For Quick Alerts
ALLOW NOTIFICATIONS  
For Daily Alerts

ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ, ನೈಸರ್ಗಿಕ ಸ್ಕ್ರಬ್‌...

ಮನೆಯಲ್ಲಿ ಸುಲಭವಾಗಿ ಮಾಡುವಂತಹ ಕೆಲವೊಂದು ಸ್ಕ್ರಬ್‌ಗಳು ಮುಖದ ಮೇಲೆ ಬಿಸಿಲಿನಿಂದ ಉಂಟಾಗುವ ಕಲೆಗಳನ್ನು ನಿವಾರಣೆ ಮಾಡಿ, ತ್ವಚೆಯ ಕಾಂತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ...

By Hemanth
|

ಜಾಗತಿಕ ತಾಪಮಾನವು ಏರುತ್ತಿರುವ ಕಾರಣದಿಂದಾಗಿ ಇಂದಿನ ದಿನಗಳಲ್ಲಿ ಬೇಸಿಗೆ ಕಾಲದಲ್ಲಿ ಉಷ್ಣತೆಯು ಅತಿಯಾಗಿರುತ್ತದೆ. ಇದನ್ನು ಸಹಿಸಿಕೊಳ್ಳುವುದೇ ತುಂಬಾ ಕಷ್ಟವೆನ್ನುವಂತಿರುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡಲು ಹಲವಾರು ರೀತಿಯ ಜ್ಯೂಸ್ ಹಾಗೂ ತಂಪುಪಾನೀಯಗಳನ್ನು ನಾವು ಕುಡಿಯುತ್ತೇವೆ. ಆದರೆ ಚರ್ಮವು ಬಿಸಿಲಿಗೆ ನೇರವಾಗಿ ಒಗ್ಗಿಕೊಳ್ಳಬೇಕಾಗಿರುವ ಕಾರಣದಿಂದಾಗಿ ಮುಖದ ಮೇಲೆ ಕಪ್ಪು ಕಲೆಗಳು ಹಾಗೂ ಸೂರ್ಯನ ಬಿಸಿಲಿನ ತಾಪಕ್ಕೆ ಚರ್ಮದಲ್ಲಿ ಕಲೆಗಳು ಉಂಟಾಗುತ್ತದೆ. ಬ್ಯೂಟಿ ಟಿಪ್ಸ್: ಕಾಫಿ-ಸಕ್ಕರೆ ಬೆರೆಸಿ ಮಾಡಿದ 'ಬಾಡಿ ಸ್ಕ್ರಬ್'!

ಇದನ್ನು ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್‌ಗಳು ಇವೆ. ಆದರೆ ಇದು ಕೆಲವೊಂದು ಅಡ್ಡಪರಿಣಾಮವನ್ನು ಉಂಟು ಮಾಡುತ್ತದೆ. ಇದಕ್ಕಾಗಿ ಮನೆಯಲ್ಲಿ ಮಾಡುವಂತಹ ಕೆಲವೊಂದು ಸ್ಕ್ರಬ್‌ಗಳು ಮುಖದ ಮೇಲೆ ಬಿಸಿಲಿನಿಂದ ಉಂಟಾಗುವ ಕಲೆಗಳನ್ನು ನಿವಾರಣೆ ಮಾಡಲಿದೆ. ಈ ಲೇಖನದಲ್ಲಿ ಹೇಳುತ್ತಿರುವಂತಹ ಸ್ಕ್ರಬ್ ಗಳು ಬೇಸಿಗೆಯಲ್ಲಿ ಖಂಡಿತವಾಗಿಯೂ ನಿಮಗೆ ನೆರವಾಗಲಿದೆ....

ಉಪ್ಪು ಮತ್ತು ಜೇನು ಬೆರೆಸಿ ಮಾಡಿದ ಸ್ಕ್ರಬ್‌

ಉಪ್ಪು ಮತ್ತು ಜೇನು ಬೆರೆಸಿ ಮಾಡಿದ ಸ್ಕ್ರಬ್‌

ಉಪ್ಪು ಮತ್ತು ಜೇನನ್ನು ಬೆರೆಸಿ ಹಚ್ಚಿಕೊಂಡರೆ ಬ್ಲ್ಯಾಕ್ ಹೆಡ್ ನಿವಾರಣೆಗೆ ಸಹಕಾರಿ. ಈ ಮಿಶ್ರಣವನ್ನು ಹಚ್ಚಿಕೊಂಡು 4-6 ನಿಮಿಷ ಮಸಾಜ್ ಮಾಡಿ ತಣ್ಣಗಿನ ನೀರಿನಲ್ಲಿ ತೊಳೆದುಕೊಂಡರೆ ಒಣ ತ್ವಚೆ ನಿವಾರಣೆಯಾಗುತ್ತದೆ, ಬ್ಲ್ಯಾಕ್ ಹೆಡ್ ಕೂಡ ಹೋಗುತ್ತದೆ.

ಮಸಾಲ ಪದಾರ್ಥಗಳ ಸ್ಕ್ರಬ್

ಮಸಾಲ ಪದಾರ್ಥಗಳ ಸ್ಕ್ರಬ್

ಭಾರತೀಯ ಅಡುಗೆಗಳಲ್ಲಿ ಮಸಾಲ ಪದಾರ್ಥಗಳು ಮುಖ್ಯ ಪಾತ್ರ ವಹಿಸುತ್ತವೆ.ಅದೇ ಮಸಾಲ ಪದಾರ್ಥಗಳು ಬಾಡಿ ಸ್ಕ್ರಬ್‌ಗಳಾದರೆ? ಅವುಗಳು ನಮ್ಮ ಆಹಾರದ ರುಚಿಯನ್ನು ಹೇಗೆ ಹೆಚ್ಚಿಸುತ್ತವೋ ಹಾಗೆಯೇ ನಮ್ಮ ದೇಹಕ್ಕೆ ಕೂಡ ಕಾಂತಿ ನೀಡುತ್ತವೆ.

ಬೇಕಾಗುವ ಪದಾರ್ಥಗಳು

*ಒಂದು ಕಪ್ ಬ್ರೌನ್ ಶುಗರ್ ಒಂದು ಕಪ್ ಹರಳು ಸಕ್ಕರೆ

*ಕಾಲು ಕಪ್ ಬಾದಾಮಿ ಅಥವಾ ತೆಂಗಿನ ಎಣ್ಣೆ *ಎರಡು ಚಮಚ ಚಕ್ಕೆ ಪುಡಿ (ದಾಲ್ಚಿನ್ನಿ)

*ಎರಡು ಚಮಚ ಶುಂಠಿ ಪೇಸ್ಟ್

*ಎರಡು ಚಮಚ ಜಾಯಿಕಾಯಿ ಪುಡಿ

*ಇವು ಎಲ್ಲವನ್ನು ಸೇರಿಸಿ,ಮಿಕ್ಸರ್ ಅಥವಾ ಬ್ಲೆನ್ಡರ್ ಬಳಸಿ ಅದನ್ನು ಮಿಶ್ರಮಾಡಿ.

ಇದನ್ನು ತ್ವಚೆಗೆ ಸರಿಯಾಗಿ ಹಚ್ಚಿ. ಸ್ವಲ್ಪ ಸಮಯದ ನಂತರ ಸರಿಯಾಗಿ ನೀರಿನಿಂದ ತೊಳೆಯಿರಿ.

ಖರ್ಬೂಜ ಮತ್ತು ಸ್ಟ್ರಾಬೆರಿ ಹಣ್ಣಿನ ಸ್ಕ್ರಬ್

ಖರ್ಬೂಜ ಮತ್ತು ಸ್ಟ್ರಾಬೆರಿ ಹಣ್ಣಿನ ಸ್ಕ್ರಬ್

ಮಧ್ಯಮ ಗಾತ್ರದ ಖರ್ಬೂಜದ ಹಣ್ಣಿನ ಕಾಲುಭಾಗದ ತಿರುಳು, ಮೂರು ಸ್ಟ್ರಾಬೆರಿ ಹೆಣ್ಣು, ಒಂದು ದೊಡ್ಡಚಮಚ ಓಟ್ಸ್, ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪನದ ಮೂಲಕ ಚರ್ಮ ಆರ್ದ್ರತೆ ಮತ್ತು ಪೋಷಕಾಂಶಗಳನ್ನು ಪಡೆದು ಕೋಮಲತೆ ಮತ್ತು ಕಾಂತಿಯನ್ನು ಪಡೆಯುತ್ತದೆ.

ತೆಂಗಿನೆಣ್ಣೆ ಮತ್ತು ಸಕ್ಕರೆ ಸ್ಕ್ರಬ್

ತೆಂಗಿನೆಣ್ಣೆ ಮತ್ತು ಸಕ್ಕರೆ ಸ್ಕ್ರಬ್

ಸ್ವಲ್ಪ ಸಕ್ಕರೆಯನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ತೆಂಗಿನೆಣ್ಣೆ ಮತ್ತು ಒಂದು ಚಮಚ ಆಲಿವ್ ತೈಲವನ್ನು ಹಾಕಿಕೊಳ್ಳಿ. ಈ ಮೂರನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿ. ಹತ್ತು ನಿಮಿಷ ಕಾಲ ಸ್ಕ್ರಬ್ ಮಾಡಿದ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ತೆಂಗಿನೆಣ್ಣೆ ಮತ್ತು ಸಕ್ಕರೆಯ ಸ್ಕ್ರಬ್ ಚರ್ಮದಲ್ಲಿರುವ ಧೂಳನ್ನು ತೆಗೆದುಹಾಕಿ ಕಾಂತಿಯುತ ತ್ವಚೆಯನ್ನು ನೀಡುವುದು. ತೆಂಗಿನೆಣ್ಣೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸಿ ಕಾಂತಿ ನೀಡುವುದು ಮತ್ತು ಬ್ಯಾಕ್ಟೀರಿಯಾ ಜಮೆಯಾಗುವುದನ್ನು ತಪ್ಪಿಸುವುದು. ಒಣ ಹಾಗೂ ಕಿತ್ತುಬರುವ ಚರ್ಮವಿದ್ದರೆ ಇದು ತುಂಬಾ ಪರಿಣಾಮಕಾರಿ ಮನೆಮದ್ದು.

ಓಟ್ ಮೀಲ್ ಮತ್ತು ಮೊಸರಿನ ಮಾಸ್ಕ್

ಓಟ್ ಮೀಲ್ ಮತ್ತು ಮೊಸರಿನ ಮಾಸ್ಕ್

ಒಂದು ಸಣ್ಣ ಕಪ್ ಓಟ್ ಮೀಲ್‌ಗೆ ಅರ್ಧಕಪ್ ಮೊಸರನ್ನು ಸೇರಿಸಿಕೊಳ್ಳಿ. ಒಂದು ಚಮಚ ಅರಿಶಿನ ಹಾಗೂ ಒಂದು ಚಮಚ ರೋಸ್ ವಾಟರ್ ಅನ್ನು ಅದಕ್ಕೆ ಸೇರಿಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿ. ಓಟ್ ಮೀಲ್ ಮತ್ತು ಮೊಸರನ್ನು ಚರ್ಮದ ಬಣ್ಣವನ್ನು ಬಿಳಿಯಾಗಿಸುವುದು ಮತ್ತು ಕಾಂತಿನೀಡುವುದರ ಜೊತೆಗೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಮೊಡವೆಗಳನ್ನು ತಗ್ಗಿಸುವುದು.

ಓಟ್ ಮೀಲ್ ಮತ್ತು ಮೊಸರಿನ ಮಾಸ್ಕ್

ಓಟ್ ಮೀಲ್ ಮತ್ತು ಮೊಸರಿನ ಮಾಸ್ಕ್

ಒಂದು ಸಣ್ಣ ಕಪ್ ಓಟ್ ಮೀಲ್‌ಗೆ ಅರ್ಧಕಪ್ ಮೊಸರನ್ನು ಸೇರಿಸಿಕೊಳ್ಳಿ. ಒಂದು ಚಮಚ ಅರಿಶಿನ ಹಾಗೂ ಒಂದು ಚಮಚ ರೋಸ್ ವಾಟರ್ ಅನ್ನು ಅದಕ್ಕೆ ಸೇರಿಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿ. ಓಟ್ ಮೀಲ್ ಮತ್ತು ಮೊಸರನ್ನು ಚರ್ಮದ ಬಣ್ಣವನ್ನು ಬಿಳಿಯಾಗಿಸುವುದು ಮತ್ತು ಕಾಂತಿನೀಡುವುದರ ಜೊತೆಗೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಮೊಡವೆಗಳನ್ನು ತಗ್ಗಿಸುವುದು.

ಪಪ್ಪಾಯಿ ಮತ್ತು ಸಕ್ಕರೆ ಸ್ಕ್ರಬ್

ಪಪ್ಪಾಯಿ ಮತ್ತು ಸಕ್ಕರೆ ಸ್ಕ್ರಬ್

ಪಪ್ಪಾಯಿಯಲ್ಲಿ ಇರುವಂತಹ ಕೆಲವೊಂದು ಕಿಣ್ವಗಳು ಕಾಲಜನ್ ನ್ನು ವೃದ್ಧಿಸುತ್ತದೆ. ಇದರಿಂದ ಆರೋಗ್ಯಕಾರಿ ಹಾಗೂ ಕಾಂತಿಯುತ ತ್ವಚೆ ನಿಮ್ಮದಾಗುವುದು. ಒಂದು ಪಪ್ಪಾಯಿಯ ತಿರುಳನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಕಿವುಚಿಕೊಳ್ಳಿ. ಇದಕ್ಕೆ ಸ್ವಲ್ಪ ಸಕ್ಕರೆ ಮತ್ತು ಆಲಿವ್ ತೈಲವನ್ನು ಬೆರೆಸಿಕೊಳ್ಳಿ. ಇವುಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖದ ಮೇಲೆ ಮಸಾಜ್ ಮಾಡಿ. ದಿನದಲ್ಲಿ ಎರಡು ಅಥವಾ ಮೂರು ಸಲ ಇದನ್ನು ಬಳಸಿಕೊಂಡರೆ ಆರೋಗ್ಯಕರ ತ್ವಚೆಯು ನಿಮ್ಮದಾಗುವುದು.

ಅಕ್ಕಿ ಹುಡಿ ಮತ್ತು ಜೇನಿನ ಸ್ಕ್ರಬ್

ಅಕ್ಕಿ ಹುಡಿ ಮತ್ತು ಜೇನಿನ ಸ್ಕ್ರಬ್

ಸ್ವಲ್ಪ ಅಕ್ಕಿ ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ಹುಡಿ ಮಾಡಿ. ಈ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹತ್ತು ನಿಮಿಷ ಕಾಲ ಸ್ಕ್ರಬ್ ಮಾಡಿ ಮತ್ತು ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಅಕ್ಕಿ ಹುಡಿ ಮತ್ತು ಜೇನಿನ ಸ್ಕ್ರಬ್ ಸತ್ತ ಚರ್ಮದ ಕೋಶವನ್ನು ತೆಗೆದುಹಾಕಿ ಕಾಂತಿಯುತ ಮುಖವನ್ನು ನೀಡುವುದು. ಜೇನಿನಲ್ಲಿ ಆ್ಯಂಟಿ ವೈರಲ್ ಮತ್ತು ಉರಿಯೂತಶಮನಕಾರಿ ಗುಣಗಳು ಇವೆ. ಇದು ಚರ್ಮದ ಆರೋಗ್ಯವನ್ನು ಹೆಚ್ಚಿಸುವುದು. ಅಕ್ಕಿಹುಡಿಯು ಮುಖದಲ್ಲಿರುವ ಕಲ್ಮಶ ಹಾಗೂ ಸತ್ತ ಚರ್ಮದ ಕೋಶವನ್ನು ತೆಗೆದುಹಾಕುವುದು. ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ ಪ್ರಯತ್ನಿಸಿ-ಸುಂದರವಾಗಿ ಕಾಣುವಿರಿ!

English summary

Homemade Scrubs For Healthy And Glowing Skin In Summer Days

Here, we bring to you a few quick recipes of homemade scrubs and masks for healthy and glowing skin that are ideal to be used during summer. Believe us, using these scrubs can be highly beneficial for your skin.
Story first published: Wednesday, March 15, 2017, 20:44 [IST]
X
Desktop Bottom Promotion