For Quick Alerts
ALLOW NOTIFICATIONS  
For Daily Alerts

ಗಾಯ ಮಾಸಿದರೂ ಕಾಡುವ ಹಳೆ ಕಲೆಗಳು! ಇಲ್ಲಿದೆ ಮನೆಮದ್ದು

By manu
|

ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಕಲೆ ಇದ್ದೇ ಇರುತ್ತದೆ ಎಂದಾಗ ಹಿಂದಿನಿಂದ ಎದ್ದ ಗುಂಡ ಅಂದನಂತೆ - ಸಾರ್ ನೀವು ಹೇಳಿದ್ದು ಸರಿ ಸರ್, ನನ್ನ ಹೆಂಡತಿ ಲಟ್ಟಣಿಗೆಯಿಂದ ಹೊಡೆದಾಗ ಆದ ಗಾಯದ ಕಲೆ ಇನ್ನೂ ಇದೆ ನೋಡಿ! ಕಲೆ ಎಂಬ ಪದಕ್ಕೆ ಕನ್ನಡದಲ್ಲಿರುವ ಎರಡು ಅರ್ಥಗಳನ್ನು ಈ ನಗೆಹನಿ ಚೆನ್ನಾಗಿ ಬಿಂಬಿಸುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಚಿಕ್ಕವರಿದ್ದಾಗ ಆಟದ ಸಮಯದಲ್ಲಿ ಬಿದ್ದು ಗಾಯ ಮಾಡಿಕೊಂಡೇ ಇದ್ದೇವೆ. ಆ ಗಾಯಗಳು ಮಾಗಿದರೂ ಅವುಗಳ ಕಲೆಗಳು ಶಾಶ್ವತವಾಗಿ ಉಳಿದುಬಿಟ್ಟಿವೆ.

Try This Powerful Home Remedy To Reduce Injury Scars!

ಚಿಕ್ಕ ಪುಟ್ಟ ಶಸ್ತ್ರಚಿಕಿತ್ಸೆ, ಸುಟ್ಟ ಗಾಯ, ಒಡೆದ ಮೊಡವೆ ಮೊದಲಾದವುಗಳೂ ಶಾಶ್ವತ ಕಲೆ ಉಳಿಸುತ್ತವೆ. ಬಟ್ಟೆ ಮರೆಮಾಚುವ ಭಾಗವಾದರೆ ಪರವಾಗಿಲ್ಲ, ಕಾಣುವಂತಹ ಭಾಗ ಅಥವಾ ಮುಖದಲ್ಲಿ ಉಳಿದಿದ್ದರೆ? ಇದೇ ನಮ್ಮನ್ನು ಗುರುತಿಸುವ ಗುರುತುಗಳೂ ಆಗಿ ಕಾಡಬಹುದು. ಕೆಲವೊಮ್ಮೆ ಈ ಗುರುತುಗಳೇ ಕೀಳರಿಮೆ ಬೆಳೆಸಿಕೊಳ್ಳಲು ಕಾರಣವಾಗಬಹುದು. ಗಾಯ ಬೇಗನೆ ಗುಣವಾಗಲು ಈ ಆಹಾರ ಸೇವಿಸಿ

ಕೆಲವೊಮ್ಮೆ ಕೈಗಳ ಮೇಲಾದ ಗುರುತುಗಳ ಕಾರಣ ಗಿಡ್ಡ ಕೈ ಇರುವ ಉಡುಗೆಗಳನ್ನು ಹಾಕಿಕೊಳ್ಳಲು ಹಿಂಜರಿಕೆ ಉಂಟಾಗಬಹುದು. ಈ ಗುರುತುಗಳನ್ನು ಶಾಶ್ವತವಾಗಿ ನಿವಾರಿಸುತ್ತೇವೆ ಎಂದು ಬಣ್ಣಬಣ್ಣದ ಜಾಹೀರಾತು ನೀಡುವ ಸಂಸ್ಥೆಗಳು ವಿಧಿಸುವ ದರ ನೋಡಿದರೆ ಬೇಡಪ್ಪಾ, ಈ ಕಲೆಯೇ ಇರಲಿ ಎಂಬ ಆಯ್ಕೆಯನ್ನೇ ಹೆಚ್ಚಿನವರು ಆಯ್ದುಕೊಳ್ಳುತ್ತಾರೆ. ಆದರೆ ಮನಸ್ಸಿನಾಳದಲ್ಲಿ ಎಲ್ಲೋ ಒಂದು ಕಡೆ ಈ ಕಲೆ ನಿವಾರಿಸಲು ಸಾಧ್ಯವಿಲ್ಲವೇ ಎಂಬ ಆಶಾಭಾವನೆ ಇದ್ದೇ ಇರುತ್ತದೆ. ಈ ರೀತಿಯ ಗಾಯ ತುಂಬಾ ಅಪಾಯಕಾರಿ!

ಒಂದು ವೇಳೆ ನಿಮ್ಮಲ್ಲಿ ಇಂತಹ ಯಾವುದಾದರೂ ಗುರುತು ಉಳಿದಿದ್ದು ಇದನ್ನು ನಿವಾರಿಸುವ ಕ್ರಮಗಳು ವಿಫಲವಾಗಿ, ದುಬಾರಿ ಚಿಕಿತ್ಸೆಗೆ ಒಳಗಾಗಲು ಸಾಮರ್ಥ್ಯವಿಲ್ಲದಿದ್ದರೆ ಮತ್ತು ನಿಮ್ಮಲ್ಲಿ ಇನ್ನೂ ಆಶಾಭಾವನೆ ಉಳಿದಿದ್ದರೆ, ಕೆಳಗಿ ವಿವರಿಸಿರುವ ಒಂದು ಪ್ರಬಲ ಮನೆಮದ್ದು ನಿಮ್ಮ ನೆರವಿಗೆ ಬರಬಲ್ಲುದು. ಇದು ಅಪ್ಪಟ ನೈಸರ್ಗಿಕವಾಗಿದ್ದು ನಿಸರ್ಗವೇ ಯಾವುದೇ ಅಡ್ಡ ಪರಿಣಾಮವಿಲ್ಲದೇ ಕಲೆಯನ್ನು ನಿವಾರಿಸಲು ಸಕ್ಷಮವಾಗಿದೆ. ಈ ಲೇಪನವನ್ನು ತಯಾರಿಸುವ ಬಗೆಯನ್ನು ಈಗ ನೋಡೋಣ: ಸುಟ್ಟ ಗಾಯವಾದರೆ ತಕ್ಷಣ ಈ ರೀತಿ ಮಾಡಿ

ಅಗತ್ಯವಿರುವ ಸಾಮಾಗ್ರಿಗಳು:
*ಅಪ್ಪಟ ಗಂಧದ ಪುಡಿ: ಒಂದು ದೊಡ್ಡಚಮಚ (ಗಂಧದ ಕೊರಡನ್ನು ತೇದಿ ತೆಗೆದ ಲೇಪನ ಅತ್ಯುತ್ತಮ)
*ಟೀ ಟ್ರೀ ಎಣ್ಣೆ: ಎರಡು ಚಿಕ್ಕ ಚಮಚ
*ಲಿಂಬೆ ರಸ: ಎರಡು ಚಿಕ್ಕ ಚಮಚ

*ಚರ್ಮದ ಆರೈಕೆಯಲ್ಲಿ ಶ್ರೀಗಂಧ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ. ಇದರೊಂದಿಗೆ ಟೀ ಟ್ರೀ ಎಣ್ಣೆ ಮತ್ತು ಲಿಂಬೆರಸಗಳು ಸೇರಿದರೆ ಚರ್ಮಕ್ಕೆ ಕಾಂತಿ ನೀಡುವ ಜೊತೆಗೇ ಹಳೆಯ ಗಾಯದ ಗುರುತುಗಳು ಮತ್ತು ಕಲೆಗಳು ಸಹಾ ನಿಯಮಿತ ಬಳಕೆಯಿಂದ ನಿಧಾನವಾಗಿಯಾದರೂ ಕ್ರಮೇಣ ಇಲ್ಲವಾಗುತ್ತವೆ. ಕಪ್ಪು ಮಚ್ಚೆಗಳನ್ನೂ ತಿಳಿಯಾಗಿಸಿ ಇಲ್ಲವೆನಿಸುವಷ್ಟು ಮಟ್ಟಕ್ಕೆ ತರುತ್ತವೆ. ಸುಟ್ಟ ಗಾಯಗಳಾದಾಗ ಪ್ರಥಮ ಚಿಕಿತ್ಸೆ ಹೀಗಿರಲಿ

*ಶ್ರೀಗಂಧದಲ್ಲಿ ಹೊರಚರ್ಮದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸುವ ಗುಣವಿದೆ. ಅಲ್ಲದೇ ಈ ಸ್ಥಳದಲ್ಲಿ ಹೊಸದಾಗಿ ಬೆಳೆಯುವ ಜೀವಕೋಶಗಳು ಅಡ್ಡಾದಿಡ್ಡಿಯಾಗಿರದೇ ಸರಿಯಾದ ಕ್ರಮದಲ್ಲಿ ಬೆಳೆಯುವುದೇ ಗಾಯಗಳ ಗುರುತುಗಳು ಮಾಯವಾಗುವ ಗುಟ್ಟು.

ಈ ಲೇಪನ ತಯಾರಿಸುವ ವಿಧಾನ:
*ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಲೆ ಮತ್ತು ಗಾಯದ ಗುರುತುಗಳಿರುವ ಭಾಗದ ಮೇಲೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿ.
*ಕೊಂಚ ಒಣಗಿದ ಬಳಿಕ ಇನ್ನೊಂದು ಪದರ ತೆಳುವಾಗಿ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ಸೌಮ್ಯ ಸೋಪು ಮತ್ತು ತಣ್ಣೀರು ಬಳಸಿ ತೊಳೆದುಕೊಳ್ಳಿ.


*ಉತ್ತಮ ಪರಿಣಾಮ ಪಡೆಯಲು ದಿನ ಬಿಟ್ಟು ದಿನ ಹಚ್ಚುತ್ತಾ ಬನ್ನಿ.
*ಇದರ ಪರಿಣಾಮವನ್ನು ಅರಿಯಲು ಕೆಲವು ತಿಂಗಳುಗಳೇ ಬೇಕಾದುದರಿಂದ ಕೊಂಚ ತಾಳ್ಮೆ ವಹಿಸುವುದು ಅಗತ್ಯ.
English summary

Try This Powerful Home Remedy To Reduce Injury Scars!

Do you have one or more scars on your body, which are either the result of injuries or surgeries? Do you feel self-conscious about them? Well, some say that scars on the body, which are the result of injuries, surgeries, burns, etc, are a mark of bravery and show what the person is able to withstand! . So, if you are looking for a home remedy instead to reduce scars naturally, then use this powerful skin pack!
X
Desktop Bottom Promotion