For Quick Alerts
ALLOW NOTIFICATIONS  
For Daily Alerts

ಕಂಕುಳ ಕೂದಲಿನ ನಿವಾರಣೆಗೆ ಫಲಪ್ರದ ಮನೆಮದ್ದು

By Arshad
|

ಮಹಿಳೆಯರಿಗೆ ಮುಜುಗರ ತರಿಸುವ ವಿಷಯವೆಂದರೆ ಕಂಕುಳ ಕೂದಲ ಬೆಳವಣಿಗೆ. ಅದರಲ್ಲೂ ತೋಳಿಲ್ಲದ ರವಿಕೆ ಅಥವಾ ಮೇಲ್ವಸ್ತ್ರವನ್ನು ತೊಡುವಾಗ ಅಂತಿಮಕ್ಷಣದಲ್ಲಿ ಹಿಂದಿನ ಬಾರಿ ನಿವಾರಿಸಿದ್ದ ರೋಮಗಳು ಮತ್ತೆ ಮೊಳಕೆಯೊಡೆದಿರುವುದು ಕಂಡುಬಂದು ಅತೀವ ಮುಜುಗರ ತರಿಸುತ್ತದೆ. ಕಂಕುಳ ಕೂದಲ ನಿವಾರಣೆಗೆ ಹಲವು ಸುಲಭವಾದ ಮನೆಮದ್ದುಗಳಿವೆ. ಇವು ಉಪಯೋಗಿಸಲು ಸುಲಭ ಹಾಗೂ ಅಡುಗೆಮನೆಯಲ್ಲಿ

ಇರುವಂತಹ ಮತ್ತು ಅಗ್ಗವೂ ಆಗಿರುವ ಇವುಗಳ ಬಳಕೆ ಸುರಕ್ಷಿತವೂ ಆಗಿದೆ. ಮಾರುಕಟ್ಟೆಯಲ್ಲಿ ರಾಸಾಯನಿಕ ಆಧಾರಿತ ಕೂದಲನ್ನು ನಿವಾರಿಸುವ ಪ್ರಸಾಧನಗಳು ಲಭ್ಯವಿವೆ. ಆದರೆ ಇವುಗಳನ್ನು ಸತತವಾಗಿ ಬಳಸುವುದರಿಂದ ಸೂಕ್ಷ್ಮ ಸಂವೇದಿಯಾಗಿರುವ ಈ ಭಾಗದ ಚರ್ಮ ಘಾಸಿಗೊಳಗಾಗಬಹುದು.

Powerful Remedies To Lessen Underarm Hair Growth

ಕೂದಲನ್ನು ನಿವಾರಿಸುವುದು ಉಪಯುಕ್ತ ಕ್ರಮವಾದರೂ ಇದರ ಬೆಳವಣಿಗೆಯನ್ನು ನಿಧಾನಗೊಳಿಸುವುದು ಜಾಣತನದ ಕ್ರಮ. ಆದರೆ ಇದರ ಬಳಕೆ ಚರ್ಮಕ್ಕೆ ಹಾನಿಗೊಳಿಸಲಾರದೇ ಎಂಬ ಅನುಮಾನ ಮೂಡಿರಬಹುದು. ಇಂದು ಕಂಕುಳ ಕೂದಲ ಬೆಳವಣಿಗೆಯನ್ನು ನಿಧಾನಗೊಳಿಸುವ ಮೂರು ವಿಧಾನಗಳನ್ನು ವಿವರಿಸಲಾಗಿದೆ. ಈ ವಿಧಾನಗಳಲ್ಲಿ ಸುಲಭವಾಗಿ ಲಭ್ಯವಿರುವ ಮತ್ತು ಚರ್ಮಕ್ಕೆ ಸುರಕ್ಷಿತವಾದ ಮೂರು ಸಾಮಾಗ್ರಿಗಳನ್ನು ಬಳಸಲಾಗಿದೆ. ಇದರಿಂದ ಕೂದಲು ಯಾವುದೇ ನೋವು ಕೊಡದೇ ಉದುರಿ ಹೋಗುವುದು ಮಾತ್ರವಲ್ಲ, ಇಲ್ಲಿ ಹೊಸ ಕೂದಲು ಹುಟ್ಟಿ ಮತ್ತೆ ಬೆಳೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ನಯವಾದ, ಸೌಮ್ಯವಾದ ಚರ್ಮ ಬಹಳ ದಿನಗಳವರೆಗೆ ಉಳಿದು ನಿಮ್ಮ ನೆಚ್ಚಿನ ತೋಳುರಹಿತ ಉಡುಗೆಗಳನ್ನು ತೊಡಲು ಅವಕಾಶ ಮಾಡಿಕೊಡುತ್ತದೆ. ಈ ವಿಧಾನವನ್ನು ಅನುಸರಿಸಿದ ಬಳಿಕ ಯಾವುದೇ ಕೃತಕ ಪ್ರಸಾಧನಗಳನ್ನು, ಬೆವರು ಬರದಂತೆ ಮಾಡುವ ದ್ರವ ಅಥವಾ ಸುಗಂಧದ್ರವ್ಯಗಳನ್ನು ಬಳಸದಿರುವಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಕೂದಲು ಉದುರಿದ ಬಳಿಕ ಈ ಭಾಗದ ಚರ್ಮ ಇನ್ನಷ್ಟು ಸೂಕ್ಷ್ಮಸಂವೇದಿಯಾಗಿರುವ ಕಾರಣ ಸುಗಂಧ ಉರಿ ಮತ್ತು ಅಲರ್ಜಿಯನ್ನು ತರಬಹುದು. ಈ ವಿಧಾನದ ಮೂಲಕ ಒಂದೇ ವಾರದಲ್ಲಿ ನಿರೀಕ್ಷಿತ ಪರಿಣಾಮಗಳನ್ನು ಪಡೆಯಬಹುದು. ಕಂಕುಳದಲ್ಲಿರುವ ಕೂದಲನ್ನು ತೆಗೆಯಲು ಸಲಹೆಗಳು

ಹಸಿ ಪಪ್ಪಾಯ
ಕಂಕುಳ ಚರ್ಮಕ್ಕೆ ಹಸಿ ಪೊಪ್ಪಾಯಿ ಅತ್ಯುತ್ತಮ ಆರೈಕೆ ನೀಡುತ್ತದೆ. ಇದಕ್ಕಾಗಿ ಹಸಿ ಪಪ್ಪಾಯಿಯ ಸಿಪ್ಪೆ ಸುಲಿದು ಬೀಜ ನಿವಾರಿಸಿ ನಡುವಿನ ತಿರುಳನ್ನು ತುರಿದು ನಯವಾಗಿ ಅರೆಯಿರಿ. ಅಗತ್ಯವೆನಿಸಿದಷ್ಟು ಪ್ರಮಾಣದಲ್ಲಿ ಹಾಲಿನ ಕ್ರೀಂ, ಜೇನುತುಪ್ಪ ಮತ್ತು ಪಪ್ಪಾಯಿಯ ಅರೆದ ತಿರುಳನ್ನು ಮಿಶ್ರಣ ಮಾಡಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ಸ್ವಚ್ಛಗೊಳಿಸಿದ ಕಂಕುಳ ಭಾಗಕ್ಕೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಒಣಗಿದ ಬಳಿಕ ಬೆರಳುಗಳಿಂದ ನಯವಾಗಿ ಕೂದಲು ಬೆಳೆಯುವ ದಿಕ್ಕಿನಲ್ಲಿ ಮಸಾಜ್ ಮಾಡಿ.

ಪುಡಿ ಉದುರುವ ಕಾರಣ ಕೆಳಗೆ ಬಟ್ಟೆಯೊಂದನ್ನು ಹರಡಿ ಮಸಾಜ್ ಮಾಡುವುದು ಉತ್ತಮ. ಬಳಿಕ ಸ್ನಾನ ಮಾಡುವ ವೇಳೆ ಸೌಮ್ಯ ಸೋಪು ಬಳಸಿ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ. ಈ ವಿಧಾನದಿಂದ ಕೂದಲುಗಳು ಸುಲಭವಾಗಿ ಉದುರುವುದು ಮಾತ್ರವಲ್ಲ ಹೊಸ ಕೂದಲು ತುಂಬಾ ತಡವಾಗಿ ಹುಟ್ಟುತ್ತದೆ ಹಾಗೂ ಚರ್ಮ ಅತಿ ಸುಂದರ, ಸೌಮ್ಯ ಮತ್ತು ಸಹಜವರ್ಣವನ್ನು ಹೊಂದುತ್ತದೆ. ಕಂಕುಳವನ್ನು ಬಿಳುಪಾಗಿಸಲು ಟಿಪ್ಸ್

ಮೊಟ್ಟೆ, ಮೆಕ್ಕೆಜೋಳದ ಹಿಟ್ಟು
ಎರಡು ಮೊಟ್ಟೆಗಳನ್ನು ಒಡೆದು ಅದರ ಬಿಳಿಭಾಗವನ್ನು ಬೇರ್ಪಡಿಸಿ. ಈ ಬಿಳಿಭಾಗಕ್ಕೆ ಒಂದು ದೊಡ್ಡ ಚಮಚ ಮೆಕ್ಕೆಜೋಳದ ಹಿಟ್ಟು (corn flour) ಸೇರಿಸಿ ಚೆನ್ನಾಗಿ ಗೊಟಾಯಿಸಿ. ಗೊಟಾಯಿಸಿದಷ್ಟೂ ಈ ದ್ರವ ಗಾಢವಾಗುತ್ತಾ ಹೋಗುತ್ತದೆ. ಚರ್ಮದ ಮೇಲೆ ಹಚ್ಚುವಷ್ಟು ಗಾಢವಾದ ಬಳಿಕ ಕಂಕುಳಿಗೆ ದಪ್ಪನಾಗಿ ಹಚ್ಚಿಕೊಳ್ಳಿ. ಇದನ್ನು ಕನಿಷ್ಠ ಹದಿನಾರು ನಿಮಿಷ ಒಣಗಲು ಬಿಡಿ. ಬಳಿಕ ಕಿತ್ತಳೆಯ ಸಿಪ್ಪೆ ಸುಲಿದಂತೆ ಒಂದೆಡೆಯಿಂದ ಸುಲಿಯುತ್ತಾ ಬನ್ನಿ.


ಇದು ಸುಲಭವಾಗಿ ಬರಬಹುದಾದ ಕೂದಲುಗಳನ್ನು ನೋವಿಲ್ಲದೇ ನಿವಾರಿಸುತ್ತದೆ ಹಾಗೂ ಉಳಿದ ಕೂದಲುಗಳನ್ನು ಸಡಿಲಗೊಳಿಸುತ್ತದೆ. ವಾರಕ್ಕೆರಡು ಬಾರಿ ಈ ವಿಧಾನ ಅನುಸರಿಸುವ ಮೂಲಕ ಎಲ್ಲಾ ಕೂದಲುಗಳು ಸುಲಭವಾಗಿ ನಿವಾರಣೆಯಾಗುವುದು ಮಾತ್ರವಲ್ಲ, ಮುಂದಿನ ಕೂದಲುಗಳು ಬೆಳೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಕಾಬೂಲ್ ಕಡ್ಲೆ ಲೇಪನ
ಬಿಳಿ ಕಡ್ಲೆ ಕಾಳು ಅಥವಾ ಕಾಬೂಲು ಕಡ್ಲೆ ಸಹಾ ದೇಹದ ಅನಗತ್ಯ ರೋಮಗಳ ನಿವಾರಣೆಗೆ ಉತ್ತಮ ಪರಿಹಾರವಾಗಿದೆ. ಕಂಕುಳಿಗೆ ಬಳಸಲು ಮೂರು ದೊಡ್ಡ ಚಮಚ ಕಾಬೂಲು ಕಡಲೆ ಹಿಟ್ಟಿಗೆ ಮೂರು ದೊಡ್ಡಚಮಚ ಹಸಿ ಹಾಲು (ಅಥವಾ ತಣ್ಣನೆಯ ಹಾಲು) ಸೇರಿಸಿ ನಯವಾದ ಲೇಪನ ತಯಾರಿಸಿ. ಬಳಿಕ ಒಂದು ದೊಡ್ಡ ಚಮಚ ಮೊಸರು ಸೇರಿಸಿ ಮಿಶ್ರಣ ತಯಾರಿಸಿ.


ಈ ಮಿಶ್ರಣವನ್ನು ಕಂಕುಳಿಗೆ ದಪ್ಪನಾಗಿ ಹಚ್ಚಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸ್ನಾನ ಮಾಡಿ ಸೌಮ್ಯ ಸೋಪು ಬಳಸಿ ನಿವಾರಿಸಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಅನಗತ್ಯ ಕೂದಲು ಸುಲಭವಾಗಿ ನಿವಾರಣೆಯಾಗುತ್ತದೆ ಹಾಗೂ ಹೊಸಕೂದಲು ತುಂಬಾ ತಡವಾಗಿ ಹುಟ್ಟುತ್ತದೆ.
English summary

Powerful Remedies To Lessen Underarm Hair Growth

Underarm hair growth is a bit of a problem for all women. It makes a woman's life hell, especially if she has to wear a sleeveless outfit at the last minute. To remove underarm hair, there are several home remedies that ladies can use that lessens the embarrassing situation a lady has to face. Today with the introduction of hair removal creams, women are going gaga over the inexpensive products.
X
Desktop Bottom Promotion