ಬ್ಯೂಟಿ ಟಿಪ್ಸ್: ಬೆರಳು ಉಗುರುಗಳ ಆರೈಕೆಗೆ 'ಆಲಿವ್ ಎಣ್ಣೆ'

ಒಂದೆರಡು ಚಮಚ ಆಲಿವ್ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಈ ಎಣ್ಣೆಯಲ್ಲಿ ಎಲ್ಲಾ ಉಗುರುಗಳನ್ನು ಮುಳುಗುವಂತೆ ಇಪ್ಪತ್ತು ನಿಮಿಷ ಇಟ್ಟರೆ ಸಾಕು, ಉಗುರಿನ ಬೆಳವಣಿಗೆಗೆ ಬಹಳ ಒಳ್ಳೆಯದು...

By: Arshad
Subscribe to Boldsky

ಆಲಿವ್ ಎಣ್ಣೆ ಆರೋಗ್ಯಕ್ಕೆ ಉತ್ತಮ ಎಂದು ಗೊತ್ತಾದ ಬಳಿಕ ಇದು ನಿಧಾನವಾಗಿ ನಮ್ಮ ಅಡುಗೆಗಳಲ್ಲಿ, ಸಾಲಾಡ್‌ಗಳಲ್ಲಿ ಸ್ಥಳ ಪಡೆದುಕೊಳ್ಳುತ್ತಿದೆ. ಈ ಆರೋಗ್ಯಕರ ಎಣ್ಣೆ ಬರೆಯ ಆಹಾರಗಳ ಮೂಲಕ ಮಾತ್ರವಲ್ಲ, ಸೌಂದರ್ಯವರ್ಧಕದ ರೂಪದಲ್ಲಿಯೂ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಚರ್ಮ, ಕೂದಲು ಹಾಗೂ ಉಗುರುಗಳ ಹೊಳಪು ಮತ್ತು ಬೆಳವಣಿಗೆಗೆ ಈ ಎಣ್ಣೆ ಹೆಚ್ಚಿನ ನೆರವು ನೀಡುತ್ತದೆ. ಉಗುರಿನ ಅಂದ ಹೆಚ್ಚಿಸಲು, ಬೇಕು ಚೆಂದದ ಆರೈಕೆ!

Olive oil

ಇಂದು ಮಾರುಕಟ್ಟೆಯಲ್ಲಿ ಉಗುರುಗಳ ಸೌಂದರ್ಯವನ್ನು ಹೆಚ್ಚಿಸುವ ರಾಸಾಯನಿಕ ಆಧಾರಿತ ಪ್ರಸಾಧನಗಳಿವೆ. ಆದರೆ ಇವು ದುಬಾರಿಯೂ ಆಗಿದ್ದು ಸತತ ಬಳಕೆಯಿಂದ ಹಾನಿಯನ್ನೇ ಉಂಟುಮಾಡುತ್ತವೆ. ಆದ್ದರಿಂದ ಇವುಗಳ ಬದಲಿಗೆ ನಿಸರ್ಗ ನೀಡಿರುವ ಈ ಅದ್ಭುತ ಎಣ್ಣೆಯಿಂದ ಉತ್ತಮ ಬೆಳವಣಿಗೆ ಮತ್ತು ಹೊಳಪನ್ನು ಪಡೆಯಬಹುದು. ನೇಲ್ ಸ್ಪಾ: ಮನೆಯಲ್ಲಿಯೇ ಮಾಡೋಣ ಬಾ

ಸೌಂದರ್ಯತಜ್ಞೆಯರ ಅಪಾರ ಅನುಭವದಿಂದ ಕಂಡುಕೊಂಡ ವಿಷಯಗಳ ಸಂಗ್ರಹವನ್ನು ಕೆಳಗೆ ನೀಡಲಾಗಿದ್ದು ಇವುಗಳನ್ನು ಅನುಸರಿಸುವ ಮೂಲಕ ನೀವೂ ಆಲಿವ್ ಎಣ್ಣೆಯ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು...

Oilve oil

ಆಲಿವ್ ಎಣ್ಣೆಯ ಬಳಕೆಯ ಪ್ರಯೋಜನಗಳೇನು?
ಆಲಿವ್ ಎಣ್ಣೆಯ ನಿಯಮಿತ ಬಳಕೆಯಿಂದ ಉಗುರುಗಳ ಬುಡಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆತು ಉಗುರಿನ ಹೊಳಪು ಹೆಚ್ಚುತ್ತದೆ ಹಾಗೂ ಬೆಳವಣಿಗೆಯೂ ಉತ್ತಮಗೊಳ್ಳುತ್ತದೆ. ಈ ಎಣ್ಣೆಯಲ್ಲಿರುವ ವಿಟಮಿನ್ ಇ ಉತ್ತಮ ತೇವಕಾರಕವಾಗಿದ್ದು ಉಗುರುಗಳ ಬುಡದ ಭಾಗ ಸುಲಭವಾಗಿ ಹೀರಿಕೊಳ್ಳುವಂತಿದೆ. ಇದರೊಂದಿಗೇ ರಕ್ತದ ಮೂಲಕ ಲಭ್ಯವಾದ ಕ್ಯಾಲ್ಸಿಯಂ ಸಹಾ ಹೀರಲ್ಪಟ್ಟು ಉಗುರು ಹೆಚ್ಚು ದೃಢವಾಗುತ್ತದೆ ಹಾಗೂ ಸುಂದರ, ಕಾಂತಿಯುಕ್ತವೂ ಆಗುತ್ತದೆ.

ಆಲಿವ್ ಎಣ್ಣೆಯನ್ನು ಬಳಸುವುದು ಹೇಗೆ?
ಆಲಿವ್ ಎಣ್ಣೆ ವಿಶೇಷವಾಗಿ ಬಿರುಕುಬಿಟ್ಟ ಉಗುರುಗಳಿಗೆ ಉಪಯುಕ್ತವಾಗಿದೆ. ಇದನ್ನು ಬಳಸುವುದೂ ತುಂಬಾ ಸುಲಭ. ಐದೂ ಬೆರಳುಗಳ ಉಗುರುಗಳು ಮುಳುಗಲು ಸಾಧ್ಯವಾಗುವ ಬಟ್ಟಲಲ್ಲಿ ಕೊಂಚ ಆಲಿವ್ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಈ ಎಣ್ಣೆಯಲ್ಲಿ ಎಲ್ಲಾ ಉಗುರುಗಳನ್ನು ಮುಳುಗುವಂತೆ ಇಪ್ಪತ್ತು ನಿಮಿಷ ಇಟ್ಟರೆ ಸಾಕು. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿದರೆ ಉತ್ತಮ ಫಲಿತಾಂಶವನ್ನು ಕೆಲವೇ ದಿನಗಳಲ್ಲಿ ಕಾಣಬಹುದು.

Olive oil

ಆದರೆ ಬರೆ ಎಣ್ಣೆಯಲ್ಲಿ ಮುಳುಗಿಸುವುದರಿಂದ ಮಾತ್ರವೇ ಉಗುರುಗಳು ಗಟ್ಟಿಯಾಗುವುದಿಲ್ಲ, ಬದಲಿಗೆ ಈ ಎಣ್ಣೆಯಿಂದ ದೊರೆತ ಪ್ರಯೋಜನಗಳನ್ನು ಉಳಿಸಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕು.

* ನಿಮ್ಮ ಉಗುರುಗಳನ್ನು ನೀರಿನಲ್ಲಿ ತೋಯುವುದನ್ನು ಆದಷ್ಟು ತಡೆಗಟ್ಟಬೇಕು. ಏಕೆಂದರೆ ನೀರಿನಲ್ಲಿ ತೋಯ್ದಷ್ಟೂ ಉಗುರುಗಳು ಮೃದುವಾಗಿ ಸುಲಭವಾಗಿ ತುಂಡಾಗುತ್ತವೆ. ಒಂದು ವೇಳೆ ಅನಿವಾರ್ಯವಾಗಿ ಉಗುರುಗಳನ್ನು ನೀರಿನಲ್ಲಿ ತೋಯಿಸಲೇಬೇಕಾಗಿದ್ದರೆ ಆ ಬಳಿಕ ಉಗುರುಗಳ ಮೇಲೆ ಒತ್ತಡ ಹೇರಬೇಡಿ. ಹೊಳಪಿನ ಉಗುರುಗಳಿಗಾಗಿ ಯಶಸ್ವಿ ಮನೆಮದ್ದುಗಳು

nail

* ಉಗುರಿನ ಬಣ್ಣ ನಿವಾರಿಸಲು ನೇಲ್ ಪಾಲಿಶ್ ರಿಮೂವರ್ ದ್ರವವನ್ನು ಉಪಯೋಗಿಸುವುದನ್ನು ತಕ್ಷಣ ನಿಲ್ಲಿಸಿ. ಏಕೆಂದರೆ ಇದು ಬಣ್ಣವನ್ನೇನೋ ತೆಗೆಯುತ್ತದೆ, ಜೊತೆಗೆ ಉಗುರಿನಲ್ಲಿರುವ ಆರ್ದ್ರತೆಯನ್ನೂ ಸೆಳೆಯುವ ಮೂಲಕ ತೀರಾ ಒಣಗಿಸಿ ಉಗುರು ಸುಲಭವಾಗಿ ಬಿರುಕು ಬಿಡಲು ನೆರವಾಗುತ್ತದೆ.

nail

* ನಿಮ್ಮ ಊಟ ಆರೋಗ್ಯಕರವಾಗಿರಲಿ. ಬಯೋಟಿನ್ ಅಥವಾ ವಿಟಮಿನ್ B7, ಒಮೆಗಾ ೩ ಕೊಬ್ಬಿನ ಆಮ್ಲ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಅಗಸೆ ಬೀಜ, ಒಣಫಲಗಳು, ಬೀನ್ಸ್, ಮೊಟ್ಟೆ, ಕುಂಬಳ ಬೀಜ, ಬ್ರೋಕೋಲಿ ಮತ್ತು ಹಾಲು ನಿಮ್ಮ ಆಹಾರದ ಭಾಗವಾಗಿರಲಿ. ಉಗುರಿನ ಹಳದಿ ಬಣ್ಣ ಹೋಗಲಾಡಿಸಲು ಟಿಪ್ಸ್

nail

* ಚಳಿಗಾಲದಲ್ಲಿ ಬೆಚ್ಚನೆಯ ಕೈಗವಸು ಧರಿಸಿ. ಇದರಿಂದ ಚರ್ಮ ಹಾಗೂ ಉಗುರುಗಳು ಚಳಿಯಿಂದ ಬಿರುಕುಬಿಡುವ ಸಾಧ್ಯತೆ ಕಡಿಮೆಯಾಗುತ್ತದೆ. ಪಾತ್ರೆ ತೊಳೆಯುವ, ನೆಲ ಒರೆಸುವ ಮೊದಲಾದ ಸಂದರ್ಭದಲ್ಲಿ ರಬ್ಬರ್ ಕೈಗವಸು ಧರಿಸಿ ಕೈಗಳು ಒದ್ದೆಯಾಗದಂತೆ ನೋಡಿಕೊಳ್ಳಿ.

Story first published: Wednesday, January 4, 2017, 8:03 [IST]
English summary

Use olive oil to help your nails grow

Whether you use olive oil for whipping up salad dressings or cooking olive oil is a staple in every kitchen. So if you need another reason to add this healthy ingredient to your kitchen, it can be great to help you maintain beautiful nails.
Please Wait while comments are loading...
Subscribe Newsletter