For Quick Alerts
ALLOW NOTIFICATIONS  
For Daily Alerts

ಜೋತಾಡುತ್ತಿರುವ ಸ್ತನ ಸಮಸ್ಯೆಗೆ ಇಲ್ಲಿದೆ ಅದ್ಭುತ ಪರಿಹಾರ

ಮಹಿಳೆಯರಿಗೆ ಆಕರ್ಷಕ ಭಂಗಿ ದೊರೆಯಲು ಸ್ತನ ಗಾತ್ರ ಕೂಡ ಮುಖ್ಯವಾಗುತ್ತದೆ. ಆರೋಗ್ಯಯುತವಾದ ಸರಿಯಾದಗಾತ್ರದ ಸ್ತನ ಹೊಂದಿದ್ದಲ್ಲಿ ಲುಕ್ ಕೂಡ ಸುಂದರವಾಗಿ ಕಾಣುವುದು

By Jaya subramanya
|

ಹೆಣ್ಣು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ ದೈಹಿಕವಾಗಿ ಕೂಡ ಅಂದಗಾತಿಯಾಗಿರಲು ಬಯಸುತ್ತಾರೆ. ಹೆಣ್ಣು ಸುಕೋಮಲ ಹೂವಾಗಿರುವುದರಿಂದ ಆಕೆಯ ಪ್ರತಿಯೊಂದು ಅಂಗವೂ ನಾಜೂಕಿನದ್ದಾಗಿರುತ್ತದೆ ಮತ್ತು ಯಾವುದೇ ಲೋಪದೋಷಗಳು ಆಕೆಯ ಅಂದಕ್ಕೆ ಮಾರಕವಾಗಿರುತ್ತವೆ.
ಅದರಲ್ಲೂ ಸ್ತನ ಸೌಂದರ್ಯವೆಂಬುದು ವಿಶೇಷವಾಗಿರುವುದರಿಂದ ಪ್ರತಿಯೊಂದು ಸ್ತರದಲ್ಲೂ ಇದು ಬೆಳವಣಿಗೆಯನ್ನು ಕಂಡುಕೊಂಡು ಆಕೆಯನ್ನು ಸುಂದರ ಸ್ತ್ರೀಯಾಗಿ ಪರಿವರ್ತಿಸುತ್ತದೆ. ಸ್ತನ ಗಾತ್ರವನ್ನು ಹಿಗ್ಗಿಸುವ ನೈಸರ್ಗಿಕ ಟಾಪ್ 5 ಗಿಡ ಮೂಲಿಕೆಗಳು

ಹೆಣ್ಣು ತನ್ನ ಮೂವತ್ತು ಮತ್ತು ನಲ್ವತ್ತರ ಹರೆಯದಲ್ಲಿಯೇ ಸ್ತನದ ಜೋತಾಡುವಿಕೆ ಸಮಸ್ಯೆಗೆ ಒಳಗಾಗುತ್ತಾರೆ. ವಯಸ್ಸಾಗುವುದು, ಋತುಚಕ್ರ, ಗರ್ಭಾವಸ್ಥೆ, ಧೂಮಪಾನ, ಮದ್ಯಪಾನ ಮೊದಲಾದವು ಸ್ತನದ ಜೋತಾಡುವಿಕೆಗೆ ಪ್ರಮುಖ ಕಾರಣಗಳು ಎಂದೆನಿಸಿವೆ. ದಿನನಿತ್ಯ ಬ್ರಾ ಧರಿಸಿದರೆ, ಅಪಾಯ ಬೆನ್ನೇರಿ ಕಾಡಲಿದೆ ಎಚ್ಚರ!

ಹಾಗಿದ್ದರೆ ಸ್ತನದ ಈ ಸಮಸ್ಯೆಗಳನ್ನು ಹೋಗಲಾಡಿಸುವ ಕ್ರಮಗಳೊಂದಿಗೆ ನಾವು ಇಂದಿನ ಲೇಖನದಲ್ಲಿ ಬಂದಿದ್ದು ಇದು ಇಂತಹ ಸಮಸ್ಯೆಗಳಿಗೆ ಕೊನೆಯನ್ನು ಕಾಣಿಸಲಿದೆ.

ಅಲೊವೇರಾ ಅಥವಾ ಲೋಳೆಸರದ ಮಸಾಜ್

ಅಲೊವೇರಾ ಅಥವಾ ಲೋಳೆಸರದ ಮಸಾಜ್

ಸ್ತನದ ಸಮಸ್ಯೆಗೆ ಈ ಮಸಾಜ್ ಹೆಚ್ಚು ಪರಿಣಾಮಕಾರಿ ಎಂದೆನಿಸಿದೆ. ಇದು ಅಗತ್ಯ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ಜೋತುಬಿದ್ದಿರುವ ಸ್ತನವನ್ನು ಬಿಗಿಗೊಳಿಸುತ್ತದೆ. ಸ್ವಲ್ಪ ಅಲೊವೇರಾ ಜೆಲ್ ಅನ್ನು ತೆಗೆದುಕೊಂಡು ನಿಮ್ಮ ಸ್ತನದ ಮೇಲೆ ಇದನ್ನು ಮಸಾಜ್ ಮಾಡಿ. ವೃತ್ತಾಕಾರವಾಗಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಮಸಾಜ್ ನಡೆಸಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಜೋತುಬಿದ್ದಿರುವ ಸ್ತನವನ್ನು ಬಿಗಿಗೊಳಿಸಲು ಮೊಟ್ಟೆಯ ಬಿಳಿಭಾಗ ಸಹಕಾರಿಯಾಗಿದೆ. ಮೊಟ್ಟೆಯ ಬಿಳಿ ಲೋಳೆಯಲ್ಲಿರುವ ತ್ವಚೆಯನ್ನು ಪೋಷಿಸುವ ಮತ್ತು ಸಂಕೋಚಕ ಅಂಶವು ಸ್ತನದ ಭದ್ರತೆಯನ್ನು ಸುಧಾರಿಸುತ್ತದೆ. ಸ್ವಲ್ಪ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಲಿಂಬೆ ರಸವನ್ನು ಸೇರಿಸಿ. ಎರಡನ್ನೂ ಮಿಶ್ರ ಮಾಡಿಕೊಂಡು ನಿಮ್ಮ ಸ್ತನದ ಮೇಲೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಕಾಯಿರಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.

ಐಸ್ ಮಸಾಜ್

ಐಸ್ ಮಸಾಜ್

ಐಸ್ ಮಸಾಜ್‌ನಿಂದ ಕೂಡ ನಿಮ್ಮ ಜೋತುಬಿದ್ದಿರುವ ಸ್ತನದ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ. ಸ್ವಲ್ಪ ಐಸ್ ಅನ್ನು ತೆಗೆದುಕೊಂಡು ನಿಮ್ಮ ಸ್ತನದ ಸುತ್ತಲೂ ಮಸಾಜ್ ಮಾಡಿ. ವೃತ್ತಾಕಾರವಾಗಿ ಮಸಾಜ್ ಕ್ರಿಯೆಯನ್ನು ನಡೆಸಿ. ಇದು ರಕ್ತದ ನಾಳಗಳನ್ನು ಉತ್ತೇಜಿಸುತ್ತದೆ ಅಂತೆಯೇ ಚರ್ಮದ ಕಾಂತಿಯನ್ನು ವರ್ಧಿಸುತ್ತದೆ.

ಗ್ರೇಪ್‌ ಸೀಡ್ ಆಯಿಲ್

ಗ್ರೇಪ್‌ ಸೀಡ್ ಆಯಿಲ್

ಎಸೆನ್ಶಿಯಲ್ ಆಯಿಲ್ ಅನ್ನು ಬಳಸುವುದೂ ಕೂಡ ಈ ಸಮಸ್ಯೆಯಿಂದ ನಿಮಗೆ ಮುಕ್ತಿಯನ್ನು ನೀಡುತ್ತದೆ. ಗ್ರೇಪ್‌ ಸೀಡ್ ಆಯಿಲ್ ಕೂಡ ಜೋತಾಡುತ್ತಿರುವ ಸ್ತನ ಸಮಸ್ಯೆಗೆ ಮುಕ್ತಿದಾಯಕ ಎಂದೆನಿಸಲಿದೆ. ಸ್ವಲ್ಪ ಈ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಸ್ತನದ ಸುತ್ತಲೂ ಮಸಾಜ್ ಮಾಡಿಕೊಳ್ಳಿ. ವೃತ್ತಾಕಾರವಾಗಿ ಹತ್ತುನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ. ನಂತರ ತಣ್ಣೀರಿನಿಂದ ಈ ಭಾಗವನ್ನು ತೊಳೆದುಕೊಳ್ಳಿ.

ಸೌತೆಕಾಯಿ ಮತ್ತು ಮೊಟ್ಟೆಯ ಹಳದಿಭಾಗ

ಸೌತೆಕಾಯಿ ಮತ್ತು ಮೊಟ್ಟೆಯ ಹಳದಿಭಾಗ

ಸೌತೆಕಾಯಿ ಮತ್ತು ಮೊಟ್ಟೆಯ ಹಳದಿ ಲೋಳೆಯನ್ನು ಸಮನಾಗಿ ಮಿಶ್ರ ಮಾಡಿಕೊಂಡು ಸ್ತನದ ಮೇಲೆ ಹಚ್ಚುವುದರಿಂದ ಈ ಭಾಗ ದೃಢವಾಗುತ್ತದೆ. ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಅದನ್ನು ತುರಿದು ಪೇಸ್ಟ್ ತಯಾರಿಸಿ. ಇದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ. ನಂತರ ಒಂದು ಚಮಚ ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ. ಎಲ್ಲವನ್ನೂ ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ ಮತ್ತು ಈ ಮಾಸ್ಕ್ ಅನ್ನು ನಿಮ್ಮ ಸ್ತನಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರವಾಗಿ ಇದನ್ನು ಮಸಾಜ್ ಮಾಡಿ. ನಿತ್ಯವೂ ಈ ಕ್ರಿಯೆಯನ್ನು ಅಳವಡಿಸಿಕೊಂಡು ಫಲಿತಾಂಶವನ್ನು ಪಡೆದುಕೊಳ್ಳಿ.

ಲಿಂಬೆ ಮಸಾಜ್

ಲಿಂಬೆ ಮಸಾಜ್

ತಾಜಾ ಲಿಂಬೆರಸದಿಂದ ಸ್ತನವನ್ನು ಮಸಾಜ್ ಮಾಡುವುದರಿಂದ ಕೂಡ ಸ್ತನದ ಜೋತುಬೀಳುವಿಕೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಸ್ತನ ಮಾತ್ರವಲ್ಲದೆ ತ್ವಚೆಗೂ ಸಹಕಾರಿ ವಿಧಾನ ಎಂದೆನಿಸಲಿದೆ. ಯುವ ಮತ್ತು ಹೊಳೆಯುವ ಮೈಕಾಂತಿಯನ್ನು ಲಿಂಬೆ ರಸದ ಮಸಾಜ್ ನಿಮಗೆ ನೀಡುತ್ತದೆ. ಲಿಂಬೆಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ವಿಟಮಿನ್ ಸಿ ಜೋತಾಡುತ್ತಿರುವ ಸ್ತನ ಸಮಸ್ಯೆಗೆ ಉತ್ತಮ ಪರಿಹಾರವನ್ನು ನೀಡಲಿದೆ. ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..!

ಮೆಂತೆ ಮಾಸ್ಕ್

ಮೆಂತೆ ಮಾಸ್ಕ್

ಜೋತಾಡುತ್ತಿರುವ ಸ್ತನ ಸಮಸ್ಯೆಗೆ ಇದು ಪರಿಹಾರವನ್ನು ನೀಡಲಿದೆ. ಇದರಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು ವಿಟಮಿನ್‌ಗಳು ಬೇಗನೇ ವಯಸ್ಸಾಗುವಂತಹ ಸಮಸ್ಯೆಯನ್ನು ತಡೆಹಿಡಿಯಲಿದೆ. ಸ್ವಲ್ಪ ಮೆಂತೆಯನ್ನು ತೆಗೆದುಕೊಂಡು ನೀರಿನಲ್ಲಿ ಅದನ್ನು ನೆನೆಸಿ. ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿ. ಇದಕ್ಕೆ ಒಂದು ಚಮಚ ಆಲೀವ್ ಎಣ್ಣೆ ಸೇರಿಸಿ ಮತ್ತು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಸ್ತನಕ್ಕೆ ಈ ಮಾಸ್ಕ್ ಅನ್ನು ಹಚ್ಚಿರಿ. ತದನಂತರ ನೀರಿನಿಂದ ಇದನ್ನು ತೊಳೆದುಕೊಳ್ಳಿ. ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಪಪ್ಪಾಯ ಮಾಸ್ಕ್

ಪಪ್ಪಾಯ ಮಾಸ್ಕ್

ಪಪ್ಪಾಯ ಮಾಸ್ಕ್ ಅನ್ನು ಹಚ್ಚಿಕೊಳ್ಳುವುದರಿಂದ ಕೂಡ ಜೋತಾಡುತ್ತಿರುವ ಸ್ತನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಸಣ್ಣ ತುಂಡು ಪಪ್ಪಾಯವನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಅರ್ಧ ಚಿಟಿಕೆಯಷ್ಟು ಅರಿಶಿನ ಪುಡಿಯನ್ನು ಬೆರೆಸಿ ಒಂದು ಚಮಚ ಲಿಂಬೆಯನ್ನು ಸೇರಿಸಿಕೊಳ್ಳಿ. ಎಲ್ಲವನ್ನೂ ಜೊತೆಯಾಗಿ ಮಿಶ್ರ ಮಾಡಿಕೊಂಡು ನಿಮ್ಮ ಸ್ತನಕ್ಕೆ ಇದನ್ನು ಹಚ್ಚಿರಿ. ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಪಪ್ಪಾಯಿ ಹಣ್ಣಿನ 'ಹೇರ್ ಪ್ಯಾಕ್' ಪಕ್ಕಾ ನೈಸರ್ಗಿಕ ಚಿಕಿತ್ಸೆ...

English summary

Brilliant Remedies To Treat Sagging Of Breast

The breast shape of a woman changes throughout the life, thus affecting the elasticity and firmness of the skin.Generally, when a woman reaches her 30's and 40's, her breasts start to sag after a certain period of time. Apart from the age factor, menopause, pregnancy, smoking habits, intake of alcohol, etc., may also affect the appearance of your breasts.
X
Desktop Bottom Promotion