ಪರ್ಫ್ಯೂಮ್ ಸುವಾಸನೆಗೆ ಪಕ್ಕದವರು ಓಡಿ ಹೋಗದಿರಲಿ!

ಸುಗಂಧ ದ್ರವ್ಯ ಹಾಕಿಕೊಂಡ ಬಳಿಕ ನಮ್ಮತ್ತ ಜನರನ್ನು ಸೆಳೆಯಬೇಕೇ ಹೊರತು ನಮ್ಮಿಂದ ಅವರು ದೂರ ಓಡಿಹೋಗಬಾರದು. ಹೀಗೆ ಆಗಲು ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಕೂಡ ಪ್ರಮುಖ ಕಾರಣವಾಗಿದೆ.

By: manu
Subscribe to Boldsky

ನಾವು ಕಾಲಕ್ಕೆ ತಕ್ಕಂತೆ ಫ್ಯಾಷನ್ ಮಾಡುತ್ತಾ ಇರುತ್ತೇವೆ. ಬಟ್ಟೆಯಿಂದ ಹಿಡಿದು ಪ್ರತಿಯೊಂದು ವಿಷಯಕ್ಕೂ ಮಹತ್ವ ನೀಡುತ್ತೇವೆ. ಒಳ್ಳೆಯ ಬಟ್ಟೆ ಧರಿಸಿದರೆ ಮಾತ್ರ ಸಾಲದು, ನಮಗೆ ಒಪ್ಪಿಕೊಳ್ಳುವಂತಹ ಸುಗಂಧ ದ್ರವ್ಯ ಕೂಡ ಮುಖ್ಯವಾಗುತ್ತದೆ.

ಸುಗಂಧ ದ್ರವ್ಯ (ಪರ್ಫ್ಯೂಮ್) ಹಾಕಿಕೊಂಡ ಬಳಿಕ ನಮ್ಮತ್ತ ಜನರನ್ನು ಸೆಳೆಯಬೇಕೇ ಹೊರತು ನಮ್ಮಿಂದ ಅವರು ದೂರ ಓಡಿಹೋಗಬಾರದು. ಹೀಗೆ ಆಗಲು ನಾವು ಮಾಡುವಂತಹ ಕೆಲವೊಂದು ತಪ್ಪುಗಳು ಕೂಡ ಪ್ರಮುಖ ಕಾರಣವಾಗಿದೆ. ಸುಗಂಧ ದ್ರವ್ಯ ಹಾಕಿಕೊಳ್ಳುವ ನಾವು ಕೆಲವೊಂದು ತಪ್ಪುಗಳನ್ನು ಮಾಡುತ್ತಾ ಇರುತ್ತೇವೆ. ಇಂತಹ ತಪ್ಪುಗಳನ್ನು ಕಡೆಗಣಿಸಬೇಕು. ಸುಗಂಧ ದ್ರವ್ಯ ಇಲ್ಲದೇ ದೇಹದ ದುರ್ವಾಸನೆಯನ್ನು ತಡೆಯಬಹುದೇ?

ತುಂಬಾ ಒಳ್ಳೆಯ ಹಾಗೂ ದೀರ್ಘ ಕಾಲ ಸುಗಂಧ ಉಳಿಯಬೇಕೆಂದರೆ ದುಬಾರಿಯಾಗಿರುವ ಸುಗಂಧ ದ್ರವ್ಯವನ್ನು ಹಾಕಿಕೊಳ್ಳಬೇಕು. ದುಬಾರಿ ಸುಗಂಧ ದ್ರವ್ಯವನ್ನು ಧರಿಸಿದ ಬಳಿಕವೂ ನಾವು ಮಾಡುವಂತಹ ಕೆಲವು ತಪ್ಪುಗಳು ಸುಗಂಧ ದ್ರವ್ಯವು ದೀರ್ಘ ಕಾಲ ಸುವಾಸನೆಯನ್ನು ಬೀರಲು ವಿಫಲವಾಗುತ್ತದೆ.   ದಿನವಿಡೀ ಇರುತ್ತೆ ಸುಗಂಧದ್ರವ್ಯದ ಸುವಾಸನೆ

ಪ್ರತಿಯೊಬ್ಬರು ಮಾಡುವಂತಹ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ನಾವು ಈ ಲೇಖನದಲ್ಲಿ ಪಟ್ಟಿ ಮಾಡಿದ್ದೇವೆ. ಈ ತಪ್ಪುಗಳನ್ನು ಸಂಪೂರ್ಣವಾಗಿ ಕಡೆಗಣಿಸಿ. ನಿಮಗೆ ಹಾಗೂ ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪಿಕೊಳ್ಳುವಂತಹ ಸುಗಂಧ ದ್ರವ್ಯವನ್ನು ಆಯ್ಕೆ ಮಾಡಿಕೊಳ್ಳಿ. ಸುವಾಸನೆ ಸೂಸುವ ಸುಗಂಧ ದ್ರವ್ಯದ ಹಿಂದಿರುವ ಕರಾಳ ಸತ್ಯ

ಕೆಲವೊಂದು ಸುಗಂಧ ದ್ರವ್ಯಗಳು ಒಬ್ಬರ ಮೇಲೆ ತುಂಬಾ ಚೆನ್ನಾಗಿ ಸುವಾಸನೆ ಬೀರಿದರೆ ಅದೇ ಸುಗಂಧ ದ್ರವ್ಯವು ಬೇರೆಯವರಲ್ಲಿ ಅದೇ ಸುವಾಸನೆಯನ್ನು ಬೀರಲ್ಲ. ಸುಗಂಧ ದ್ರವ್ಯ ಹಾಕಿಕೊಳ್ಳುವಾಗ ನಾವು ಮಾಡುವಂತಹ ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡುವ..

ಮಣಿಗಂಟನ್ನು ಉಜ್ಜಿಕೊಳ್ಳುವುದು

ಸುಗಂಧ ದ್ರವ್ಯ ಸಿಂಪಡಣೆ ಬಳಿಕ ಮಣಿಗಂಟನ್ನು ಪರಸ್ಪರ ಉಜ್ಜಿಕೊಳ್ಳುವುದರಿಂದ ಸುಗಂಧ ದ್ರವ್ಯದ ಅಣುಗಳು ಛಿದ್ರವಾಗಬಹುದು. ಇದರಿಂದ ಘರ್ಷಣೆ ಉಂಟಾಗಿ ಸುಗಂಧ ದ್ರವ್ಯದ ನವಿರಾದ ಸುವಾಸನೆಯು ಕಳೆದುಹೋಗಬಹುದು.

ಲೋಷನ್ ಬಳಸದೆ ಇರುವುದು

ಚರ್ಮಕ್ಕೆ ಒಳ್ಳೆಯ ತೇವಾಂಶವನ್ನು ನೀಡುವಂತಹ ಲೋಷನ್ ಹಚ್ಚಿಕೊಂಡ ಬಳಿಕ ಅದರ ಮೇಲೆ ಸುಗಂಧ ದ್ರವ್ಯವನ್ನು ಸಿಂಪಡಿಸಿದರೆ ಅದರಿಂದ ಸುವಾಸನೆಯು ದೀರ್ಘ ಸಮಯ ಉಳಿಯುತ್ತದೆ.

ಮೊಣಕೈಗಳ ಮೇಲೆ ಮಾತ್ರ ಸಿಂಪಡಣೆ

ಮೊಣಕೈ, ಕುತ್ತಿಗೆ ಹಾಗೂ ಕುತ್ತಿಗೆಯ ಹಿಂಭಾಗಕ್ಕೆ ಸುಗಂಧ ದ್ರವ್ಯವನ್ನು ಸಿಂಪಡಿಸಿ. ದೇಹದ ಉಷ್ಣತೆ ಹೆಚ್ಚಾಗುವಂತಹ ಸಮಯದಲ್ಲಿ ದೇಹದ ಈ ಭಾಗಗಳಿಗೆ ಸುಗಂಧ ದ್ರವ್ಯ ಸಿಂಪಡಣೆ ತುಂಬಾ ಒಳ್ಳೆಯದು.

ಸುಗಂಧ ದ್ರವ್ಯ ಇಡುವ ಜಾಗ

ಸೂರ್ಯನ ಕಿರಣಗಳು ಬೀಳದಂತೆ ತಂಪು ಹಾಗೂ ಒಣಗಿರುವಂತಹ ಜಾಗದಲ್ಲಿ ಸುಗಂಧ ದ್ರವ್ಯದ ಬಾಟಲಿಯನ್ನು ಇಡಿ. ಇದರಿಂದ ಸುಗಂಧ ದ್ರವ್ಯವು ಹಾಳಾಗದಂತೆ ತಡೆಯಬಹುದು. ಫ್ರಿಡ್ಜ್ ನಲ್ಲಿ ಇಡುವುದು ಒಳ್ಳೆಯ ವಿಧಾನ.

ಅನುಕರಣೆ

ಯಾವುದೇ ಪಾರ್ಟಿಗೆ ಹೋದಾಗ ಅಲ್ಲಿ ಯಾರೋ ಹಾಕಿಕೊಂಡಿರುವ ಸುಗಂಧ ದ್ರವ್ಯದ ಸುವಾಸನೆಯಿಂದ ಮನಸೋತು ಅದನ್ನು ತಂದು ಬಳಸಲು ಪ್ರಾರಂಭಿಸುತ್ತೇವೆ. ಆದರೆ ಇದು ಒಳ್ಳೆಯ ವಿಧಾನವಲ್ಲ. ಯಾಕೆಂದರೆ ಒಬ್ಬರ ಮೇಲೆ ಹೊಂದಿಕೊಳ್ಳುವಂತಹ ಸುಗಂಧ ದ್ರವ್ಯವು ಬೇರೆ ವ್ಯಕ್ತಿಯ ಮೇಲೆ ಭಿನ್ನವಾಗಿ ವರ್ತಿಸಬಹುದು. ಯಾಕೆಂದರೆ ಸುಗಂಧ ದ್ರವ್ಯದ ಸುವಾಸನೆಯು ದೇಹದ ಮೇಲೆ ಅವಲಂಬಿತವಾಗಿರುತ್ತದೆ.

ಬಟ್ಟೆಗಳ ಮೇಲೆ ಸಿಂಪಡಣೆ

ಬಟ್ಟೆಗಳ ಮೇಲೆ ಸುಗಂಧ ದ್ರವ್ಯವನ್ನು ಸಿಂಪಡಣೆ ಮಾಡುವುದರಿಂದ ಕಲೆ ಆಗುವ ಸಾಧ್ಯತೆಗಳು ಹೆಚ್ಚಿದೆ. ಇದು ಒಳ್ಳೆಯ ವಿಧಾನವಲ್ಲ. ಸ್ನಾನದ ಬಳಿಕ ದೇಹದ ಮೇಲೆ ಇದನ್ನು ಸಿಂಪಡಿಸಿ. ಬಟ್ಟೆಗಳ ಮೇಲೆ ಅಲ್ಲ.

Story first published: Monday, November 21, 2016, 11:05 [IST]
English summary

Perfume Mistakes To Avoid

Don't we all love perfumes? They smell great and we all want to have a signature scent. But, most people end up making a few mistakes with perfumes, and we will share all about the perfume mistakes that you need to avoid. So, here are the most common perfume mistakes that you need to avoid making.
Please Wait while comments are loading...
Subscribe Newsletter