For Quick Alerts
ALLOW NOTIFICATIONS  
For Daily Alerts

ಆಪಲ್ ಸೈಡರ್ ವಿನೆಗರ್ ಎಂಬ ಸೌಂದರ್ಯದ ಗಣಿ...

By CM Prasad
|

ಆಪಲ್ ಸೈಡರ್ ವಿನೆಗರ್ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ಸೇಬಿನ ರಸದಿಂದ ತಯಾರಿಸಲಾಗುವ ಒಂದು ರೀತಿಯ ಮದ್ಯದ ಅಂಶಕ್ಕೆ ರೂಪಾಂತರವಾಗುವ ರಸಕ್ಕೆ ಆಪಲ್‌ ಸೈಡರ್ ವಿನೆಗರ್ ಎಂದು ಕರೆಯಲಾಗುತ್ತದೆ. (ಸೇಬುಗಳನ್ನು ಹುಳಿಬರಿಸಿ ತಯಾರಿಸಲಾಗುವ ಒಂದು ಕಂದು ಬಣ್ಣದ ದ್ರವ). ಇದು ಈಗ ಎಲ್ಲಾ ಕಡೆ ಕೈಗೆಟಕುವ ದರದಲ್ಲಿ ಲಭ್ಯವಿದೆ. ಇದರಲ್ಲಿ ನಾರಿನಾಂಶ ಮತ್ತು ಪೌಷ್ಠಿಕಾಂಶಗಳ ಸತ್ವವು ಯಥೇಚ್ಛವಾಗಿದ್ದು, ನೈಸರ್ಗಿಕವಾಗಿ ದೊರಕುವ ಒಂದು ವಿಶಿಷ್ಟ ಪದಾರ್ಥವಾಗಿದೆ.

ಅದರಲ್ಲೂ ಸಿಹಿ ಬಯಕೆಯ ಸಮಸ್ಯೆಗೆ, ದೇಹದಲ್ಲಿನ ಆಮ್ಲದ ಸಮಸ್ಯೆಗೆ ಮತ್ತು ಇನ್ನಿತರೆ ಸಮಸ್ಯೆಗೆ ಹೆಚ್ಚು ಪ್ರಯೋಜನಕಾರಿ. ಇತ್ತೀಚೆಗೆ ಇದು ಎಲ್ಲಾ ಮನೆಗಳಲ್ಲೂ ಜನಪ್ರಿಯತೆ ಹೊಂದುತ್ತಿದೆ. ಆದ್ದರಿಂದ ನಿಮ್ಮ ದೇಹದ ಆರೋಗ್ಯಕ್ಕೆ ಇದರಿಂದ ಉಪಯುಕ್ತವಾಗುವ ವಿಶಿಷ್ಟ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಮುಂದೆ ಓದಿ...

ನವೆಯನ್ನು ನಿವಾರಿಸಲು

ನವೆಯನ್ನು ನಿವಾರಿಸಲು

ನಿಮಗೆ ಹೆಚ್ಚು ನವೆ ಕಾಡುತ್ತಿದೆಯೇ? ಹತ್ತಿಯ ಉಂಡೆಯನ್ನು ಆಪಲ್ ಸೈಡರ್ ವಿನೆಗರ್ ನಲ್ಲಿ ಅದ್ದಿ ನವೆಯ ಭಾಗಕ್ಕೆ ಹಚ್ಚಿ. ಒಂದು ವೇಳೆ ನಿಮ್ಮ ಇಡೀ ದೇಹವೇ ನವೆಯಾದಲ್ಲಿ ಇದರ ಒಂದು ಲೋಟದ ರಸವನ್ನು ನೀವು ಸ್ನಾನ ಮಾಡುವ ನೀರಿಗೆ ಬೆರೆಸಿ, ಈ ನೀರನ್ನು ಸ್ನಾನಕ್ಕೆ ಬಳಸಿ. ಇದರಲ್ಲಿರುವ ರೋಗನಿರೋಧಕ ಶಕ್ರಿಯು ನಿಮ್ಮ ನವೆಯನ್ನು ಸುಲಭವಾಗಿ ನಿವಾರಿಸುತ್ತದೆ.

ಹಳದಿ ಉಗುರುಗಳಿಗೆ ಉಪಶಮನ

ಹಳದಿ ಉಗುರುಗಳಿಗೆ ಉಪಶಮನ

ದಟ್ಟವಾದ ಉಗುರಿನ ತಿದಿಯ ಕಲೆಗಳು ನಿಮ್ಮ ಉಗುರಿನ ಮತ್ತು ಬೆರಳಿನ ಅಂದವನ್ನು ಕಡಿಮೆಮಾಡುತ್ತದೆ. ಒಂದು ಬಟ್ಟಲಲ್ಲಿ ಬೆಚ್ಚನೆಯ ನೀರು ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿಟ್ಟುಕೊಳ್ಳಿ. ಈ ಮಿಶ್ರಣಕ್ಕೆ ನಿಮ್ಮ ಉಗುರುಗಳನ್ನು 20 ನಿಮಿಷಗಳ ಕಾಲ ಅದ್ದಿ ಇಟ್ಟುಕೊಳ್ಳಿ. ಈ ಪ್ರಕ್ರಿಯೆಯನ್ನು ಪ್ರತಿದಿನ ಅನುಸರಿಸಿದರೆ ನಿಮ್ಮ ಹಳದಿ ಉಗುರುಗಳ ಕಲೆ ಮಾಯವಾಗುತ್ತದೆ.

ತಲೆಯ ಹೊಟ್ಟು ನಿವಾರಣೆ

ತಲೆಯ ಹೊಟ್ಟು ನಿವಾರಣೆ

ತಲೆ ಹೊಟ್ಟು ಶಮನಮಾಡಲು ನೈಸರ್ಗಿಕ ವಿಧಾನವನ್ನು ಹುಡುಕುತ್ತಿರುವಿರೇ? ನಿಮ್ಮ ಅಡುಗೆ ಮನೆಯ ಕಪಾಟಿನಲ್ಲಿರುವ ಆಪಲ್ ಸೈಡರ್ ವಿನೆಗರ್ ಇದ್ದರೆ ಸಾಕು. ಇದನ್ನು ಹಚ್ಚಿಕೊಂಡ ಹತ್ತಿಯ ಉಂಡೆಯನ್ನು ನಿಮ್ಮ ನೆತ್ತಿಯ ಚರ್ಮದ ಭಾಗಕ್ಕೆ ನಯವಾಗಿ ತಿಕ್ಕಿ. ನಂತರ ನಿಮ್ಮ ಕೂದಲನ್ನು ಕರವಸ್ತ್ರದೊಂದಿಗೆ ಬಿಗಿಯಾಗಿ ಕಟ್ಟಿಕೊಳ್ಳಿ. ಅರ್ಧ ಗಂಟೆಯ ನಂತರ ಬೆಚ್ಚನೆಯ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ. ಈ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ವಾರಕ್ಕೆ ಎರಡು ಬಾರಿ ಅನುಸರಿಸಿದರೆ ನಿಮ್ಮ ತಲೆ ಹೊಟ್ಟು ಮಂಗಮಾಯ.

ಮೊಡವೆಗಳನ್ನು ಮಾಗುವಂತೆ ಮಾಡುತ್ತದೆ

ಮೊಡವೆಗಳನ್ನು ಮಾಗುವಂತೆ ಮಾಡುತ್ತದೆ

ತ್ವಚೆಯಲ್ಲಿನ ಸತ್ತ ಜೀವಕೋಶಗಳನ್ನು ಹೊರತೆಗೆದು ತ್ವಚೆಗೆ ನವಚೈತನ್ಯ ತುಂಬಿ ಮೊಡವೆಗಳನ್ನು ಮತ್ತು ಮೊಡವೆಗಳ ಕಲೆಗಳನ್ನು ಹೋಗಲಾಡಿಸುವ ವಿಶಿಷ್ಠ ಗುಣ ಆಪಲ್ ಸೈಡರ್ ವಿನೆಗರ್ ನಲ್ಲಿ ಹೇರಳವಾಗಿದೆ. ಈ ರಸವನ್ನು ನೀರಿನೊಂದಿಗೆ ತೆಳುಗೊಳಿಸಿ ಮೊಡವೆಗಳ ಜಾಗಕ್ಕೆ ಹತ್ತಿಯ ಸಹಾಯದಿಂದ ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳಿ. ಮೊಡವೆಯ ಕಲೆಗಳು ಮಾಯವಾಗುವವರೆಗೆ ಈ ಪ್ರಕ್ರಿಯೆಯನ್ನು ಅನುಸರಿಸಿ.

 ದೇಹದ ದುರ್ವಾಸನೆಯನ್ನು ಹೋಗಲಾಡಿಸಿ

ದೇಹದ ದುರ್ವಾಸನೆಯನ್ನು ಹೋಗಲಾಡಿಸಿ

ನಿಮ್ಮ ಕಂಕುಳ ಭಾಗದಲ್ಲಿ ಹೆಚ್ಚು ದುರ್ವಾಸನೆ ಬರುವ ಲಕ್ಷಣ ಎಲ್ಲರಲ್ಲೂ ಸಹಜವಾಗಿ ಕೇಳಿಬರುತ್ತದೆ. ನೀವು ಬಳಸುವ ಡಿಯೋಡ್ರೆಂಟ್ ಗಳು ಕೇವಲ ವಾಸನೆಯನ್ನು ಮುಸುಕಿನಂತೆ ಮಾಡಿಕೊಳ್ಳುತ್ತದೆ. ಆಪಲ್ ಸೈಡರ್ ವಿನೆಗರ್ ನಿಂದ ಇದರ ವಾಸನೆಯನ್ನು ಸುಲಭವಾಗಿ ಹೋಗಲಾಡಿಸಬಹುದು.ಹತ್ತಿಯ ಉಂಡೆಯಿಂದ ಈ ರಸವನ್ನು ನಿಮ್ಮ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ. ದಿನಕ್ಕೆ ಎರಡು ಬಾರಿ ಹಚ್ಚಿಕೊಂಡು ನಂತರ ಸುವಾಸನಾವರ್ದಕವನ್ನು ಹಚ್ಚಿಕೊಳ್ಳಿ. ಈ ಉಪಾಯ ನಿಜಕ್ಕೂ ನಿಮ್ಮ ಇಡೀ ದಿನವನ್ನು ತಾಜಾ ಆಗಿ ಇರಿಸುತ್ತದೆ.

English summary

Reasons why apple cider vinegar is a must in every home

Packed with fiber and nutrients, apple cider vinegar can be a solution for your sugar cravings, acid reflux and many other problems. With so many benefits, it is fast becoming a staple in every household. So we share with you a list on how it can benefit you in your day to day life.
Story first published: Tuesday, February 9, 2016, 18:53 [IST]
X
Desktop Bottom Promotion