For Quick Alerts
ALLOW NOTIFICATIONS  
For Daily Alerts

ಚಿಕ್ಕ ಪ್ರಾಯದಲ್ಲಿ ಕೂದಲು ಬಿಳಿಯಾಗಲು 10 ಕಾರಣಗಳು

By Super
|

ಈಗಿನ ಯುಗದಲ್ಲಿ ನಿಮ್ಮ ಬಾಹ್ಯ ಸೌಂದರ್ಯಕ್ಕೆ ಬಹಳ ಮೌಲ್ಯವಿದೆ. ಹೀಗೆ ಸೌಂದರ್ಯ ಎಂದಾಗ ಮೊದಲು ನೆನಪಾಗುವುದು ನಿಮ್ಮ ಮುಖ ಮತ್ತು ಕೂದಲು. ಕೂದಲು ಕಪ್ಪಗಾಗಿದ್ದರೆ ಅದು ನೋಡಲು ಚೆನ್ನಾಗಿರುತ್ತದೆ ಹಾಗೂ ಅದು ಮುಖ್ಯವೂ ಕೂಡ. ಕೂದಲಿನ ಆರೈಕೆ ಅದಕ್ಕೂ ಮುಖ್ಯವಾಗಿ ಬಿಳಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಸಮಯಕ್ಕೆ ಮೊದಲೂ ಕೂದಲು ಹಣ್ಣಾಗುವುದು ಯಾವುದೇ ಮಹಿಳೆಯ ಎಂದೂ ಬಯಸದ ಒಂದು ವಿಷಯವಾಗಿದೆ. ನೀವು ಇದನ್ನು ತಡೆಯಬಹುದಾದರೆ ಖಂಡಿತ ನೀವಿದನ್ನು ತಿಳಿಯಲು ಬಯಸುತ್ತೀರಿ ಅಲ್ಲವೇ? ಹಾಗಾದರೆ ಇಲ್ಲಿ ನೀಡಲಾದ ಹತ್ತು ಸಮಯಕ್ಕೆ ಮೊದಲೇ ಕೂದಲು ಹಣ್ಣಾಗಲು ಇರುವ ಕಾರಣಗಳನ್ನು ಹಾಗೂ ಅದಕ್ಕೆ ಇರುವ ಪರಿಹಾರಗಳನ್ನು ಓದಿ ನೋಡಿ.

1. ಸರಿಯಲ್ಲದ ಆಹಾರ ಸೇವನೆಯ ಕ್ರಮಗಳು

1. ಸರಿಯಲ್ಲದ ಆಹಾರ ಸೇವನೆಯ ಕ್ರಮಗಳು

ಸಮರ್ಪಕವಾಗಿರದ ಆಹಾರ ಕ್ರಮ ಎಲ್ಲಾ ಪೋಷಕಾಂಶಗಳು ಸರಿಯಾಗಿಲ್ಲದ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಸರಿಯಾಗಿ ಆಹಾರ ಸೇವಿಸದೇ ಇರುವುದು ನಿಮ್ಮನ್ನು ಕೊರತೆಯ ರೋಗಗಳಿಗೆ ಈಡು ಮಾಡುತ್ತದೆ. ಇದು ನಿಮ್ಮ ಚರ್ಮ, ಕೂದಲು ಹಾಗೂ ಹಲ್ಲಿನ ಮೇಲೆ ಪರಿಣಾಮ ಬೀರುತ್ತದೆ.

2. ವಿಟಮಿನ್ ಬಿ12 ರ ನಿರಂತರ ಕೊರತೆ

2. ವಿಟಮಿನ್ ಬಿ12 ರ ನಿರಂತರ ಕೊರತೆ

ವಿಟಮಿನ್ ಬಿ 12 ರ ನಿರಂತರವಾದ ಕೊರತೆ ನಿಮ್ಮ ಕೂದಲು ಬೇಗನೆ ಬೆಳ್ಳಗಾಗುವುದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಬಿ12 ಸಮರ್ಪಕ ಪ್ರಮಾಣದಲ್ಲಿ ಸೇವನೆಯಾಗುತ್ತಿದೆ ಎಂದು ಖಾತ್ರಿ ಪಡಿಸಿ.

3. ಥೈರಾಯ್ಡ್ ಗ್ರಂಥಿ ಸಮರ್ಪಕವಾಗಿ ಕೆಲಸ ಮಾಡದೇ ಇರುವುದು

3. ಥೈರಾಯ್ಡ್ ಗ್ರಂಥಿ ಸಮರ್ಪಕವಾಗಿ ಕೆಲಸ ಮಾಡದೇ ಇರುವುದು

ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಥೈರಾಯ್ಡ್ ಸಿಗದೇ ಇರುವ ಜೊತೆಗೆ ಕೂದಲು ಹಣ್ಣಾಗುವುದಕ್ಕೂ ಕಾರಣವಾಗುತ್ತದೆ. ಥೈರಾಯ್ಡ್ ಗ್ರಂಥಿಯ ಅಸಮರ್ಪಕ ಕೆಲಸ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಹಾಗಾಗಿ ಆಗಾಗ ಇದರ ಬಗ್ಗೆ ನಿಗಾ ವಹಿಸುವುದು ಒಳ್ಳೆಯದು. ಒಂದು ವೇಳೆ ಇದೇ ಕಾರಣದಿಂದ ಕೂದಲು ಬೆಳ್ಳಗಾಗಿದ್ದರೆ ಸರಿಯಾದ ಔಷಧ ಮತ್ತು ಉಪಚಾರದಿಂದ ಇದನ್ನು ಸರಿ ಮಾಡಬಹುದು.

4. ಪಿಟ್ಯುಟರಿ ಗ್ರಂಥಿಯ ಅಸಮರ್ಪಕ ಕೆಲಸ

4. ಪಿಟ್ಯುಟರಿ ಗ್ರಂಥಿಯ ಅಸಮರ್ಪಕ ಕೆಲಸ

ಕೆಲವು ಬಾರಿ ಥೈರಾಯ್ಡ್ ಗ್ರಂಥಿಯಲ್ಲಿ ಸಮಸ್ಯೆಯು ಪಿಟ್ಯುಟರಿ ಗ್ರಂಥಿಯ ಅಸಮರ್ಪಕ ಕೆಲಸದಿಂದಲೂ ಸಾಧ್ಯವಿದೆ. ಹೀಗೆ ಪಿಟ್ಯುಟರಿ ಗ್ರಂಥಿಯು ಪರೋಕ್ಷವಾಗಿ ಕೂದಲು ಬಿಳಿಯಾಗುವುದಕ್ಕೆ ಕಾರಣವಾಗುತ್ತದೆ.

5. ಬಹಳ ಕಾಲದಿಂದ ಹಾಗೂ ಬಹಳವಾಗಿ ಮಾಡುವ ಧೂಮಪಾನ

5. ಬಹಳ ಕಾಲದಿಂದ ಹಾಗೂ ಬಹಳವಾಗಿ ಮಾಡುವ ಧೂಮಪಾನ

ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ನಮಗೆಲ್ಲ ತಿಳಿದಿದೆ ಆದರೆ ಇದು ನಮ್ಮ ಕೂದಲಿಗೂ ಹಾನಿಕರ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಬಹಳವಾಗಿ ಧೂಮಪಾನ ಮಾಡುವುದು ಕೂದಲು ಬೇಗನೇ ಬಿಳಿಯಾಗಲು ಕಾರಣವಾಗಿದೆ ಎಂದು ಹಲವು ಸಂಶೋಧನೆಗಳು ಧೃಡಪಡಿಸಿವೆ. ಹೀಗೆ ಮಾರಣಾಂತಿಕ ಧೂಮಪಾನದಿಂದ ದೂರವಿರಲು ಇಲ್ಲಿದೆ ಇನ್ನೊಂದು ಕಾರಣ.

6. ಮಾಲಿನ್ಯ

6. ಮಾಲಿನ್ಯ

ನೀವು ಇಲ್ಲಿಯತನಕ ಮಾಲಿನ್ಯ ನಿಮ್ಮ ಚರ್ಮದ ಮೇಲಷ್ಟೇ ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದರಬಹುದು ಆದರೆ ಇದು ನಿಮ್ಮ ಕೂದಲಿನ ಮೇಲೂ ಪ್ರಭಾವ ಬೀರುತ್ತದೆ ಎಂದು ನಿಮಗೆ ಯಾರಾದರೂ ಹೇಳಿದ್ದಾರೆಯೇ. ಇದು ಸತ್ಯ. ಇದು ನಿಮ್ಮ ಚರ್ಮಕ್ಕೆ ಎಷ್ಟು ಹಾನಿಕಾರಕವೋ ನಿಮ್ಮ ಕೂದಲಿಗೂ ಅಷ್ಟೇ ಹಾನಿಕಾರಕ.

7. ಕೂದಲಿನ ರಕ್ಷಣೆಯ ಉತ್ಪನ್ನಗಳ ಅತಿಯಾದ ಬಳಕೆ

7. ಕೂದಲಿನ ರಕ್ಷಣೆಯ ಉತ್ಪನ್ನಗಳ ಅತಿಯಾದ ಬಳಕೆ

ಕೂದಲಿನ ಸೌಂದರ್ಯ ವರ್ಧಿಸಲು ಬಳಸುವ ಉತ್ಪನ್ನಗಳನ್ನು ಅತಿಯಾಗಿ ಬಳಸಿದರೆ ಅದೂ ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಹೆಚ್ಚಿರುವ ಯಾವುದೇ ಉತ್ಪನ್ನವನ್ನು(ಉದಾಹರಣೆಗೆ: ಬಣ್ಣವಿರುವ ಹೇರ್ ಡೈ, ಹೇರ್ ಬ್ಲೀಚಿಂಗ್ ಉತ್ಪನ್ನಗಳು, ಕೆಲವು ಶ್ಯಾಂಪೂಗಳು ಮತ್ತು ಕಂಡೀಷನರ್ ಗಳು) ನಿಮ್ಮ ಕೂದಲಿಗೆ ಬಳಸಬೇಡಿ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತನ್ನು ನೆನಪಿನಲ್ಲಿಡಿ. ಹೀಗೆ ಎಷ್ಟು ಸ್ವಾಭಾವಿಕವಾಗಿ ನಿಮ್ಮ ಕೂದಲನ್ನು ಇಡಬಹುದೋ ಅಷ್ಟು ಒಳ್ಳೆಯದು.

8. ಒತ್ತಡ

8. ಒತ್ತಡ

ನೀವು ಯಾವಾಗಲೂ ಒತ್ತಡದ ಜೀವನ ಮಾಡುತ್ತಿದ್ದೀರಾ? ನಿವು ನಿರಂತರ ಮತ್ತು ಅತಿಯಾದ ಒತ್ತಡದ ಬಲಿಪಶುವಾಗಿದ್ದೀರಾ? ಹಾಗಿದ್ದರೆ ನಿಮ್ಮ ಜೀವನ ಶೈಲಿ ನಿಮ್ಮ ಕೂದಲಿನ ಮೇಲೆ ಬಹಳ ಪ್ರಭಾವ ಬೀರುತ್ತದೆ. ಹಾಗಾಗಿ ಆದಷ್ಟು ಆರಾಮವಾಗಿರಲು ಪ್ರಯತ್ನಿಸಿ.

9. ಟೂತ್ ಪೇಸ್ಟ್ ಗಳ ಅತಿಯಾದ ಬಳಕೆ

9. ಟೂತ್ ಪೇಸ್ಟ್ ಗಳ ಅತಿಯಾದ ಬಳಕೆ

ಇದಕ್ಕೆ ಕಾರಣ ನಿಮ್ಮ ಹಲ್ಲುಗಳನ್ನು ಬಿಳಿ ಮಾಡಿಸುವ ಪುಡಿಯಲ್ಲಿರುವ ಇರುವ ಹೈಡ್ರೋಜನ್ ಪೆರಾಕ್ಸೈಡ್. ಇದರ ಅತಿಯಾದ ಬಳಕೆ ಕೂದಲನ್ನು ಬಿಳಿ ಮಾಡುತ್ತದೆ. ನಿಮ್ಮ ದೇಹದಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಹೆಚ್ಚಾದಂತೆ ಇದು ನಿಮ್ಮ ದೇಹದಲ್ಲಿ ಎಂಝೈಮ್ ಅನ್ನು ಹೆಚ್ಚಿಸುತ್ತದೆ ಇದು ಕೂದಲಿನ ಬಣ್ಣಕ್ಕೆ ಕಾರಣವಾಗಿದೆ.

10. ನಿಮ್ಮ ಅನುವಂಶಿಕ ರಚನೆ

10. ನಿಮ್ಮ ಅನುವಂಶಿಕ ರಚನೆ

ಕೊನೆಯದಾಗಿ ನಿಮ್ಮ ಅನುವಂಶಿಕ ರಚನೆಗಳೂ ಇದಕ್ಕೆ ಕಾರಣವಾಗಬಹುದು. ಹಾಗೂ ಕಾರಣ ಇದಾದರೆ ನೀವು ಏನು ಮಾಡಲಾಗದ ಸ್ಥಿತಿಯಲ್ಲಿರುತ್ತೀರಿ. ಕೆಲವು ಜನರಿಗೆ ಇದೇ ಕಾರಣಕ್ಕಾಗಿ ಕೂದಲು ಬೇಗನೆ ಬಿಳಿಯಾಗಿರುತ್ತದೆ ಮತ್ತು ಪರಿಹಾರವೂ ಇರುವುದಿಲ್ಲ.

ಈಗ ನಿಮಗೆ ಕೂದಲು ಸಮಯಕ್ಕೆ ಮೊದಲು ಬೆಳ್ಳಗಾಗಲು ಕಾರಣಗಳು ತಿಳಿದವು. ಈಗ ನಿಮ್ಮ ಕೂದಲಿಗೆ ಇವುಗಳಲ್ಲಿ ಯಾವ ಕಾರಣ ಸರಿಯಾಗಿ ಹೊಂದುತ್ತದೆ ಎಂದು ತಿಳಿದು ಅದರ ಪ್ರಕಾರ ನಡೆದುಕೊಳ್ಳಿ. ಇದಕ್ಕಾಗಿ ನೀವು ನಿಮ್ಮ ವೈದ್ಯರನ್ನು ಬೇಕಾದ ಎಲ್ಲಾ ಸಂದರ್ಭಗಳಲ್ಲಿ ಸಂಪರ್ಕಿಸಿ.

English summary

10 Causes of Premature Graying of Hair | Tips For Hair Care

Premature graying of hair can be any woman’s nightmare. Obviously you want to know all about it so that you can prevent it from happening to you.
 
X
Desktop Bottom Promotion