For Quick Alerts
ALLOW NOTIFICATIONS  
For Daily Alerts

ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್

By Su.Ra
|

ಚಳಿಗಾಲದ ಈ ಸಂದರ್ಭದಲ್ಲಿ ತುಟಿಯ ಆರೋಗ್ಯ ಕಾಪಾಡಿಕೊಳ್ಳೋದು ದೊಡ್ಡ ಸಾಹಸವೇ ಸರಿ. ತುಟಿಯ ಬಿರುಕು ನಿಮ್ಮ ಸೌಂದರ್ಯವನ್ನು ಹಾಳು ಮಾಡಿ ಬಿಡುತ್ತೆ. ಎಷ್ಟೇ ಸರ್ಕಸ್ ಮಾಡಿದ್ರೂ ತುಟಿಗಳು ಬಿರುಕು ಬಿಡೋದು ಮಾತ್ರ ತಪ್ಪೋದಿಲ್ಲ. ಅದ್ಯಾರೋ ಹೇಳಿದ್ರು ಅಂತ ಅಂಗಡಿಯಿಂದ ತಂದ ಲಿಪ್ ಬಾಮ್ ಹಚ್ಚಿದ್ರೆ ಮತ್ತಷ್ಟು ಒಡೆದಂತಾಗಿ ಸಮಸ್ಯೆ ಉಲ್ಬಣವಾಗಿರುತ್ತೆ. ಕೆಲವರಿಗಂತೂ ತುಟಿಯಲ್ಲಿ ರಕ್ತ ಬರುವಷ್ಟರ ಮಟ್ಟಿಗೆ ತುಟಿ ಬಿರುಕು ಬಿಡುವುದೂ ಇದೆ.

ತೊಂಡೆಹಣ್ಣಿನಂತ ತುಟಿ ಇರಬೇಕು ಅಂತ ಆಸೆ ಪಡೋ ಮಹಿಳೆಯರಿಗೆ ಇದೊಂದು ಸಹಿಸಲು ಅಸಾಧ್ಯವೆನಿಸುವ ಸಮಸ್ಯೆ. ಹೇಗಾದ್ರೂ ಮಾಡಿ ಚಳಿಗಾಲದಲ್ಲಿ ಬಿರುಕು ಬಿಡುವ ತುಟಿಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಅಂತ ಪ್ರತಿಯೊಬ್ಬರೂ ಆಸೆ ಪಡ್ತಾರೆ. ಇನ್ನು ಮೇಕಪ್ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇರುವ ಮಹಿಳೆಯರ ಪಾಡಂತೂ ಕೇಳೋದೆ ಬೇಡ. ಒಂದು ಕಡೆ ಮೇಕಪ್ ಮಾಡುವ ಕಿರಿಕಿರಿಯಿಂದ ತುಟಿಯ ರಕ್ಷಣೆ ಅಸಾಧ್ಯವಾಗಿದ್ರೆ, ಇನ್ನೊಂದು ಕಡೆಯಲ್ಲಿ ವಾತಾವರಣದ ಏರುಪೇರಿನಿಂದ ತುಟಿಯ ಸೌಂದರ್ಯ ಹಾಳಾಗಿರುತ್ತೆ.

ಹಾಗಂತ ಮಹಿಳೆಯರಿಗೆ ಮಾತ್ರ ಈ ಸಮಸ್ಯೆ ಕಾಡೋದಿಲ್ಲ. ಪುರುಷರಿಗೂ ತುಟಿಯ ಸೌಂದರ್ಯ ಕಾಪಾಡಿಕೊಳ್ಳೋದು ಕಷ್ಟದ ಕೆಲಸವೇ.. ತುಟಿಗಳು ಒಡೆದಾಗ ಆಗಾಗ ಕೈಗಳು ತುಟಿಗಳನ್ನೇ ಸ್ಪರ್ಶಿಸುತ್ತಾ ಇರುತ್ತೆ. ಇದು ಮತ್ತಷ್ಟು ಸಮಸ್ಯೆಯನ್ನು ಹೆಚ್ಚಿಸುತ್ತೆ. ಅಷ್ಟೇ ಅಲ್ಲ ಡ್ರೈ ಆಗಿರುವ ತುಟಿಯನ್ನು ಆಗಾಗ ನಾಲಗೆಯಿಂದ ತಿಕ್ಕಿಕೊಂಡ್ರೆ ನಿಮ್ಮ ಸಮಸ್ಯೆಗೆ ಮುಕ್ತಿ ಸಿಗೋದು ಖಂಡಿತ ಕಷ್ಟ. ಹಾಗಾಗಿ ಸಿಂಪಲ್ ಹೋಮ್ ರೆಮಿಡಿಯೊಂದನ್ನು ನಾವ್ ನಿಮಗೆ ಹೇಳಿ ಬಿಡ್ತೀವಿ ಕೇಳಿ.. ಚಮತ್ಕಾರಿಕ ಬೀಟ್‌ರೂಟ್‌ನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

lips care during winter

ತರಕಾರಿಗಳು ನಿಮ್ಮ ಆರೋಗ್ಯದ ಕೀಲಿಕೈಗಳು. ಅದ್ರಲ್ಲೊಂದು ಬೀಟ್ ರೂಟ್.. ಕೆಂಪು ಕೆಂಪಾಗಿರುವ ಬೀಟ್ ರೂಟ್ ನಿಮ್ಮ ತುಟಿಗಳ ಸೌಂದರ್ಯವನ್ನು ಹೆಚ್ಚಿಸೋದು ಮಾತ್ರವಲ್ಲ. ಚಳಿಗಾಲದಲ್ಲಿ ನಿಮ್ಮ ತುಟಿಗಳ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಬೀಟ್ ರೂಟ್ ನಿಂದ ಲಿಪ್ ಬಾಮ್ ತಯಾರಿಸಿಕೊಳ್ಳಿ. ಮೊದಲು ಒಂದಷ್ಟು ಬೀಟ್ ರೂಟ್ ಗಳನ್ನು ತುರಿದು ಬಿಸಿಲಿನಲ್ಲಿ ಒಣಗಿಸಿಕೊಳ್ಳಿ. ಒಂದು ದಿನದ ಬಿಸಿಲು ಸಾಕಾಗುತ್ತೆ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ. ನೆನಪಿಡಿ.. ಈ ಬೀಟ್ ರೂಟ್ ಪುಡಿಯನ್ನು ನೀವು ಇತರೆ ಅಡುಗೆಗಳನ್ನು ಬಳಸಿಕೊಳ್ಳಬಹುದು. ರಿಚ್ ಫ್ಲೇವರ್ ನೀಡೋದು ಮಾತ್ರವಲ್ಲ ಅಡುಗೆಯ ರುಚಿಯನ್ನು ಇದು ಹೆಚ್ಚಿಸಲಿದೆ. ಯಾವುವುದೋ ಕಲರಿಂಗ್ ಏಜೆಂಟ್ ಗಳನ್ನು ಬಳಸುವ ಬಳಸುವ ಬದಲು ಇಂತಹ ಹರ್ಬಲ್ ಪೌಡರ್ ಗಳನ್ನು ಬಳಕೆ ಮಾಡೋದು ಆರೋಗ್ಯಕ್ಕೆ ಹಿತವಾಗಿರುತ್ತೆ. ತುಟಿಯ ಸೌಂದರ್ಯವನ್ನು ಹೆಚ್ಚಿಸುವ ಶುಂಠಿ ಲಿಪ್ ಸ್ಕ್ರಬ್!

ಬೀಟ್‌ರೂಟ್ ಲಿಪ್ ಬಾಮ್ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು
*ಪುಡಿ ಮಾಡಿದ ಬೀಟ್ ರೂಟ್
*ಎಣ್ಣೆ (ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಬಳಕೆ ಮಾಡಬಹುದು..)
*ಬಟರ್ ( ನಿಮಗೆ ಇಷ್ಟವೆನಿಸಿದ್ರೆ ಫ್ಲೇವರ್ಡ್ ಬಟರ್ ಕೂಡ ಬಳಕೆ ಮಾಡಬಹುದು. ಉದಾಹರಣೆಗೆ ಕೋಕೋ ಫ್ಲೇವರ್ ಇರುವ ಬಟರ್)
*ಬೇಸ್ ವ್ಯಾಕ್ಸ್
*ಒಂದೆರಡು ಹನಿ ಎಸೆನ್ಶಿಯಲ್ ಆಯಿಲ್.. (ಇದು ಕೇವಲ ಲಿಪ್ ಬಾಮ್‌ಗೆ ಪರಿಮಳ ಒದಗಿಸಲು ಅಷ್ಟೇ.. )

*ಲಿಪ್ ಬಾಮ್ ತಯಾರಿಸೋದು ಹೇಗೆ ಗೊತ್ತಾ?

ಎಣ್ಣೆ ಮತ್ತು ಬಟರ್ ನ್ನು ಒಂದು ಪಾತ್ರೆಗೆ ಹಾಕಿ ಆ ಪಾತ್ರೆಯನ್ನು ಕುದಿಯುವ ನೀರಿನಲ್ಲಿಟ್ಟು ಕರಗಿಸಿ. ನೇರ ಒಲೆಯ ಉರಿಗೆ ಇಟ್ಟು ಕರಗಿಸೋದು ಅಷ್ಟು ಸೂಕ್ತವಲ್ಲ. ಮೈಕ್ರೋವೇವ್ ಇರುವವರು ಮೈಕ್ರೋವೇವ್ ನಲ್ಲೂ ಇಡಬಹುದು. ನಂತ್ರ ವ್ಯಾಕ್ಸ್ ನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಚೆನ್ನಾಗಿ ಕಾಯಿಸಿ. ನಂತರ ಅದಕ್ಕೆ ಬೀಟ್ ರೂಟ್ ಪುಡಿಯನ್ನು ಸೇರಿಸಿ ಕಲಸಿ. ಬಿಸಿ ಇರುವಾಗಲೇ ಚೆನ್ನಾಗಿ ಮಿಕ್ಸ್ ಮಾಡಿ ಪಾಕ ಬರುವಂತೆ ನೋಡಿಕೊಳ್ಳಿ. ಪಾಕದ ಹದವನ್ನು ಸರಿಯಾಗಿ ಗಮನಿಸಿ.. ಲಿಪ್ ಬಾಮ್ ನಂತೆ ಇರಬೇಕು ಅಂದರೆ ಸರಿಯಾದ ಹದದಲ್ಲಿ ಇರಬೇಕು.. ತಣ್ಣಗಾದ ಮೇಲೆ ಈ ಮಿಶ್ರಣ ಮತ್ತೂ ಗಟ್ಟಿಯಾಗುತ್ತೆ ಅನ್ನೋದು ಮನದಲ್ಲಿರಲಿ. ಸರಿಯಾದ ಹದಕ್ಕೆ ಬಂದ ಮಿಶ್ರಣವನ್ನು ತಣ್ಣಗಾಗುವ ವರೆಗೆ ಇಟ್ಟು ನಂತ್ರ ಒಂದು ಬಾಕ್ಸ್ ಗೆ ಹಾಕಿಟ್ಟುಕೊಳ್ಳಿ. ಕೆಲವು ನಿಮಿಷ ಫ್ರಿಡ್ಜ್ ನಲ್ಲಿ ಇಟ್ಟರೂ ಓಕೆ.. ಪ್ರತಿ ದಿನ ಈ ಮಿಶ್ರಣವನ್ನು ಬಳಸೋದ್ರಿಂದ ತುಟಿಯ ರಕ್ಷಣೆ ಮಾಡಿಕೊಳ್ಳಬಹುದು.. ಅಷ್ಟೇ ಅಲ್ಲ ಕೆಂಬಣ್ಣದ ಬೀಟ್ ರೂಟ್ ಬಳಸಿರೋದ್ರಿಂದ ಇದು ಲಿಪ್ ಬಾಮ್ ಮಾತ್ರವಾಗಿರದೇ ಲಿಪ್‌ಗ್ಲಾಸ್ ನಂತೆಯೂ ಕೆಲಸ ಮಾಡುತ್ತೆ. ತುಟಿಗಳಿಗೆ ಎಕ್ಸ್ಟ್ರಾ ರಂಗು ತುಂಬಿಕೊಳ್ಳುವ ಅಗತ್ಯವಿರೋದಿಲ್ಲ. ಟ್ರೈ ಮಾಡಿ ನೋಡಿ.. ಒಂದರಿಂದ ಎರಡು ತಿಂಗಳವರೆಗೆ ಈ ಮಿಶ್ರಣವನ್ನು ಇಟ್ಟುಕೊಳ್ಳಬಹುದು.

*ನೆನಪಿರಲಿ
ಹಸಿ ಬೀಟ್ ರೂಟ್ ಅಥವಾ ಬೀಟ್ ರೂಟ್ ಸಿಪ್ಪೆಯನ್ನು ತುಟಿಗಳಿಗೆ ಉಜ್ಜಿಕೊಳ್ಳೋದ್ರಿಂದಲೂ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಲಿದೆ. ..

English summary

Natural Beetroot lipbalm, for winter dry lip care

Winter seasons come with lot of chill and dryness dehydrates lips causes to dry and chapped lips. Moisturized you lip with glossy lip balm permits to heal cracked and chapped lips and give pinky look to your lips. Dozens of lip balms and glosses comes in markets. Some of them have harmful properties damaged lips and it also expensive treatment for healing cracked and chapped lips.Here we discuss natural homemade Beetroot lip balms moisture you lips and allow lusted and glowing shine to lips.
X
Desktop Bottom Promotion