For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಪಾದಗಳ ಆರೈಕೆಗೆ, ಒಂದಿಷ್ಟು ಸರಳ ಸೂತ್ರ

By Manu
|

ಚಳಿಗಾಲದಲ್ಲಿ ಕೈಗಳು ನೆರಿಗೆ ಕಟ್ಟಿದಂತೆ ಆಗುವುದು, ಪಾದಗಳು ಒಡೆಯುವುದು, ಚರ್ಮದ ಮೇಲೆ ತಲೆಹೊಟ್ಟಿನಂತೆ ಚರ್ಮವು ಕಿತ್ತು ಬರುವುದು ಹೀಗೆ ಹಲವಾರು ರೀತಿಯ ಸಮಸ್ಯೆಗಳು ಕಾಡುತ್ತದೆ. ಚಳಿ ತಡೆದುಕೊಳ್ಳಲಾರದ ಸ್ಥಿತಿಯಲ್ಲಿ ನಾವು ದೇಹವನ್ನು ಬೆಚ್ಚಗಿಡುವಂತಹ ಬಟ್ಟೆಗಳನ್ನು ಧರಿಸುತ್ತೇವೆ. ಆದರೆ ಇಷ್ಟು ಮಾಡಿಯೂ ಯಾವುದೇ ಪ್ರಯೋಜನವಾಗುವುದಿಲ್ಲ ಚಳಿಗಾಲದ ತಣ್ಣನೆಯ ಹವೆಗೆ, ಮರುಗದಿರಲಿ ಸೌಂದರ್ಯ
.
ಇದರಿಂದ ಮನೆಮದ್ದನ್ನು ಬಳಸಿಕೊಂಡು ಈ ಸಮಸ್ಯೆಗಳನ್ನು ನಿವಾರಿಸಬಹುದು. ತಾಪಮಾನವು ತುಂಬಾ ಕಡಿಮೆಯಾದಾಗ ಇದು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಇದರಿಂದ ಕಾಲು ಹಾಗೂ ಕೈಗಳು ತಣ್ಣಗೆ ಆಗಬಹುದು.

ಈ ವೇಳೆ ಪಾದಗಳನ್ನು ಮುಟ್ಟಿದರೆ ನಿಮಗೆ ಅಚ್ಚರಿಯಾಗಬಹುದು. ಯಾಕೆಂದರೆ ಪಾದಗಳು ಅಷ್ಟು ತಣ್ಣಗೆ ಇರಬಹುದು. ಈ ಸಮಯದಲ್ಲಿ ಕಂಬಳಿ ಹೊದ್ದುಕೊಂಡು ಮಲಗಿ. ಪಾದಗಳು ತಣ್ಣಗಾಗಲು ಪೋಷಕಾಂಶಗಳ ಕೊರತೆ, ರಕ್ತಹೀನತೆ, ಮಧುಮೇಹ, ಥೈರಾಯ್ಡ್ ಮತ್ತು ನರಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾರಣವಾಗಿರಬಹುದು. ಅಂದದ ಪಾದಕ್ಕೆ, ಮನೆಯಲ್ಲೇ ಪಾರ್ಲರ್ ಮಟ್ಟದ ಆರೈಕೆ

ಒಂದು ವೇಳೆ ಚರ್ಮ ಗಡುಸಾಗುವುದು ಅಥವಾ ಕಿತ್ತು ಬರುತ್ತಾ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ತಣ್ಣಗಿನ ಪಾದಗಳಿಗೆ ನೈಸರ್ಗಿಕ ಚಿಕಿತ್ಸೆ ಇಲ್ಲಿದೆ. ಇದನ್ನು ಬಳಸಿಕೊಳ್ಳಿ.

ಬಿಸಿ ಎಣ್ಣೆಯ ಮಸಾಜ್

ಬಿಸಿ ಎಣ್ಣೆಯ ಮಸಾಜ್

ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ಬಿಸಿ ಮಾಡಿ. ಇದನ್ನು ಪಾದಗಳಿಗೆ ಹಚ್ಚಿಕೊಂಡು ಸುಮಾರು 5-10 ನಿಮಿಷ ಕಾಲ ಮಸಾಜ್ ಮಾಡಿ ಮತ್ತು ಹತ್ತಿಯ ಸಾಕ್ಸ್ ಬಳಸಿ. ಮಲಗುವ ಮೊದಲು ಈ ಕ್ರಮ ಬಳಸಿದರೆ ಒಳ್ಳೆಯದು. ವಾರಕ್ಕೊಮ್ಮೆ ತಲೆ ಮಸಾಜ್-ಇದರ ಅನುಭವವೇ ಬೇರೆ!

ಬಿಸಿ ಹಾಗೂ ತಣ್ಣೀರಿನ ಜಲಚಿಕಿತ್ಸೆ

ಬಿಸಿ ಹಾಗೂ ತಣ್ಣೀರಿನ ಜಲಚಿಕಿತ್ಸೆ

ಒಂದು ಬಕೆಟ್ ಬಿಸಿ ನೀರು ಹಾಗೂ ಇನ್ನೊಂದು ಬಕೆಟ್ ತಣ್ಣಗಿನ ನೀರನ್ನು ತೆಗೆದುಕೊಳ್ಳಿ.ಅನುಕ್ರಮವಾಗಿ ಕಾಲುಗಳನ್ನು ಸುಮಾರು 10-15 ನಿಮಿಷ ಕಾಲ ನೀರಿನಲ್ಲಿ ಮುಳುಗಿಸಿ. ಒಣಸಾಕ್ಸ್ ಅನ್ನು ಹಾಕಿಕೊಳ್ಳಿ. ದಿನದಲ್ಲಿ ಒಂದು ಸಲ ಹೀಗೆ ಮಾಡಿ. ಇದರಿಂದ ರಕ್ತ ಪರಿಚಲನೆ ಸರಿಯಾಗಿ ಕಾಲುಗಳು ಬಿಸಿಯಾಗಿರುತ್ತದೆ.

ಶುಂಠಿ

ಶುಂಠಿ

ರಕ್ತ ಪರಿಚಲನೆಯನ್ನು ಹೆಚ್ಚಿಸುವ ನೈಸರ್ಗಿಕ ಪದಾರ್ಥ ಶುಂಠಿ. ಇದು ಪಾದ ಹಾಗೂ ದೇಹವನ್ನು ಬಿಸಿಯಾಗಿಸುತ್ತದೆ. ಎರಡರಿಂದ ಮೂರು ತುಂಡು ಶುಂಠಿಯನ್ನು ತೆಗೆದುಕೊಂಡು ಇದನ್ನು ನೀರಿಗೆ ಹಾಕಿ ಬಿಸಿ ಮಾಡಿ ಮತ್ತು ಗಾಳಿಸಿಕೊಂಡ ಬಳಿಕ ನೀರನ್ನು ಕುಡಿಯಿರಿ.

ಹಸಿರು ಚಹಾ(ಗ್ರೀನ್ ಟೀ)

ಹಸಿರು ಚಹಾ(ಗ್ರೀನ್ ಟೀ)

ಹಸಿರು ಚಹಾ ದೇಹದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಕಾಲುಗಳು ಹಾಗೂ ದೇಹವನ್ನು ಬಿಸಿಯಾಗಿಡುತ್ತದೆ. ದಿನದಲ್ಲಿ 2-3 ಕಪ್ ಹಸಿರು ಚಹಾ ಕುಡಿಯಿರಿ. ಚಳಿಗಾಲದಲ್ಲಿ ಇದು ತುಂಬಾ ಪರಿಣಾಮಕಾರಿ.

ಗೌರವರ್ಣದ ತ್ವಚೆಗಾಗಿ ಗ್ರೀನ್ ಟೀ- ಜೇನಿನ ಫೇಸ್‌ಪ್ಯಾಕ್

ಉಪ್ಪು

ಉಪ್ಪು

ಒಂದು ಬಕೆಟ್ ಬಿಸಿ ನೀರಿಗೆ ಎರಡರಿಂದ ಮೂರು ಚಮಚ ಉಪ್ಪು ಹಾಕಿಕೊಳ್ಳಿ. ಹತ್ತು ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಕಾಲುಗಳನ್ನು ಮುಳುಗಿಸಿಡಿ. ಉಪ್ಪಿನಲ್ಲಿರುವ ಮೆಗ್ನಿಶಿಯಂ ರಕ್ತ ಪರಿಚಲನೆಯನ್ನು ಉತ್ತಮಪಡಿಸಿ ಕಾಲು ತಣ್ಣಗೆ ಆಗುವುದನ್ನು ತಡೆಯುವುದು.

ವ್ಯಾಯಾಮ

ವ್ಯಾಯಾಮ

ಕಾಲುಗಳ ವ್ಯಾಯಾಮ ಮಾಡಿ. ಮೊದಲಿಗೆ ಮುಂಗಾಲು ಹಾಗೂ ಬಳಿಕ ಹಿಂಗಾಲಿನಲ್ಲಿ ನಡೆಯಿರಿ.

ಇದನ್ನು ಪುನರಾವರ್ತಿಸಿ. ಇದರಿಂದ ರಕ್ತದ ಪರಿಚಲನೆಯು ಉತ್ತಮವಾಗಿ ಸಮಸ್ಯೆ

ನಿವಾರಣೆಯಾಗುತ್ತದೆ.

ಬಸಲೆ

ಬಸಲೆ

ನಾರಿನಾಂಶ ಹಾಗೂ ಮೆಗ್ನಿಶಿಯಂನಿಂದ ಸಮೃದ್ಧವಾಗಿರುವ ಬಸಲೆಯು ರಕ್ತ ಪರಿಚಲನೆಯನ್ನು

ಉತ್ತಮಪಡಿಸುವುದು ಮತ್ತು ಕೈಕಾಲುಗಳನ್ನು ಬಿಸಿಯಾಗಿರುವಂತೆ ಮಾಡುವುದು. ಚಳಿಗಾಲದಲ್ಲಿ

ಹೆಚ್ಚಾಗಿ ಬಸಲೆ ಬಳಸಿ.

ಅಪ್ರಿಕಾಟ್

ಅಪ್ರಿಕಾಟ್

ಅಪ್ರಿಕಾಟ್‌ನಲ್ಲಿ ಕಬ್ಬಿನಾಂಶವಿದೆ. ಒಣಗಿರುವ ಅಪ್ರಿಕಾಟ್ ಅನ್ನು ಚಳಿಗಾಲದಲ್ಲಿ ಬಳಸುವುದರಿಂದ ಕೈ ಹಾಗೂ ಕಾಲುಗಳು ಉಷ್ಣತೆಯನ್ನು ಕಾಪಾಡಿಕೊಳ್ಳುವುದು.

ಖರ್ಜೂರ

ಖರ್ಜೂರ

ದೇಹದಲ್ಲಿ ಕಬ್ಬಿನಾಂಶದ ಕೊರತೆಯು ಕೇವಲ ರಕ್ತಹೀನತೆ ಮಾತ್ರ ಉಂಟು ಮಾಡುವುದಿಲ್ಲ.ಇದರಿಂದ ಕಾಲುಗಳು ಹಾಗೂ ಕೈಗಳು ತಣ್ಣಗೆ ಆಗಬಹುದು. ಒಣಖರ್ಜೂರವನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ದೇಹವು ಬಿಸಿಯಾಗಿರುವುದು. ಬ್ಯೂಟಿ ಟಿಪ್ಸ್: 'ಖರ್ಜೂರ' ಹಣ್ಣಿನ ಫೇಸ್ ಪ್ಯಾಕ್

ಇಡಿ ಧಾನ್ಯಗಳು

ಇಡಿ ಧಾನ್ಯಗಳು

ನಾರಿನಾಂಶ ಹಾಗೂ ಮೆಗ್ನಿಶಿಯಂನಿಂದ ಸಮೃದ್ಧವಾಗಿರುವ ಇಡೀ ಧಾನ್ಯಗಳ ಸೇವನೆಯಿಂದ ರಕ್ತ

ಪರಿಚಲನೆಯು ಉತ್ತಮವಾಗಿ ದೇಹವು ಬಿಸಿಯಾಗಿರುತ್ತದೆ.

English summary

These Home Remedies Help Fight Cold Feet Effectively During Winters

Here is a list of amazing home remedies that help in fighting cold feet. Read on to know more. ... These Home Remedies Help Fight Cold Feet Effectively During Winters
Story first published: Tuesday, December 6, 2016, 20:14 [IST]
X
Desktop Bottom Promotion