For Quick Alerts
ALLOW NOTIFICATIONS  
For Daily Alerts

ಕೂದಲಿನ ಇತಿಹಾಸದಲ್ಲಿ ತಿಳಿಯಬೇಕಾದ 10 ಅಂಶಗಳಿವು!

|

ನಿಮಗೆ ನಿಮ್ಮ ಕೂದಲಿನ ಇತಿಹಾಸ ಗೊತ್ತಿದೆಯೇ? ಇದೇನಿದು ಕೂದಲಿನ ಇತಿಹಾಸ? ನನ್ನ ಕೂದಲಿನ ಇತಿಹಾಸ ತಿಳಿಯಲು ಕೂದಲೇನು ಐತಿಹಾಸಿಕ ಪ್ರಸಿದ್ಧ ವಸ್ತುವೇ? ಎಂದು ನಿಮಗೆ ಅಚ್ಚರಿ ಉಂಟಾಗಬಹುದು. ನನ್ನ ಕೂದಲು ಅಮ್ಮನ ಅಥವಾ ಅಪ್ಪನ ಅಥವಾ ನನ್ನ ಅಜ್ಜಿಯ ಕೂದಲಿನಂತೆ ಎಂದು ನಾವೆಲ್ಲಾ ಹೇಳುತ್ತೇವೆ. ನಮ್ಮ ಕೂದಲಿನ ಗುಣ ವಂಶಪಾರಂಪರ್ಯವಾಗಿ ಬಂದದ್ದು ಎಂದು ನೀವು ಒಪ್ಪಿಕೊಳ್ಳುವುದಾದರೆ ಮಾತ್ರ ಮುಂದೆ ಓದಿ.

ಕೂದಲಿನ ಇತಿಹಾಸ ತಿಳಿದರೆ ಅದನ್ನು ಆರೈಕೆ ಮಾಡುವುದು ಸುಲಭ. ಮನೆಯಲ್ಲಿ ಅಜ್ಜನಿಗೆ ಬಕ್ಕ ತಲೆ ಇದ್ದು, ಅಪ್ಪನಿಗೂ ಬಕ್ಕ ತಲೆ ಉಂಟಾದರೆ ನಿಮಗೂ ಬರುವ ಸಾಧ್ಯತೆ ಇದೆ. ಇದನ್ನು ಮೊದಲೇ ಗುರುತಿಸಿ, ಕೂದಲಿನ ಆರೈಕೆ ಮಾಡಿದರೆ ಬಕ್ಕ ತಲೆ ಉಂಟಾಗುವುದನ್ನು ತಡೆಯಬಹುದು. ಹೀಗೆ ಅನೇಕ ಕೂದಲಿನ ಸಮಸ್ಯೆಗೆ ಪರಿಹಾರ ಕೂದಲಿನ ಮೂಲ ಗುಣವನ್ನು ತಿಳಿಯುವುದು.

ಕೂದಲಿನಲ್ಲಿ ಕಂಡು ಬರುವ ಈ ಕೆಳಗಿನ ಗುಣಗಳು ಬಹುತೇಕ ವಂಶಪಾರಂಪರ್ಯವಾಗಿ ಬಂದಂತಹ ಗುಣಗಳಾಗಿವೆ.

ಹಣೆ ದೊಡ್ಡದಾಗಿ ಕಾಣುವುದು

ಹಣೆ ದೊಡ್ಡದಾಗಿ ಕಾಣುವುದು

ಹಣೆಯಲ್ಲಿ ಕೂದಲು ಕಮ್ಮಿಯಾದರೆ ಹಣೆ ದೊಡ್ಡದಾಗಿ ಕಾಣುತ್ತದೆ. ಇದು ವಂಶಪಾರಂಪರ್ಯವಾಗಿ ಬಂದಂತಹ ಗುಣವಾಗಿರುತ್ತದೆ. ಈ ರೀತಿಯ ಕೂದಲಿರುವವರು ಹಿಂದೆಕ್ಕೆ ಬಾಚುವ ಬದಲು ಹಣೆ ದೊಡ್ಡದಾಗಿ ಕಾಣದಂತೆ ಹೇರ್ ಸ್ಟೈಲ್ ಮಾಡಬೇಕು.

ಕೂದಲಿನ ಬಣ್ಣ

ಕೂದಲಿನ ಬಣ್ಣ

ನಮ್ಮಲ್ಲಿ ಹೆಚ್ಚಿನವರಿಗೆ ಕೂದಲಿನ ಬಣ್ಣ ವಂಶಪಾರಂಪರ್ಯವಾಗಿ ಬಂದಿರುತ್ತದೆ. ನೈಸರ್ಗಿಕವಾದ ಕೂದಲಿನ ಬಣ್ಣದಷ್ಟು ಆಕರ್ಷಕವಾಗಿ, ಕಲರ್ ಮಾಡಿದ ಕೂದಲು ನಿಮ್ಮ ಮುಖದ ಅಂದ ಹೆಚ್ಚಿಸುವುದಿಲ್ಲ.

 ಕೂದಲಿನ ಗುಣ

ಕೂದಲಿನ ಗುಣ

ನಿಮ್ಮ ಕೂದಲು ಯಾವ ಗುಣವನ್ನು ಹೊಂದಿದೆ ಅಂದರೆ ನೇರ ಕೂದಲೇ? ಗುಂಗುರು ಕೂದಲೇ? ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಪ್ರತಿಯೊಂದು ಬಗೆಯ ಕೂದಲಿಗೂ ಆರೈಕೆಯ ವಿಧಾನ ಭಿನ್ನವಾಗಿರುತ್ತದೆ. ನೇರ ಕೂದಲನ್ನು ಚಿಕ್ಕ ಹಲ್ಲಿನ ಬಾಚಣಿಕೆಯಿಂದ ಬಾಚಬಹುದು, ಆದರೆ ಗುಂಗುರು ಕೂದಲನ್ನು ಬಾಚಲು ದೊಡ್ಡ ಹಲ್ಲಿನ ಬಾಚಣಿಕೆ ಒಳ್ಳೆಯದು.

ಕೂದಲಿನ ಸಮಸ್ಯೆ

ಕೂದಲಿನ ಸಮಸ್ಯೆ

ಕೆಲವೊಂದು ಕೂದಲಿನ ಸಮಸ್ಯೆ ವಂಶಪಾರಂಪರ್ಯವಾಗಿ ಬರುತ್ತದೆ. ಕೂದಲು ತೆಳ್ಳಗಾಗಿ ಬಕ್ಕ ತಲೆ ಉಂಟಾಗುವುದು, ಅಕಾಲಿಕ ನೆರಿಗೆ ಮುಂತಾದವುಗಳು. ಮನೆಯ ಹಿರಿಯರಲ್ಲಿ ಈ ಸಮಸ್ಯೆ ಕಂಡು ಬಂದರೆ ನೀವೂ ಕೂಡ ನಿಮ್ಮ ಕೂದಲಿನ ಆರೈಕೆಯತ್ತ ಗಮನ ಕೊಡುವುದು ಒಳ್ಳೆಯದು.

 ಕೃತಕ ಬಣ್ಣದ ಕೂದಲು

ಕೃತಕ ಬಣ್ಣದ ಕೂದಲು

ಕೂದಲಿಗೆ ಕೃತಕ ಬಣ್ಣ ಹಚ್ಚಿದರೆ ಅದು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುವುದು. ಕೂದಲಿಗೆ ಕೃತಕ ಬಣ್ಣ ಹಚ್ಚುವವರು ಹಚ್ಚಿದ ಬಣ್ಣ ಸಂಪೂರ್ಣವಾಗಿ ಹೋಗುವಷ್ಟು ಕಾಲ ಕೂದಲಿನ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

 ಕೂದಲಿನ ವಿನ್ಯಾಸ

ಕೂದಲಿನ ವಿನ್ಯಾಸ

ನೀವು ಕೇಶ ವಿನ್ಯಾಸ ಮಾಡುವಾಗ ಕೂದಲು ಹಾಳಾಗದಂತೆ ಎಚ್ಚರವಹಿಸಿ. ಕೂದಲಿನ ಮೂಲ ಗುಣ ಗುಂಗುರು ಇದ್ದು ಸ್ಟ್ರೈಟ್ನಿಂಗ್ ಮಾಡಿಸಿದರೆ ಕೂದಲು ಹಾಳಾಗದಂತೆ ಎಚ್ಚರವಹಿಸಿ.

ಎಣ್ಣೆ ಕೂದಲು ಹಾಗೂ ಡ್ರೈ ಕೂದಲು

ಎಣ್ಣೆ ಕೂದಲು ಹಾಗೂ ಡ್ರೈ ಕೂದಲು

ಎಣ್ಣೆ ಕೂದಲಿರುವವರು ಪ್ರತೀದಿನ ತಲೆ ಸ್ನಾನ ಮಾಡಿ ಕೂದಲಿನ ಆರೈಕೆ ಮಾಡಬೇಕು. ಡ್ರೈ ಕೂದಲಿರುವವರು ಆಗಾಗ ಎಣ್ಣೆ ಮಸಾಜ್ ಮಾಡಿ ಆರೈಕೆ ಮಾಡಬೇಕು.

ತಲೆ ಹೊಟ್ಟು

ತಲೆ ಹೊಟ್ಟು

ತಲೆಹೊಟ್ಟು ಒಮ್ಮೆ ಬಂದು ಕಡಿಮೆಯಾದರೆ ಮತ್ತೆ ಬರಲ್ಲ ಅಂತೇನಿಲ್ಲ. ನಿಮ್ಮ ಕೂದಲು ಡ್ರೈಯಾಗಿದ್ದರೂ ಹೊಟ್ಟು ಬರುತ್ತದೆ, ತುಂಬಾ ಎಣ್ಣೆಯಾಗಿದ್ದರೂ ತಲೆ ಹೊಟ್ಟು ಬರುವುದು. ತಲೆ ಹೊಟ್ಟು ಬರುವುದನ್ನು ತಡೆಯಲು ಕೂದಲಿನಲ್ಲಿ ಮಾಯಿಶ್ಚರೈಸರ್ ಆಗಿ ಇಡುವುದು ಒಳ್ಳೆಯದು.

ಬಿಳಿ ಕೂದಲು

ಬಿಳಿ ಕೂದಲು

ಅಕಾಲಿಕ ನೆರೆ ಕೂದಲು ಕೆಲವರಿಗೆ ವಂಶ ಪಾರಂಪರ್ಯವಾಗಿ ಬಂದರೆ ಮತ್ತೆ ಕೆಲವರಿಗೆ ಕೂದಲನ್ನು ಸರಿಯಾಗಿ ಆರೈಕೆ ಮಾಡದೆ ಅಂದರೆ ಕೂದಲಿಗೆ ಕಲರ್ ಹಚ್ಚಿ, ಕೆಮಿಕಲ್ ಇರುವ ಶ್ಯಾಂಪೂ ಬಳಸಿ ಉಂಟಾಗುತ್ತದೆ.

ಕೂದಲಿನ ಬೆಳವಣಿಗೆ

ಕೂದಲಿನ ಬೆಳವಣಿಗೆ

ಉದ್ದ ಕೂದಲಿಗೆ ಸರಿಯಾದ ಆರೈಕೆ, ಕೂದಲಿನ ಆರೋಗ್ಯ ಹೆಚ್ಚಿಸುವ ಆಹಾರಗಳ ಸೇವನೆ ಅವಶ್ಯಕ.

English summary

10 Things To Know In Your Hair History | Tips For Hair Care | ನಿಮ್ಮ ಕೂದಲಿನ ಇತಿಹಾಸ ಗೊತ್ತಿದೆಯೇ? | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Knowing the history of your hair helps you take better care of it. For example, if you know that your father was bald and so was your grandfather, you will know that there is a tendency for baldness in your family.
X
Desktop Bottom Promotion