For Quick Alerts
ALLOW NOTIFICATIONS  
For Daily Alerts

ಕೂದಲು ಸುವಾಸನೆಯಿಂದ ಕೂಡಿರಲು 10 ಟಿಪ್ಸ್

|

ಕೂದಲಿನ ಆರೈಕೆಯೆಂದರೆ ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಕೂದಲು ದುರ್ಗಂಧ ವಾಸನೆ ಬೀರುವುದನ್ನು ತಡೆಯುವುದು ಕೂಡ. ಕೆಲವರ ಕೂದಲು ನೋಡಲು ಆಕರ್ಷಕವಾಗಿ ಕಾಣುತ್ತದೆ, ಆದರೆ ಹತ್ತಿರ ಬಂದಾಗ ಕೆಟ್ಟ ವಾಸನೆ ಬೀರುವುದರಿಂದ ಪಕ್ಕದಲ್ಲಿ ಇರುವವರೆಗೆ ಕಿರಿಕಿರಿಯಾಗುತ್ತದೆ.

ಕೂದಲು ತೊಳೆಯದಿದ್ದರೆ ಮಾತ್ರ ಕೆಟ್ಟವಾಸನೆ ಬೀರುವುದು ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಹಚ್ಚುವ ಹೇರ್ ಡೈ, ಹೇರ್ ಪ್ಯಾಕ್ ನಿಂದಾಗಿ ಕೂದಲು ಕೆಟ್ಟ ವಾಸನೆ ಬೀರಬಹುದು. ಉದಾಹರಣೆಗೆ ಕೂದಲಿಗೆ ಮೊಟ್ಟೆ ಹಾಕಿದರೆ ಒಳ್ಳೆಯದು, ಆದರೆ ಅದನ್ನು ತೊಳೆದರೆ ಕೂಡ ಕೂದಲಿನಿಂದ ವಾಸನೆ ಹೋಗುವುದಿಲ್ಲ, ಹಾಗೇ ಮೆಂತೆ ಹಚ್ಚಿದರೂ ಕೂಡ.

ನಿಮ್ಮ ಕೂದಲಿಗೆ ಯಾವುದೇ ಹಾನಿಯುಂಟಾಗದಂತೆ ಕೂದಲು ಸುವಾಸನೆಯಿಂದ ಕೂಡಿರಲು ಈ ವಿಧಾನಗಳನ್ನು ಬಳಸಬಹುದು:

ಪ್ರತಿನಿತ್ಯ ತಲೆ ಸ್ನಾನ ಮಾಡುವುದು

ಪ್ರತಿನಿತ್ಯ ತಲೆ ಸ್ನಾನ ಮಾಡುವುದು

ಪ್ರತಿನಿತ್ಯ ತಲೆ ಸ್ನಾನ ಮಾಡಬಾರದು ಎಂಬ ಅಭಿಪ್ರಾಯ ಹೆಚ್ಚಿನವರಲ್ಲಿದೆ. ಆದರೆ ಗಿಡ್ಡ ಕೂದಲಿನವರು ಪ್ರತೀದಿನ ತಲೆ ಸ್ನಾನ ಮಾಡುವುದು ಒಳ್ಳೆಯದು. ಇನ್ನೂ ಉದ್ದ ಕೂದಲಿನವರಿಗೆ ತಲೆ ತೊಳೆಯುವುದು ಸ್ವಲ್ಪ ಶ್ರಮದ ಕೆಲಸ. ಆದರೂ 2-3 ದಿನಕ್ಕೊಮ್ಮೆ ತಲೆ ತೊಳೆಯುವುದು ಒಳ್ಳೆಯದು.

ನಿಂಬೆ ಹಣ್ಣು

ನಿಂಬೆ ಹಣ್ಣು

ನಿಂಬೆ ಹಣ್ಣು ಕೂದಲಿಗೆ ಒಳ್ಳೆಯದು, ಕೂದಲು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ. ತಲೆ ಸ್ನಾದ ಬಳಿಕ ನಿಂಬೆ ರಸ ತಿಕ್ಕಿ, ನಂತರ ಬರೀ ನೀರಿನಿಂದ ತೊಳೆದು ತಲೆ ಒರೆಸಿ, ಕೂದಲನ್ನು ಗಾಳಿಯಲ್ಲಿ ಒಣಗಿಸಿ.

ರೋಸ್ ವಾಟರ್

ರೋಸ್ ವಾಟರ್

ನೀರಿಗೆ ರೋಸ್ ದಳಗಳನ್ನು ಹಾಕಿ ಆ ನೀರಿನಲ್ಲಿ ತಲೆ ತೊಳೆಯುವುದರಿಂದಲೂ ಕೂದಲನ್ನು ಸುವಾಸನೆಯಿಂದ ಕೂಡಿರುವಂತೆ ನೋಡಿಕೊಳ್ಳಬಹುದು.

 ಜಾಸ್ಮೀನ್ ಎಣ್ಣೆ

ಜಾಸ್ಮೀನ್ ಎಣ್ಣೆ

ತೆಂಗಿನೆಣ್ಣೆ ಜೊತೆ ಜಾಸ್ಮೀನ್ ಎಣ್ಣೆ ಮಿಕ್ಸ್ ಮಾಡಿ, ಮಸಾಜ್ ಮಾಡಿ, ತಲೆ ತೊಳೆದರೂ ಕೂದಲು ಸುವಾಸನೆಯಿಂದ ಕೂಡಿರುತ್ತದೆ.

ಹೂ ಮುಡಿಯುವುದು

ಹೂ ಮುಡಿಯುವುದು

ತಲೆಯಲ್ಲಿರುವ ಹೂ ಕೂದಲನ್ನು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ.

ದಾಸವಾಳದ ಎಣ್ಣೆ

ದಾಸವಾಳದ ಎಣ್ಣೆ

ಇದು ಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಕೂದಲು ಸುವಾಸನೆಯನ್ನು ಹೊಂದುವಂತೆ ಮಾಡುವುದು.

ಸಾಂಬ್ರಾಣಿ ಹೊಗೆಯಿಂದ ಕೂದಲನ್ನು ಒಣಗಿಸುವುದು

ಸಾಂಬ್ರಾಣಿ ಹೊಗೆಯಿಂದ ಕೂದಲನ್ನು ಒಣಗಿಸುವುದು

ನಿಮ್ಮ ಅಜ್ಜಿ, ನಿಮ್ಮ ಕೂದಲನ್ನು ಸಾಂಬ್ರಾಣಿ ಹೊಗೆ ಹಿಡಿಯುತ್ತಿದ್ದದು ನೆನಪಿದೆಯೇ? ಹೌದು ಈ ರೀತಿ ಕೂದಲನ್ನು ಒಣಗಿಸುವುದರಿಂದ ಕೂದಲು ಆರೋಗ್ಯವಾಗಿ ಸುವಾಸನೆಯಿಂದ ಕೂಡಿರುತ್ತದೆ.

 ಮದರಂಗಿ

ಮದರಂಗಿ

ತಲೆಗೆ ಮದರಂಗಿ ಹಚ್ಚಿದರೆ ಕೂದಲಿನ ಆರೋಗ್ಯ ಕಾಪಾಡುವುದರ ಜೊತೆಗೆ ಕೂದಲು ಸುವಾಸನೆಯಿಂದ ಕೂಡಿರುವಂತೆ ಮಾಡುತ್ತದೆ.

ಟೀ

ಟೀ

ತಲೆಗೆ ಟೀ ಎಲೆಯನ್ನು ಕುದಿಸಿದ ನೀರನ್ನು ಹಚ್ಚಿ ನಂತರ ತಲೆ ಕೂದಲು ಕಪ್ಪಾಗಿ, ಹಿತವಾದ ವಾಸನೆಯಿಂದ ಕೂಡಿರುತ್ತದೆ.

ತಲೆಯನ್ನು ತಂಪಾಗಿ ಇಡಿ

ತಲೆಯನ್ನು ತಂಪಾಗಿ ಇಡಿ

ತಲೆ ಬೆವರಿದರೆ ತೊಳೆದು ಸ್ವಚ್ಛವಾಗಿಡಿ, ಕೂದಲಿನಲ್ಲಿ ಮಾಯಿಶ್ಚರೈಸರ್ ಕಾಪಾಡಿ. ಈ ರೀತಿ ಮಾಡುವುದರಿಂದ ಹಿತವಾದ ಕೂದಲಿನ ವಾಸನೆ ನಿಮ್ಮದಾಗುವುದು.

English summary

10 Natural Ways To Make Hair Smell Good

It is not enough for your hair to look good. Hair must also smell good.Natural methods for making your hair smell good are always safe and effective. So try the following tips to fragrant hair.
X
Desktop Bottom Promotion