For Quick Alerts
ALLOW NOTIFICATIONS  
For Daily Alerts

ಹಳ್ಳಿಗಾಡಿನ 'ಕೊಬ್ಬರಿ ಎಣ್ಣೆ' ಸೌಂದರ್ಯದ ಕೀಲಿಕೈ

By Vani Naik
|

ದಶಕಗಳಿಂದಲೂ ಕೊಬ್ಬರಿ ಎಣ್ಣೆಯನ್ನು ಭಾರತದ ಉಪಖಾಂಡದಲ್ಲಿ ಚರ್ಮ, ಕೂದಲು ಹಾಗು ದೇಹದಲ್ಲಾಗುವ ಸಮಸ್ಯೆಗಳಿಗ ನಿವಾರಣೆಗೆ ಬಳಸಲಾಗುತ್ತಿದೆ. ದೇಹಕ್ಕೆ ಆರೋಗ್ಯಕರ ಎನ್ನಲಾಗುವ ಇತರ ಪದಾರ್ಥಗಳಿಗೆ ಹೋಲಿಸಿದರೆ ಕೊಬ್ಬರಿ ಎಣ್ಣೆಯು ಬಹುಉಪಯೋಗಿ ವಸ್ತು.

ತಲತಲಾಂತರದಿಂದ ನಮ್ಮ ದೇಶದ ಹೆಂಗಸರು ಇದರ ಮೇಲೆ ವಿಶ್ವಾಸವಿಟ್ಟು ಸೌಂದರ್ಯ ಸಾಧನವಾಗಿ ಬಳಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶದವರೂ ಕೂಡ ಇದರ ಬಳಕೆಯನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಹುಟ್ಟಿದಾಗಿನಿಂದ ಇದರ ಬಳಕೆಯನ್ನು ಕಾಣುತ್ತಾ ಬಂದಿದ್ದೇವೆ.

The Amazing Beauty Benefits Of Coconut Oil

ಪ್ರತಿಯೊಬ್ಬ ಭಾರತೀಯನ ಮನೆಯಲ್ಲೂ ಒಂದು ಜಾರಿನಲ್ಲಿ ಕೊಬ್ಬರಿ ಎಣ್ಣೆಯು ಅವಶ್ಯವಾಗಿ ಕಂಡು ಬರುತ್ತದೆ. ಅದರ ಇರುವಿಕೆ ನಮಗೆಲ್ಲರಿಗೂ ಒಂದು ರೀತಿಯಲ್ಲಿ ಒಗ್ಗಿ ಹೋಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಅದರ ಉಪಯೋಗಗಳನ್ನು ನಾವು ಪಡೆಯುತ್ತಿಲ್ಲ. ಕೊಬ್ಬರಿ ಎಣ್ಣೆ: ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಈಗಲಾದರೂ ಅದರ ಮಹತ್ವಕ್ಕೆ ಬೆಲೆ ಕೊಟ್ಟು ಅದರಿಂದಾಗುವ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು. ಇಷ್ಟಕ್ಕೂ ನಮ್ಮ ಪೂರ್ವಜರು ಈ ಕಾರಣದಿಂದಾಗಿಯೇ ದಶಕಗಳಿಂದ ಇದನ್ನು ಉಪಯೋಗಿಸುತ್ತಾ ಬಂದಿದ್ದಾರೆ.

ಡೀಪ್ ಕಂಡೀಷನರ್
ಈ ಎಣ್ಣೆಯನ್ನು ಕೂದಲಿಗೆ ಡೀಪ್ ಕಂಡೀಷನರ್ ಆಗಿ ಬಳಸಬಹುದು. ಕೊಬ್ಬರಿ ಎಣ್ಣೆಯನ್ನು ಬೆಚ್ಚಗೆ ಮಾಡಿ ನೆತ್ತಿಯ ಮೇಲೆ ಹಚ್ಚಿಕೊಂಡು ಮಸಾಜ್ ಮಾಡಬೇಕು. ಇದರಿಂದ ರಂದ್ರಗಳ ಒಳಗೆ ಎಣ್ಣೆಯು ಇಳಿದು ರಕ್ತ ಸಂಚಾರಕ್ಕೆ ನೆರವಾಗುತ್ತದೆ, ಹಾಗು ಕೂದಲು ಚೆನ್ನಾಗಿ ಬೆಳೆಯುತ್ತದೆ. ರಾತ್ರಿ ಹಚ್ಚಿಕೊಂಡು ಮುಂಜಾನೆವರೆಗು ಬಿಡಬೇಕು. ಇದನ್ನು ವಾರದಲ್ಲಿ ಒಂದು ದಿನ ಮಾಡಬಹುದು.

ಐ ಕ್ರೀಮ್

ಹೆಚ್ಚಿಗೆ ಹಣವನ್ನು ಕಣ್ಣಿಗೆ ಹಚ್ಚುವ ಕ್ರೀಮ್ ಮೇಲೆ ವೆಚ್ಚ ಮಾಡಲು ಇಷ್ಚವಿಲ್ಲವೇ? ಹಾಗಿದ್ದಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸಿ. ಎಲ್ಲಾ ಎಣ್ಣೆಗಳಿಗಿಂತಲೂ ಇದು ಚರ್ಮದ ಒಳಗೆ ಬೇಗ ಇಳಿಯುತ್ತದೆ ಹಾಗು ತೆಳ್ಳಗಿನ ಸೂಕ್ಷ್ಮವಾದ ಕಣ್ಣಿನ ಕೆಳಗಿನ ಚರ್ಮದ ಪದರದ ತೇವಾಂಶವನ್ನು ಹೆಚ್ಚಿಸುತ್ತದೆ. ತಕ್ಕಮಟ್ಟಿಗೆ ಸುಕ್ಕನ್ನು ಹೋಗಲಾಡಿಸಲು ಕೂಡ ನೆರವಾಗುತ್ತದೆ.

ಮೇಕಪ್ ರಿಮೂವರ್
ಮುಖಕ್ಕೆ ಬಣ್ಣ ಹಚ್ಚಿರುವುದನ್ನು ತೆಗೆಯುವುದು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವೊಮ್ಮೆ ವಾಟರ್ ಪ್ರೂಫ್ ಆಗಿರುವ ಬಣ್ಣವನ್ನು ತೆಗೆಯಲು ಕಷ್ಟವಾಗಬಹುದು. ಕೊಬ್ಬರಿ ಎಣ್ಣೆಯನ್ನು ಬಳಸಿ ತೆಗೆದರೆ ಸುಲಭವೂ ಆಗುತ್ತದೆ ಹಾಗು ತ್ವಚೆಗೂ ಹಾನಿಯಾಗುವುದಿಲ್ಲ.

ಬಾಡಿ ಲೋಷನ್
ಎಲ್ಲಾ ಎಣ್ಣೆಗಳಿಗಿಂತಾ ಈ ಎಣ್ಣೆಯು ಬಹಳ ಬೇಗ ಒಳಗೆ ಇಳಿಯುವುದರಿಂದ ದೇಹಕ್ಕೆ ಇದನ್ನು ಬಾಡಿ ಲೋಷನ್ ಆಗಿ ಬಳಸಬಹುದು. ಈ ಎಣ್ಣೆಯ ಜೊತೆಗೆ ಆಲೋವೀರಾ ಅಥವಾ ಇತರ ಯಾವುದೇ ನಿಮ್ಮಿಚ್ಛೆಯ ಪದಾರ್ಥವನ್ನು ಇದಕ್ಕೆ ಸೇರಿಸಿ ಬಳಸಬಹುದು.

ಕವಲೊಡೆದ ಕೂದಲಿಗೂ ಪರಿಹಾರ
ತೇವಾಂಶದ ಕೊರತೆಯಿಂದಾಗಿ ಕೂದಲು ಕವಲೊಡೆದು ಅಂದವನ್ನು ಕಳೆದುಕೊಳ್ಳುತ್ತದೆ. ಆದರೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಕೂದಲನ್ನು ತೊಳೆಯುವುದರಿಂದ ಕೂದಲು ಮಿಂಚುತ್ತದೆ ಮತ್ತು ಕವಲು ಒಡೆಯುವುದಿಲ್ಲ. ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್..!

ಅಂಗಮರ್ದನ (ಮಸಾಜ್)ಎಣ್ಣೆ
ದೇಹದಲ್ಲಾಗುವ ಎಲ್ಲಾ ನೋವುಗಳಿಗೆ ಅಂಗಮರ್ದನವು ರಾಮಬಾಣವಾಗಿ ಕೆಲಸ ಮಾಡುತ್ತದೆ. ಅಲ್ಲವೇ? ಕೊಬ್ಬರಿ ಎಣ್ಣೆಯು ಉತ್ತಮ ಮಸಾಜ್ ಆಯಿಲ್ ಎಂದು ಹೇಳಲ್ಪಟ್ಟಿದೆ. ಇದಕ್ಕೆ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿದರೆ ಉತ್ತಮ ಪರಿಣಾಮ ಸಿಗುತ್ತದೆ.

ಶೇವಿಂಗ್ ಬಾಮ್
ಶೇವ್ ಮಾಡುವುದಕ್ಕೆ ಮುನ್ನ ನಿಮ್ಮ ಕೈಗಳಿಗೆ ಹಾಗು ಕಾಲ್ಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ. ಎಂದೂ ಸಿಗದ ನಿಕಟವಾದ ಶೇವನ್ನು ಕಾಣುತ್ತೀರಿ. ಈ ಸಲಹೆಯು ವಿಚಿತ್ರವೆನಿಸಿದರೂ ಕೆಲಸ ಮಾಡುತ್ತದೆ.

English summary

The Amazing Beauty Benefits Of Coconut Oil

Every Indian household has at least a jar of coconut oil lying around somewhere. So most of us are so used to its presence that we don't make much out of it. But, it is time to give that little bottle the importance it deserves; after all, there is reason why all our ancestors have used it for centuries, and why the west is raving about the oil.
Story first published: Thursday, August 18, 2016, 18:45 [IST]
X
Desktop Bottom Promotion