For Quick Alerts
ALLOW NOTIFICATIONS  
For Daily Alerts

ಉದ್ದ ಮತ್ತು ದಪ್ಪ ಕೂದಲಿಗಾಗಿ ಈ ವಿಟಮಿನ್

|
Vitamin C For Healthy Hair
ಜಾಹೀರಾತುಗಳ ಮೋಡಿಗೆ ರಾಸಾಯನಿಕವಿರುವ ಶ್ಯಾಂಪೂ, ಕಂಡೀಷನರ್ ಬಳಸುವುದು ಟ್ರೆಂಡ್ ಆಗಿದೆ. ಕೂದಲು ಉದ್ದವಿರಬೇಕು, ಆರೋಗ್ಯದಿಂದ ಹೊಳೆಯುತ್ತಿರಬೇಕೆಂಬ ಆಸೆಯಿಂದ ಅಂತಹ ರಾಸಾಯನಿಕ ವಸ್ತುಗಳನ್ನು ಬಳಸುತ್ತೇವೆ.

ಆದರೆ ಅವುಗಳಿಗಿಂತ ವಿಟಮಿನ್ ಸಿ ಇರುವ ಪದಾರ್ಗಳನ್ನು ಬಳಸಿದರೆ ಕೂದಲಿನ ಆರೋಗ್ಯ ಹೆಚ್ಚುವುದು ಮತ್ತು ಕೂದಲು ಉದ್ದವಾಗಿ ಬೆಳೆಯುತ್ತದೆ. ತುಂಬಾ ದೂರ ಪ್ರಯಾಣ ಮಾಡುವಾಗ ವಿಟಮಿನ್ ಸಿ ಇರುವ ಆಹಾರ ತಿಂದರೆ ಸಾಕು ಸುಸ್ತು ಗೊತ್ತಾಗುವುದಿಲ್ಲ. ಆದರೆ ಇದು ತ್ವಚೆ ಮತ್ತು ಕೂದಲಿನ ಆರೋಗ್ಯ ಹೆಚ್ಚಿಸುವಲ್ಲಿ ಹೇಗೆ ಸಹಕಾರಿಯಾಗಿದೆ ಎಂದು ನೋಡೋಣ ಬನ್ನಿ:

ವಿಟಮಿನ್ ಸಿ ಇರುವ ಹಣ್ಣುಗಳಲ್ಲಿ ಆಸೆಟಿಕ್ ಆಮ್ಲ ಮತ್ತು ಸಿಟ್ರಸ್ ಆಮ್ಲ ಎಂಬ ಎರಡು ಆಮ್ಲಗಳಿರುತ್ತವೆ. ಆದ್ದರಿಂದ ನಿಂಬೆ ಹಣ್ಣನ್ನು ಕೂದಲಿನ ಶುಚಿಗೆ ಬಳಸಿದಾಗ ತಲೆಯಲ್ಲಿರುವ ಕೊಳೆಯನ್ನು ಹೋಗಲಾಡಿಸುತ್ತದೆ ಮತ್ತು ಕೂದಲಿನ ಬುಡದಲ್ಲಿ ತೇವಾಂಶ ಇರುವಂತೆ ಮಾಡುತ್ತದೆ. ಇದ್ದರಿಂದಾಗಿ ಕೂದಲಿನ ಬುಡ ಬಲವಾಗುವುದು ಮತ್ತು ಕೂದಲು ಒಣಗುವುದು, ಕವಲೊಡೆಯುವುದು ಮುಂತಾದ ಸಮಸ್ಯೆ ಕಂಡು ಬರುವುದಿಲ್ಲ. ಶ್ಯಾಂಪೂ ಕೊಳ್ಳುವಾಗ ಅಷ್ಟೆ pH ಶ್ಯಾಂಪೂ ಕೊಳ್ಳಬೇಕು.

ಸಲಹೆ: ತಲೆಗೆ ಹೊಟ್ಟಿದ್ದರೆ ಎಣ್ಣೆ ಹಾಕಿ ಮೊಸರಿಗೆ ನಿಂಬೆರಸ ಹಾಕಿ ತಲೆ ಬುಡಕ್ಕೆ ಉಜ್ಜಿ ಅರ್ಧ ಗಂಟೆ ಬಳಿಕ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಹೊಟ್ಟು ಕಮ್ಮಿಯಾಗುತ್ತದೆ. ನಂತರ ತಲೆಯನ್ನು ಚೆನ್ನಾಗಿ ಒಣಗಿಸಿ ನಂತರ ಕೂದಲನ್ನು ಕಟ್ಟಬೇಕು.

ವಿಟಮಿನ್ ಸಿ ತ್ವಚೆ ಆರೈಕೆಗೆ:
ವಿಟಮಿನ್ ಸಿ ಇರುವ ಹಣ್ಣುಗಳಲ್ಲಿ anti-oxidant ಅಧಿಕ ಇರುವುದರಿಂದ ಪರಿಸರ ಮಾಲಿನ್ಯದಿಂದಾಗಿ ತ್ವಚೆ ತನ್ನ ಕಾಂತಿ ಕಳೆದುಕೊಳ್ಳುವುದು, ಕಲೆಗಳು ಕಂಡು ಬರುವುದು ಮುಂತಾದ ಸಮಸ್ಯೆಯನ್ನು ತಪ್ಪಿಸುತ್ತದೆ. ಇದು ತ್ವಚೆಯಲ್ಲಿ ಕೊಲೆಜಿನ್ ಹೆಚ್ಚು ಉತ್ಪತ್ತಿ ಮಾಡುವುದರಿಂದ ಮೊಡವೆ ಬರದಂತೆ ತಡೆಯುತ್ತದೆ ಮತ್ತು 30 ವರ್ಷ ದಾಟುತ್ತಿದ್ದಂತೆ ಮುಖದಲ್ಲಿ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ.

ಹೀಗೆ ತ್ವಚೆ ಮತ್ತು ಕೂದಲಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಸಿ ಆಹಾರಗಳನ್ನು ಪ್ರತಿನಿತ್ಯ ತಿನ್ನಬೇಕು. ದಿನದಲ್ಲಿ ಒಂದು ಬಾರಿ ನಿಂಬೆ ಪಾನಕ ಕುಡಿಯವುದು,
ಕಿತ್ತಳೆ,ಮೂಸಂಬಿಯನ್ನು ಬೆಳಗ್ಗೆ ಮತ್ತು ಸಾಯಾಂಕಾಲ ತಿನ್ನುವುದು, ಸ್ಟ್ರಾಬರಿ ತಿನ್ನುವುದು ಮಾಡಿದರೆ ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಚಿಂತೆ ಮಾಡಬೇಕಾಗಿಲ್ಲ.

English summary

Vitamin C For Healthy Hair | Tips For Beauty | ಆರೋಗ್ಯಕರ ಕೂದಲಿಗಾಗಿ ವಿಟಮಿನ್ ಸಿ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Vitamin-C containing formula can promote hair growth and repair an unhealthy scalp. Free radicals can cause structural damage to the proteins in hair, which can lead to split ends and breakage. Vitamin c food helps to get rid of free radicals from the body and hair.
X
Desktop Bottom Promotion