For Quick Alerts
ALLOW NOTIFICATIONS  
For Daily Alerts

ತುಟಿಗಳ ಆರೈಕೆಯನ್ನು ಸರಿಯಾಗಿ ಮಾಡುತ್ತಿದ್ದೀರಿ ತಾನೇ?

ತುಟಿಗಳಿಗೆ ವಿಶೇಷವಾಗಿ ಹೆಚಿನ ಆರ್ದ್ರತೆ ನೀಡುವ ಲಿಪ್ ಬಾಮ್‌ಗಳನ್ನು ಬಳಸಬೇಕು. ಬನ್ನಿ, ತುಟಿಗಳ ಅಂದವನ್ನು ಹೆಚ್ಚಿಸುವ ಜೊತೆಗೇ ಇವುಗಳ ಆರೈಕೆ ಮಾಡುವ ಬಗ್ಗೆ ಕೆಲವು ಅಮೂಲ್ಯವಾದ ಮಾಹಿತಿಗಳನ್ನು ನೀಡಿದ್ದೇವೆ ಮುಂದೆ ಓದಿ...

By Manu
|

ನಮ್ಮ ತುಟಿಗಳ ಚರ್ಮದಲ್ಲಿ ಒಂದು ವಿಶೇಷತೆಯಿದೆ. ಇತರ ಚರ್ಮದಂತೆ ತುಟಿಯ ಚರ್ಮದಲ್ಲಿ ಬೆವರು ಅಥವಾ ತೈಲ ಗ್ರಂಥಿಗಳಿಲ್ಲ. ಆದ್ದರಿಂದಲೇ ಚಳಿಗಾಲದಲ್ಲಿ ತುಟಿಗಳ ಚರ್ಮ ಬೇರೆ ಚರ್ಮಕ್ಕಿಂತ ಮೊದಲು ಒಡೆಯುತ್ತದೆ. ಅಲ್ಲದೇ ಇದು ತುಂಬಾ ಸೂಕ್ಷವಾದ ನರತಂತುಗಳ ಜಾಲವನ್ನು ಹೊಂದಿದ್ದು ಈ ಭಾಗದಲ್ಲಿ ಸೂಕ್ಷ್ಮವಾದ ಕೂದಲು ಸಹಾ ಇರುವುದಿಲ್ಲ. ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?

ಅಲ್ಲದೇ ಇತರ ಭಾಗಗಳ ಜೀವಕೋಶಗಳಿಗಿಂತ ತುಟಿಗಳ ಅಂಗಾಂಶಗಳು ಭಿನ್ನವಾಗಿದ್ದು ಹೆಚ್ಚು ಸೌಮ್ಯವಾಗಿರುತ್ತವೆ. ಆದ್ದರಿಂದ ತುಟಿಗಳ ಆರೈಕೆ ಇತರ ಚರ್ಮಕ್ಕಿಂತ ಭಿನ್ನವಾಗಿದ್ದು ಇದರ ಕೊರತೆಯಿಂದ ತುಟಿಗಳು ಒಣಗಿ ಒಡೆಯಬಹುದು. ಕೆಂದುಟಿಯ ಚೆಲುವು ಬೇಕೆಂದರೆ-ಜೇನನ್ನು ಪ್ರಯತ್ನಿಸಿ....

ಆದ್ದರಿಂದ ತುಟಿಗಳಿಗೆ ವಿಶೇಷವಾಗಿ ಹೆಚಿನ ಆರ್ದ್ರತೆ ನೀಡುವ ಲಿಪ್ ಬಾಮ್‌ಗಳನ್ನು ಬಳಸಬೇಕು. ಬನ್ನಿ, ತುಟಿಗಳ ಅಂದವನ್ನು ಹೆಚ್ಚಿಸುವ ಜೊತೆಗೇ ಇವುಗಳ ಆರೈಕೆ ಮಾಡುವ ಬಗ್ಗೆ ಕೆಲವು ಅಮೂಲ್ಯವಾದ ಮಾಹಿತಿಗಳನ್ನು ಹಂಚಿಕೊಳ್ಳೋಣ...

ಸ್ಕ್ರಬ್

ಸ್ಕ್ರಬ್

ನಮ್ಮ ದೇಹದ ಇತರ ಭಾಗಗಳಂತೆಯೇ ತುಟಿಯ ಚರ್ಮದ ಜೀವಕೋಶಗಳೂ ಸಾಯುತ್ತವೆ ಹಾಗೂ ಹೊರಚರ್ಮಕ್ಕೆ ಅಂಟಿಕೊಳ್ಳುತ್ತವೆ. ಇವುಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ, ಅಂತೆಯೇ ಕಷ್ಟವೂ ಅಲ್ಲ. ಇದಕ್ಕಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಸ್ಕ್ರಬ್ ಬಳಸಬಹುದು ಅಥವಾ ಮಾರುಕಟ್ಟೆಯಲ್ಲಿ ದೊರಕುವ ಉತ್ತಮ ಗುಣಮಟ್ಟದ ಪ್ರಸಾದನವನ್ನೂ ಬಳಸಬಹುದು. ಮನೆಯಲ್ಲಿ

ತಯಾರಿಸಬೇಕೆಂದರೆ ಇದಕ್ಕೆ ಬೇಕಾಗಿರುವುದು ಸಕ್ಕರೆ ಪುಡಿ ಮತ್ತು ಕೊಂಚ ಆಲಿವ್ ಅಥವಾ ಬಾದಾಮಿ ಎಣ್ಣೆ ಮಾತ್ರ.

ತುಟಿಯ ಲೇಪ

ತುಟಿಯ ಲೇಪ

ಈಗ ಹೊಸದಾಗಿ ಬರುತ್ತಿರುವ ತುಟಿಯ ಲೇಪ (Lip peels) ಹೆಚ್ಚು ಜನಪ್ರಿಯಗೊಳ್ಳುತ್ತಿದ್ದು ಸತ್ತ ಜೀವಕೋಶಗಳನ್ನು ನಿವಾರಿಸುವುದು ಈಗ ಇನ್ನಷ್ಟು ಸುಲಭವೂ ಸುರಕ್ಷಿತವೂ ಆಗಿದೆ.

ತುಟಿಯ ಎಣ್ಣೆಗಳು

ತುಟಿಯ ಎಣ್ಣೆಗಳು

ಇತ್ತೀಚೆಗೆ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಇನ್ನೊಂದು ಪ್ರಸಾದನವೆಂದರೆ ತುಟಿಯ ಎಣ್ಣೆ (lip oils). ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಅವಶ್ಯಕ ತೈಲಗಳು ಮತ್ತು ವಿಟಮಿನ್ ಇ ಇದ್ದು ತುಟಿಗಳಿಗೆ ಹೇಳಿ ಮಾಡಿಸಿದ ತೈಲವಾಗಿದೆ. ಇದು ಲಭ್ಯವಿಲ್ಲದಿದ್ದರೆ ಸಾಮಾನ್ಯ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೂ ಒಡೆದ ತುಟಿಗಳಿಗೆ ಉತ್ತಮ ಆರೈಕೆ ದೊರಕುತ್ತದೆ.

ಲಿಪ್ ಬಾಮ್

ಲಿಪ್ ಬಾಮ್

ಪ್ರಸ್ತುತ ತುಟಿಗಳಿಗೆ ಹಚ್ಚಬಹುದಾದ ವ್ಯಾಸೆಲಿನ್ ನಂತಹ ಬಾಮ್ ಗಳು ನೂರಾರು ವಿಧಗಳಲ್ಲಿ ಲಭ್ಯವಿವೆ. ನಿಮಗೆ ಇಷ್ಟವಿರುವ ಯಾವುದೇ ಬಾಮ್ ಅಥವಾ ನೀವು ಸದಾ ಬಳಸುವ ಸಾಮಾನ್ಯ ವ್ಯಾಸೆಲಿನ್ ಜೆಲ್ಲಿಯನ್ನೇ ಬಳಸಬಹುದು. ರಾತ್ರಿ ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಂಡರೆ ತುಟಿಗಳು ಮೃದುವಾಗುತ್ತವೆ. ಕಪ್ಪು ಸುಂದರಿಯ ತುಟಿಗೆ ಈ ಲಿಪ್ ಸ್ಟಿಕ್

ಲಿಪ್ ಪ್ರೈಮರ್

ಲಿಪ್ ಪ್ರೈಮರ್

ಒಂದು ವೇಳೆ ನೀವು ಲಿಪ್ ಸ್ಟಿಕ್ ಹಚ್ಚುವ ಅಭ್ಯಾಸವುಳ್ಳವರಾಗಿದ್ದರೆ ಇದನ್ನು ಹಚ್ಚಿಕೊಳ್ಳುವ ಮುನ್ನ, ಅದರಲ್ಲೂ ವಿಶೇಷವಾಗಿ ಮ್ಯಾಟ್ ಲಿಪ್ ಸ್ಟಿಕ್ ಆಗಿದ್ದರೆ ಇದಕ್ಕೂ ಮುನ್ನ ಲಿಪ್ ಪ್ರೈಮರ್ ಅನ್ನು ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಏಕೆಂದರೆ ಈ ಲಿಪ್ ಸ್ಟಿಕ್ ಗಳು ಚರ್ಮದಿಂದ ಹೆಚ್ಚಿನ ಆರ್ದ್ರತೆಯನ್ನು ಹೀರಿ ತುಟಿಗಳನ್ನು ಒಣಗಿಸುತ್ತವೆ. ಪ್ರೈಮರ್ ಹಚ್ಚಿಕೊಂಡರೆ ಇದು ರಕ್ಷಣಾ ಪದರದಂತೆ ಕಾರ್ಯನಿರ್ವಹಿಸಿ ತುಟಿಗಳು ಒಣಗದಂತೆ ಕಾಪಾಡುತ್ತದೆ.

English summary

Are You Taking Proper Care Of Your Lips?

The lips are super sensitive and need a whole lot more care and protection than the rest of your skin does. So, here are some things that you must do to take proper care of your lips.
X
Desktop Bottom Promotion