್ಣೆಯ ಮಸಾಜ್ ಮರೆಯಬೇಡಿ

ಸಾವಿರಾರು ವರ್ಷಗಳಿಂದ ಭಾರತೀಯರು ತೆಂಗಿನ ಎಣ್ಣೆಯ ಮಸಾಜ್ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.ತೆಂಗಿನ ಎಣ್ಣೆಯನ್ನು ನೆತ್ತಿಗೆ ಸರಿಯಾಗಿ ಹಚ್ಚಿ ,ವಾರದಲ್ಲಿ ಕನಿಷ್ಠ 2 ಬಾರಿ ಮಸಾಜ್ ಮಾಡುವುದರಿಂದ ಕೂದಲು ಬಲಯುತವಾಗಿ ಬೆಳೆಯುತ್ತದೆ.

English summary

10 Ways To Reduce Hair Breakage

Hair breakage is extremely common in both men and women. Unfortunately many of us do not know how to manage or treat this condition. Hair breakage affects the natural beauty and growth of your hair.
X
Desktop Bottom Promotion