For Quick Alerts
ALLOW NOTIFICATIONS  
For Daily Alerts

ಪಾದದ ಬಿರುಕು ಪರದಾಟ ಬೇಡ, ಇಲ್ಲಿದೆ ಸೂಕ್ತ ಪರಿಹಾರ

By Manu
|

ಒಡೆದ ಪಾದಗಳನ್ನು ನಾವು ಸಾಮಾನ್ಯವಾಗಿ ಬಿರುಕುಗಳೆಂದು ಕರೆಯುತ್ತವೆ. ಇದು ಕೇವಲ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ ತುಂಬಾ ನೋವು ಹಾಗೂ ಕೆಲವೊಂದು ಸಲ ಭಾರೀ ಮುಜುಗರನ್ನುಂಟು ಮಾಡುತ್ತದೆ. ಪಾದಗಳಲ್ಲಿ ಬಿರುಕು ಕಾಣಿಸುವುದು ಪಾದಗಳ ಆರೈಕೆ ಮತ್ತು ನೈರ್ಮಲ್ಯವಿಲ್ಲದ ಕಾರಣವೆಂದು ಹೆಚ್ಚಿನವರು ಪರಿಗಣಿಸಿದ್ದಾರೆ.

ಆದಾಗ್ಯೂ ಕೆಲವೊಂದು ಇತರ ಪರಿಣಾಮ ನಿಮ್ಮ ಪಾದದ ಮೇಲಾಗಬಹುದು ಮತ್ತು ಇದು ಬಿರುಕು ಬಿಡಲು ಕಾರಣವಾಗಬಹುದು. ಕೆಲವೊಂದು ಪೌಷ್ಠಿಕಾಂಶಗಳ ಕೊರತೆಯಿಂದಲೂ ಪಾದ ಬಿರುಕು ಬಿಡಬಹುದು. ನಿಮ್ಮ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿದರೆ ಬಿರುಕು ಬಿಟ್ಟು ನೋವು ಉಂಟಾಗುವ ಅಪಾಯ ತಪ್ಪುತ್ತದೆ.

ಸಾಮಾನ್ಯವಾಗಿ ಹೆಚ್ಚಿನವರು ಇದಕ್ಕೆ ಅಸಡ್ಡೆ ತೋರುತ್ತಾರೆ. ಎಲ್ಲಿಯವರೆಗೆ ಅಂದರೆ ಈ ಬಿರುಕುಗಳು ತೀರಾ ಒಳಭಾಗದವರೆಗೆ ತಲುಪಿ ನೋವಾಗುವುದಿಲ್ಲವೋ ಅಲ್ಲಿಯವರೆಗೆ ಸುಮ್ಮನೇ ಇರುತ್ತಾರೆ. ಇದಕ್ಕೆ ಆರೈಕೆಯೇನೂ ಕಷ್ಟವಲ್ಲ. ಸುಲಭ ವಿಧಾನವೆಂದರೆ ಪಾದಗಳನ್ನು ಉಪ್ಪು ಹಾಕಿದ ನೀರಿನಲ್ಲಿ ಮುಳುಗಿಸಿಟ್ಟು ಬಳಿಕ ಕೊಂಚ ಒರಟು ಬ್ರಶ್ ಅಥವಾ ಕಲ್ಲಿನಿಂದ ಉಜ್ಜಿಕೊಳ್ಳುವುದು. ಈ ವಿಧಾನ ಹಿಡಿಸದಿದ್ದಲ್ಲಿ ಅರಿಶಿನದ ಲೇಪನ ಮಾಡಿ ಹಚ್ಚುವುದು ಸಹಾ ಫಲ ನೀಡುತ್ತದೆ. ಆದರೆ ಚರ್ಮವೈದ್ಯರು ಇದಕ್ಕೂ ಉತ್ತಮವಾದ ಪರಿಹಾರ ನೀಡಬಲ್ಲ ಕ್ರೀಮುಗಳನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಬನ್ನಿ, ಈ ಔಷಧಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ಕ್ಯೂಟಿಮ್ಯಾಕ್ಸ್ ಕ್ರೀಮ್

ಕ್ಯೂಟಿಮ್ಯಾಕ್ಸ್ ಕ್ರೀಮ್

ಹೆಚ್ಚು ವೈದ್ಯರು ಸಲಹೆ ನೀಡುವ ಔಷಧಿ ಎಂದರೆ Cutimax ಕ್ರೀಂ. ಇದು ಘನ ಪ್ಯಾರಾಫೀನ್ ಅಥವಾ ದ್ರವ ಪ್ಯಾರಾಫೀನ್ ಬಳಸಿ ತಯಾರಾಗಿರುತ್ತದೆ. ಇದು ಚರ್ಮಕ್ಕೆ ಅಗತ್ಯ ಆರ್ದ್ರತೆಯನ್ನು ನೀಡಿ ಬಿರುಕುಗಳು ಮುಚ್ಚುವಂತೆ ಮಾಡುತ್ತದೆ. ಪ್ರತಿರಾತ್ರಿ ಮಲಗುವ ಮುನ್ನ ಈ ಕ್ರೀಂ ಹಚ್ಚುವ ಮೂಲಕ ಕೆಲವೇ ದಿನಗಳಲ್ಲಿ ಬಿರುಕುಗಳು ತುಂಬಿಕೊಳ್ಳುವುದನ್ನು ನೋಡಬಹುದು.

ಎಮೋಲಿಜ಼್

ಎಮೋಲಿಜ಼್

Emoliz-ಈ ಕ್ರೀಮ್‌ನಲ್ಲಿ ಆಲಿವ್ ಎಣ್ಣೆ, ಗ್ಲೈಕೋಲಿಕ್ ಆಮ್ಲ ಮತ್ತು ವಿಟಮಿನ್ ಇ ಇದೆ. ದಪ್ಪ ಚರ್ಮವನ್ನು ಮೃದುಗೊಳಿಸಲು ಆಲಿವ್ ಎಣ್ಣೆ ಬಳಕೆಯಾದರೆ ವಿಟಮಿನ್ ಇ ಬಿರುಕಿನ ಜೀವಕೋಶಗಳನ್ನು ಮರು ಉತ್ಪತ್ತಿ ಮಾಡಿ ಬಿರುಕು ತುಂಬಿಸಲು ನೆರವಾಗುತ್ತದೆ. ಗ್ಲೈಕೋಲಿಕ್ ಆಮ್ಲ ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ. ನಿತ್ಯವೂ ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮಲಗಿದರೆ ಒಂದೇ ವಾರದಲ್ಲಿ ಬಿರುಕುಗಳು ತುಂಬಿಕೊಳ್ಳಲು ಪ್ರಾರಂಭವಾಗಿರುವುದನ್ನು ಕಾಣಬಹುದು. ಸ್ನಾನದ ಬಳಿಕವೂ ಹಚ್ಚಿಕೊಂಡರೆ ಉತ್ತಮ ಪರಿಣಾಮ ದೊರಕುತ್ತದೆ.

ಸಾದಾ ಪೆಟ್ರೋಲಿಯಂ ಜೆಲ್ಲಿ

ಸಾದಾ ಪೆಟ್ರೋಲಿಯಂ ಜೆಲ್ಲಿ

ಸರ್ವೇ ಸಾಮಾನ್ಯವಾಗಿ ದೊರಕುವ ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸೆಲಿನ್ ಸಹಾ ಹಿಮ್ಮಡಿ ಬಿರುಕುಗಳನ್ನು ತುಂಬಿಸಲು ಸಮರ್ಥವಾಗಿವೆ. ಪ್ರತಿ ರಾತ್ರಿ ಮಲಗುವ ಮುನ್ನ ಬಿರುಕುಕೊಂಡ ಹಿಮ್ಮಡಿಯನ್ನು ಪೂರ್ಣವಾಗಿ ಆವರಿಸುವಂತೆ, ಕೊಂಚ ಹೆಚ್ಚಾಗಿಯೇ ಸವರಿ ಮೇಲೆ ದಪ್ಪನೆಯ ಸಾಕ್ಸ್ ಧರಿಸಿ ಮಲಗಿ. ಮರುದಿನ ಬೆಳಿಗ್ಗೆ ತಣ್ಣನೆಯ ನೀರಿನಿಂದ ಕಾಲುಗಳನ್ನು ತೊಳೆದುಕೊಂಡು ಕಲ್ಲಿನ ಅಥವಾ ಒರಟಾದ ನೆಲದ ಮೇಲೆ ಉಜ್ಜಿಕೊಂಡು ಸಡಿಲವಾದ ಚರ್ಮದ ಹೊರಭಾಗವನ್ನು ನಿವಾರಿಸಿ.

ಬೋರೋಲಿನ್

ಬೋರೋಲಿನ್

Boroline ನಲ್ಲಿ zinc oxide ಇದ್ದು ಗಾಯಗಳನ್ನು ಮಾಗಿಸಲು ಸಮರ್ಥವಾಗಿದೆ. ಇದರಲ್ಲಿರುವ ಇನ್ನೊಂದು ಅಂಶವಾದ ಬೋರಿಕ್ ಆಮ್ಲ (boric acid) ಒಂದು ಬ್ಯಾಕ್ಟೀರಿಯಾ ನಿವಾರಕದಂತೆ ಕೆಲಸ ಮಾಡುತ್ತದೆ. ಇದರಲ್ಲಿರುವ ಜೇನುಮೇಣ ಚರ್ಮದ ಆರ್ದ್ರತೆ ನಾಶವಾಗದಂತೆ ತಡೆಯುತ್ತದೆ.

 ಶಿಯಾ ಮತ್ತು ಕೋಕೋ ಬಟರ್

ಶಿಯಾ ಮತ್ತು ಕೋಕೋ ಬಟರ್

Shea butter and cocoa butter ಬಳಸಿದ ಕ್ರೀಂ ಸಹಾ ಹಿಮ್ಮಡಿ ಬಿರುಕಿಗೆ ಉತ್ತಮ ಪರಿಣಾಮ ನೀಡುತ್ತದೆ. ಈ ಪ್ರಸಾದನಗಳು ಚರ್ಮದಲ್ಲಿ ಸುಲಭವಾಗಿ ಹೀರಲ್ಪಟ್ಟು ತುಂಬಿಕೊಳ್ಳಲು ನೆರವಾಗುತ್ತವೆ ಹಾಗೂ ಚರ್ಮದ ಕಾಂತಿ ಹೆಚ್ಚಲು ನೆರವಾಗುತ್ತವೆ. ಹಿಮ್ಮಡಿ ತುಂಬಿಕೊಳ್ಳಲು ಕೇವಲ ಕ್ರೀಮುಗಳನ್ನು ಹಚ್ಚಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ಸಾಕಷ್ಟು ಪ್ರಮಾಣದಲ್ಲಿ ನೀರನ್ನೂ ಕುಡಿಯಬೇಕು. ಇದರಿಂದ ಅಗತ್ಯ ಪ್ರಮಾಣದ ತೇವ ಮತ್ತು ಆರ್ದ್ರತೆ ದೊರೆತು ಹಿಮ್ಮಡಿ ಶೀಘ್ರವೇ ಮೊದಲಿನಂತಾಗುತ್ತದೆ.

English summary

Skin experts recommended creams for cracked heels

Cracked heels are very common in winter and you might think of treating them at home. But, home remedies for cracked heels like soaking them in salt water or applying turmeric. skin experts recomanded creams you can use to make your heels smooth and prevent and treat cracks.
X
Desktop Bottom Promotion