For Quick Alerts
ALLOW NOTIFICATIONS  
For Daily Alerts

ಒಡೆದ ಹಿಮ್ಮಡಿಗಳ ನಿವಾರಣೆಗೆ ಇಲ್ಲಿದೆ ಸುಲಭ ಅಸ್ತ್ರ

By CM prasad
|

ಕಾಲುಗಳು ದೇಹದ ಸ್ಥಂಭವಿದ್ದಂತೆ. ನಮ್ಮ ಇಡೀ ದೇಹದ ತೂಕವು ಪಾದದ ಮೇಲಿರುತ್ತದೆ. ನಾವು ನಡೆದಾಡುವ ಸಂದರ್ಭದಲ್ಲಿ ನಮ್ಮ ಪಾದಗಳ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಕೆಲವೊಂದು ಬಾರಿ ಬರಿಗಾಲಿನಲ್ಲಿ ನಡೆಯಬೇಕಾದ ಸಂದರ್ಭಗಳು ಎದುರಾಗುತ್ತವೆ. ಕೆಲವರಿಗೆ ಬರಿಗಾಲಿನಲ್ಲಿ ನಡೆಯುವುದು ಹೆಚ್ಚು ಪ್ರಿಯವೆನಿಸುತ್ತದೆ. ಅನೇಕ ಬಾರಿ ಬರಿಗಾಲಿನಲ್ಲೇ ನಡೆಯುತ್ತಿರುತ್ತಾರೆ. ಇನ್ನು ಕೆಲವರು ಕಡಲತೀರಗಳಲ್ಲಿ ಬರಿಗಾಲಿನಲ್ಲಿ ನಡೆಯುವ ಹವ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ.

ಕಡಲ ನೀರು ಅವರ ಬರಿಗಾಲಿನ ಪಾದಗಳೊಂದಿಗೆ ಆಟವಾಗಿ ಹಿಮ್ಮಡಿಯನ್ನು ಹಾನಿಯುಂಟು ಮಾಡುತ್ತವೆಂದು ಹೆಚ್ಚಿನವರಿಗೆ ಅರಿವಿಗೇ ಬರುವುದಿಲ್ಲ. ಬೇಸಿಗೆಯಲ್ಲಿ ಸಾಧಾರಣ ಚಪ್ಪಲಿ ಧರಿಸಿದರೂ ಸಹ ಈ ಸಮಸ್ಯೆ ಎದುರಾಗುತ್ತದೆ. ಬರಿಗಾಲಿನಲ್ಲಿ ಹೆಚ್ಚು ನಡೆದಾಡುವ ಅಭ್ಯಾಸ ಬೆಳೆಸಿಕೊಂಡರೆ ಖಂಡಿತಾ ನಿಮ್ಮ ಹಿಮ್ಮಡಿಗಳು ಒಡೆಯುತ್ತವೆ. ಅದರ ಪ್ರಮಾಣ ಹೆಚ್ಚಾಗಿ ಇದರಿಂದ ಮುಂದಿನ ದಿನಗಳಲ್ಲಿ ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದ ಸ್ಥಿತಿ ಎದುರಾಗುತ್ತದೆ. ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ಪರಿಹಾರ ಕಂಡುಕೊಳ್ಳುವ ಕೆಲ ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಈ ವಿಧಾನಗಳಿಂದ ನಿಮ್ಮ ಪಾದಗಳು ಮೃದುಗೊಂಡು ಹಿಮ್ಮಡಿಗಳು ನಾಜೂಕಾಗುತ್ತವೆ. ವಿವರಗಳಿಗೆ ಮುಂದೆ ಓದಿ... ಪದೇ ಪದೇ ಕಾಡುವ ಹಿಮ್ಮಡಿ ಒಡೆತಕ್ಕೆ ಬೇಸತ್ತು ಹೋಗಿರುವಿರಾ?

Simple Daily tips to cure cracked heels

ಓಟ್ ಮೀಲ್-ಜೊಜೊಬಾ ತೈಲದ ಬಳಕೆ
ಓಟ್ ಮೀಲ್ ನಲ್ಲಿ ಸತ್ತ ಜೀವಕೋಶಗಳನ್ನು ನಾಶಗೊಳಿಸುವ ಶಕ್ತಿಯಿದ್ದು, ಜೊಜೊಬಾ ತೈಲದಲ್ಲಿ ತೇವಾಂಶ ನೀಡುವ ಗುಣವಿದ್ದು, ಒಡೆದ ಹಿಮ್ಮಡಿಯನ್ನು ವಾಸಿ ಮಾಡುವ ಗುಣಲಕ್ಷಣವಿದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ- 1 ಚಮಚ ಓಟ್ ಮೀಲ್ ಪುಡಿ ಮತ್ತು ಜೊಜೊಬಾ ತೈಲ ಸಾಕಾಗುತ್ತದೆ. ಒಂದು ಬಟ್ಟಲಲ್ಲಿ ಇವೆರಡನ್ನೂ ಮಿಶ್ರಣ ಮಾಡಿಕೊಂಡು, ಒಡೆದ ಹಿಮ್ಮಡಿಯ ಭಾಗಕ್ಕೆ ನಯವಾಗಿ ಹಚ್ಚಿಕೊಳ್ಳಿ. ತದನಂತರ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸ್ವಚ್ಛಗೊಳಿಸಿ ತೇವ ಒಣಗಲು ಬಿಡಿ. ಈ ಪ್ರಕ್ರಿಯೆಯನ್ನು ಪ್ರತಿದಿನ ಅನುಸರಿಸಿದರೆ ಉತ್ತಮ ಫಲಿತಾಂಶ ದೊರೆಯಲಿದೆ.

ಲಿಂಬೆಯ ರಸ
ಲಿಂಬೆಯ ರಸವು ಅತ್ಯಂತ ಉಪಯುಕ್ತಕಾರಿಯಾಗಿದ್ದು, ನಿಮ್ಮ ಚರ್ಮದ ಆರೈಕೆಗೆ ಮತ್ತು ಒಡೆದ ಹಿಮ್ಮಡಿಯನ್ನು ವಾಸಿ ಮಾಡಲು ಹೆಚ್ಚು ನೆರವಾಗುತ್ತದೆ. ಲಿಂಬೆ ಹಣ್ಣನ್ನು ಎರಡು ಹೋಳು ಮಾಡಿ ಒಂದು ಹೋಳನ್ನು ತೆಗೆದುಕೊಳ್ಳಿ. ಈ ಲಿಂಬೆ ಹೋಳನ್ನು ಒಡೆದ ಹಿಮ್ಮಡಿಯ ಭಾಗಕ್ಕೆ ಹಿಂಡಿಕೊಂಡು ತಿಕ್ಕಿಕೊಳ್ಳಿ. ಇದನ್ನು ಐದು ನಿಮಿಷಗಳ ಕಾಲ ಅನುಸರಿಸಿ. ಈಗ ಮೃದುವಾದ ವಸ್ತ್ರ ಅಥವಾ ಬ್ರಶ್ ನಿಂದ ಪಾದದಡಿಯನ್ನು ಸ್ಕ್ರಬ್ರೂ ಪದಲ್ಲಿ ತಿಕ್ಕಿಕೊಳ್ಳಿ. ನಂತರ ನೀರಿನಿಂದ ಸ್ವಚ್ಛಗೊಳಿಸಿರಿ.

ಮತ್ತೊಂದು ವಿಧಾನವೆಂದರೆ ಲಿಂಬೆ ರಸ ಮಿಶ್ರಿತ ಬೆಚ್ಚನೆಯ ನೀರಿರುವ ಚಿಕ್ಕ ಬಕೆಟ್ ನಲ್ಲಿ ನಿಮ್ಮ ಪಾದಗಳನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿಕೊಳ್ಳಿ. ಈ ವಿಧಾನವನ್ನು 2 ರಿಂದ 3 ವಾರಗಳ ಕಾಲ ಅನುಸರಿಸಿ. ಲಿಂಬೆ ರಸ ಮತ್ತು ಜಜ್ಜಿದ ಪರಂಗಿ ಹಣ್ನನ್ನೂ ಸಹ ಹಿಮ್ಮಡಿ ಒಡೆಯುವಿಕೆಯನ್ನು ವಾಸಿ ಮಾಡುತ್ತದೆ. ಇದನ್ನು ಸುಮಾರು 15 ರಿಂದ 20 ನಿಮಿಷಗಳ ನಂತರ ತಿಳಿ ನೀರಿನೊಂದಿಗೆ ಸ್ವಚ್ಛಗೊಳಿಸಿರಿ. ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

ಬಾಳೆಹಣ್ಣು ಮತ್ತು ಬೆಣ್ಣೆ ಹಣ್ಣಿನ ಮಾಸ್ಕ್
ಯಾವುದೇ ಅಡ್ಡಪರಿಣಾಮ ಉಂಟಾಗದಂತೆ ಅಂದವಾದ ಮತ್ತು ಮೃದುವಾದ ಪಾದಗಳನ್ನು ಹೊಂದಲು ಮತ್ತೊಂದು ಉತ್ತಮ ಪರಿಹಾರವೆಂದರೆ ಬಾಳೆಹಣ್ಣು ಮತ್ತು ಅವೆಕಾಡೊ ಮಾಸ್ಕ್ ನ ಬಳಕೆ. ಅವೆಕಾಡೊಗಳಲ್ಲಿ ಅವಶ್ಯಕ ಎಣ್ಣೆಯ ಸತ್ವಗಳು, ವಿಟಮಿನ್ ಗಳು ಮತ್ತು ಅವಶ್ಯಕ ಬೊಜ್ಜಿನ ಅಂಶಗಳು ಹೇರಳವಾಗಿದ್ದು, ನಿಮ್ಮ ಒಣ ಚರ್ಮವನ್ನು ನಿವಾರಿಸಲು ನೆರವಾಗುತ್ತದೆ. ಬಾಳೆಹಣ್ಣಿನಲ್ಲಿ ತೇವಾಂಶ ನೀಡುವ ಗುಣವಿದ್ದು ನಿಮ್ಮ ಚರ್ಮವನ್ನು ಮೃದುಗೊಳಿಸಿ ಹೆಚ್ಚು ನಾಜೂಕಾಗಿಸುತ್ತದೆ.

ಒಂದು ಹಣ್ಣಾದ ಬಾಳೆಹಣ್ಣನ್ನು ಹೋಳು ಮಾಡಿಕೊಳ್ಳಿ, ಇದಕ್ಕೆ ಅರ್ಧ ಆವೆಕಾಡೊ (ಬೆಣ್ಣೆ ಹಣ್ಣು) ಅನ್ನು ಹಾಕಿ ಒಂದು ಬಟ್ಟಲಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ದಪ್ಪನೆಯ ಪೇಸ್ಟ್ ಅನ್ನು ನಿಮ್ಮ ಹಿಮ್ಮಡಿ ಮತ್ತು ಪಾದದಡಿಯ ಭಾಗಕ್ಕೆ ಲೇಪಿಸಿಕೊಂಡು 15 ರಿಂದ 20 ನಿಮಿಷ ಹಾಗೆಯೇ ಬಿಡಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿರಿ. ಈ ವಿಧಾನವನ್ನು ಕ್ರಮವಾಗಿ ಅನುಸರಿಸಿದರೆ ಉತ್ತಮ ಫಲಿತಾಂಶ ದೊರೆಯಲಿದೆ.

ಜೇನುತುಪ್ಪದ ಆರೈಕೆ


ಒಡೆದ ಹಿಮ್ಮಡಿಗಳಿಗಾಗಿ ಜೇನುತುಪ್ಪ ಹಾಗೂ ವಿನೆಗರ್ ನ ಮಿಶ್ರಣವು ಚರ್ಚೆಯ ಮುಖ್ಯ ವಸ್ತುವಾಗಿದೆ. ಜೇನುತುಪ್ಪವು ಒಡೆದ ಹಿಮ್ಮಡಿಗಳಿಗೆ ತೇವಾ೦ಶವನ್ನು ಪೂರೈಸಿ, ಅವುಗಳ ಸೋ೦ಕುಗಳನ್ನು ನಿವಾರಿಸಿದರೆ, ಬಿಳಿ ವಿನೆಗರ್ ಮೃತ ಚರ್ಮವನ್ನು ತೊಡೆದುಹಾಕುತ್ತದೆ. ಈ ಮಿಶ್ರಣವನ್ನು ನಿಮ್ಮ ಪಾದಗಳಿಗೆ ಮಾಲೀಸು ಮಾಡಿಕೊಳ್ಳಿರಿ ಹಾಗೂ ಬಳಿಕ ಅದನ್ನು ಪಾದಗಳಲ್ಲಿಯೇ ಹಾಗೆಯೇ ಒಣಗಲು ಬಿಡಿರಿ. ಇದಾದ ಬಳಿಕ, ಹಿಮ್ಮಡಿಗಳ ಬಿರುಕುಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಿ೦ದ ತೊಳೆದುಬಿಡಿರಿ.
English summary

Simple Daily tips to cure cracked heels

There are times when walking bare foot is the most exhilarating experiences of all. Or wearing that flip-flops on those summery days, or just walking bare foot, on the beach and the waves playing hide and seek with your feet. While all this may sound as romantic there are many who loves to do it but cracked heels stop them from doing so. Here are simple home remedies which will help you to get over cracked heels issues. 
Story first published: Thursday, February 11, 2016, 18:06 [IST]
X
Desktop Bottom Promotion