ಕೂದಲಿನ ಆರೋಗ್ಯ ಹೆಚ್ಚಿಸುತ್ತೆ ಈ ಆಹಾರ

By:
Subscribe to Boldsky

ಕೂದಲು ಉದುರುವ ಸಮಸ್ಯೆಯಿದ್ದರೆ ಯಾವ ಶ್ಯಾಂಪೂ ಹಾಕಬೇಕು, ಯಾವ ಎಣ್ಣೆ ಹಚ್ಚಬೇಕು ಎಂದು ಕೇಳುತ್ತೇವೆ ಹೊರತು ಯಾವ ಆಹಾರ ತಿಂದರೆ ಒಳ್ಳೆಯದು ಎಂದು ಕೇಳುವುದಿಲ್ಲ. ಆದರೆ ನಾವು ಸೇವಿಸುವ ಆಹಾರ ಮತ್ತು ಕೂದಲಿನ ಆರೋಗ್ಯಕ್ಕೆ ನಿಕಟ ಸಂಬಂಧ ಇದೆ.  ಆದ್ದರಿಂದ ಸೊಂಪಾದ ಕೂದಲು ಬೇಕೆಂದು ಬಯಸುವವರು ಬಾಹ್ಯವಾಗಿ ಕೂದಲನ್ನು ಆರೈಕೆ ಮಾಡುವುದರ ಜೊತೆಗೆ ಈ ಕೆಳಗಿನ ಆಹಾರ ಕ್ರಮ ಪಾಲಿಸಿದರೆ ಉತ್ತಮ ಪ್ರಯೋಜನ ಪಡೆಯಬಹುದು.

Food For Healthy Hair

ಮೀನು: ಮೀನಿನಲ್ಲಿ ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ. ಸಾಲಾಮೋನ್ ನಂತಹ ಮೀನಿನಲ್ಲಿರುವ ಒಮೆಗಾ 3 ಅಂಶವು ಕೂದಲಿನ ಬುಡ ಒಣಗುವುದನ್ನು ತಡೆಗಟ್ಟುತ್ತದೆ. ಮೀನಿನಲ್ಲಿರುವ ವಿಟಮಿನ್ ಬಿ-12 ಮತ್ತು ಕಬ್ಬಿಣದಂಶ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಚಿಕನ್: ಚಿಕನ್ ಮತ್ತು ಮೊಟ್ಟೆಯಲ್ಲಿ ಪ್ರೊಟೀನ್ ಅಂಶ ಮತ್ತು ವಿಟಮಿನ್ -12 ಇರುವುದರಿಂದ ಇವುಗಳ ಸೇವನೆ ಕೂಡ ಕೂದಲಿನ ಬೆಳಣಿಗೆಗೆ ಒಳ್ಳೆಯದು.

ಹಾಲಿನ ಉತ್ಪನ್ನಗಳು: ಅಧಿಕ ಕೊಬ್ಬಿನಂಶವಿಲ್ಲದ ಹಾಲಿನ ಉತ್ಪನ್ನಗಳನ್ನು ಸೇವಿಸಿದರೆ ಕೂದಲಿಗೂ ಒಳ್ಳೆಯದು, ದೇಹದ ತೂಕ ಕೂಡ ಮಿತಿಯಲ್ಲಿರುತ್ತದೆ.

ನಟ್ಸ್: ಆರೋಗ್ಯಕರ ಕೂದಲಿಗೆ ಸತುವಿನಂಶ ಅವಶ್ಯಕ. ಗೋಡಂಬಿ, ಬಾದಾಮಿಯಲ್ಲಿ ಸತುವಿನಂಶ ಅಧಿಕವಿರುವುದರಿಂದ ಪ್ರತಿದಿನ ಬೆಳಗ್ಗೆ ಇದನ್ನು ತಿನ್ನುವುದು ಒಳ್ಳೆಯದು.

ಫ್ಲಾಕ್ಸ್ ಸೀಡ್ : ಇದು ನೋಡಲು ಹುರುಳಿಕಾಳಿನ ರೀತಿಯಿರುವ ಕಾಳಾಗಿದೆ. ಇದರಲ್ಲೂ ಒಮೆಗಾ 3 ಅಂಶವಿರುವುದರಿಂದ, ಇದರಿಂದ ತಯಾರಿಸಿದ ಆಹಾರ ಸೇವನೆ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸೂರ್ಯಕಾಂತಿ ಬೀಜ: ಸೂರ್ಯ ಕಾಂತಿ ಬೀಜದಲ್ಲಿ ವಿಟಮಿನ್ ಬಿ ಇರುವುದರಿಂದ ಇದನ್ನು ತಿಂಡಿಗಳು ಮಾಡುವಾಗ ಅದರ ಜೊತೆ ಹಾಕಿ ಬಳಸಬಹುದಾಗಿದೆ.

ಆಲೀವ್ ಎಣ್ಣೆ : ಆಲೀವ್ ಎಣ್ಣೆಯಿಂದ ತ್ವಚೆ ರಕ್ಷಣೆ ಮಾಡಬಹುದು, ಕೂದಲಿ ಹಚ್ಚಿದರೆ ತುಂಬಾ ಒಳ್ಳೆಯದು, ಈ ಎಣ್ಣೆಯನ್ನು ಸಲಾಡ್ ಗೆ ಹಾಕಿದರೆ ಕೂದಲು ಮತ್ತು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಿಡ್ನಿ ಬೀನ್ಸ್: ಕಿಡಿ ಬೀನ್ಸ್ ನಲ್ಲಿ ಕಬ್ಬಿಣದಂಶ, ಸತು ಮತ್ತು ವಿಟಮಿನ್ ಬಿ ಇರುವುದರಿಂದ ಕೂದಲು ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯದು.

ಈರುಳ್ಳಿ, ಬೆಳ್ಳುಳ್ಳಿ, ಬೆಣ್ಣೆ ಹಣ್ಣು, ಕ್ಯಾರೆಟ್, ಸಿಹಿಗೆಣಸು, ಕಿತ್ತಳೆ, ಕೊತ್ತಂಬರಿ ಮತ್ತು ಅಧಿಕ ಕ್ಯಾಲ್ಸಿಯಂ ಇರುವ ಆಹಾರಗಳ ಸೇವನೆ ಒಳ್ಳೆಯದು.

ಅಧಿಕ ಖನಿಜಾಂಶವಿರುವ ಹಾರಗಳ ಸೇವನೆ ಮಾಡಬೇಕು, ಅದರ ಜೊತೆ ಕೂದಲಿಗೆ ಉತ್ತಮವಾದ ಆರೈಕೆ ಮಾಡಿದರೆ ಕೂದಲು ಉದುರುವ ಸಮಸ್ಯೆ ಉಂಟಾಗುವುದಿಲ್ಲ.

Story first published: Thursday, July 12, 2012, 16:22 [IST]
English summary

Food For Healthy Hair | Tips For Hair Care | ಕೂದಲಿನ ಆರೋಗ್ಯಕ್ಕೆ ಆಹಾರ | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Usually we think hair care means using good shampoo, doing oil massage, taking care of hair like this. But proper hair care you should take some food to increase the healthiness of your hair.
Please Wait while comments are loading...
Subscribe Newsletter