ಅಡುಗೆಮನೆಯ ಸಾಸಿವೆ ಎಣ್ಣೆ- ಅದೇನು ಮಾಯೆ, ಅದೇನು ಜಾದೂ!

ನಾವು ದಿನಿತ್ಯ ಬಳಸುವ ಸಾಸಿವೆ ಎಣ್ಣೆಯನ್ನು ಬಳಸಿಕೊಂಡು ದೇಹದ ಸೌಂದರ್ಯವನ್ನು ಯಾವ ರೀತಿ ಕಾಪಾಡಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.

By: manu
Subscribe to Boldsky

ಮಳೆಗಾಲ ಹೋಗಿ ಚಳಿಗಾಲ ಬಂದೇ ಬಿಟ್ಟಿದೆ. ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಕಡೆ ಹೆಚ್ಚಿನ ಗಮನ ಹರಿಸದೆ ಇದ್ದರೆ ಚರ್ಮವು ನೆರಿಗೆ ಬಿದ್ದು ವಯಸ್ಸಾದವರಂತೆ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಬೇಸಿಗೆಯಲ್ಲಿ ನಮಗೆ ಹೆಚ್ಚು ಬಾಯಾರಿಕೆಯಾಗಿ ನೀರನ್ನು ಕುಡಿಯುತ್ತೇವೆ. ಇದರಿಂದಾಗಿ ದೇಹದಲ್ಲಿ ತೇವಾಂಶವಿರುತ್ತದೆ.  ಬೆಕ್ಕಸ ಬೆರಗಾಗಿಸುವ ಅರಿಶಿನ ಪುಡಿ+ಸಾಸಿವೆ ಎಣ್ಣೆಯ ಕರಾಮತ್ತು!   

musturd oil
 

ಆದರೆ ಚಳಿಗಾಲದಲ್ಲಿ ನಮಗೆ ಬಾಯಾರಿಕೆ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆಯಾಗಿ ದೇಹವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಇದರಿಂದ ಯಾವುದೇ ಕಾರ್ಯಕ್ರಮಗಳಿಗೆ ಹೋಗಲು ನಾವು ಹಿಂದೆ ಮುಂದೆ ನೋಡಬೇಕಾಗುತ್ತದೆ. ಆದರೆ ನಾವು ಆಹಾರದಲ್ಲಿ ಬಳಸುವಂತಹ ಸಾಸಿವೆ ಎಣ್ಣೆಯನ್ನು ಬಳಸಿಕೊಂಡು ದೇಹದ ಸೌಂದರ್ಯವನ್ನು ಯಾವ ರೀತಿ ಕಾಪಾಡಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ. 

musturd oil
 

ತ್ವಚೆಯ ಕಾಂತಿ ಹೆಚ್ಚಿಸಲು
ಹಿಂದಿನ ಕಾಲದಿಂದಲೂ ಭಾರತದಲ್ಲಿ ಸ್ನಾನಕ್ಕೆ ಮೊದಲು ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಲಾಗುತ್ತಿದೆ. ಸ್ನಾನಕ್ಕೆ ಮೊದಲು ಇದನ್ನು ದೇಹಕ್ಕೆ ಹಚ್ಚಿಕೊಂಡು ಮಸಾಜ್ ಮಾಡಬಹುದು. ಮುಖದಲ್ಲಿನ ಕಲೆಗಳನ್ನು ನಿವಾರಣೆ ಮಾಡಲು ಸಾಸಿವೆ ಎಣ್ಣೆಗೆ ಕಡಲೆ ಹಿಟ್ಟು, ಮೊಸರು ಮತ್ತು ಲಿಂಬೆರಸವನ್ನು ಹಾಕಿಕೊಂಡು ಪ್ಯಾಕ್ ಮಾಡಿಕೊಳ್ಳಬಹುದು.  ಸಾಸಿವೆ ಎಣ್ಣೆ : ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!

ಮುಖದ ಕಾಂತಿಗೆ
ಚಳಿಗಾಲದಲ್ಲಿ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಕೆಲವು ಸಮಯದ ಬಳಿಕ ನೀರಿನಿಂದ ತೊಳೆಯಿರಿ. ಚರ್ಮವು ಈಗ ಮೃಧುವಾಗಿರುತ್ತದೆ. ಈಗ ಫೌಂಡೇಶನ್ ಹಚ್ಚಿ ಮೇಕಪ್ ಮಾಡಿಕೊಳ್ಳಬಹುದು.

musturd oil for hair
 

ಕೂದಲಿನ ಆರೈಕೆಗೆ
ಚಳಿಗಾಲದಲ್ಲಿ ಕೂದಲಿನ ಆರೈಕೆ ತುಂಬಾ ಮುಖ್ಯವಾಗಿರುತ್ತದೆ. ತಲೆಬುರುಡೆಯಲ್ಲಿ ತುರಿಕೆ, ಕೂದಲು ಉದುರುವಿಕೆ ಹಾಗೂ ತಲೆಹೊಟ್ಟು ಕಾಣಿಸಿಕೊಳ್ಳುತ್ತದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಬೇಕು. ಸ್ವಲ್ಪ ಸಮಯ ಬಿಟ್ಟು ಶಾಂಪೂ ಹಾಕಿಕೊಂಡು ಸ್ನಾನ ಮಾಡಿದರೆ ಆರೋಗ್ಯಕರ ಹಾಗೂ ಕಾಂತಿಯುತ ಕೂದಲನ್ನು ನೀವು ಪಡೆಯಬಹುದು.  ನಂಬಲೇಬೇಕು 'ಸಾಸಿವೆ ಎಣ್ಣೆ' ಕೂದಲಿಗೆ ಬಹಳ ಒಳ್ಳೆಯದು....   

lips care
 

ತುಟಿಗಳ ರಕ್ಷಣೆಗೆ
ಚಳಿಗಾಲದಲ್ಲಿ ತುಟಿ ಒಡೆಯುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಾ ಇರುತ್ತದೆ. ಒಡೆದ ತುಟಿಗಳಿಗೆ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದು ತುಟಿಗಳನ್ನು ಶಮನಗೊಳಿಸುತ್ತದೆ ಮತ್ತು ಮಾರುಕಟ್ಟೆಯಲ್ಲಿ ಸಿಗುವ ಲಿಪ್ಮ ಲಾಮ್ ಗಳಿಗಿಂತ ಇದು ಸುರಕ್ಷಿತ.

Story first published: Friday, November 25, 2016, 11:52 [IST]
English summary

Surprising Beauty usage of Mustard Oil

Winter is here and we are all set to welcome it with much galore, celebration and festivals. Naturally, these end-of-year events call for stepping it up a notch and looking extra special; while this may sound a bit exhausting, look no further than your kitchen shelves and rediscover the benefits of our own humble Mustard Oil , the goodness of which our grandmothers never tire of telling. Here we pointed out some beauty benefits of using Mustard Oil and looking your best this party season.
Please Wait while comments are loading...
Subscribe Newsletter