For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ

|

ಕೂದಲು ಉದುರುವುದು ಅನೇಕರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಅನಾರೋಗ್ಯ, ವಿಟಮಿನ್ ಗಳ ಕೊರತೆ, ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು ಅಥವಾ ph ಸಮತೋಲದಲ್ಲಿ ಇಲ್ಲದಿರುವ ಶ್ಯಾಂಪೂಗಳನ್ನು ಬಳಕೆ ಇವುಗಳು ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ. ಈ ರೀತಿ ಕೂದಲು ಉದುರುವುದನ್ನು ತಡೆಗಟ್ಟಲು ಆದಷ್ಟು ರಾಸಯನಿಕ ಇರುವ ಶ್ಯಾಂಪೂಗಳನ್ನು ಬಳಸಲು ಹೋಗಬಾರದು. ನೈಸರ್ಗಿಕ ಸಾಧನಗಳಾದ ಸೀಗೆಕಾಯಿ, ಅಂಟವಾಳ (ಅಂಟ್ವಾಳ) ಬಳಸಿ ತಲೆಯನ್ನು ಶುಚಿಗೊಳಿಸುವುದು ಒಳ್ಳೆಯದು. ಸ್ವಾಭಾವಿಕವಾಗಿ ದೊರೆಯುವ ಸಾಧನಗಳಿಂದ ನೀವೆ ಶ್ಯಾಂಪೂ ಕೂಡ ತಯಾರಿಸಿಬಹುದಾಗಿದ್ದು, ಈ ರೀತಿ ತಯಾರಿಸಿದ ಶ್ಯಾಂಪೂ ಕೂದಲಿಗೆ ಬಳಸಿದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವುದು. ನೈಸರ್ಗಿಕ ಶ್ಯಾಂಪೂ ಬಳಸುವ ವಿಧಾನ ನೋಡಿ ಇಲ್ಲಿದೆ.

Home Made Shampoo

1. ಅಂಟವಾಳ ಶ್ಯಾಂಪೂ: ಅಂಟವಾಳ ಬಳಸಿ ಕೂದಲಿನ ಪೋಷಣೆ ಮಾಡವುದಷ್ಟೇ ಅಲ್ಲ ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಇದನ್ನು ಬಳಸಿದರೆ ಆ ಸಮಸ್ಯೆಯನ್ನು ಹೋಗಲಾಡಿಸಬಹುದು. 4-5 ಅಂಟವಾಳ ಕಾಯಿಗಳನ್ನು ತೆಗೆದುಕೊಂಡು ಸ್ವಲ್ಪ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಹಾಕಿ ಒಂದು ರಾತ್ರಿ ಬಿಡಬೇಕು. ನಂತರ ಸ್ನಾನ ಮಾಡುವ 20 ನಿಮಿಷ ಮುನ್ನ ಅಂಟವಾಳ ಚೆನ್ನಾಗಿ ಕೈಯಲ್ಲಿ ಹಿಸುಕಿ, ನಂತರ ನೀರನ್ನು ತಲೆಗೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಸ್ನಾನ ಮಾಡುವಾಗ ತಲೆಯನ್ನು ಚೆನ್ನಾಗಿ ಉಜ್ಜಿ ತೊಳೆದರೆ ಕೂದಲು ನುಣುಪಾಗುವುದು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.

2. ಅಡುಗೆ ಸೋಡಾ:
ಅಡುಗೆ ಸೋಡಾ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದನ್ನು ಬಳಸಿ ಕೂದಲಿನಲ್ಲಿರುವ ಕೊಳೆಯನ್ನು ತೆಗೆಯಬಹುದು. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಕಪ್ ನೀರಿಗೆ ಹಾಕಿ ಮಿಶ್ರ ಮಾಡಿ ಚೆನ್ನಾಗಿ ಕೂದಲಿಗೆ ಮಸಾಜ್ ಮಾಡಬೇಕು. ನಂತರ ಅದರಿಂದ ಮೆಲ್ಲನೆ ಮಸಾಜ್ ಮಾಡಿ 10 ನಿಮಿಷದ ಬಳಿಕ ತಲೆ ತೊಳೆದರೆ ಕೊಳೆ ಹೋಗುವುದು, ಕೂದಲು ಆರೋಗ್ಯವನ್ನು ಪಡೆಯುತ್ತದೆ. ದಪ್ಪ ಅಥವಾ ಗುಂಗುರು ಕೂದಲು ಇರುವವರಿಗೆ ಸ್ವಲ್ಪ ಅಧಿಕ ಅಡುಗೆ ಸೋಡಾ ಬೇಕಾಗುವುದು. ಈ ರೀತಿ ಮಾಡಿದಾಗ ಕೂದಲು ತುಂಬಾ ಒಣಗಿದಂತೆ ಭಾಸವಾದರೆ ಅರ್ಥ ಬಕೆಟ್ ನೀರಿಗೆ ಒಂದು ಚಮಚ ವಿನಿಗರ್ ಹಾಕಿ ಕಂಡೀಷನರ್ ಆಗಿ ಬಳಸಿದರೆ ಕೂದಲು ಮೃದುವಾಗುವುದು.

3.ವಿನಿಗರ್ ಮತ್ತು ನೀರು:
2 ಚಮಚ ವಿನಿಗರ್ ಅನ್ನು ಹದ ಬಿಸಿ ನೀರಿನಲ್ಲಿ ಕಲೆಸಿ ಅದನ್ನು ತಲೆಗೆ ಮಸಾಜ್ ಮಡಿ 15-20 ನಿಮಿಷ ಬಿಡಬೇಕು. ಅದರಲ್ಲೂ ಆಪಲ್ ವಿನಿಗರ್ ಸೈಡರ್ ಬಳಸಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಕೂದಲಿನ ಆರೈಕೆ ಒಳ್ಳೆಯದು.

4. ಸೀಗೆಕಾಯಿ: ತಲೆಗೆ ಸೀಗೆಕಾಯಿ ಪುಡಿ ಹಚ್ಚಿ ತೊಳೆದರೆ ಕೂದಲು ಉದುರುವುದು ನಿಂತು ಸೊಂಪಾಗಿ ಬೆಳೆಯುವುದು. ಸೀಗೆಕಾಯಿ ಹಚ್ಚಿದಾಗ ಕೆಲವರಿಗೆ ಕಣ್ಣಿನಲ್ಲಿ ತುರಿಕೆ ಕಂಡು ಬರುತ್ತದೆ. ಆದ್ದರಿಂದ ಕಣ್ಣಿಗೆ ತಾಗಿಸಿದಂತೆ ಹಚ್ಚಿ.

ಸಲಹೆ:
ಸ್ನಾನಕ್ಕೆ ಅರ್ಧ ಗಂಟೆ ಮುಂಚೆ ಕೂದಲಿಗೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ.

English summary

Home Made Shampoo For Hair Care | Tips For Hair Care | ಕೂದಲಿನ ಆರೈಕೆಗೆ ನೈಸರ್ಗಿಕ ಶ್ಯಾಂಪೂ | ಕೂದಲಿನ ಆರೈಕೆಗೆ ಕೆಲ ಸಲಹೆ

If you wish for shiny and silky hair without losing the essential oils then go for home made shampoos. Home made shampoo for dry hair nourishes and moisturise your hair with essential oils and nutrients making it soft, shiny and silky.
Story first published: Thursday, June 14, 2012, 10:58 [IST]
X
Desktop Bottom Promotion