For Quick Alerts
ALLOW NOTIFICATIONS  
For Daily Alerts

ಎಳನೀರು ಸೌಂದರ್ಯದ ವಿಷಯದಲ್ಲಿ ಇದು ಪನ್ನೀರು

By manu
|

ಅತ್ಯಂತ ಆರೋಗ್ಯಕರ ಪೇಯ ಎಂಬುದು ಈ ಜಗತ್ತಿನಲ್ಲಿದ್ದರೆ ಅದು ಎಳನೀರಿನ ರೂಪದಲ್ಲಿದೆ. ಎಳನೀರಿನ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ತರಹದ ಲಾಭಗಳಿವೆ. ವಿಶೇಷವಾಗಿ ಉರಿಮೂತ್ರ ಹಾಗೂ ಬೇಸಿಗೆಯ ಬಿರುಸಿಗೆ ದೇಹ ಕಳೆದುಕೊಂಡ ಶಕ್ತಿಯನ್ನು ಮರುತುಂಬಿಸಲು ಎಳನೀರಿಗಿಂತ ಇನ್ನೊಂದು ಉತ್ತಮ ದ್ರವವಿಲ್ಲ. ಆದರೆ ಎಳನೀರಿನ ಪ್ರಯೋಜನ ಕೇವಲ ದೇಹದ ಒಳಗಿನ ಅಂಗಗಳಿಗೆ ಮಾತ್ರವಲ್ಲ, ಚರ್ಮ ಮತ್ತು ಕೂದಲಿಗೂ ಇದು ಉತ್ತಮ ಪೋಷಣೆ ನೀಡುತ್ತದೆ. ವಿಶೇಷವಾಗಿ ತಲೆಗೂದಲ ಬುಡದ ಚರ್ಮಕ್ಕೆ ಉತ್ತಮ ಪೋಷಣೆ ನೀಡುವ ಮೂಲಕ ಕೂದಲನ್ನು ಸೊಂಪಾಗಿಸುತ್ತದೆ.

ನಿಯಮಿತವಾಗಿ ಎಳನೀರನ್ನು ಕುಡಿಯುತ್ತಿದ್ದರೆ ದೇಹದ ಇತರ ಭಾಗಗಳಿಗೆ ಉತ್ತಮ ಪೋಷಣೆ ದೊರಕುವ ಜೊತೆಗೇ ತ್ವಚೆಯೂ ಕಾಂತಿಯುಕ್ತವಾಗುತ್ತದೆ ಹಾಗೂ ಕೂದಲೂ ಸೊಂಪಾಗುತ್ತದೆ. ಮುಖದ ಚರ್ಮಕ್ಕೆ ತಕ್ಷಣಕ್ಕೆ ಕಾಂತಿಯ ಅಗತ್ಯವಿದ್ದರೆ ಎಳನೀರಿನಿಂದ ಮುಖವನ್ನು ಪ್ರೋಕ್ಷಳಿಸಿಕೊಂಡು ತೊಳೆದುಕೊಂಡರೆ ಸಾಕು.

ಅಲ್ಲದೇ ಒಂದೆಡೆ ಹೆಚ್ಚು ಗಾಢವಾಗಿದ್ದು ಇತರೆಡೆ ಕಡಿಮೆಯಾಗಿರುವ ಚರ್ಮದ ಬಣ್ಣವನ್ನು ಸರಿಪಡಿಸಿ ಚರ್ಮದ ನೈಜವರ್ಣವನ್ನು ಒಂದೇ ಸಮನಾಗಿಸುತ್ತದೆ. ಅಲ್ಲದೇ ಇದೊಂದು ನೈಸರ್ಗಿಕವಾದ ಆರ್ದ್ರತೆ ನೀಡುವ ದ್ರವವಾಗಿದೆ. ಚರ್ಮದ ಸೆಳೆತವನ್ನು ಹೆಚ್ಚಿಸಿ ವೃದ್ಧಾಪ್ಯದ ಚಿಹ್ನೆಗಳು ತಡವಾಗಿ ಮೂಡುವಂತೆ ಮಾಡುತ್ತದೆ. ಬನ್ನಿ, ಎಳನೀರು ಇನ್ನೂ ಯಾವ ಬಗೆಯಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗಿವೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ನಮ್ಮ ಚರ್ಮಕ್ಕೆ ಗಾಳಿಯಲ್ಲಿರುವ ಆರ್ದ್ರತೆ ಅಥವಾ ನೀರಿನ ಪಸೆ ಅತ್ಯಂತ ಅಗತ್ಯವಾಗಿದೆ. ಚಳಿಗಾಲದಲ್ಲಿ ನೀರು ಆವಿಯಾಗದ ಕಾರಣ ಗಾಳಿಯಲ್ಲಿ ನೀರಿನ ಪಸೆ ಇಲ್ಲದೇ ಒಣಹವೆ ಅಥವಾ ಶುಷ್ಕ ಹವೆಯಾಗಿರುತ್ತದೆ. ಆರ್ದ್ರತೆಯ ಕೊರತೆಯಿಂದ ಚರ್ಮ ವಿಪರೀತವಾಗಿ ಒಣಗುತ್ತದೆ ಹಾಗೂ ಬಿರುಕು ಬಿಡಲು ಮತ್ತು ಪರೆ ಏಳಲು ಪ್ರಾರಂಭವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಇದನ್ನು ತಡೆಯಲು ಚರ್ಮಕ್ಕೆ ಎಳನೀರಿನಲ್ಲಿ ಅದ್ದಿದ ಹತ್ತಿ ಅಥವಾ ಬಟ್ಟೆಯಿಂದ ಒರೆಸಿಕೊಳ್ಳುವ ಮೂಲಕ ಉತ್ತಮ ಪ್ರಮಾಣದ ಆರ್ದ್ರತೆ ದೊರಕುತ್ತದೆ. ವಿಶೇಷವಾಗಿ ಮುಖದ ಚರ್ಮಕ್ಕೆ ಇದು ಅತ್ಯುತ್ತಮವಾಗಿದೆ. ಇದನ್ನು ಹಚ್ಚಿ ಕೆಲಕಾಲ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳುವ ಆರ್ದತೆಯ ಕೊರತೆಯನ್ನು ನೀಗಿಸಬಹುದು.

ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ

ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ

ಮುಖ ಮತ್ತು ದೇಹದ ಇತರ ಭಾಗಗಳಲ್ಲಿ ಚರ್ಮ ಸೆಳೆತ ಕಳೆದುಕೊಂಡು ನೆರಿಗೆಗಳು ಮೂಡಲು ಪ್ರಾರಂಭಿಸಿದ್ದರೆ ವೃದ್ದಾಪ್ಯ ಆವರಿಸಿದೆ ಎನ್ನುತ್ತೇವೆ. ಆದರೆ ಈ ಚಿಹ್ನೆಗಳನ್ನು ಸಾಕಷ್ಟು ತಡವಾಗಿಸಿ ವೃದ್ಧಾಪ್ಯವನ್ನು ದೂರಾಗಿಸಲು ಎಳನೀರು ನೆರವಾಗುತ್ತದೆ. ಚರ್ಮದ ಅತಿಸೂಕ್ಷ್ಮ ಗೆರೆ ಮತ್ತು ನೆರಿಗೆಗಳನ್ನು ನಿವಾರಿಸಲು ಎಳನೀರು ಅತ್ಯಂತ ಉಪಯುಕ್ತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ

ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ

ಇದಕ್ಕಾಗಿ ಎರಡು ದೊಡ್ಡಚಮಚ ಮೊಸರಿಗೆ ಒಂದು ದೊಡ್ಡ ಚಮಚ ಎಳನೀರನ್ನು ಸೇರಿಸಿ ಲೇಪನವನ್ನು ತಯಾರಿಸಿ ಮುಖದ ಮತ್ತು ಕೈಗಳ ಮೇಲೆ ದಪ್ಪನಾಗಿ ಹಚ್ಚಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳುವುದರಿಂದ ನೆರಿಗೆಗಳಿಂದ ದೂರಾಗಬಹುದು. ವಾರಕ್ಕೊಂದು ಅಥವಾ ಎರಡು ಬಾರಿ ಈ ವಿಧಾನವನ್ನು ಅನುಸರಿಸಬೇಕು.

ಚರ್ಮದ ಕಲೆಗಳನ್ನು ನಿವಾರಿಸುತ್ತದೆ

ಚರ್ಮದ ಕಲೆಗಳನ್ನು ನಿವಾರಿಸುತ್ತದೆ

ಚರ್ಮದಲ್ಲಿ ಅಲ್ಲಲ್ಲಿ ಚುಕ್ಕೆಗಳಂತಹ ಕಲೆಗಳಿದ್ದರೆ, ಬಿಸಿಲು ಬಿದ್ದೆಡೆ ಚರ್ಮದ ಬಣ್ಣ ಹೆಚ್ಚು ಗಾಢವಾಗಿದ್ದರೆ ಇದನ್ನು ಸರಿಪಡಿಸಲು ಎಳನೀರು ಸಮರ್ಥವಾಗಿದೆ. ಇದಕ್ಕಾಗಿ ಮುಲ್ತಾನಿ ಮಿಟ್ಟಿ ಮತ್ತು ಕೊಂಚ ಎಳನೀರನ್ನು ಬೆರೆಸಿ ನಯವಾದ ಲೇಪನ ತಯಾರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಕಲೆಗಳನ್ನು ನಿವಾರಿಸುತ್ತದೆ

ಚರ್ಮದ ಕಲೆಗಳನ್ನು ನಿವಾರಿಸುತ್ತದೆ

ಈ ಲೇಪನವನ್ನು ಕಲೆಗಳಿದ್ದಲ್ಲಿ ಮತ್ತು ಚರ್ಮ ಗಾಢವಾಗಿದ್ದಲ್ಲಿ ಹಚ್ಚಿ ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಲ್ಲಿ ಸಮೃದ್ದವಾಗಿರುವ ವಿಟಮಿನ್ ಸಿ ಈ ಕಲೆಗಳನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿವಾರಿಸಲು ನೆರವಾಗುತ್ತದೆ.

 ಚರ್ಮದ ಸೋಂಕನ್ನು ನಿವಾರಿಸುತ್ತದೆ

ಚರ್ಮದ ಸೋಂಕನ್ನು ನಿವಾರಿಸುತ್ತದೆ

ಚರ್ಮಕ್ಕೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಅತಿ ಹೆಚ್ಚಿನ ಹಾನಿಯುಂಟುಮಾಡುತ್ತವೆ. ಅತಿ ಸೂಕ್ಷ್ಮವಾದ ಈ ಜೀವಿಗಳು ಚರ್ಮದ ರಂಧ್ರದೊಳಗೆ ನುಸುಳಿ ಸೋಂಕಿಗೆ ಕಾರಣವಾಗುತ್ತವೆ. ಆದರೆ ಎಳನೀರು ಚರ್ಮದ ರಂಧ್ರಗಳಲ್ಲಿ ಅಡಗಿ ಕುಳಿತ ಈ ಖದೀಮರನ್ನು ತಿವಿದೆಬ್ಬಿಸಿ ಹೊರಗಟ್ಟುತ್ತದೆ. ಇದಕ್ಕಾಗಿ ಎಳನೀರಿನಲ್ಲಿ ಮುಳುಗಿಸಿದ್ದ ಬಟ್ಟೆ ಅಥವಾ ಹತ್ತಿಯಿಂದ ಚರ್ಮವನ್ನು ಒರೆಸಿಕೊಂಡು ಒಣಗಲು ಬಿಟ್ಟು ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಸಾಕು. ಇದರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರನಿವಾರಕ ಗುಣ ಹಲವು ಚರ್ಮದ ಸೋಂಕುಗಳಿಂದ ರಕ್ಷಿಸುತ್ತದೆ.

ಮೊಡವೆಗಳಿಂದ ರಕ್ಷಿಸುತ್ತದೆ

ಮೊಡವೆಗಳಿಂದ ರಕ್ಷಿಸುತ್ತದೆ

ಯಾರಿಗೂ ಬೇಡವಾದ ಒಡವೆ ಈ ಮೊಡವೆ ಎಂದು ಹಿರಿಯರು ಹೇಳುತ್ತಾರೆ. ಮೊಡವೆಗಳನ್ನು ಬುಡಸಹಿತ ನಿವಾರಿಸಿ ಕಲೆ ಉಳಿಸದೇ ಚರ್ಮವನ್ನು ಮತ್ತೆ ಮೊದಲಿನಂತಾಗಿಸುವಲ್ಲಿ ಎಳನೀರು ಉತ್ತಮವಾಗಿದೆ. ಇದಕ್ಕಾಗಿ ಎಳನೀರು ಮತ್ತು ಜೇನನ್ನು ಸಮಪ್ರಮಾಣದಲ್ಲಿ ಬೆರೆಸಿ ಹತ್ತಿಯುಂಡೆಯೊಂದನ್ನು ಈ ದ್ರವದಲ್ಲಿ ಮುಳುಗಿಸಿ ಮೊಡವೆಯ ಮೇಲೆ ಒತ್ತಿರುವಂತೆ ಕೊಂಚ ಕಾಲ ಇಟ್ಟುಕೊಳ್ಳಬೇಕು. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷದ ಬಳಿಕ ತೆಗೆದು ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಡವೆಗಳಿಂದ ರಕ್ಷಿಸುತ್ತದೆ

ಮೊಡವೆಗಳಿಂದ ರಕ್ಷಿಸುತ್ತದೆ

ದಿನಕ್ಕೆ ಎರಡು ಬಾರಿ (ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೊಡವೆಗಳಿದ್ದರೆ ಮೂರು ಬಾರಿ) ಈ ವಿಧಾನವನ್ನು ಅನುಸರಿಸುವ ಮೂಲಕ ಒಂದೇ ವಾರದಲ್ಲಿ ಮೊಡವೆಗಳು ಚಿಕ್ಕದಾಗುತ್ತಾ ಹೋಗುವುದನ್ನು ಗಮನಿಸಬಹುದು ಎರಡರಿಂದ ಮೂರು ವಾರಗಳಲ್ಲಿ ಇವು ಇಲ್ಲವಾಗುತ್ತವೆ ಹಾಗೂ ಕಲೆಯೂ ಉಳಿಯದೇ ಕೋಮಲ ಚರ್ಮ ನಿಮ್ಮದಾಗುತ್ತದೆ. ಆದರೆ ಮೊಡವೆಗಳನ್ನು ಎಂದೂ ಚಿವುಟಬಾರದು ಅಥವಾ ಉಗುರು ತಾಗಿಸಬಾರದು.

ಕೂದಲಿಗೆ ಹೊಳಪು ನೀಡುತ್ತದೆ

ಕೂದಲಿಗೆ ಹೊಳಪು ನೀಡುತ್ತದೆ

ಕೂದಲಿಗೆ ಸಹಜ ಕಾಂತಿ ನೀಡುವಲ್ಲಿ ಎಳನೀರು ಸಮರ್ಥವಾಗಿದೆ. ಕೂದಲನ್ನು ಕಂಡೀಶನರ್ ಬಳಸಿ ತೊಳೆದುಕೊಳ್ಳುವ ಬದಲು ಎಳನೀರಿನಿಂದ ತೊಳೆದುಕೊಂಡರೆ ಉತ್ತಮ ಪರಿಣಾಮ ಪಡೆಯಬಹುದು. ಇದು ಕೂದಲಿಗೆ ಮತ್ತು ಕೂದಲ ಬುಡಕ್ಕೆ ಅಗತ್ಯವಾದ ನೀರನ್ನು ಉಣಿಸಿ ಕೂದಲು ಬುಡದಿಂದಲೇ ಉತ್ತಮ ಪೋಷಣೆ ಪಡೆಯಲು ನೆರವಾಗುತ್ತದೆ. ಕೂದಲು ಸೊಂಪಾಗಿ, ಕಾಂತಿಯುಕ್ತ ಹಾಗೂ ಹೆಚ್ಚು

ಆರೋಗ್ಯಕರವಾಗುತ್ತದೆ.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆಗೆ ಕೂದಲ ಬುಡದಲ್ಲಿ ಸಾಕಷ್ಟು ಪೋಷಕಾಂಶಗಳು ಹಾಗೂ ರಕ್ತಪರಿಚಲನೆ ಇರುವುದು ಅಗತ್ಯ. ನಿಯಮಿತವಾಗಿ ಕೂದಲ ಬುಡಕ್ಕೆ ಎಳನೀರಿನಿಂದ ನಯವಾಗಿ ಮಸಾಜ್ ಮಾಡಿ ಕೊಂಚ ಕಾಲ ನೆನೆಸಿಡುವ ಮೂಲಕ ಕೂದಲ ಬುಡಕ್ಕೆ ಉತ್ತಮ ಪೋಷಣೆ ದೊರಕುತ್ತದೆ. ಪರಿಣಾಮವಾಗಿ ಕೂದಲು ಉತ್ತಮ ಬೆಳವಣಿಗೆ ಪಡೆಯಲು ಸಾಧ್ಯವಾಗುತ್ತದೆ.

English summary

Ways Coconut Water Benefits Skin And Hair

Coconut water not only offers good health benefits, but it also provides skin and hair benefits. Coconut water works wonders on the scalp and skin, making it healthy. It is a must-add product in the beauty regimen. It can be regarded as a beauty drink too. Coconut water not only benefits internally but works well externally too. It's a secret for healthy and glowing skin.
Story first published: Thursday, January 7, 2016, 16:05 [IST]
X
Desktop Bottom Promotion